ರಸ್ತೆ ಪಕ್ಕದಲ್ಲಿ ಬಸ್ಸಿಗೆ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದ ಪಿಕಪ್ ವಾಹನ, ಓರ್ವ ಮೃತ್ಯು

Thursday, March 11th, 2021
Marshid

ಸುಳ್ಯ : ರಸ್ತೆ ಪಕ್ಕದಲ್ಲಿ ಬಸ್ಸಿಗೆ ಕಾಯುತ್ತಿದ್ದ ನಾಲ್ವರಿಗೆ ಢಿಕ್ಕಿಯಾದ ಪಿಕಪ್ ವಾಹನ ಓರ್ವ ಯುವಕ ನನ್ನು ಬಲಿಪಡೆದು ಇತರ ಮೂವರನ್ನು ಗಂಭೀರ ಗೊಳಿಸಿದ ಘಟನೆ ಪೆರಾಜೆ ಎಂಬಲ್ಲಿ ಬುಧವಾರ ರಾತ್ರಿ ಸುಮಾರು 10.30ಕ್ಕೆ ನಡೆದಿದೆ. ಪಿಕಪ್ ವಾಹನವೊಂದು ವೇಗ ನಿಯಂತ್ರಣಕ್ಕೆಂದು ಹಾಕಲಾಗಿದ್ದ ಬ್ಯಾರಿಕೇಡ್ ಗೆ ಢಿಕ್ಕಿಯಾಗಿ ಬಳಿಕ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಮೃತ ಯುವಕನನ್ನು ದುಗ್ಗಲಡ್ಕ ನಿವಾಸಿ ಮುರ್ಷಿದ್ ಎಂದು ಗುರುತಿಸಲಾಗಿದೆ. ಮುರ್ಷಿದ್, ರಫೀಕ್, ಸತೀಶ್ ಹಾಗೂ ಉಮ್ಮರ್ ಎಂಬವರು ಪೆರಾಜೆ ಕಲ್ಲುಚರ್ಪೆ ಬಳಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ […]

ತೊಕ್ಕೊಟ್ಟುವಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮರಳು ಸಾಗಾಟದ ಲಾರಿ ಢಿಕ್ಕಿ ಹೊಡೆದು ಮೃತ್ಯು

Sunday, January 24th, 2021
Tipper Lorry

ಉಳ್ಳಾಲ :  ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟುವಿನಲ್ಲಿ ರಸ್ತೆ  ದಾಟುತ್ತಿದ್ದ ವ್ಯಕ್ತಿಯೊಬ್ಬರು ಮರಳು ಸಾಗಾಟದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತರನ್ನು ಪಾಣೆಮಂಗಳೂರು ನಿವಾಸಿ ಹಮ್ಮಬ್ಬ(60) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ತೊಕ್ಕೊಟ್ಟಿನ ಸಹರಾ ಆಸ್ಪತ್ರೆಯ ಎದುರು ಹೆದ್ದಾರಿ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಹಮ್ಮಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹಮ್ಮಬ್ಬ ತೊಕ್ಕೊಟ್ಟು ಬಳಿಯ ಕಲ್ಲಾಪುವಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ನಾಗುರಿ ಸಂಚಾರಿ ಠಾಣಾ ಪೊಲೀಸರು […]

ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಕಾದು ಕುಳಿತು 5 ಸಾವಿರ ದಂಡ ಹಾಕಿದ ಪುತ್ತೂರು ನಗರಸಭೆ ಅಧಿಕಾರಿಗಳು

Saturday, August 22nd, 2020
Puttur Garbage

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಮುಕ್ರಂಪಾಡಿಯಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಕಸಗಳನ್ನು ಎಸೆದು ಹೋಗುತ್ತಿದ್ದ ಉಸ್ಮಾನ್ ಮತ್ತು ಅಶ್ರಫ್ ಎಂಬುವರಿಗೆ ತಲಾ ರೂ. 5 ಸಾವಿರ ದಂಡ ವಿಧಿಸಿ ಪುತ್ತೂರು ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮನೆ ಮನೆ ತ್ಯಾಜ್ಯ ಸಂಗ್ರಹ ನಡೆಯುತ್ತಿದ್ದರೂ ಕೆಲವೊಂದು ಕಡೆ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸಗಳನ್ನು ಹಾಕಿ ಪರಿಸರ ಮಲೀನಗೊಳಿಸುತ್ತಿದ್ದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಸದ ರಾಶಿ ಇರುವ ಸ್ಥಳಗಳ ಬಳಿ ಕಸ ಹಾಕುವವರನ್ನು ಹಿಡಿಯಲು ಕಾದು ಕುಳಿತಿದ್ದರು. ಸಂಪ್ಯ ಕಡೆಯಿಂದ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಇಬ್ಬರು […]

ರೌದ್ರಾವತಾರ ನಿಲ್ಲಿಸಿದ ಮಳೆರಾಯ… ಸಹಜ ಸ್ಥಿತಿಯತ್ತ ಮಂಗಳೂರು

Thursday, May 31st, 2018
SHV_1627-rain

ಮಂಗಳೂರು: ಮಹಾಮಳೆಯ ಎರಡು ದಿನಗಳ ನಂತರ ಮಳೆ ನಿಂತಿರುವುದರಿಂದ ಮಂಗಳೂರು ಸಹಜಸ್ಥಿತಿಗೆ ಮರಳಿದೆ. ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಮಂಗಳೂರು ತತ್ತರವಾಗಿತ್ತು. ಮನೆ, ರಸ್ತೆಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಎರಡು ದಿನಗಳಿಂದ ಮಳೆ ನಿಂತಿರುವುದರಿಂದ ಇದೀಗ ಮಂಗಳೂರು ಸಹಜಸ್ಥಿತಿಗೆ ಮರಳುತ್ತಿದೆ.

ಭೂಗತ ಕೇಬಲ್ ಅಳವಡಿಸಿದ ಮೇಲೆ ರಸ್ತೆಯನ್ನು ರೀಸ್ಟೋರ್ ಮಾಡಿ: ಶಾಸಕ ಜೆ.ಆರ್.ಲೋಬೊ

Sunday, March 12th, 2017
mescom

ಮಂಗಳೂರು: ಮಂಗಳೂರಿನಲ್ಲಿರುವ ಕಾಂಕ್ರೀಟ್ ರಸ್ತೆಗಳನ್ನು ಭೂಗತ ಕೇಬಲ್ ಹಾಕುವ ಭರದಲ್ಲಿ ಹಾಳುಮಾಡಿ ಬಿಡುವುದು ಬೇಡ. ಕಾಮಗಾರಿ ಮುಗಿದ ಲಕ್ಷಣವೇ ರಸ್ತೆಯನ್ನು ರೀಸ್ಟೋರ್ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಅವರು ತಮ್ಮ ಕಚೇರಿಯಲ್ಲಿ ಮೆಸ್ಕಾಂ ಇಲಾಖೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮೆಸ್ಕಾಂ ಇಲಾಖೆ ಭೂಗತ ಕೇಬಲ್ ಅಳವಡಿಸುವುದು ಪ್ರಸಂಶೆಯ ಕೆಲಸ. ಆದರೆ ಮಂಗಳೂರಿನ ರಸ್ತೆಗಳನ್ನು ಕೂಡಾ ಹಾಳುಗೆಡವುದು ಸರಿಯಲ್ಲ. ಈ ಕೆಲಸವನ್ನು ಮಾಡುವುದರ ಜೊತೆಗೆ ರಸ್ತೆಗಳ ಯಥಾಸ್ಥಿತಿಯನ್ನು ಕಾಪಾಡಬೇಕು […]

ಬೀದಿಗೊಂದು ಸರಿಯಾದ ರಸ್ತೆ ಮಾಡಿಕೊಡುವಂತೆ ವೃದ್ಧೆಯ ಮನವಿ

Saturday, February 4th, 2017
Pranavi

ಮಂಗಳೂರು: ಸೊಂಟದಿಂದ ಕೆಳಗೆ ಶರೀರದಲ್ಲಿ ಬಲ ಕುಂದಿ ನಡೆದಾಡಲೂ ಕಷ್ಟವಾದರೂ ಇಂದಿಗೂ ಯಾರಿಗೂ ಅವಲಂಬಿತರಾದವರಲ್ಲ ಈ ಅಜ್ಜಿ. ಪುತ್ತೂರು ನಗರದ ಬಪ್ಪಳಿಗೆ ಬೈಪಾಸ್ ವೃತ್ತ ಸಮೀಪದ ನಿವಾಸಿಯಾದ 65 ವರ್ಷದ ಬಿ.ಪ್ರಣವಿ ಸರಿಯಾದ ರಸ್ತೆಯೊಂದಿದ್ದರೆ ಎಂತಹ ಕೆಲಸವನ್ನಾದರೂ ಮಾಡಬಲ್ಲೆ. ಎಲ್ಲಿ ಬೇಕಾದರೂ ಹೋಗಬಲ್ಲೆ ಎಂಬ ಧೈರ್ಯವಂತೆ. ಆದರೆ, ಆ ಬೀದಿಗೆ ಸರಿಯಾದ ರಸ್ತೆಯಿಲ್ಲದಿರುವುದೇ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ಅವಿವಾಹಿತರಾಗಿರುವ ಪ್ರಣವಿ ತಂದೆ, ತಾಯಿಯ ಮರಣಾ ನಂತರ ಏಕಾಂಗಿಯಾಗಿದರು. ಕಳೆದ 20 ವರ್ಷಗಳಿಂದ ಮನೆಯೊಳಗೆ ನಾಲ್ಕು ಚಕ್ರದ ಗಾಡಿಯ […]

ರಸ್ತೆಯನ್ನೆ ನುಂಗಿದ ಪ್ಲಾಮ ಬಿಲ್ಡರ್ ಕಟ್ಟಡ, ಶಾಸಕ, ಅಧಿಕಾರಿಗಳಿಗೆ ಕ್ಯಾರೇ ಅನ್ನದ ಮಾಲೀಕ

Wednesday, September 3rd, 2014
Plama

ಮಂಗಳೂರು : ನಗರದಲ್ಲಿ ಕಟ್ಟಡ ನಿಯಮಾವಳಿಗಳ ಉಲ್ಲಂಘನೆ ಸರ್ವೇ ಸಮಾನ್ಯವಾಗಿದ್ದರೂ, ಈಗ ಸಾರ್ಜನಿಕರ ರಸ್ತೆಯವನ್ನೇ ಆಕ್ರಮಿಸಿ ಅಪಾರ್ಟ್ ಮೆಂಟ್ ನಿರ್ಮಿಸುತ್ತಿರುವ ಪ್ರಕರಣ ಫಳ್ನೀರ್ ಕಾಪ್ರಿಗುಡ್ಡದಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯ ಶಾಸಕ ಮತ್ತು ಮಹಾನಗರಪಾಲಿಕೆ ನಗರ ಯೋಜನೆ ಅಧಿಕಾರಿಗಳ ಸೂಚನೆಗೂ ಕ್ಯಾರೇ ಅನ್ನದ ಬಿಲ್ಡರ್, ಸರಕಾರಕ್ಕೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಬೆದರಿಕೆಯೊಡ್ಡಿರುವುದು ಮಂಗಳೂರು ನಗರ ಪಾಲಿಕೆಯಲ್ಲಿ ಇತ್ತೀಚಿಗಿನ ದಿನಗಳಲ್ಲಿ ಯಾವ ಕಾನೂನು ಪಾಲನೆ ಆಗುತ್ತಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ. ಫಳ್ನೀರಿನ ಕಾಪ್ರಿಗುಡ್ಡೆಯಲ್ಲಿ ನಿರ್ಮಾಣವಾಗುತ್ತಿರುವ ಪ್ಲಾಮ ಗಾರ್ಡೇನಿಯ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ […]