ರಾಮಮಂದಿರ ಉದ್ಘಾಟನೆ ದಿನ ಶಾಲೆಗೆ ರಜೆ ಹಾಕಿದ್ರೆ ಮಕ್ಕಳಿಗೆ 1000 ರೂ ಸಾವಿರ ದಂಡ ಹಾಕ್ತೀವಿ ಎಂದ ಶಾಲೆ

Saturday, January 20th, 2024
Saint-Josephs-Convent

ಚಿಕ್ಕಮಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಜನೆ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮತ್ತೊಂದು ಕಡೆ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳು, ಖಾಸಗಿ ಸಂಸ್ಥೆಗಳಿಗೆ ರಜೆ ನೀಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ. ಆದ್ರೆ ಇಲ್ಲೊಂದು ಕ್ರೈಸ್ತ ಶಾಲೆ ಜನವರಿ 22 ರಂದು ಮಕ್ಕಳು ರಜೆ ಹಾಕಿದ್ರೆ 1000 ಸಾವಿರ ದಂಡ ಹಾಕ್ತೀವಿ ಅಂತ ಎಚ್ಚರಿಕೆ ನೀಡಿದೆ. ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನವಾದ ಜನವರಿ 22 ರಂದು […]

ಆಗಸ್ಟ್ 5ರಂದು ಬೆಳಗ್ಗೆ11:30ರಿಂದ 12:30ರವರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ

Saturday, August 1st, 2020
sudarshan

ಮಂಗಳೂರು : ಆಗಸ್ಟ್  5ರಂದು ನಡೆಯಲಿರುವ  ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರದ ಭೂಮಿಪೂಜೆಯ ಪ್ರಯುಕ್ತ ದ.ಕ. ಜಿಲ್ಲೆಯಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರಂತೆ, ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ದೀಪ ಹಚ್ಚುವುದು, ರಾಮನಾಮ ಪಠಣ ಜತೆಗೆ ಮಠಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲು ವಿನಂತಿಸಲಾಗುವುದು ಎಂದರು. […]

ಅಯೋಧ್ಯೆ ರಾಮಮಂದಿರದಲ್ಲಿ5 ಅಡಿ ಎತ್ತರದ ಶಿವಲಿಂಗ ಪತ್ತೆ, ಹಾಗಾಗಿ ಶಿವನಿಗೂ ಸ್ಥಾನ ಸಿಗಬೇಕು

Friday, July 24th, 2020
shivalinga

ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸ್ಥಾನ ಸಿಗಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯ ಶ್ರೀಮಧ್ವೇಶ್ವರ ಶೈವ ಸದ್ಭೋಧನಾ ಸಂಸ್ಥೆ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು. ರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಉತ್ಖನನ ಮಾಡುವಾಗ 5 ಅಡಿ ಎತ್ತರದ ಶಿವಲಿಂಗ ಪತ್ತೆ ಆಗಿದ್ದು, ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಟ್ರಸ್ಟ್ ಗೆ ಮನವಿ ಮಾಡಿ, ಸಂಸದ ಪ್ರಹ್ಲಾದ್ ಜೋಶಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ಬಂಕಾಪುರ್ ಚೌಕ್ ಬಳಿಯ ಶ್ರೀಶೈಲ ಮಠದಲ್ಲಿ ಪತ್ರ ಚಳವಳಿ ನಡೆಸಲಾಗಿದ್ದು, ರಾಮನ ಜೊತೆಯಲ್ಲಿಯೇ […]

ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆಯ ಪ್ರತೀಕವಾಗಲಿ : ಬಾಬಾ ರಾಮದೇವ್‌

Saturday, November 16th, 2019
Baba-Ramdev

ಉಡುಪಿ : ಅಯೋಧ್ಯೆ ಎಂದರೆ ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆಯ ಪ್ರತೀಕವಾಗಲಿ ಎಂದು ಯೋಗಗುರು ಬಾಬಾ ರಾಮದೇವ್‌ ತಿಳಿಸಿದರು. ಉಡುಪಿಗೆ ಆಗಮಿಸಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಪಡೆದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಟಿಕನ್‌, ಮೆಕ್ಕಾದ ರೀತಿಯಲ್ಲಿ ರಾಮಮಂದಿರ ರೂಪುಗೊಳ್ಳಬೇಕು. ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ ಎಂಬುದು ನನ್ನ ಬಯಕೆ. ಅಯೋಧ್ಯೆ ಜ್ಞಾನ ತೀರ್ಥವಾಗಲಿ, ವಿದ್ಯಾಪರಂಪರೆಯ ಪ್ರತೀಕವಾಗಲಿ ಎಂದರು. ದೇಶದ ಅನೇಕ ಮಹಾಪುರುಷರ ಆಂದೋ ಲನದ ಫ‌ಲವಾಗಿ ಅಯೋಧ್ಯೆಯಲ್ಲಿ ಈ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲಾ […]

ಕೋಟ್ಯಂತರ ರಾಮ ಭಕ್ತರು ಅಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ: ಎಂ.ಬಿ.ಪುರಾಣಿಕ್

Tuesday, November 13th, 2018
hindu-parishat

ಮಂಗಳೂರು: ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆರಂಭಗೊಂಡ ಆಂದೋಲನ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು, ಕೋಟ್ಯಂತರ ರಾಮ ಭಕ್ತರು ಅಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ನ ಅಧ್ಯಕ್ಷ ಎಂ.ಬಿ.ಪುರಾಣಿಕ್ ಇಂದು ನಗರದ ವಿಶ್ವಶ್ರೀ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೇಳಿದರು. ಕೇಂದ್ರ ಸರಕಾರ ಹಾಗೂ ಸಾಧುಸಂತರು ಈ ರಾಮಜನ್ಮ ಭೂಮಿಯ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ವಿಶ್ವಹಿಂದು ಪರಿಷತ್ಗೆ ಕೊಡಬೇಕೆಂದು ನಿರ್ಧಾರ ಕೈಗೊಂಡಿತು. ಆ ನಂತರ ವಿಶ್ವಹಿಂದು ಪರಿಷತ್ ರಾಮಜನ್ಮ […]

ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರವನ್ನ ನಿರ್ಮಾಣ ಮಾಡಲಾಗುವುದು: ಯೋಗಿ ಆದಿತ್ಯನಾಥ

Saturday, November 10th, 2018
yogi-adityanath

ಛತ್ತೀಸ್ಗಢ: ಈಗಾಗಲೇ ಛತ್ತೀಸ್ಗಢದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರವನ್ನ ನಿರ್ಮಾಣ ಮಾಡಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗಾಗಿ ಪ್ರಚಾರ ಕಾರ್ಯ ಕೈಗೊಂಡಿರುವ ಅವರು, ಇಂದು ಛತ್ತೀಸ್ಗಢದ ಲೊರ್ಮಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು. ಅಂತೆಯೇ ಛತ್ತೀಸ್ಗಢದಲ್ಲಿ ಈಗಾಗಲೇ ರಾಮಮಂದಿರ ನಿರ್ಮಾಣ ಮಾಡಲಾಗಿದೆ ಎಂದು ನೆನಪಿಸಿಕೊಂಡರು. ಇದೇ ವೇಳೆ, ಪಕ್ಷ ಮತ್ತೆ ದಿಗ್ವಿಜಯ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಛತ್ತೀಸ್ಗಢದ […]