ಉಳ್ಳಾಲ ಸಮೀಪ ನಾಡದೋಣಿ ಮೀನುಗಾರರ ಬಲೆಗೆ ಬಿದ್ದ 75 ಕೆ.ಜಿ. ತೂಕದ ಪಿಲಿ ತೊರಕೆ ಮೀನು

Thursday, September 28th, 2023
pili-thorake

ಮಂಗಳೂರು: ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ನಾಡದೋಣಿ ಮೀನುಗಾರರಿಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬಲೆಗೆ ಬಿದ್ದಿದೆ . ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ನಿನ್ನೆ ಸಂಜೆ ಸಮುದ್ರ ತೀರದಲ್ಲಿ ಮೀನಿಗಾಗಿ ಬಲೆ ಹಾಕಿದ್ದು, ಸುಮಾರು 75 ಕೆ.ಜಿ. ತೂಕದ ಮೀನು ಅವರ ಬಲೆಗೆ ಬಿದ್ದಿದೆ. ಈ ವರ್ಷದ ತಮ್ಮ ಮೀನುಗಾರಿಕೆ ಅವಧಿಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ […]

ಮೀನುಗಾರನನ್ನು ತಲೆಕೆಳಗೆ ಮಾಡಿ ನೇತು ಹಾಕಿ ಹಲ್ಲೆ ನಡೆಸಿದ ಆರು ಮಂದಿಯ ಬಂಧನ

Thursday, December 23rd, 2021
andra Fisherman

ಮಂಗಳೂರು :  ಮೀನುಗಾರನೋರ್ವನನ್ನು ಪರಿಚಯಸ್ಥರೇ ಮೊಬೈಲ್ ಕಳ್ಳತನ ಮಾಡಿರುವ ಆರೋಪ ಹೊರಿಸಿ ತಲೆಕೆಳಗೆ ಮಾಡಿ ನೇತು ಹಾಕಿದ್ದಲ್ಲದೆ ಗಂಭೀರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಕೃತ್ಯ ಎಸಗಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಮೀನುಗಾರನ ವೀಡಿಯೋವೊಂದು ವೈರಲ್ ಆದ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ್ದ ಮಂಗಳೂರು ಪೊಲೀಸರು, ಆಂಧ್ರ ಪ್ರದೇಶ ಮೂಲದ ವೈಲ ಶೀನು (32) ಎಂಬಾತ ನೀಡಿದ ದೂರಿನ ಮೇರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಂಡೂರು ಪೋಲಯ್ಯ(23), ಅವುಲು ರಾಜ್ ಕುಮಾರ್(26), ಕಾಟಂಗರಿ ಮನೋಹರ್(21), ವೂಟುಕೋರಿ ಜಾಲಯ್ಯ(30), ಕರಪಿಂಗಾರ ರವಿ(27) ಹಾಗೂ […]

ಗಿಲ್ ನೆಟ್ ಬೋಟ್ ನಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Monday, September 13th, 2021
Azar Boat

ಮಂಗಳೂರು, : ಪಣಂಬೂರು ಸಮುದ್ರ ತೀರದಲ್ಲಿ ಸೆ.11 ರಂದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹವು ತಣ್ಣೀರುಬಾವಿ ಬೀಚ್ ಭಾನುವಾರ ರಾತ್ರಿ ವೇಳೆ ಪತ್ತೆಯಾಗಿದೆ. ನಾಪತ್ತೆಯಾಗಿದ್ದ  ಕಸಬಾ ಬೆಂಗರೆ ನಿವಾಸಿ ಮುಹಮ್ಮದ್ ಶರೀಫ್ (35) ಎಂಬ ಮೀನುಗಾರನ  ಮೃತದೇಹ ಪತ್ತೆಯಾಗಿದೆ. ಸೆ. 11 ರಂದು ಗಿಲ್ ನೆಟ್ ಬೋಟ್ ಮೀನುಗಾರಿಕೆಗೆ ತೆರಳುತ್ತಿರುವಾಗ ಅವಘಡ ಸಂಭವಿಸಿ ಮೀನುಗಾರರು ನೀರುಪಾಲಾಗಿದ್ದು ಈ ಪೈಕಿ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ಶರೀಫ್ […]

ಕಾಲಿಗೆ ಬಲೆ ಸಿಲುಕಿ ಅಳಿವೆಬಾಗಿಲು ನದಿ ಸಮೀಪ ಮೀನು ಹಿಡಿಯುತ್ತಿದ್ದ ವ್ಯಕ್ತಿ ಸಾವು

Friday, July 16th, 2021
Jaya Putran

ಮಂಗಳೂರು : ನದಿ ನೀರಲ್ಲಿ ಬಲೆ ಹರಡಿ ಮೀನು ಹಿಡಿಯುತ್ತಿದ್ದ ಮೀನುಗಾರರೊಬ್ಬರು ಮುಳುಗಿ ಮೃತಪಟ್ಟ ಘಟನೆ ನಗರದ ಅಳಿವೆಬಾಗಿಲು ನದಿ ಸಮೀಪ ನಡೆದಿದೆ. ತೋಟಬೆಂಗ್ರೆ ನಿವಾಸಿ ಜಯ ಪುತ್ರನ್ (55) ಮೃತ ಮೀನುಗಾರ ಎಂದು  ಗುರುತಿಸಲಾಗಿದೆ. ಜಯ ಪುತ್ರನ್  ಮೀನು ಹಿಡಿಯುತ್ತಿದ್ದ ವೇಳೆ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ. ಈ ವೇಳೆ ಆಕಸ್ಮಿಕವಾಗಿ ಮೀನು ಹಿಡಿಯುವ ಬಲೆ ಕಾಲಿಗೆ ಸಿಲುಕಿದ್ದರಿಂದ ಈಜಲಾಗದೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ತುಂಬಾ ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ […]

ಸಮುದ್ರದಲ್ಲಿ ಎಂಜಿನ್ ಕೆಟ್ಟು ನಿಂತ ಬೋಟ್, 10 ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

Thursday, May 27th, 2021
Tamilnadu-boat

ಮಂಗಳೂರು : ತಮಿಳುನಾಡಿನ ಲಾರ್ಡ್ ಆಫ್ ದಿ ಓಷಿಯನ್ ಹೆಸರಿನ ಬೋಟ್  ಎಂಜಿನ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ಸಮುದ್ರದಲ್ಲಿ ಸಿಲುಕಿತ್ತು, ಬೋಟಿನಲ್ಲಿದ್ದ ತಮಿಳುನಾಡಿನ 10 ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ. ತೌಕ್ತೇ ಚಂಡಮಾರುತದಿಂದಾಗಿ ಮೇ 14 ರಂದು ಪೋರ ಬಂದರ್‌ನಲ್ಲಿ ಲಾರ್ಡ್ ಆಫ್ ದಿ ಓಷಿಯನ್ ಬೋಟ್ (ಐಎನ್‌ಡಿ-ಟಿಎನ್ -15-ಎಂಎಂ -5338) ಆಶ್ರಯ ಪಡೆದಿತ್ತು. ಬಳಿಕ ಮೇ 19 ರಂದು ಬಂದರಿನಿಂದ ಹೊರಟಿತ್ತು . ಆದರೆ ಮಂಗಳೂರು ಬಳಿ ಎಂಜಿನ್ ವೈಫಲ್ಯದಿಂದಾಗಿ ಸಮುದ್ರ ಮದ್ಯೆ ಸಿಲುಕಿತ್ತು. ಮಂಗಳೂರು […]

ಸಮುದ್ರ ಮದ್ಯದಲ್ಲಿ ಸಿಲಿಂಡರ್‌ ಸ್ಫೋಟ, ದೋಣಿಯಲ್ಲಿದ್ದ 11 ಮೀನುಗಾರರ ರಕ್ಷಣೆ

Sunday, January 10th, 2021
cylinder blast

ಮಂಗಳೂರು: ಮೀನುಗಾರಿಕೆಗೆಂದು ತೆರಳಿದ್ದ ತಮಿಳುನಾಡು ಮೂಲದ ಈ ಮೀನುಗಾರಿಕಾ ದೋಣಿಯೊಂದರಲ್ಲಿ ಅರಬ್ಬಿ ಸಮುದ್ರ  ಮದ್ಯದಲ್ಲಿ ಸಿಲಿಂಡರ್‌ ಸ್ಫೋಟಗೊಂಡಿದ್ದು, ತಕ್ಷಣ ಬೋಟ್ನಲ್ಲಿದ್ದ 11 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯವರು  ರಕ್ಷಿಸಿದ್ದಾರೆ. ಮಂಗಳೂರಿನಿಂದ ಸುಮಾರು 140 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿತ್ತು. ಈ ಸಂದರ್ಭ ಬೋಟ್ನಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಯಗೊಂಡಿರುವ ಓರ್ವ ಮೀನುಗಾರ ಹಾಗೂ ಇತರ ಮೀನುಗಾರರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ […]

ನಾಲ್ಕನೇ ದಿನವೂ ಪತ್ತೆಯಾಗದ ಓರ್ವ ಮೀನುಗಾರನ ಮೃತದೇಹ

Friday, December 4th, 2020
Boat Tragedy

ಮಂಗಳೂರು: ಪರ್ಸಿನ್ ಬೋಟ್ ದುರಂತದಲ್ಲಿ ಸಾವಿಗೀಡಾದ ಆರು ಜನರ ಪೈಕಿ ಇನ್ನೋರ್ವನ  ಓರ್ವನ ಮೃತದೇಹ ಪತ್ತೆಗೆ ನಾಲ್ಕನೇ ದಿನ ಕೂಡಾ ಹುಡುಕಾಟ ಮುಂದುವರೆದಿದೆ. ಶ್ರೀರಕ್ಷಾ ಎಂಬ ಬೋಟ್ ಮೀನುಗಳನ್ನು ತುಂಬಿಸಿಕೊಂಡು ವಾಪಸ್ ಬರುವ ವೇಳೆ ಇತ್ತೀಚೆಗೆ ಅಳಿವೆ ಬಾಗಿಲಿನಲ್ಲಿ ದುರಂತಕ್ಕೀಡಾಗಿತ್ತು. ಪರಿಣಾಮ, ಆರು ಮಂದಿ ಮೀನುಗಾರರು ಮೃತಪಟ್ಟಿದ್ದರು. ಈ ಪೈಕಿ ಐವರ ಮೃತದೇಹ ಪತ್ತೆಯಾಗಿತ್ತು. ಅನ್ಸಾರ್ ಮೃತದೇಹ ಸಿಕ್ಕಿತಾದರೂ ಸಮುದ್ರದಾಳದಿಂದ ಮೇಲಕ್ಕೆ ತರುವಾಗ ಮುಳುಗು ತಜ್ಞರ ಕೈಜಾರಿ ಮತ್ತೆ ಸಮುದ್ರದಾಳ ಸೇರಿತ್ತು. ಇದಾಗಿ ಎರಡು ದಿನವಾದರೂ ಮೃತದೇಹ ಸಿಕ್ಕಿರಲಿಲ್ಲ. […]

ಪರ್ಸಿನ್ ಬೋಟ್ ದುರಂತ – ಮೃತಪಟ್ಟವರ ಕುಟುಂಬಗಳಿಗೆ ತಲಾ 6 ಲಕ್ಷ ರೂ. ಪರಿಹಾರ

Thursday, December 3rd, 2020
boat-tragedy

ಮಂಗಳೂರು : ಅರಬ್ಬೀ ಸಮುದ್ರದಲ್ಲಿ ಸಂಭವಿಸಿದ ಪರ್ಸಿನ್ ಬೋಟ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 6 ಲಕ್ಷ ರೂ. ಪರಿಹಾರ ಮೊತ್ತದ ಮಂಜೂರಾತಿ ಪತ್ರವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಹಸ್ತಾಂತರಿಸಿದರು. ಬಳಿಕ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ದೋಣಿ ದುರಂತದಲ್ಲಿ ಮೃತಪಟ್ಟವರಿಗೆ ಇಂದು ಪರಿಹಾರ ಮೊತ್ತದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಲಾಗಿದೆ. ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ, ಕರಾವಳಿ ಕಾವಲುಪಡೆಯನ್ನು ಬಲಪಡಿಸಬೇಕೆಂದು ಗೃಹ ಸಚಿವರಿಗೆ ಮನವಿ […]

ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇಬ್ಬರ ಮೃತದೇಹ ಪತ್ತೆ, ಇಬ್ಬರಿಗಾಗಿ ಶೋಧ

Wednesday, December 2nd, 2020
Chintan Hasainar

ಮಂಗಳೂರು:  ಸೋಮವಾರ ರಾತ್ರಿ ನಡೆದ ಬೋಟ್ ಮುಳುಗಡೆ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಬುಧವಾರ ಇಬ್ಬರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ನಾಲ್ಕು ಜನರ ಮೃತದೇಹ ಪತ್ತೆಯಾದಂತಾಗಿದೆ. ಬೊಕ್ಕಪಟ್ಣ ನಿವಾಸಿ ಚಿಂತನ್ (21) ಮತ್ತು ಕಸ್ಬಾ ಬೆಂಗ್ರೆ ನಿವಾಸಿ ಹಸೈನಾರ್ (25) ಅವರ ಮೃತದೇಹ ಇಂದು ಪತ್ತೆಯಾಗಿದೆ. ಬೊಕ್ಕಪಟ್ಣ ಬೆಂಗ್ರೆಯ ಪಾಂಡುರಂಗ ಸುವರ್ಣ (58) ಮತ್ತು ಪ್ರೀತಂ (25) ಅವರ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಶ್ರೀ ರಕ್ಷಾ ಬೋಟ್ ಮುಳುಗಡೆ ದುರಂತದಲ್ಲಿ ಆರು ಮಂದಿ ನಾಪತ್ತೆಯಾಗಿದ್ದರು. ಕಸ್ಬಾ ಬೆಂಗ್ರೆಯ ಅನ್ಸಾರ್ […]

ಪರ್ಷಿಯನ್ ಬೋಟ್ ಮುಳುಗಡೆ ಇಬ್ಬರ ಮೃತದೇಹ ಪತ್ತೆ, ನಾಲ್ವರಿಗೆ ಶೋಧ

Tuesday, December 1st, 2020
Sri Raksha

ಮಂಗಳೂರು : ಶ್ರೀ ರಕ್ಷಾ ಹೆಸರಿನ ಪರ್ಷಿಯನ್ ಬೋಟ್ ಮುಳುಗಡೆಯಾಗಿ ನಾಪತ್ತೆಯಾದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿವೆ. ಮಂಗಳೂರಿನ ಬೊಕ್ಕಪಟ್ಣದ ಪಾಂಡುರಂಗ ಸುವರ್ಣ, ಪ್ರೀತಂ ಎಂಬುವರ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಘಟನೆ ನಡೆದ ಸುತ್ತಲ ಪ್ರದೇಶದಲ್ಲಿ ಮುಳುಗು ತಜ್ಞರು, ಸ್ಥಳೀಯ ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈಗ ಇಬ್ಬರ ಮೃತದೇಹವನ್ನು ಮುಳುಗು ತಜ್ಞರು ಮೇಲಕ್ಕೆತ್ತಿದ್ದಾರೆ. ಸೋಮವಾರ ಸಂಜೆ  ಮೀನುಗಾರಿಕೆಗೆ ತೆರಳಿ ಮೀನು ತುಂಬಿಸಿಕೊಂಡು ವಾಪಸ್ […]