ಕರಾವಳಿ ಜಿಲ್ಲೆಗಳಲ್ಲಿ ಮೊಂತಿ ಹಬ್ಬ ಆಚರಣೆ

Wednesday, September 8th, 2021
monti-fest

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ, ಮೇರಿ ಮಾತೆಯ ಜನ್ಮ ದಿನವಾದ ಮೊಂತಿ ಹಬ್ಬವನ್ನು ಬುಧವಾರ ಸರಳವಾಗಿ ಆಚರಿಸಲಾಯಿತು. ಈ ಹಬ್ಬವನ್ನು ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಚರಿಸುತ್ತಾರೆ. 9 ದಿನಗಳ ನವೇನಾ ಪ್ರಾರ್ಥನೆಯ ಬಳಿಕ ಮಾತೆ ಮೇರಿಯ ಜನ್ಮ ದಿನವಾದ ಮೊಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ಚರ್ಚ್ ಗಳಲ್ಲಿ ತೆನೆ ವಿತರಣೆಯು ನಡೆಯುತ್ತದೆ ಕೊರೊನಾ ಹಿನ್ನೆಲೆಯಲ್ಲಿ  ಚರ್ಚ್‌‌ನ ಒಳಗೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರವೇ ಪ್ರವೇಶಾವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಕಡ್ಡಾಯವಾಗಿತ್ತು. ಮಕ್ಕಳಿಂದ ಮೆರವಣಿಗೆ, ಹೂವಿನ ಅರ್ಪಣೆ ಸಹಿತ […]

ಕೊಳಲಗಿರಿ ಸೆಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಮೊಂತಿ ಹಬ್ಬ

Wednesday, September 9th, 2020
koalagiri church

ಉಡುಪಿ  : ಸೆಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿ ಇಲ್ಲಿ ಮೊಂತಿ ಹಬ್ಬ (ತೆನೆ-ಹಬ್ಬ)ದ ಆಚರಣೆಯನ್ನು ವಿಜೃಂಭರಣೆಯಿಂದ ಆಚರಿಸಲಾಯಿತು. ಮಕ್ಕಳು ಮರಿಯಮ್ಮ ಅವರ ಗ್ರೋಟ್ಟೋ ಬಳಿ ಹೂವನ್ನು ಅರ್ಪಿಸಿದರು. ನಂತರದಲ್ಲಿ ಮಕ್ಕಳಿಗೆ ಹಾಗೂ ಅನ್ಯರಿಗೆ 2 ಬಾಗಗಳಾಗಿ ವಿಂಗಡಿಸಿ ಬಲಿಪೂಜೆಯನ್ನು ನೆರವೆಯಿಸಲಾಯಿತು. ವಂದನೀಯ ಧರ್ಮಗುರುಗಳಾದ ಅನಿಲ್ ಪ್ರಕಾಶ್ ಕ್ಯಾಸ್ತಲಿನೋರವರು ಹಾಗೂ ವಂದನೀಯ ಧರ್ಮಗುರುಗಳಾದ ರೋಮನ್ ಮಸ್ಕರೇನ್ಹಸ್ ಬಲಿಪೂಜೆಯನ್ನು ನೆರವೇರಿಸಿದರು. ಹಬ್ಬದ ಪ್ರಾಯೋಜಕತ್ವವನ್ನು ನಿಖಿಲ್ ಸ್ಯಾಮ್ಯುವೆಲ್ಸ್ ಅವರ ಮೊಮ್ಮಕ್ಕಳಾದ ಜೋನ್ ಹಾಗೂ ಶಾರ್ಲೆಟ್ ಇವರು ವಹಿಸಿಕೊಂದಿದ್ದರು.  ಭಕ್ತಾಧಿಗಳು ಉಪಸ್ಥಿತರಿದ್ದರು

ಕರಾವಳಿಯಾದ್ಯಂತ ಮೊಂತಿ ಹಬ್ಬ ಮತ್ತು ತೆನೆ ಹಬ್ಬ ಆಚರಣೆ

Tuesday, September 8th, 2020
montifest

ಮಂಗಳೂರು : ಕರಾವಳಿಯಾದ್ಯಂತ  ಕ್ರಿಶ್ಚಿಯನ್ ಬಾಂಧವರು ಮಂಗಳವಾರ ಮೊಂತಿ  ಹಬ್ಬ ಮತ್ತು ತೆನೆ ಹಬ್ಬವನ್ನು ಜೊತೆಯಾಗಿ ಆಚರಿಸಿದರು. ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವಾದ ಸೆ. 8ಅನ್ನು ಮೊಂತಿ ಫೆಸ್ತ್ ಹಬ್ಬವಾಗಿ ಆಚರಿಸಲಾಗುತ್ತದೆ. ಚರ್ಚ್‌ಗಳಲ್ಲಿ ಹಬ್ಬದ ಬಲಿಪೂಜೆ ನೆರವೇರಿಸಲಾಯಿತು. ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಿ ನಮಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ವಂ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಪ್ರಧಾನ ಬಲಿಪೂಜೆ ನೆರವೇರಿಸಿದರು. ರೊಸಾರಿಯೊ […]

ಕರಾವಳಿಯಲ್ಲಿ ಮೊಂತಿ ಹಬ್ಬ ಸಂಭ್ರಾಮಾಚರಣೆ

Monday, September 9th, 2019
monti-habba

ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ರವಿವಾರ ಕ್ರೈಸ್ತರು ಮೊಂತಿ ಹಬ್ಬವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಿದರು. ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ನಲ್ಲಿ ಮಂಗಳೂರು ಧರ್ಮಪ್ರಾಂತದ ಪ್ರಧಾನ ಧರ್ಮಗುರು ವಂ| ಮ್ಯಾಕ್ಸಿಂ ನೊರೊನ್ನಾ ಅವರು ಪ್ರಧಾನ ಬಲಿಪೂಜೆ ನೆರವೇರಿಸಿದರು. ಕೆಥೆಡ್ರಲ್ನ ಧರ್ಮಗುರು ವಂ| ಜೆ.ಬಿ. ಕ್ರಾಸ್ತಾ ಉಪಸ್ಥಿತರಿದ್ದರು. ಉಡುಪಿ ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೋ ಅವರು ಪಾಂಬೂರು ಹೋಲಿ ಕ್ರಾಸ್‌ ಚರ್ಚ್‌ನಲ್ಲಿ ಹಬ್ಬದ ಪೂಜೆ ನಡೆಸಿ ಹೊಸ ತೆನೆಗಳಿಗೆ ಆಶೀರ್ವಚನ ನೀಡಿದರು. […]