ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ವಂಚನೆ ಪ್ರಕರಣ ಸಿಬಿಐಗೆ ಒಪ್ಪಿಸಲು ಒತ್ತಾಯ

Tuesday, June 11th, 2024
vruksha

ಮಂಗಳೂರು: ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ವಂಚನೆ ಎಸಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. “ವೃಕ್ಷ ಬಿಸಿನೆಸ್ ಸೊಲ್ಯೂಶನ್ ಎಂಬ ಸಂಸ್ಥೆಯು ಮಂಗಳೂರಿನಲ್ಲಿ ಸ್ಥಾಪನೆಯಾಗಿ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ ದರ ನೀಡುವುದಾಗಿ ನಂಬಿಸಿ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದಾದ್ಯಂತ ಹಣ […]

ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ಆರಂಭಿಸಲು ರೈಲ್ವೇ ಸಚಿವರಿಗೆ ತು.ರ.ವೇ ಮನವಿ

Friday, February 19th, 2021
trv

ಮಂಗಳೂರು :  2020 ಮಾರ್ಚ್‍ನಲ್ಲಿ ಕೊರೋನಾ ನಿಮಿತ್ತ ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ರದ್ದು ಮಾಡಿದ್ದನ್ನು ಮತ್ತೆ ಆರಂಭಿಸಲು ತುಳುನಾಡ ರಕ್ಷಣಾ ವೇದಿಕೆ ರೈಲ್ವೆ ಸಚಿವರಿಗೆ ಮನವಿ ಮಾಡಿದೆ. ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ವಿದ್ಯಾರ್ಥಿಗಳು, ಜನಸಾಮಾನ್ಯರ ಆಶ್ರಯ ಕೇಂದ್ರವಾಗಿತ್ತು. ಪ್ರಸ್ತುತ ಕರ್ನಾಟಕಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡು ತರಗತಿ ಪುನರಾರಂಭಗೊಂಡಿದೆ. ಕಾಸರಗೋಡಿನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳ ದುಬಾರಿ ಖರ್ಚನ್ನು ಭರಿಸಲು ಅಸಾಧ್ಯವಾದ ಕಾರಣ ನೂರಾರು ಸಂಖ್ಯೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸವೇ ಮೊಟಕುಗೊಂಡ ಸ್ಥಿತಿಯಲ್ಲಿದೆ. ಅದೇ ರೀತಿ ಬಡ ಕಾರ್ಮಿಕರಿಗೆ […]

ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ 80% ಉದ್ಯೋಗ ಮೀಸಲಾತಿ ನೀಡುವಂತೆ ಯೋಗೀಶ್ ಶೆಟ್ಟಿ ಜೆಪ್ಪು ಒತ್ತಾಯ

Thursday, February 13th, 2020
yogish-shetty

ಮಂಗಳೂರು : ತುಳುನಾಡಿನಲ್ಲಿ ತುಳುವರಿಗೆ ಉದ್ಯೋಗ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನಾ ಸಭೆಯು ಗುರುವಾರ 13-2-2020 ಬೆಳಿಗ್ಗೆ 11:30ಕ್ಕೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಉದ್ಯೋಗ ಮೀಸಲಾತಿಗಾಗಿ ಪ್ರತಿಭಟನೆ ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಯೋಗಿಶ್ ಶೆಟ್ಟಿ ಜಪ್ಪುರವರು ಸಭೆಯನ್ನು ಉದ್ದೇಶೀಸಿ ವಿದ್ಯಾಭ್ಯಾಸ ಪ್ರತಿಯೊಬ್ಬರಿಗೂ ಜೀವನ ಸಾಗಿಸಲು ಅಗತ್ಯ. ಹಾಗೂ ಹೆತ್ತವರು ತಮ್ಮ ಬೆವರು ಸುರಿಸಿ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದಕ್ಕೆ ತಾಯಿ ನಾಡಿನಲ್ಲಿ ಉದ್ಯೋಗ ಮಾಡಿ ಅವರನ್ನು ಸಂತೋಷದಲ್ಲಿ ಇರಿಸುವುದು ಅತಿಮುಖ್ಯ. ಪ್ರಸ್ತುತ ತುಳುನಾಡದಲ್ಲಿ ವಾಸಿಸುವ ಯುವಕರಿಗೆ ಉದ್ಯೋಗ […]

ತುಳುನಾಡ ರಕ್ಷಣಾ ವೇದಿಕೆ ವೆಬ್ ಸೈಟ್ ಲೋಕಾರ್ಪಣೆ

Monday, June 25th, 2018
trv website

ಮಂಗಳೂರು :  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿ ಸಭಾಂಗಣದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧಿಕೃತ ಅಂತರ್ಜಾಲ ತಾಣ (ವೆಬ್ ಸೈಟ್) ಸೋಮವಾರ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ. ಭಂಡಾರಿ ಮಾತನಾಡಿ ತುರವೇ ಸಮಾಜದ ನಾಡಿ ಮಿಡಿತವಾಗಿ ಬೆಳೆಯುತ್ತಿದೆ, ಇದರ ಕಾರ್ಯಚಟುವಟಿಕೆಗಳು ಬಹುತೇಕ ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿದ್ದು ತುಳುವರಾದ ನಮಗೆ ಹೆಮ್ಮೆಯ ಸಂಗತಿಯಾಗಿದೆ, ಇದೀಗ ದಶಮಾನೋತ್ಸವದ ಸುಸಂಧರ್ಭದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದರ ವೆಬ್ ಸೈಟ್ ಲೋಕಾರ್ಪಣೆಗೊಳಿಸಿದ್ದು ಶ್ಲಾಘನೀಯ […]