ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಹರಕೆ ಸೀರೆಗಳನ್ನು ಪ್ರಸಾದ ರೂಪದಲ್ಲಿ ವಿತರಣೆ

Sunday, October 10th, 2021
Polali Temple

ಬಂಟ್ವಾಳ : ಲಲಿತಾಪಂಚಮಿಯ ದಿನದಂದು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಭಕ್ತಾದಿಗಳಿಗೆ ಅಮ್ಮನವರಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್, ಆಡಳಿತ ಮೋಕ್ತೇಸರರಾದ ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಚೇರಾ ಸೂರ್ಯನಾರಾಯಣ ರಾವ್,ಪವಿತ್ರಪಾಣಿ ಮಾಧವ ಭಟ್,ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ ಪ್ರಮುಖರು ಉಪಸ್ಥಿತರಿದ್ದರು.ಊರ ಪರವೂರ ಭಕ್ತಾದಿಗಳು ಈ ಸಂದರ್ಭದಲ್ಲಿ ಸೀರೆ ಪ್ರಸಾದ ಸ್ವೀಕರಿಸಿದರು.  

ಪೊಳಲಿ ಬ್ರಹ್ಮಕಲಶೋತ್ಸವ :  ಮಾ.13 ರಂದು ಭಕ್ತರ ದೇವರ ದರ್ಶನದ ಸಮಯದಲ್ಲಿ ಬದಲು

Tuesday, March 12th, 2019
Polali

ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.13 ಸಂಭ್ರಮದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಅಂಗವಾಗಿ ದೇವಸ್ಥಾನದ ಒಳಗೆ ಪೂಜಾ ಕೈಂಕರ್ಯಗಳು ನಡೆಯುವ ಹಿನ್ನೆಲೆಯಲ್ಲಿ ಭಕ್ತರ ದೇಗುಲ ಪ್ರವೇಶ ಸಮಯದಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ. ಬೆಳಗ್ಗೆ 4ರಿಂದ 8.10ರ ವರೆಗೆ ಬ್ರಹ್ಮಕಲಶ ನಡೆಯಲಿರುವುದರಿಂದ ಬೆಳಿಗ್ಗೆ 10 ಗಂಟೆಯ ತನಕ ದೇವಾಲಯದ ಒಳಗೆ ಭಕ್ತರ ಪ್ರವೇಶ ನಿಯಂತ್ರಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆ ತನಕ ದೇವರ ದರ್ಶನಕ್ಕೆ ಮುಕ್ತ ಅವಕಾಶವಿದೆ. ಸಂಜೆ ದೇವರಿಗೆ ರಂಗಪೂಜೆ ನಡೆಯಲಿರುವುದರಿಂದ ಸಂಜೆ […]

ಕುತ್ತಾರು ಜಂಕ್ಷನ್‌ನ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ನಶೆ ಏರಿಸಿಕೊಂಡ ಯುವತಿ

Wednesday, July 6th, 2016
Young-lady-creates-drama

ಮಂಗಳೂರು: ಕುತ್ತಾರು ಜಂಕ್ಷನ್‌ನ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ನಶೆ ಏರಿಸಿಕೊಂಡಂತೆ ವರ್ತಿಸುತ್ತಿದ್ದ ಯುವತಿಯೋರ್ವಳು ಸಿಕ್ಕಸಿಕ್ಕವರಿಗೆ ಬೈದಾಡುತ್ತಾ ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಾದ್ಧಾಂತ ಮಾಡಿರುವ ಘಟನೆ ನಡೆದಿದೆ. ಅಲ್ಲದೆ ನಾಗರಿಕರು ಮತ್ತು ಪೊಲೀಸರನ್ನು ಈ ಯುವತಿ ಬೆಸ್ತು ಬೀಳಿಸಿದ್ದಾಳೆ. ಮುಡಿಪು ಐಟಿ ಕಂಪೆನಿಯಲ್ಲಿ ಎಂಜಿನಿಯರಿಂಗ್ ಕೆಲಸದಲ್ಲಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾಕೆ ಸಾರ್ವಜನಿಕರನ್ನು ನಿಂದಿಸಿದ್ದಕ್ಕೆ ಉಳ್ಳಾಲ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ಕುತ್ತಾರಿನ ರಾಜರಾಜೇಶ್ವರಿ ದೇವಸ್ಥಾನದೊಳಗೆ ಚಪ್ಪಲಿ ಹಾಕಿಕೊಂಡೇ ದೇವರನ್ನು ಕಾಣಲೆಂದು ಒಳ ನಡೆಯಲು ಯತ್ನಿಸಿದ್ದಾಗ ಜನರೇ ತಡೆದಿದ್ದಾರೆ. ತನ್ನ […]

ಸನಾತನ ಸಂಸ್ಕೃತಿ ಭೋಗ ಲಾಲಸೆಗಳಿಗೆ ಎಂದೂ ಆಸ್ಪದ ನೀಡಿಲ್ಲ್ಲ : ಪ್ರವೀಣ್ ಕೋಡೋತ್ತ್

Friday, January 22nd, 2016
Yeniyarpu

ಬದಿಯಡ್ಕ: ಪ್ರಾಚೀನ ಸತನಾತನ ಧರ್ಮದಲ್ಲಿ ಆಚರಿಸುವ ಆಚರಣೆಗಳ ಹಿಂದೆ ಮಹತ್ವವಾದ ಹಿನ್ನೆಲೆಗಳಿವೆ. ಆದರೆ ಆಧುನಿಕ ಚಿಂತನೆಗಳ ಫಲಗಳೆಂದು ಆಚರಣೆಗಳನ್ನು ಹೀಯಾಳಿಸುವುದು ತರವಲ್ಲ ಎಂದು ಹಿಂದೂ ಐಕ್ಯವೇದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೋಡೋತ್ತ್ ಅಭಿಪ್ರಾಯ ವ್ಯಕ್ತಪಡಿಸಿದರು. ನೀರ್ಚಾಲು ಸಮೀಪದ ಏಣಿಯರ್ಪು ಕೋದಂರ್ಬತ್ತ್ ತರವಾಡು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ವಿಶೇಷೋಪನ್ಯಾಸಗೈದು ಮಾತನಾಡುತ್ತಿದ್ದರು. ಭೋಗ ಸಂಸ್ಕೃತಿಯ ಜಗತ್ತಿನ ದೊಡ್ಡಣ್ಣಗಳು ಆಧ್ಯಾತ್ಮಿಕ,ಭೌದ್ದಿಕ ಶ್ರೀಮಂತಿಕೆಯ ಕೊರತೆಯಿಂದ ಧೂಳೀಪಟವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅವೆಲ್ಲವಕ್ಕೂ ಕಲಶಪ್ರಾಯವಾಗಿ […]