ಮುಂಬೈಯಲ್ಲಿ ಮೃತಪಟ್ಟಿದ್ದ ಪುತ್ತೂರು ನಿವಾಸಿಯ ಗುರುತು ಪತ್ತೆ

Saturday, July 31st, 2021
Shashi Poojary

ಪುತ್ತೂರು: ಮುಂಬೈಯಲ್ಲಿ ಮೃತಪಟ್ಟಿದ್ದ ಪುತ್ತೂರು ನಿವಾಸಿಯ ಗುರುತು ಪತ್ತೆಯಾಗಿದೆ. ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಮೂಡಾಯೂರು ಎಂಬಲ್ಲಿಯ ಶಶಿ ಪೂಜಾರಿ ಮುಂಬೈಯಲ್ಲಿ ಮೃತಪಟ್ಟವರು ಎಂದು ಗುರುತು ಪತ್ತೆ ಹಚ್ಚಲಾಗಿದೆ. ಮೃತದೇಹ ತರಲು ಇದೀಗ ಅವರ ಸಂಬಂಧಿಕರು ಮುಂಬೈಗೆ ತೆರಳಿದ್ದಾರೆ. ಈ ಬಗ್ಗೆ ಮೆಗಾ ಮೀಡಿಯಾ ನ್ಯೂಸ್ ನಲ್ಲಿ ಜುಲೈ 27 ರಂದು ಸುದ್ದಿ ಪ್ರಕಟಿಸಲಾಗಿತ್ತು. ‘ಮಹಾರಾಷ್ಟ್ರದ ಬಾಂದ್ರಾಪೂರ್ವದ ಎವರ್ ಗ್ರೀನ್ ಹೋಟೇಲ್ ಬಳಿ ಕಳೆದ 35 ವರ್ಷಗಳಿಂದ ಪಾನ್ ಬೀಡ ಅಂಗಡಿ ಹೊಂದಿದ್ದ ಶಶಿ ಪೂಜಾರಿಯವರು […]

ಆ್ಯಪ್​ಗಳ ಮೂಲಕ ಅಶ್ಲೀಲ ಸಿನಿಮಾಗಳನ್ನು ಪ್ರಸಾರ, ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್​ ಕುಂದ್ರಾ ಅರೆಸ್ಟ್

Tuesday, July 20th, 2021
Shilpa Shetty

ನವದೆಹಲಿ: ಆ್ಯಪ್ಗಳ ಮೂಲಕ ಅಶ್ಲೀಲ ಸಿನಿಮಾಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿಯೂ ಆಗಿರು ರಾಜ್ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಸಿನಿಮಾಗಳನ್ನು ತಯಾರಿಯ  ರೂವಾರಿ ಅವರು ಎಂಬ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭಿಸಿದ ಆಧಾರದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಅಶ್ಲೀಲ ಸಿನಿಮಾಗಳನ್ನು ಕೆಲವು ಆ್ಯಪ್ಗಳ ಮೂಲಕ ಪ್ರಸಾರ ಮಾಡುತ್ತಿರುವ ಕುರಿತು 2021ರ ಫೆಬ್ರವರಿಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್ನಲ್ಲಿ […]

ಮುಂಬೈಯಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ, ಹಿಂದೂ ಜನಜಾಗೃತಿ ಸಮಿತಿ ಖಂಡನೆ

Sunday, May 24th, 2020
shivaraja-maharaja

ಮುಂಬಯಿ  :  ಪಾಲ್ಘರ್, ಬುಲಂದಶಹರ, ಲುಧಿಯಾನಾ ಮತ್ತು ಈಗ ಮಹಾರಾಷ್ಟ್ರದ ನಾಂದೇಡ; ದೇಶದಾದ್ಯಂತ ಮುಂದುವರಿದ ಸಾಧುಗಳ ಹತ್ಯಾಸರಣಿ ಹಿಂದುತ್ವವಾದಿಗಳ ಹತ್ಯಾಸರಣಿಯ ನಂತರ ಈಗ ಸಾಧುಗಳ ಹತ್ಯಾಸರಣಿ; ಇದು ಹಿಂದೂಗಳನ್ನು ಮುಗಿಸುವ ವ್ಯವಸ್ಥಿತ ಸಂಚು ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಸಾಧು-ಸಂತರ ಭೂಮಿ ಎಂದು ಹೆಸರುವಾಸಿಯಾಗಿರುವ ಮಹಾರಾಷ್ಟ್ರದಲ್ಲಿ ಈಗ ಸಾಧುಗಳ ರಕ್ತದ ಕೋಡಿ ಹರಿಯುತ್ತಿದೆ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಗಳ ಸೂತಕ ಮುಗಿಯುವ ಮೊದಲೇ ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಸಾಧುವೊಬ್ಬರ ಹತ್ಯೆಯಾಯಿತು. […]

ಹೆಜ್ಮಾಡಿಯ ಪಿಟೀಲು ವಾದಕಿ ಸುಶೀಲಾ ಎಂ. ಸುವರ್ಣ ನಿಧನ

Sunday, May 17th, 2020
sushila

ಮುಂಬಯಿ: ಮುಂಬಯಿಯ ಯ ಪ್ರಸಿದ್ದ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ಗುರು. ಡಾ. ಮೀನಾಕ್ಷಿ ರಾಜು ಶ್ರೀಯಾನ್ ಮತ್ತು ಸ್ಥಾಪಕರಾದ ದಿ. ಗುರು ಎಮ್ ಎನ್. ಸುವರ್ಣ ರವರ ಧರ್ಮಪತ್ನಿ ಶ್ರೀಮತಿ ಸುಶೀಲ ಮಾಹಬಲಾ ಸುವರ್ಣರವರು (82) ಇವರು ಮೇ. 15 ರಂದು ಅಪಾರಹ್ನ ಹೃದಯಘಾತ ದಿಂದ ಚೆಂಬೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತ: ಮಂಗಳೂರಿನ ಮೂಲ್ಕಿ ಮತ್ತು ಹೆಜ್ಮಾಡಿಯರಾಗಿದ್ದು, ಅರುಣೋದಯ ಕಲಾ ನಿಕೇತನ ಸ್ಥಾಪನೆಯಲ್ಲಿ ದಿವಂಗತ. ಗುರು ಎಮ್ ಎನ್ ಸುವರ್ಣರ ಜೊತೆಯಲ್ಲಿ ದುಡಿದು ಪಿಟೀಲು […]

ಲಾಕ್ ಡೌನ್ ವಿಸ್ತರಣೆ – ಕಾರ್ಕಳದ ಅರ್ಚಕ ಮುಂಬೈಯಲ್ಲಿ ಆತ್ಮಹತ್ಯೆ

Wednesday, April 15th, 2020
Krishna-Shanti

ಉಡುಪಿ : ಕಾರ್ಕಳ ತಾಲೂಕಿನ ನಿರೇಬೈಲೂರಿನ ಅರ್ಚಕ ರೊಬ್ಬರು  ಮುಂಬೈನ ಕಾಂಡಿವಿಲಿ ದೇವಾಲಯದ ಆವರಣದಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾರ್ಕಳದ ನೀರೆಬೈಲೂರು ನಿವಾಸಿ ಕೃಷ್ಣ ಶಾಂತಿ (37) ಆತ್ಮಹತ್ಯೆ ಅರ್ಚಕ. ಅವರು ಮೇ 17 ರಂದು ಮುಂಬೈನ ಕಾಂಡಿವಿಲಿ  ಪ್ರದೇಶದ ಭದ್ರಕಾಳಿ  ದೇವಸ್ಥಾನದಲ್ಲಿ ಪೂಜೆಗೆ ಹೋಗಿದ್ದರು, ಅವರು ತಾತ್ಕಾಲಿಕವಾಗಿ ಅರ್ಚಕರಾಗಿ ಕೆಲಸಕ್ಕೆ ಹೋದರು ಆದರೆ ಮಾಡಲು ಯಾವುದೇ ಕೆಲಸವಿಲ್ಲ ಎಂದು ಬೇಸರಗೊಂಡು ಮಾನಸಿಕ್ ಖಿನ್ನತೆಗೆ ಒಳಗಾಗಿದ್ದರು.  ಲಾಕ್ ಡೌನ್ ವಿಸ್ತರಣೆಯಿಂದ  ಹಿಂತಿರುಗಿಸಲು ಸಾಧ್ಯವಿಲ್ಲ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ […]

ಅಂಗಡಿ ಬಾಗಿಲನ್ನು ಮುಚ್ಚಿಸಲು ಯತ್ನಿಸಿದ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಖಾರದಹುಡಿ ಎರಚಿದ ಮಹಿಳೆ

Thursday, January 30th, 2020
yavatnal

ಮುಂಬೈ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಅಂಗಡಿಯೊಂದರ ಬಾಗಿಲನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದಾಗ ಮಾಲಕಿ ಖಾರದ ಪುಡಿಯನ್ನು ಎರಚಿದ ಘಟನೆ ಯವತ್ಮಾಲ್ ಎಂಬಲ್ಲಿ ನಡೆದಿದೆ. ಸಿಎಎ, ಎನ್ ಸಿಆರ್, ಎನ್ ಆರ್ ಪಿ ವಿರೋಧಿಸಿ ವಿವಿಧ ಸಂಘಟನೆಗಳು ಮುಂಬೈನಲ್ಲಿ ಬಂದ್ ಗೆ ಕರೆ ನೀಡಿದ್ದವು. ಈ ವೇಳೆ ರಸ್ತೆಗಿಳಿದಿದ್ದ ಪ್ರತಿಭಟನಾಕಾರರು ಅಂಗಡಿಯೊಂದರ ಬಾಗಿಲನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ್ದಾರೆ. ಈ ವೇಳೆ ಅಂಗಡಿ ಮಾಲಕಿ ಮತ್ತು ಪ್ರತಿಭಟನಾಕಾರರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಆದರೂ […]

ಬಿಜೆಪಿಗೆ ಗೆಲುವಿನ ಭರವಸೆ : ಮಹಾರಾಷ್ಟ್ರದಲ್ಲಿ ಸಂಭ್ರಮಾಚರಣೆಗೆ ಸಿದ್ಧವಾಗಿದೆ 5000 ಲಾಡುಗಳು

Thursday, October 24th, 2019
BJP

ಮುಂಬೈ : ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿಗಂತೂ ಗೆಲುವು ತಮ್ಮದೇ ಎಂಬ ಭರವಸೆ ಬಲವಾಗಿಯೇ ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರು ಗೆಲುವು ಸಂಭ್ರಮಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಂಬೈನ ಬಿಜೆಪಿ ಮುಖ್ಯಕಚೇರಿಯಲ್ಲಿ ವಿಜಯೋತ್ಸವದ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ. ಮತ ಎಣಿಕೆಯ ಪ್ರಕ್ರಿಯೆಯನ್ನು ನೇರ ಪ್ರಸಾರದಲ್ಲಿ ನೋಡಲು ದೊಡ್ಡ ಟಿವಿ ಪರದೆಗಳನ್ನು ಹಾಕಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗೆದ್ದ ಬಳಿಕ ಸಂಭ್ರಮಾಚರಣೆ […]

ಮುಂಬೈ : ಗಣೇಶ ವಿಸರ್ಜನೆ ಸಂದರ್ಭದಲ್ಲಿ 17ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವು

Friday, September 13th, 2019
ganesha

ಮುಂಬೈ : ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಕೊನೆಯ ದಿನ ನಡೆದ ಗಣೇಶ ವಿಗ್ರಹಗಳ ವಿಸರ್ಜನೆ ಸಂದರ್ಭದಲ್ಲಿ 17ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಐವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಬಿಗಿ ಬಂದೋಬಸ್ತ್ ನಲ್ಲಿ ಗುರುವಾರ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾರೀ ಪ್ರಮಾಣದಲ್ಲಿ ಜನ ಪಾಲ್ಗೊಂಡಿದ್ದರು. ಹತ್ತು ದಿನಗಳ ಕಾಲ ನಡೆದ ಗಣೇಶ ಹಬ್ಬದ ಕೊನೆಯ ದಿನವಾದ ಗುರುವಾರ ಗಣೇಶ ವಿಗ್ರಹಗಳ ವಿಸರ್ಜನೆ ನಡೆದಿತ್ತು. […]

ಮುಂಬೈನಲ್ಲಿ ಮತ್ತೆ ಧಾರಾಕಾರ ಮಳೆ : ಹಲವು ಪ್ರದೇಶಗಳು ಜಲಾವೃತ

Tuesday, September 3rd, 2019
maharashtra

ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಸೋಮವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ. ಮಂಗಳವಾರವೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈನ ಕಿಂಗ್ ಸರ್ಕಲ್, ಮಾಟುಂಗಾ, ಅಂಧೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ತೀವ್ರ ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ. ಈ ಮಳೆಗಾಲದಲ್ಲಿ ಮುಂಬೈ ನಗರಿ ಹಲವು ಬಾರಿ ಮಳೆಯಿಂದ ಜಲಾವೃತಗೊಂಡಿದ್ದು, ಸ್ಥಳೀಯ ರೈಲು ಸಂಚಾರ ಹಾಗೂ ಬಸ್, ವಿಮಾನ […]

ಮುಂಬೈನಲ್ಲಿ‌ ಹಲ್ಲೆ ಖಂಡಿಸಿ ಮಂಗಳಮುಖಿಯರಿಂದ ಪ್ರತಿಭಟನೆ

Monday, October 29th, 2018
Transgendar-1

ಮಂಗಳೂರು: ಮುಂಬೈನಲ್ಲಿ‌ ಮಂಗಳಮುಖಿಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳಮುಖಿಯರಿಂದ ಪ್ರತಿಭಟನೆ ನಡೆಯಿತು. ಮಂಗಳಮುಖಿಯರು ನ್ಯಾಯ ಬೇಕು, ಅಮಾಯಕ ಮಂಗಳಮುಖಿಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಎಂದು ಘೋಷಣೆ ಕೂಗಿದರು‌.ನಂತರ ಮಂಗಳಮುಖಿಯರು ಮಾತನಾಡಿ, ನಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಇದುವರೆಗೂ ನಾವು ಯಾರಲ್ಲೂ ಹೇಳಿಲ್ಲ. ಆದರೆ ಜನರು ಹಲ್ಲೆ ನಡೆಸುವ ಮಂಚೆ ಯೋಚಿಸಬೇಕು. ಅದು ಯಾವ ಕಾರಣಕ್ಕೆ ಆಗುತ್ತೆ. ಅಲ್ಲಿ ಏನು ತಪ್ಪು […]