ರಾಮನಗರದಲ್ಲಿರುವ ಪಾದರಾಯನಪುರ ದಲ್ಲಿ ಐದು ಮಂದಿಗೆ ಕೊರೋನಾ ಸೋಂಕು

Friday, April 24th, 2020
padarayanapura

ಬೆಂಗಳೂರು : ರಾಮನಗರದಲ್ಲಿರುವ ಪಾದರಾಯನಪುರ ದಲ್ಲಿ ಗಲಾಟೆ ಎಬ್ಬಿಸುವ ಐದು ಮಂದಿ ಪುಂಡರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ಶುಕ್ರವಾರ ಜಿಲ್ಲಾಡಳಿತದ ಮಾಹಿತಿ ಹೇಳಿದೆ. ಹಾಗಾಗಿ ಆರೋಪಿಗಳನ್ನು ರಾಮನಗರದಿಂದ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ. ಆರೋಪಿಗಳ ಸ್ಥಳಾಂತರಕ್ಕೆ 14 KSRTC ಬಸ್ ಕಳುಹಿಸಿದೆ. ಜಿಲ್ಲಾಡಳಿತ. ಬೆಳಿಗ್ಗೆ 10 ಗಂಟೆಯೊಳಗಾಗಿ ಶಿಫ್ಟ್ ಮಾಡಬೇಕೆಂದು ಡಿಕೆ ಸುರೇಶ್ ಸೂಚನೆ ನೀಡಿದ್ದಾರೆ. ಸೋಂಕಿತರನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದೆ. ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುವ ಏರ್ಪಾಟು ಮಾಡಲಾಗಿದೆ ಎನ್ನಲಾಗಿದೆ.  

ಡಿಕೆಶಿ ಬಂಧಿಸಿರುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Wednesday, September 11th, 2019
DK-Shivkumar

ಬೆಂಗಳೂರು : ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನ ಖಂಡಿಸಿ ರಾಜ್ಯ ಒಕ್ಕಲಿಗರ ಸಂಸ್ಥೆಗಳ ಒಕ್ಕೂಟ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ರಾಜಭವನ ಚಲೋ ನಡೆಸುತ್ತಿದೆ. ಡಿಕೆ ಶಿವಕುಮಾರ್ ಬಂಧನ ಖಂಡಿಸಿ ರಾಮನಗರದಿಂದ ಬೆಂಗಳೂರಿನತ್ತ ಪ್ರತಿಭಟನಾಕಾರರು ಹೊರಟಿದ್ದು, ಇಂದಿನ ಪ್ರತಿಭಟನಾ ಸಮಾವೇಶದಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯ ಒಕ್ಕಲಿಗರ ಸಂಘ ತಿಳಿಸಿದೆ. ಜಾರಿ ನಿರ್ದೇಶನಾಲಯ ಡಿಕೆಶಿಯನ್ನು ಬಂಧಿಸಿರುವುದನ್ನು ವಿರೋಧಿಸಿ ರಾಜ್ಯ ಒಕ್ಕಲಿಗರ ಸಂಘ ನೀಡಿರುವ ಬೃಹತ್ ಪ್ರತಿಭಟನಾ ರಾಲಿಯ ಹಿನ್ನೆಲೆಯಲ್ಲಿ […]

ನೆರೆ ಪರಿಹಾರಕ್ಕೆ ಆಗ್ರಹಿಸಿ : ವಾಟಾಳ್ ನಾಗರಾಜ್ ಪ್ರತಿಭಟನೆ

Wednesday, August 28th, 2019
vatal-nagraj

ರಾಮನಗರ : ನೆರೆ ಹಾವಳಿಗೆ ತತ್ತರಿಸಿರುವ ಜನರ ನೋವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಮನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. “ರಾಜ್ಯದಲ್ಲಿ ನೆರೆ ಬಂದು ಹಲವರು ಸಾವನ್ನಪ್ಪಿದ್ದಾರೆ. ಆದರೂ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಿಲ್ಲ. ರಾಜ್ಯ ಸರ್ಕಾರ ನೆರೆಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲ. ಮೂವರು […]

ಉಗ್ರ ಹಬಿಬುರ್​ ರೆಹಮಾನ್​ ರಾಮನಗರದಲ್ಲಿಟ್ಟಿದ್ದ ಎರಡು ಸಜೀವ ಬಾಂಬ್​ಗಳು ಪತ್ತೆ

Wednesday, June 26th, 2019
Habeeb Rehman

ರಾಮನಗರ: ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಎಸ್.ಕೆ. ಹಬಿಬುರ್ ರೆಹಮಾನ್ ಅಲಿಯಾಸ್ ಶೇಖ್ ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಂಧನವಾದ ಬೆನ್ನಲ್ಲೇ ರಾಮನಗರದಲ್ಲಿ ಎರಡು ಸಜೀವ ಬಾಂಬ್ಗಳು ಬುಧವಾರ ಪತ್ತೆಯಾಗಿವೆ. ಈ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ರಾಮನಗರದ ಟಿಪ್ಪು ನಗರದ 23ನೇ ವಾರ್ಡ್ನ ಸೇತುವೆ ಬಳಿ ಎನ್ಐಎ, ಗುಪ್ತಚರ ದಳ ಮತ್ತು ಪೊಲೀಸರು ನಡೆಸಿದ ಶೋಧ ಕಾರ್ಯದಲ್ಲಿ ಎರಡು ಸಜೀವ ಬಾಂಬ್ಗಳು ಪತ್ತೆಯಾಗಿವೆ. ಈ ಬೆಳವಣಿಗೆಯ […]

ರಾಮನಗರದ ಮೊದಲ ಮಹಿಳಾ ಶಾಸಕಿಯಾಗಿ ಅನಿತಾ ಕುಮಾರಸ್ವಾಮಿ ಆಯ್ಕೆ!

Tuesday, November 6th, 2018
anitha-kumarswamy

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಯ ಹಾಗೂ 20ನೇ ಸುತ್ತು ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿ ಈ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಉಪಸಮರದಲ್ಲಿ ಒಟ್ಟು 1,25,043 ಮತಗಳನ್ನು ಅನಿತಾ ಕುಮಾರಸ್ವಾಮಿ ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 15,906 ಮತಗಳನ್ನು ಪಡೆದು ಭಾರೀ ಅಂತರದಿಂದ ಸೋಲು ಕಂಡಿದ್ದಾರೆ. ಇನ್ನು ಅನಿತಾ ಕುಮಾರಸ್ವಾಮಿ ಸುಮಾರು ಒಂದು ಲಕ್ಷ ಮತಗಳಿಂದ ಭಾರೀ ಗೆಲುವು ಸಾಧಿಸಿದ್ದಾರೆ. […]

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ ಭರ್ಜರಿ ಗೆಲುವು…!

Tuesday, November 6th, 2018
kumarswamy

ರಾಮನಗರ: ವಿಧಾನಸಭೆ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಗೆಲುವು ಕಾಯ್ದುಕೊಂಡಿದ್ದು, ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಅನಿತಾ ಗೆಲುವು , ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅನಿತಾ ಕುಮಾರಸ್ವಾಮಿ ಅವರ ಭಾವಚಿತ್ರವಿರುವ ಫ್ಲೆಕ್ಸ್ ಹಿಡಿದು, ಜಯಘೋಷ ಕೂಗುತ್ತಿದ್ದಾರೆ.

ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ: ಅನಿತಾ ಕುಮಾರಸ್ವಾಮಿ

Monday, November 5th, 2018
anitha-kumarswamy

ಹಾಸನ: ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧವಿದ್ದೇವೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರ ಅಷ್ಟೇ ಅಲ್ಲ, ಉಳಿದ ನಾಲ್ಕು ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯ ಸಿಗಲಿದೆ. ಚುನಾವಣಾ ಕಣಕ್ಕೆ ಬರುವ ಬಗ್ಗೆ ಮಾತುಕತೆ ಆಗಿಲ್ಲ. ಮುಂದೆ ಏನು ಆಗುತ್ತೋ ನನಗೆ ಗೊತ್ತಿಲ್ಲ. ನಾನು ಕೂಡ ರಾಜಕೀಯ ಪ್ರವೇಶ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಮಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ರಿಯಾಶೀಲವಾಗಿ ಕೆಲಸ […]

ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಚಂದ್ರಶೇಖರ್ ತೀರ್ಮಾನವನ್ನು ಸ್ವಾಗತಿಸುತ್ತೇನೆ: ಡಿ.ಕೆ.ಸುರೇಶ್

Thursday, November 1st, 2018
d-k-suresh

ಬೆಂಗಳೂರು: ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಚಂದ್ರಶೇಖರ್ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ರಾಮನಗರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ತಮ್ಮ ಸದಾಶಿವನಗರದ ನಿವಾಸದಲ್ಲಿ ಪಕ್ಷಕ್ಕೆ ಮರಳಿ ಬರಮಾಡಿಕೊಂಡು ನಂತರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಚಂದ್ರಶೇಖರ್ ಮೂಲತಃ ಕಾಂಗ್ರೆಸ್ ನವರು. ಬಿಜೆಪಿ ನಾಯಕರ ಧೋರಣೆಯಿಂದ ನೊಂದಿದ್ದಾರೆ. ಪಕ್ಷದ ಬಾವುಟ ಕೊಟ್ಟು ಹೋದವರು ಮತ್ತೆ ಏನಾಯ್ತು ಅಂತ ನೋಡಿಲ್ಲ ಎಂದು ಆರೋಪಿಸಿದರು. ಮಂಡ್ಯದಲ್ಲಿ ಚುನಾವಣೆ ಮಾಡುವ ಆಸಕ್ತಿ ಅವರಿಗಿದೆ. ಶಿವಮೊಗ್ಗದಲ್ಲಿ ಪುತ್ರ ಇರೋದ್ರಿಂದ ಕೆಲಸ ಮಾಡ್ತಿದ್ದಾರೆ. ಬಳ್ಳಾರಿಯಲ್ಲೂ […]

ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರ ನನಗೆ ಎರಡು ಕಣ್ಣುಗಳು ಇದ್ದ ಹಾಗೆ: ಹೆಚ್.ಡಿ.ಕುಮಾರಸ್ವಾಮಿ

Monday, July 23rd, 2018
ramnagara

ರಾಮನಗರ: ಚನ್ನಪಟ್ಟಣ ಮತ್ತು ರಾಮನಗರ ಈ ಎರಡೂ ಕ್ಷೇತ್ರ ನನಗೆ ಎರಡು ಕಣ್ಣುಗಳು ಇದ್ದ ಹಾಗೆ. ಚನ್ನಪಟ್ಟಣ ಕ್ಷೇತ್ರದ ಜನತೆ ಋಣ ನನ್ನ ಮೇಲೆ ಇದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಜವಾಬ್ದಾರಿ ನನ್ನ ಮೇಲಿದೆ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಕ್ಕೆ 24 ಗಂಟೆ ಕುಡಿಯುವ ನೀರು ಒದಗಿಸಲಾಗುವುದು. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ ಮುಂದಿನ ಸೆಪ್ಟೆಂಬರ್‌ ತಿಂಗಳವರೆಗೆ ಬಿಡಬೇಕಿದ್ದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಇದರಿಂದಾಗಿ ಸದ್ಯಕ್ಕೆ ಕಾವೇರಿ ನೀರಿನ ಹಂಚಿಕೆ […]

ಡಿ.ಕೆ.ಶಿವಕುಮಾರ್ ಅತ್ಯಾಪ್ತ ಬೆಂಬಲಿಗರ ಜೊತೆಗೆ ಶಬರಿ ಮಲೆಗೆ ಪಯಣ..!

Saturday, July 21st, 2018
shivkumar

ರಾಮನಗರ: ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಹುಟ್ಟೂರಿನ ಅತ್ಯಾಪ್ತ ಬೆಂಬಲಿಗರ ಜೊತೆಗೆ ಶಬರಿ ಮಲೆಗೆ ಪಯಣ ಬೆಳೆಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಿಂದ ಸಚಿವರು ಪ್ರಯಾಣ ಆರಂಭಿಸಿದ್ದಾರೆ. ನಿನ್ನೆ ಸಿಎಂ ಕುಮಾರಸ್ವಾಮಿ ಜೊತೆ ಕೆಆರ್ಎಸ್ಗೆ ಬಾಗಿನ ಅರ್ಪಿಸಿದ ನಂತರ ಮೈಸೂರಿನಲ್ಲಿ ಅಯ್ಯಪ್ಪನ ಮಾಲೆ ಧರಿಸಿ ಶಬರಿ ಮಲೆಗೆ ತಡರಾತ್ರಿ ಡಿಕೆಶಿ ಹೊರಟಿದ್ದಾರೆ. ಐಟಿ ಅಧಿಕಾರಿಗಳಿಂದ ಮುಕ್ತಗೊಂಡರೆ ಶಬರಿ ಮಲೆಗೆ ಬರೋದಾಗಿ ಹರಕೆ ಹೊತ್ತಿದ್ದ ಡಿಕೆಶಿ, ಈಗ ಹರಕೆ ತೀರಿಸಲು ಬೆಂಬಲಿಗರೊಂದಿಗೆ ಹೊರಟಿದ್ದಾರೆ. ಡಿಕೆಶಿ ಜೊತೆಗೆ ಅವರ […]