ಕರ್ನಾಟಕದಲ್ಲಿ 16.29 ಲಕ್ಷ ಟನ್ ರಸಗೊಬ್ಬರ ದಾಸ್ತಾನು, ಸಬ್ಸಿಡಿ ದರ ಹೆಚ್ಚಳ

Friday, May 21st, 2021
DV Sadananda Gowda

ಬೆಂಗಳೂರು: ಮುಂಗಾರು ಹಂಗಾಮಿಗಿನಲ್ಲಿ ಡಿಎಪಿ ಹಾಗೂ ಪಿ & ಕೆ ರಸಗೊಬ್ಬರ ಸಬ್ಸಿಡಿಯನ್ನು 50-ಕೆ.ಜಿ. ಚೀಲವೊಂದಕ್ಕೆ 511 ರೂಪಾಯಿಯಿಂದ 1211 ರೂಪಾಯಿಗೆ (ಶೇಕಡಾ 140) ಹೆಚ್ಚಳ ಮಾಡಿ ಕೇಂದ್ರ ರಸಗೊಬ್ಬರ ಇಲಾಖೆಯು ಇಂದು ಅಧಿಕೃತ ಆದೇಶ ಹೊರಡಿಸಿದೆ. ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ (ಎನ್.ಬಿ.ಎಸ್.) ಯೋಜನೆಯಡಿ ಗುರುವಾರ ಹೊರಡಿಸಿದ ಪರಿಷ್ಕೃತ ಆದೇಶದ ಪ್ರಕಾರ ರಸಗೊಬ್ಬರದಲ್ಲಿ ಬಳಕೆಯಾಗುವ ಪ್ರತಿ ಟನ್ ನೈಟ್ರೋಜನ್ (Nitrogen – N)ಗೆ 18,789 ರೂ, ಫೊಸ್ಫೇಟ್ (Phosphate – P)ಗೆ 45,323 ರೂ, ಪೊಟಾಷ್ […]

ಹುಬ್ಬಳ್ಳಿಗೆ ಪ್ರವೇಶಿಸಿದ ಮುಂಗಾರು, ವರುಣನ ಅಬ್ಬರ

Saturday, May 30th, 2020
hubballi rain

ಹುಬ್ಬಳ್ಳಿ : ಭಾರತೀಯ ಹವಾಮಾನ ಇಲಾಖೆಯ ಎಚ್ಚರಿಕೆಯಂತೆ ಹುಬ್ಬಳ್ಳಿಯಲ್ಲಿ ಮುಂಗಾರು ಮಳೆ ಮೇ ತಿಂಗಳ ಕೊನೆಯ ದಿನ ಮೇ.30 ರಂದು ಶನಿವಾರ ಹು-ಧಾ ಅವಳಿ ನಗರಕ್ಕೆ ಗುಡುಗು ಸಿಡಿಲಿನ ಸಮೇತ ಕಾಲಿಟ್ಟಿತ್ತು. ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶವಾಗಿದ್ದು, ಕರ್ನಾಟಕದಲ್ಲೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕಳೆದ ಕೆಲ ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿ ಸಾಕಷ್ಟು ಮರಗಳು, ಕೆಲವರ ಪ್ರಾಣ ಹಾನಿಯೂ ಕೂಡ ಆಗಿತ್ತು. ಅಲ್ಲಿ ಹಗಲಿನಲ್ಲಿಯೇ ಮಳೆಯಾಗಿದ್ದರಿಂದ ಅನಾಹುತಕ್ಕೆ […]

ಶಿಕ್ಷಕರು ಎನ್‌ಪಿಆರ್ ಸರ್ವೆಯಲ್ಲಿ ಬಿಝಿ, ಶಾಲೆಯಲ್ಲಿ ಹಳೆ ವಿದ್ಯಾರ್ಥಿ, ರಕ್ಷಕರಿಂದಲೇ ಪಾಠ, ಪ್ರವಚನ

Wednesday, January 6th, 2016
Shikshana

ಬದಿಯಡ್ಕ: ಗ್ರಾಮೀಣ ಪ್ರದೇಶಗಳ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚಿನ ಶಿಕ್ಷಕರು ಇದೀಗ ಎನ್‌ಪಿಆರ್ ಸರ್ವೇಯಲ್ಲಿ ಬಿಝಿಯಾಗಿದ್ದಾರೆ. ಉರಿ ಬಿಸಿಲು, ಕಾಲ್ನಿಡಿಗೆಯಿಂದ ರೋಸಿ ಹೋಗುತ್ತಿರುವ ಶಿಕ್ಷಕರ ಮಧ್ಯೆ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಜಾ ಉಡಾಯಿಸುತ್ತಿರುವ ಸನ್ನಿವೇಶಗಳು ಸರ್ವೇ ಸಾಮಾನ್ಯ. ಒಂದು ಬ್ಲಾಕಿನ ಸರ್ವೇಗೆ ಏಳು ದಿನಗಳು ಹಿಡಿಯುತ್ತದೆ. ಕೆಲವೊಮ್ಮೆ ಒಬ್ಬ ಶಿಕ್ಷನಿಗೆ ಎರಡು ಬ್ಲಾಕಿನ ಸರ್ವೇ ಜವಾಬ್ದಾರಿ ಇರುತ್ತದೆ. ಅಂತಹ ಸಂದರ್ಭ ಸುಮಾರು16 ದಿನಗಳ ಕಾಲ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಸಮಯವನ್ನು ಕಳೆಯುತ್ತಾರೆ. ಆದರೆ ಇದ್ಯಾವುದಕ್ಕೂ ಆಸ್ಪದ ಕೊಡದ ಬೇಳ ಸಂತ […]