ನಿಯಂತ್ರಣ ತಪ್ಪಿದ ಮೈನ್ಸ್ ಸಾಗಾಟದ ಲಾರಿ, ಪೊಲೀಸ್ ಕಾಸ್ಟೇಬಲ್ ಸಹಿತ ಹಲವರಿಗೆ ಗಾಯ

Thursday, December 7th, 2023
lorry

ಮಂಗಳೂರು: ಲಾರಿ ಚಾಲಕನೋರ್ವ ನಿಯಂತ್ರಣ ತಪ್ಪಿ ಚಾಲನೆ ಮಾಡಿ ರಸ್ತೆ ಬದಿಯಲ್ಲಿದ್ದ ವಾಹನ ಹಾಗೂ ಹಲವರಿಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಮುಲ್ಕಿಯಲ್ಲಿ ನಡೆದಿದೆ. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಜಂಕ್ಷನ್ ನಲ್ಲಿ ಉಡುಪಿ ಕಡೆಯಿಂದ ಬಂದ ಮೈನ್ಸ್ ಸಾಗಾಟದ ಖಾಲಿ ಲಾರಿ ಅತೀ ವೇಗದಿಂದ ಏಕಾಏಕಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬಂದು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಒಂದು ಸ್ಕೂಟರ್, ಒಂದು ಆಟೋಗೆ ಡಿಕ್ಕಿ ಹೊಡೆದಿದ್ದು ಎರಡು ವಾಹನವೂ ಪಲ್ಟಿಯಾಗಿ ರಸ್ತೆಯಿಂದ ಎಸೆಯಲ್ಪಟ್ಟಿದೆ. ಜೊತೆಗೆ ಅಲ್ಲೇ ಇದ್ದ […]

ಗೋಲಿಬಜೆ ಗಂಟಲಿನಲ್ಲಿ ಸಿಲುಕಿ 55 ವರ್ಷದ ವ್ಯಕ್ತಿ ಸಾವು, ಮರಣೋತ್ತರ ವರದಿ

Wednesday, October 28th, 2020
golibaje

ಮಂಗಳೂರು : ಮುಲ್ಕಿಯ 55 ವರ್ಷದ ವ್ಯಕ್ತಿಯೊಬ್ಬ ತಾನು ಮನೆಗೆ ತಂದು ತಿನ್ನುತ್ತಿದ್ದ ಗೋಲಿಬಜೆ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ರ ಪರಿಣಾಮ ಪ್ರಾಣ ಕಳೆದುಕೊಂಡಿರುವ ಬಗ್ಗೆ ಮರಣೋತ್ತರ ವರದಿ ಲಭ್ಯವಾಗಿದೆ. ಮೃತ ವ್ಯಕ್ತಿಯನ್ನು ಹರೀಶ್ ರಾಮಪ್ಪ ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರಾಮಪ್ಪ ಮುಲ್ಕಿಯಲ್ಲಿ ತನ್ನ ಅಕ್ಕನೊಂದಿಗೆ ಉಳಿದುಕೊಂಡಿದ್ದ. ಕೆಲಸದಿಂದ ಮನೆಗೆ ಹಿಂದಿರುಗುವಾಗ ಗೋಲಿಬಜೆಯನ್ನು ರೆಸ್ಟೋರೆಂಟ್‌ನಿಂದ ಖರೀದಿಸಿ ತಂದಿದ್ದ. ಮನೆಯಲ್ಲಿ ಅವನು ಅದನ್ನು ತಿನ್ನುತ್ತಿದ್ದಾಗ ಒಂದು ಅವನ ಗಂಟಲಿನಲ್ಲಿ ಸಿಲುಕಿಕೊಂಡಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ […]

ಕಟೀಲು ದೇವಸ್ಥಾನದಲ್ಲಿ ಕೋಟ್ಯಂತರ ಅವ್ಯಹಾರ, ಆರೋಪಿತರಿಗೆ ಜಾಮೀನು

Sunday, July 19th, 2020
kateelu

ಮೂಡಬಿದ್ರೆ  : ಕಟೀಲು ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆಯುತ್ತಿದೆ, ವಿಶೇಷ ಪೂಜೆ, ಯಕ್ಷಗಾನ ಮೇಳದ ಹೆಸರಲ್ಲಿ ಹಣ ವಸೂಲಿ,  ಚಿನ್ನದ ರಥ ಸೇವೆಗೆ ಹಣ ವಸೂಲಿ, ಚಂಡಿಕಾ ಯಾಗ.  ಹೋಮದ  ಹೆಸರಲ್ಲಿ ಹಣ ವಸೂಲಿ ನೆಡೆಯುತ್ತಿದೆ ಎಂದು  ಅಲ್ಲದೆ ಸಾರ್ವಜನಿಕರ ದುಡ್ಡು ದೇವರ ಹೆಸರಲ್ಲಿ ಅಸ್ರಣ್ಣ ಕುಟುಂಬದ ಮನೆ ಸೇರುತ್ತದೆ.  ಸರಕಾರೀ ದೇವಸ್ಥಾನದಲ್ಲಿ ವಸೂಲಿ ಒಂದು ಕಡೆಯಾದರೆ ಅದಕ್ಕೆ ರಶೀದಿ ಬೇರೆಯೇ ತೋರಿಸಲಾಗುತ್ತಿತ್ತು ಎಂದು ತನಿಖಾ ವರದಿ ಮಾಡಲಾಗಿತ್ತು. ಈ ಬಗ್ಗೆ ಅಸ್ರಣ್ಣ ಕುಟುಂಬಸ್ಥರು ನ್ಯಾಯಾಲಯದಲ್ಲಿ ಒಂದು ಕೋಟಿ […]

ಐದು ವರ್ಷದ ಮಗಳೊಂದಿಗೆ ಬಾವಿಗೆ ಹಾರಿದ ತಾಯಿ

Friday, August 3rd, 2018
suicide

ಮಂಗಳೂರು : ಮಗಳಿಗೆ ಅನಾರೋಗ್ಯ ಎಂದು ತಾಯಿ – ಮಗಳು ಅತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರ ಹೊರವಲಯದ ಮುಲ್ಕಿ ಸಮೀಪದ ಗೇರುಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಸುಜಾತ(48), ಕೃತಿಕಾ(5) ಅತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. 5 ವರ್ಷದ ಬಾಲಕಿ ಕೃತಿಕಾ ಕಳೆದ ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತಿದ್ದಳು. ಈ ಹಿನ್ನೆಲೆಯಲ್ಲಿ ತಾಯಿ ಸುಜಾತ ನೊಂದಿದ್ದು, ತಾಯಿ ಮತ್ತು ಮಗಳ ಆತ್ಮಹತ್ಯೆಗೆ ಇದೇ ಕಾರಣ ಎಂದು ಹೇಳಲಾಗುತ್ತಿದೆ. ಗುರುವಾರ ಮನೆಯಲ್ಲಿ ಯಾರು ಇಲ್ಲದ […]

ಮುಲ್ಕಿಯಲ್ಲಿ ಲಾರಿ ಢಿಕ್ಕಿ ಹೊಡೆದು ಬಾಲಕ ಮೃತ್ಯು

Monday, May 21st, 2018
Mulki Bus accident

ಮುಲ್ಕಿ :  ಮಿನಿಬಸ್ ಮತ್ತ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ಹೆದ್ದಾರಿ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಬಾಲಕ ಮೃತಪಟ್ಟು ಕುಟುಂಬದ ಸದಸ್ಯರು ಗಾಯಗೊಂಡ ಘಟನೆ ರವಿವಾರ ರಾತ್ರಿ ಮುಲ್ಕಿಯ ಬಪ್ಪನಾಡು ದೇವಸ್ಥಾನದ ಎದುರು ನಡೆದಿದೆ. ಮೃತ ಬಾಲಕನನ್ನು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದ ನಿವಾಸಿ ರಕ್ಷಿತ್ ಕುಮಾರ್ (12) ಎಂದು ಗುರುತಿಸಲಾಗಿದೆ. ಮುಲ್ಕಿಯ ಬಪ್ಪನಾಡು ಬಳಿಯ ಅಪಾರ್ಟ್‌ಮೆಂಟ್ ಒಂದರ ವಾಚ್ ಮ್ಯಾನ್ ಮುತ್ತು ಎಂಬವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮುಲ್ಕಿಯ ಬಪ್ಪನಾಡು […]

ಬಿಜೆಪಿ ಅಧಿಕಾರಕ್ಕೇರಿದರೆ 30 ದಿನಗಳಲ್ಲಿ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣ: ನಾಗರಾಜ ಶೆಟ್ಟಿ

Friday, May 4th, 2018
sundar-shetty

ಮಂಗಳೂರು: ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 30 ದಿನಗಳಲ್ಲಿ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣವನ್ನು ಕಾರ್ಯಗತಗೊಳಿಸುವುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ನಾಗರಾಜ ಶೆಟ್ಟಿ ತಿಳಿಸಿದ್ದಾರೆ. ಬಿಜೆಪಿ ಮಂಗಳೂರು ದಕ್ಷಿಣ ಪ್ರಚಾರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣವಾಗಿ, ರಾಜ್ಯ ಸರಕಾರದಿಂದ ಅಧಿಸೂಚನೆಯೂ ಆಗಿತ್ತು. ಹಾಗಿದ್ದರೂ ಶಾಸಕರಾಗಿದ್ದ ಜೆ.ಆರ್. ಲೋಬೋ ಅದಕ್ಕೆ ತಡೆ […]

ಮುಲ್ಕಿ-ಮೂಡುಬಿದಿರೆ ಕ್ಷೇತ್ರ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ

Thursday, May 3rd, 2018
JDS-election

ಮುಲ್ಕಿ: ಜಾತ್ಯತೀತ ಜನತಾದಳ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಚುನಾವಣಾ ಪ್ರಚಾರ ವಾಹನಕ್ಕೆ ಕಾರ್ನಾಡಿನಲ್ಲಿ ಹಸಿರು ನಿಶಾನೆ ತೋರಿಸಲಾಯಿತು. ಜೆಡಿಎಸ್ ರಾಜ್ಯ ಆ.ಸ.ಘಟಕದ ಉಪಾಧ್ಯಕ್ಷ ಎಂ.ಕೆ.ಅಬ್ದುಲ್ ಖಾದರ್ ಹಾಗು ರಾಜ್ಯ ಪ್ರ.ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ ಜೆಡಿಎಸ್ ಬಾವುಟವನ್ನು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜೀವನ್ ಕೆ.ಶೆಟ್ಟಿ ಹಾಗು ದ.ಕ.ಜಿಲ್ಲಾ ಉಪಾಧ್ಯಕ್ಷ ರಿಯಾಝ್ ಎಚ್.ಕಾರ್ನಾಡ್ ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ನಿಸಾರ್ ಅಹ್ಮದ್, ನವೀನ್ ಪುತ್ರನ್, ನೂತನ್ ಶೆಟ್ಟಿ, ನೂರುಲ್ಲಾ ಶೇಕ್, ಚಂದ್ರಹಾಸ ಶೆಟ್ಟಿ, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

ಅನಾರೋಗ್ಯದಿಂದ ಮುಲ್ಕಿ ಪೊಲೀಸ್ ಠಾಣೆ ಪಿಎಸ್‌‌ಐ ನಿಧನ

Monday, March 12th, 2018
police-died

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪಿಎಸ್‌‌ಐವೊಬ್ಬರು ಮೃತಪಟ್ಟಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ಪಿಎಸ್ಐ ಶಾಂತಪ್ಪ ಮೃತರು. ಕೆಲ ದಿನಗಳಿಂದ ಅನಾರೋಗ್ಯದಿಂದ ಇದ್ದ ಶಾಂತಪ್ಪ ಅವರು ಮಂಗಳೂರಿನ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶಾಂತಪ್ಪ ಮಂಗಳೂರಿನ ಹೊರವಲಯದ ಮುಲ್ಕಿ ಪೊಲೀಸ್ ‌ಠಾಣೆಯಲ್ಲಿ ಪಿಎಸ್‌‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಯಾರಿಗೆ ಸಿಗುತ್ತೆ ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್?

Monday, January 15th, 2018
abhay-chandra

ಮಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಭಾರೀ ಕುತೂಹಲ ಕೆರಳಿಸಿದ ಕ್ಷೇತ್ರ ಮುಲ್ಕಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರ. ಭಾರಿ ನಿರೀಕ್ಷೆಯ ಕ್ಷೇತ್ರವಾದ ಮುಲ್ಕಿ- ಮೂಡಬಿದಿರೆಗೆ ಈ ಭಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಕುತೂಹಲ ಹಾಗೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕ್ಷೇತ್ರದಿಂದ ಕಳೆದ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಭಯಚಂದ್ರ ಜೈನ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಸುಳಿವು ಈ ಹಿಂದೆಯೇ ನೀಡಿದ್ದರು. ಈ ಬಾರಿ ಕ್ಷೇತ್ರ ದಿಂದ […]

ಮ್ಯಾಟ್ರಿಮೊನಿ, ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಮುಲ್ಕಿಯ ನಿವಾಸಿ

Tuesday, October 17th, 2017
Mulki

ಮಂಗಳೂರು: ಕನ್ನಡ ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ತನ್ನ ಮದುವೆಯ ಕುರಿತು ವಿವರ ಹಾಕಿದ ಮುಲ್ಕಿಯ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಮುಲ್ಕಿಯ ನಿವಾಸಿಯೊಬ್ಬರು ಕನ್ನಡ ವಿವಾಹ ಕುರಿತ ವೆಬ್‌ಸೈಟೊಂದರಲ್ಲಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಅವರ ಬಗ್ಗೆ ವಿವರವನ್ನೂ ನೀಡಿದ್ದರು. ಇದನ್ನು ನೋಡಿದ ಇಂಗ್ಲೆಂಡ್ ಪ್ರಜೆ ಸ್ಟೆಲ್ಲಾ ಮೋರಿಸ್‌ ಎಂಬಾಕೆ ಅವರನ್ನು ಮದುವೆಯಾಗಲು ತಯಾರಾಗಿದ್ದಾಳೆ. ಅಲ್ಲದೇ ಇಂಗ್ಲೆಂಡ್‌ಗೆ ಬಂದರೆ ಅಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ಆಕೆಯ ಮೊಬೈಲ್ ಸಂಖ್ಯೆ +447743371221 ವಾಟ್ಸ್ಆ್ಯಪ್ ಮೂಲಕ ಮೆಸೇಜ್ ಮಾಡಿದ್ದಳು. […]