ಜ್ವರದಿಂದ ಬಳಲಿ ಯುವತಿ ಮೃತ್ಯು
Tuesday, December 13th, 2022
ಬೆಳ್ತಂಗಡಿ : ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೋರ್ವಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ತೆಂಕಕಾರಂದೂರು ಗ್ರಾಮದ ಸಿಂಗ ಎಂಬವರ ಪುತ್ರಿ ಪವಿತ್ರ (22) ಅನಾರೋಗ್ಯದಿಂದ ಮೃತಪಟ್ಟ ದುರ್ದೈವಿ. ತೀವ್ರ ಜ್ವರದಿಂದ ಬಳಲುತ್ತಿದ್ದ ಪವಿತ್ರಾಳನ್ನು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ತಿಳಿದುಬಂದಿದೆ.