ಚಿಕ್ಕಮ್ಮನ ಮೊಬೈಲ್ ಗೆ ಅಶ್ಲೀಲ ಸಂದೇಶ : ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

Wednesday, November 10th, 2021
Santhosh

ಮಂಗಳೂರು: ಯುವಕನೋರ್ವ ಪ್ರಿಯತಮೆಯ ಚಿಕ್ಕಮ್ಮನ ಮೊಬೈಲಿಗೆ ಅಶ್ಲೀಲ ವೀಡಿಯೋ ಮಾಡಿ  ಕಳುಹಿಸಿದ್ದಲ್ಲದೆ, ಬೇರೆ ಬೇರೆ ಸಿಮ್ ಗಳಿಂದ ಕರೆಮಾಡಿ ಅಶ್ಲೀಲವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದ. ಮಹಿಳೆಯ ಅಕ್ಕನ ಮಗಳನ್ನು ಮೂಡಿಗೆರೆ ಮೂಲದ ಸಂತೋಷ್ ಎಂಬಾತ ಪ್ರೀತಿಸುತ್ತಿದ್ದ. ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಆಕೆಯನ್ನು ಮಂಗಳೂರಿನಲ್ಲಿರುವ ಚಿಕ್ಕಮನ ಮನೆಯಲ್ಲಿ ಇರಿಸಿದ್ದರು. ಆದರೆ, ಸಂತೋಷ್ ಯುವತಿಯ ಮೊಬೈಲಿಗೆ […]

ಚರ್ಚ್‌ನಲ್ಲಿ ಕೋವಿಡ್‌ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ನಡೆಯುತ್ತಿದೆ : ಶೋಭಾ ಕರಂದ್ಲಾಜೆ

Wednesday, May 19th, 2021
shobha karandlaje

ಚಿಕ್ಕಮಗಳೂರು : ಮೂಡಿಗೆರೆಯ ಆಲ್ದೂರಿನ ಕೆಲ ಚರ್ಚುಗಳಲ್ಲಿ ಕೋವಿಡ್‌ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮತಾಂತರಗೊಂಡವರು ಚರ್ಚಿಗೆ ಹೋದಾಗ ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಯಾರು, ಏಕೆ ಹೀಗೆ ಹೇಳುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು. ಚರ್ಚ್‌ನವರೇ ವ್ಯಾಕ್ಸಿನ್‌ ತೆಗೆದುಕೊಳ್ತಾರೆ. ಆದರೆ ಜನರಿಗೆ ತೆಗೆದುಕೊಳ್ಳಬೇಡಿ ಎಂದು ತಪ್ಪು ಸಂದೇಶ ನೀಡ್ತಾರೆ. ಇತ್ತೀಚೆಗೆ ಬಂದ ಪ್ರಾಟೆಸ್ಟೆಂಟ್, ಸೆಂಥಕೋಸ್ಟ್ ಚರ್ಚ್‌ಗಳಿಂದ ಅಪಪ್ರಚಾರ ನಡೆಯುತ್ತಿದೆ. ಅವರ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ […]

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಒಂದೇ ಕುಟುಂಬದ ಮೂವರ ಸಾವು

Friday, October 25th, 2019
mudugere

ಮೂಡಿಗೆರೆ : ಸೇತುವೆ ಮೇಲೆ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಬ್ಬಾಳದ ಯಶೋಧ (81) ಪ್ರಕಾಶ್(61) ಹಾಗೂ ಅನಿರುದ್ಧ್ (24)ಮೃತಪಟ್ಟವರು. ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ನೀರುಗಂಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಯಶೋಧ ಕುಟುಂಬದವರು ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ತೆರಳಿದ್ದರು. ಕೊಟ್ಟಿಗೆಹಾರ ರಸ್ತೆಯಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ನೀರುಗಂಡಿ ಗ್ರಾಮದ ಬಳಿ ಚಾಲಕನ […]

ಕಳೆದ 9 ದಿನಗಳಿಂದ ವರುಣನ ಅಬ್ಬರ..ಮಲೆನಾಡು ತತ್ತರ!

Saturday, July 14th, 2018
chik-magaluru

ಚಿಕ್ಕಮಗಳೂರು: ಸರಿ ಸುಮಾರು ಒಂದು ತಿಂಗಳು, ಅದ್ರಲ್ಲೂ ಕಳೆದ 9 ದಿನಗಳಿಂದ ಮಲೆನಾಡಲ್ಲಿ ಸೂರ್ಯನ ಕಿರಣಗಳು ನೆಲಕ್ಕೆ ಬೀಳದಂತೆ ಮೋಡಗಟ್ಟಿ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಅಕ್ಷರಶಃ ಮಲೆನಾಡು ತತ್ತರಿಸಿ ಹೋಗಿದೆ. ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಮಕ್ಕಳ ಆಟದ ಮೈದಾನವಾಗಿದ್ದ ಕೆರೆ, ಹಳ್ಳ-ಕೊಳ್ಳ, ನದಿಗಳೆಲ್ಲಾ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಹೌದು, ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿಯಲ್ಲಿ ಸುರಿಯುತ್ತಿರೋ ಮಹಾಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇತ್ತ ಮಲೆನಾಡಿನಾದ್ಯಂತ ಅಸಂಖ್ಯಾತ ಕೃತಕ ಫಾಲ್ಸ್ಗಳು ಜನ್ಮತಾಳಿವೆ. ಗುಡ್ಡದಿಂದ ಹರಿಯೋ ನೀರು ಒಂದೆಡೆ […]

ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ… ರೈತರ ಮೊಗದಲ್ಲಿ ಮಂದಹಾಸ

Monday, June 4th, 2018
heavy-rain

ಬೆಂಗಳೂರು: ಭಾನುವಾರವೂ ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿತ್ತು. ಧಾರವಾಡ, ಚಿಕ್ಕಮಗಳೂರು, ಹಾವೇರಿ, ತುಮಕೂರು ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ, ಲಕಮಾಪುರ, ಯಾದವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆಲವೆಡೆ ನೆರೆ ಕೂಡ ಬಂದಿದೆ. ತಾಲೂಕಿನ ಉಪ್ಪಿನ ಬೆಟಗೇರಿಯಿಂದ ಹನುಮನಹಾಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ತುಂಬಿ ಬಂದಿದ್ದು, ಆ ಮಾರ್ಗ ಸಂಪೂರ್ಣ ಬಂದ್ ಆಗಿತ್ತು. ಚಿಕ್ಕ ಹಳ್ಳ ಇದಾಗಿದ್ದು, ಸೇತುವೆ ಜಲಾವೃತಗೊಂಡಿತ್ತು. ಬೈಕ್ ಸವಾರರು ಧೈರ್ಯ […]

ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ

Monday, February 10th, 2014
Congress-JDS

ಮೂಡಿಗೆರೆ: ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ಘೋಷಣೆ ಕೂಗಿದ ಹಿನ್ನಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸೋಮವಾರ ಬೆಳಿಗ್ಗೆ ಘರ್ಷಣೆ ನಡೆದಿದೆ. ಭೂಮಿ ಒತ್ತುವರಿ ತೆರವು ವಿರೋಧಿಸಿ ಮೂಡಿಗೆರಿ ತಾಲೂಕು ಬಲಿಗೆ ಎಂಬ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಜೆಡಿಎಸ್ ಕಾರ್ಯಕರ್ತರು ತಮ್ಮ ಘೋಷಣೆ ಮುಂದುವರೆಸಿದ […]

ಮೂಡಿಗೆರೆಯಲ್ಲಿ ಬೈಕ್‌ ಹಾಗೂ ಬಸ್‌ ನಡುವೆ ಢಿಕ್ಕಿ, ಒಂದು ಸಾವು, ಬಸ್ ಬಸ್ಮ

Thursday, August 11th, 2011
Bus-Accident/ಬೈಕ್‌ ಹಾಗೂ ಬಸ್‌ ಢಿಕ್ಕಿ

ಚಿಕ್ಕಮಗಳೂರು : ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ದಿಣ್ಣೆಕೆರೆ -ಮಾವಿನಹಳ್ಳಿಯ ತಿರುವಿನಲ್ಲಿ ಬುಧವಾರ ಸಂಜೆ ಬೈಕ್‌ ಹಾಗೂ ಬಸ್‌ ನಡುವೆ ಢಿಕ್ಕಿ ಸಂಭವಿಸಿ ಬೈಕ್‌ ಸವಾರ ಮೃತಪಟ್ಟಿದ್ದು , ಖಾಸಗಿ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್‌ನಲ್ಲಿದ್ದ 70 ಕ್ಕೂ ಅಧಿಕ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಅನಿತಾ -ಜಗದೀಶ್‌ ಮದುವೆಗೆ ಭದ್ರಾವತಿಯಿಂದ ಖಾಸಗಿ ಬಸ್ಸಿನಲ್ಲಿ 70ಕ್ಕೂ ಅಧಿಕ ಮಂದಿ ಹೋಗಿದ್ದರು. ಇನ್ನೊಂದೆಡೆ ಶಿವಮೊಗ್ಗದ ವೀರಭದ್ರ ಕಾಲನಿಯ ನಂದೀಶ್‌ ಹಾಗು ಭೈರೇಶ್‌ ಬೈಕಿನಲ್ಲಿ ವಿಹಾರಾರ್ಥ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಬಸ್ […]