ಕುತ್ತಾರು ಜಂಕ್ಷನ್‌ನ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ನಶೆ ಏರಿಸಿಕೊಂಡ ಯುವತಿ

Wednesday, July 6th, 2016
Young-lady-creates-drama

ಮಂಗಳೂರು: ಕುತ್ತಾರು ಜಂಕ್ಷನ್‌ನ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ನಶೆ ಏರಿಸಿಕೊಂಡಂತೆ ವರ್ತಿಸುತ್ತಿದ್ದ ಯುವತಿಯೋರ್ವಳು ಸಿಕ್ಕಸಿಕ್ಕವರಿಗೆ ಬೈದಾಡುತ್ತಾ ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಾದ್ಧಾಂತ ಮಾಡಿರುವ ಘಟನೆ ನಡೆದಿದೆ. ಅಲ್ಲದೆ ನಾಗರಿಕರು ಮತ್ತು ಪೊಲೀಸರನ್ನು ಈ ಯುವತಿ ಬೆಸ್ತು ಬೀಳಿಸಿದ್ದಾಳೆ. ಮುಡಿಪು ಐಟಿ ಕಂಪೆನಿಯಲ್ಲಿ ಎಂಜಿನಿಯರಿಂಗ್ ಕೆಲಸದಲ್ಲಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾಕೆ ಸಾರ್ವಜನಿಕರನ್ನು ನಿಂದಿಸಿದ್ದಕ್ಕೆ ಉಳ್ಳಾಲ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ಕುತ್ತಾರಿನ ರಾಜರಾಜೇಶ್ವರಿ ದೇವಸ್ಥಾನದೊಳಗೆ ಚಪ್ಪಲಿ ಹಾಕಿಕೊಂಡೇ ದೇವರನ್ನು ಕಾಣಲೆಂದು ಒಳ ನಡೆಯಲು ಯತ್ನಿಸಿದ್ದಾಗ ಜನರೇ ತಡೆದಿದ್ದಾರೆ. ತನ್ನ […]

ನಮ್ಮ ಸಂಸ್ಕೃತಿಯಲ್ಲಿ ಹೆತ್ತ ತಾಯಿಯನ್ನು ಪ್ರತ್ಯಕ್ಷ ದೇವರೆಂದು ಆರಾಧಿಸಲಾಗುತ್ತಿದೆ

Thursday, February 25th, 2016
Ankatimar

ಮುಳ್ಳೇರಿಯಾ: ವಿಶ್ವದಲ್ಲಿ ಶ್ರೇಷ್ಠ ನಾಗರೀಕತೆಯನ್ನು ಹೊಂದಿರುವ ಭಾರತ ತನ್ನ ವಿವಿಧ ಆಚಾರ,ವೈವಿಧ್ಯಮಯ ಸಂಸ್ಕೃತಿ ಹಾಗೂ ಆರಾಧನೆಗಳಿಂದ ಮಹತ್ವ ಪಡೆದಿದೆ.ದೇವರ ಮೇಲಿನ ಅಪಾರ ನಂಬಿಕೆ,ವಿಶ್ವಾಸಗಳಿಂದ ದೇವರ ಕೋಣೆಯಂತೆ ನಮ್ಮ ದೇಶ ಇತರ ರಾಷ್ಟ್ರಗಳಿಗೆ ಆಕರ್ಷಿಸಲ್ಪಡುತ್ತಿದೆಯೆಂದು ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಅಂಕತ್ತಿಮಾರ್ ಶ್ರೀರಕ್ತೇಶ್ವರಿ ದೈವಸ್ಥಾನದ ನಾಗ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ನಮ್ಮ ಸಂಸ್ಕೃತಿಯಲ್ಲಿ ಹೆತ್ತ ತಾಯಿಯನ್ನು ಪ್ರತ್ಯಕ್ಷ ದೇವರೆಂದು ಆರಾಧಿಸಲಾಗುತ್ತಿದೆ.ಬೇರೆಲ್ಲೂ ಕಂಡು ಬರಲಾರದ ಈ […]

ಸನಾತನ ಸಂಸ್ಕೃತಿ ಭೋಗ ಲಾಲಸೆಗಳಿಗೆ ಎಂದೂ ಆಸ್ಪದ ನೀಡಿಲ್ಲ್ಲ : ಪ್ರವೀಣ್ ಕೋಡೋತ್ತ್

Friday, January 22nd, 2016
Yeniyarpu

ಬದಿಯಡ್ಕ: ಪ್ರಾಚೀನ ಸತನಾತನ ಧರ್ಮದಲ್ಲಿ ಆಚರಿಸುವ ಆಚರಣೆಗಳ ಹಿಂದೆ ಮಹತ್ವವಾದ ಹಿನ್ನೆಲೆಗಳಿವೆ. ಆದರೆ ಆಧುನಿಕ ಚಿಂತನೆಗಳ ಫಲಗಳೆಂದು ಆಚರಣೆಗಳನ್ನು ಹೀಯಾಳಿಸುವುದು ತರವಲ್ಲ ಎಂದು ಹಿಂದೂ ಐಕ್ಯವೇದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೋಡೋತ್ತ್ ಅಭಿಪ್ರಾಯ ವ್ಯಕ್ತಪಡಿಸಿದರು. ನೀರ್ಚಾಲು ಸಮೀಪದ ಏಣಿಯರ್ಪು ಕೋದಂರ್ಬತ್ತ್ ತರವಾಡು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ವಿಶೇಷೋಪನ್ಯಾಸಗೈದು ಮಾತನಾಡುತ್ತಿದ್ದರು. ಭೋಗ ಸಂಸ್ಕೃತಿಯ ಜಗತ್ತಿನ ದೊಡ್ಡಣ್ಣಗಳು ಆಧ್ಯಾತ್ಮಿಕ,ಭೌದ್ದಿಕ ಶ್ರೀಮಂತಿಕೆಯ ಕೊರತೆಯಿಂದ ಧೂಳೀಪಟವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅವೆಲ್ಲವಕ್ಕೂ ಕಲಶಪ್ರಾಯವಾಗಿ […]