ಡಾ. ಆರ್. ಎನ್. ಶೆಟ್ಟಿಯವರು ಸಂಕಲ್ಪದಂತೆ ನಿರ್ಮಿಸಿದ ನೂತನ ಬ್ರಹ್ಮರಥದ ಪುರಪ್ರವೇಶ

Thursday, January 6th, 2022
Brahmaratha

ಕುಂದಾಪುರ  : ಡಾ. ಆರ್. ಎನ್. ಶೆಟ್ಟಿಯವರು ಸಂಕಲ್ಪದಂತೆ ನಿರ್ಮಿಸಿದ ನೂತನ ರಥದ ಪುರಪ್ರವೇಶ ಕಾರ್ಯಕ್ರಮ ಗುರುವಾರ ಸಂಜೆ ಅತ್ಯಂತ ಅದ್ದೂರಿಯಾಗಿ ನಡೆಯಿತು. ಮಹತ್ಹೋಭಾರ ಶ್ರೀ ಮುರುಡೇಶ್ವರನ ಭಾವಚಿತ್ರವನ್ನು ಇರಿಸಿ ಆರತಿ ಬೆಳಗಿದ ಆರ್. ಎನ್. ಶೆಟ್ಟಿಯವರ ಪುತ್ರ ಸುನಿಲ್ ಶೆಟ್ಟಿಯವರು ರಥವನ್ನು ಬರಮಾಡಿಕೊಂಡರು. ಧಾರ್ಮಿಕ ವಿಧಿ ವಿದಾನಗಳನ್ನು ದೇವಸ್ಥಾನದ ಮುಖ್ಯ ಅರ್ಚಕರಾದ ಜಯರಾಮ ಅಡಿಗಳ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅರ್ಚಕ ಶಿವರಾಮ ಅಡಿಗಳ್ ಮುಂತಾದವರು ಉಪಸ್ಥಿತರಿದ್ದರು. ಮಹಿಳೆಯರಿಂದ ಪೂರ್ಣಕುಂಭ, ಮಹಿಳೆಯರ ಭಜನಾ ತಂಡ, ನಂತರ ವಿವಿಧ […]

ಮುರುಡೇಶ್ವರ ಶಿವನ ವಿಗ್ರಹ ದ ಶಿರವನ್ನು ಕತ್ತರಿಸಿದ ಫೋಟೊ ವೈರಲ್, ದೇವಸ್ಥಾನದ ಭದ್ರತೆ ಇನ್ನಷ್ಟು ಬಿಗಿ

Tuesday, November 23rd, 2021
Murudeshwara-Shiva-Statue

ಭಟ್ಕಳ  : ಅತ್ಯಂತ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ಪ್ರಸಿದ್ಧ ಯಾತ್ರಾತಾಣಗಳಲ್ಲಿ ಒಂದಾದ ಉತ್ತರ ಕನ್ನಡದ ಮುರುಡೇಶ್ವರ ದ ಬೃಹತ್ ಈಶ್ವರ ಪ್ರತಿಮೆ ಚಿತ್ರ  ಕುಖ್ಯಾತ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದು ಉಗ್ರ ಸಂಘಟನೆಯ ದಾಳಿ ಸಂಚು ಎಂದು ಹೇಳಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಶಿವನ ವಿಗ್ರಹ ದ ಶಿರವನ್ನು ಕತ್ತರಿಸಿದಂತೆ ಎಡಿಟ್ ಮಾಡಲಾದ ಫೋಟೊವನ್ನು ಉಗ್ರ ಸಂಘಟನೆ ‘ಐಸಿಸ್’(ISIS)ನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ […]

ಶಿಕ್ಷಣ ಮತ್ತು ಸಮೂಹ ಉದ್ಯಮ ಸಂಸ್ಥೆಗಳ ಸ್ಥಾಪಕ ಶ್ರೀ.ಆರ್.ಎನ್. ಶೆಟ್ಟಿ ಇನ್ನು ನೆನಪು ಮಾತ್ರ

Friday, December 18th, 2020
RN Shetty

ಕುಂದಾಪುರ  : ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹ ಸಂಸ್ಥೆಗಳ ಸ್ಥಾಪಕ ಶ್ರೀ.ಆರ್.ಎನ್. ಶೆಟ್ಟಿ (92) ಗುರುವಾರ  ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿದ್ದರು. 1961ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ […]

ಗೆಳೆಯರೊಂದಿಗೆ ಹೋದ ಗ್ರಾಮ ಲೆಕ್ಕಾಧಿಕಾರಿ ನಾಪತ್ತೆ

Sunday, December 6th, 2020
Shekar Jyotiba

ಭಟ್ಕಳ :  ಪತ್ನಿಗೆ ಕರೆ ಮಾಡಿ ಹೊನ್ನಾವರದಲ್ಲಿ ಇದ್ದೇನೆ. ಮನೆಗೆ ಬರುವುದು ರಾತ್ರಿ 9.30 ಆಗಬಹುದು ಎಂದು ಹೇಳಿದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಮನೆಗೆ ಬಾರದೆ ಕಾಣೆಯಾಗಿರುವ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೆಳೆಯರೊಂದಿಗೆ ಹೊನ್ನಾವರಕೆ ಹೋಗಿ ಬರುವುದಾಗಿ ಹೇಳಿ ಕಾಣೆಯಾಗಿರುವ ಗ್ರಾಮ ಲೆಕ್ಕಾಧಿಕಾರಿ ಶೇಖರ ಜ್ಯೋತಿಬಾ ಕಾಲೇಕರ್ ಮನೆಯಿಂದ ಹೋಗಿದ್ದರು ಎಂದು ತಿಳಿದುಬಂದಿದೆ. ಕಳೆದ ಇರಡು ವರ್ಷದಿಂದ ಬೈಲೂರು ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಲೇಕರ್. ಕಿಡ್ನಿ ಸಮಸ್ಯೆ ಇರುವುರಿಂದ ಕಳೆದ 2 ವರ್ಷದ ಹಿಂದೆ ಶಿವಮೊಗ್ಗದ […]

ಲಾರಿ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ : ಹೊತ್ತಿ ಉರಿದ ಲಾರಿ

Friday, August 30th, 2019
bhatkala

ಭಟ್ಕಳ : ಲಾರಿ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಡೀಸೆಲ್ ಟ್ಯಾಂಕಿಗೆ ಬೆಂಕಿ ತಗುಲಿ ರಸ್ತೆ ಮಧ್ಯೆದಲ್ಲಿಯೇ ಟ್ಯಾಂಕರ್ ಮತ್ತು ಲಾರಿ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕೇರಳ ಹಾಗೂ ಕರ್ನಾಟಕದ ಬಿಜಾಪುರ ಮೂಲದ ಲಾರಿ ಮತ್ತು ಟ್ಯಾಂಕರ್’ಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಡೀಸೆಲ್ ಟ್ಯಾಂಕರ್ ಮತ್ತು ಲಾರಿಗೆ ಬೆಂಕಿ ತಗುಲಿ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದೆ. […]

ಈಜಲು ಹೋದ ಬೆಂಗಳೂರಿನ 3 ವಿದ್ಯಾರ್ಥಿಗಳು ಮುರುಡೇಶ್ವರದಲ್ಲಿ ಸಮುದ್ರಪಾಲು

Monday, July 25th, 2011
Nitte Students/ನಿಟ್ಟೆ ವಿದ್ಯಾರ್ಥಿಗಳು

ಉಡುಪಿ : ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ನಿಟ್ಟೆ ಬಿ.ಬಿ.ಎಂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೂವರು ಈಜಲು ಸಮುದ್ರಕ್ಕಿಳಿದು  ಸಮುದ್ರ ಪಾಲಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದ್ದು, ಕಾಣೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ.  ನಿಟ್ಟೆ ಬಿ.ಬಿ.ಎಂ ಕಾಲೇಜಿನ  ತೇಜಸ್ ವೆಂಕಟರಾಮಯ್ಯ, ಧಿನೀನ್ ರಾಜ್, ಹಾಗೂ ತೇಜಸ್ ಮಂಜುನಾಥ್ ಇವರು ಬೆಳಿಗ್ಗೆ ದೇವರ ದರುಶನಗೈದು ಈಜಲು ಸಮುದ್ರಕ್ಕಿಳಿದರು,  ಕೆಲವೇ ಕ್ಷಣದಲ್ಲಿ ವಿದ್ಯಾರ್ಥಿಗಳು ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ನೀರು ಪಾಲಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ . ಪೋಲಿಸರು ಹಾಗೂ ಸ್ಥಳೀಯ ಮೀನುಗಾರರು ಮೂವರ ಮೃತದೇಹವನ್ನು […]