ಮಂಗಳೂರು ವಿವಿ ಯುವ ರೆಡ್ ಕ್ರಾಸ್ ಘಟಕಕ್ಕೆ ರಾಜ್ಯ ಪ್ರಶಸ್ತಿ

Tuesday, November 30th, 2021
Red Cross

ಮಂಗಳೂರು: ಯುವ ರೆಡ್ಕ್ರಾಸ್ನ ಚಟುವಟಿಕೆಗಳು ಮತ್ತು ಎಲ್ಲಾ ಹಂತಗಳಲ್ಲಿ ಯುವ ರೆಡ್ ಕ್ರಾಸ್ ನ್ನು ಬಲಪಡಿಸುವಲ್ಲಿ ನೀಡುವ ಬೆಂಬಲವನ್ನು ಗುರುತಿಸಿ ನೀಡಲಾಗುವ ʼಬೆಸ್ಟ್ ಪರ್ಫಾರ್ಮಿಂಗ್ ಯುನಿವರ್ಸಿಟಿʼ ಎಂಬ 2019-20 ನೇ ಸಾಲಿನ ಪ್ರಶಸ್ತಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ವಿಭಾಗವು ಭಾಜನವಾಗಿದೆ. ಮಂಗಳವಾರ ಬೆಂಗಳೂರಿನ ರಾಜಭವನದ ಗ್ಲಾಸ್ ಹೌಸ್ ನಲ್ಲಿ ನಡೆದ ರೆಡ್ ಕ್ರಾಸ್ ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ವಿತರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ […]

ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಪತ್ರಕರ್ತ ಬಿ.ಎನ್. ಅಶೋಕ್ ಶೆಟ್ಟಿಗೆ ರಾಜ್ಯ ಪ್ರಶಸ್ತಿ

Thursday, February 11th, 2021
Ashok Shetty

ಮಂಗಳೂರು:   ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ “ವಿಶ್ವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ದಿನಾಚರಣೆ” ಸಮಾರಂಭದಲ್ಲಿ ಪತ್ರಕರ್ತ ಡಾ| ಅಶೋಕ್ ಶೆಟ್ಟಿ ಬಿ.ಎನ್. ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ 11 , ಗುರುವಾರ ರಾಜ್ಯ ಪ್ರಶಸ್ತಿ (ವೈಯಕ್ತಿಕ ಪ್ರಶಸ್ತಿ)  ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರು, ಮಕ್ಕಳು ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ 2021-22ನೇ ಸಾಲಿನ ಆಯವ್ಯಯದಲ್ಲಿ ಸುಮಾರು 500 ಕೋಟಿ ರೂ.ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದಿದ್ದಾರೆ. […]

ಕೆ.ಎ. ನೆಟ್ಟಕಲಪ್ಪ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಎಸ್ .ಜಗದೀಶ್ಚಂದ್ರ ಅಂಚನ್

Wednesday, March 4th, 2020
jagadishchandra

ಮಂಗಳೂರು : ಸುಮಾರು 30 ವರ್ಷಗಳಿಂದ ಕ್ರೀಡಾ ಲೇಖನಗಳ ಮೂಲಕ ರಾಜ್ಯ , ಅಂತರ್ ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಗುರುತಿಸಿಕೊಂಡಿರುವ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2018ನೇ ಸಾಲಿನ ಪ್ರತಿಷ್ಠಿತ ಕೆ.ಎ. ನೆಟ್ಟಕಲಪ್ಪ ರಾಜ್ಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ . ತನ್ನ 18ನೇ ವರ್ಷದಲ್ಲಿ ಆಗಿನ ” ಮುಂಗಾರು ” ದಿನ ಪತ್ರಿಕೆಯಲ್ಲಿ ಕ್ರೀಡಾ ಲೇಖನಗಳನ್ನು ಬರೆಯುವ ಮೂಲಕ ಕ್ರೀಡಾ ಬರವಣಿಗೆಯ ಹವ್ಯಾಸವನ್ನು ಆರಂಭಿಸಿದ […]

ಕುಳಮರ್ವರ ಕವನಕ್ಕೆ ರಾಜ್ಯ ಪ್ರಶಸ್ತಿ

Monday, August 8th, 2016
V-B-Kulamarva

ಕುಂಬಳೆ: ಹಿರಿಯ ಜಾನಪದ ವಿದ್ವಾಂಸ ಡಾ.ಜೀ.ಶಂ.ಪ. ಸಾಹಿತ್ಯ ವೇದಿಕೆ ಮತ್ತು ಕನ್ನಂಬಾಡಿ ದಿನಪತ್ರಿಕೆ ಮಂಡ್ಯ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥ ಏರ್ಪಡಿಸಿದ ರಾಜ್ಯಮಟ್ಟದ ಕವಿಕಾವ್ಯ ಮೇಳದಲ್ಲಿ ಕಾಸರಗೋಡಿನ ಖ್ಯಾತ ಕವಿ ಹಾಗೂ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರ “ಸೇವೆಯ ಹಿರಿಮೆ” ಎಂಬ ದೇಶಭಕ್ತಿ ಗೀತೆಗೆ ರಾಜ್ಯಮಟ್ಟದ ’ಕಾವ್ಯಶ್ರೀ’ ಪ್ರಶಸ್ತಿಯನ್ನಿತ್ತು ಸನ್ಮಾನಿಸಲಾಯಿತು. ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಲಕ್ಷ ಸಂಖ್ಯೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಸಂಪೂರ್ಣ […]

ಪುನೀತ್, ರಮ್ಯಾ ಅತ್ಯುತ್ತಮ ನಟ, ನಟಿ

Saturday, October 26th, 2013
best-actor

ಬೆಂಗಳೂರು : ಜಾಕಿ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ನಾಯಕ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮತ್ತು ಸಂಜು ವೆಡ್ಸ್ ಗೀತಾ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಾಯಕಿ ಹಾಗೂ ಲೋಕಸಭೆ ಸದಸ್ಯೆ ರಮ್ಯಾ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ವಾರ್ತಾ ಸಚಿವ ಸಂತೋಷ್‌ಲಾಡ್  ಶುಕ್ರವಾರ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ  ಹಿರಿಯ ನಿರ್ದೇಶಕ ಭಗವಾನ್ ಅಧ್ಯಕ್ಷತೆಯಲ್ಲಿನ ಸಮಿತಿ ಪಟ್ಟಿ ಅಂತಿಮಗೊಳಿಸಿ ಸಚಿವರಿಗೆ ಸಲ್ಲಿಸಿತು. ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ […]

ಪುರಭವನದಲ್ಲಿ ಶಿಕ್ಷಕ ದಿನಾಚರಣೆ ಹಾಗೂ ಸನ್ಮಾನ

Monday, September 5th, 2011
Shikshakar /ಶಿಕ್ಷಕರು

ಮಂಗಳೂರು : ದ.ಕ.ಜಿ.ಪಂ. ಸಾರ್ವಜನಿಕ ಇಲಾಖೆ, ದ.ಕ.ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಮಂಗಳೂರು ನಗರ ವಲಯ ಶಿಕ್ಷಕ ದಿನಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಸೋಮವಾರ ಜರಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸಮ್ಮಾನ ಸಮಾರಂಭವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಶಿಕ್ಷಕರನ್ನು ಚುನಾವಣಾ ಸಂಬಂಧಿ ಕರ್ತವ್ಯಗಳು ಸೇರಿದಂತೆ ಇತರ ಇಲಾಖೆಗಳ ಕೆಲಸಗಳಿಗೆ ನಿಯೋಜಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ಶಿಕ್ಷಣದ ಗುಣಮಟ್ಟದ […]