Blog Archive

ರಾಜ್ಯ ಕರಾವಳಿಯಲ್ಲಿ ಪ್ರಚಾರ ಮಾಡಲಿದ್ದಾರೆ ಪ್ರಿಯಾಂಕ ವಾದ್ರಾ

Monday, April 23rd, 2018
rahul-gandhi

ಮಂಗಳೂರು: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲು ಪ್ರಿಯಾಂಕಾ ವಾದ್ರಾ ಸಿದ್ಧವಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬರಲು ಸಾಧ್ಯವಾಗದ ಕಾರಣ ಅವರ ಅನುಪಸ್ಥಿತಿಯನ್ನು ಪ್ರಿಯಾಂಕಾ ವಾದ್ರಾ ತುಂಬಲಿದ್ದಾರೆ. ಮೇ ತಿಂಗಳ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸಲಿರುವ ಪ್ರಿಯಾಂಕಾ ವಾದ್ರಾ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. […]

ಕಾಂಗ್ರೆಸ್‌ ಉಪವಾಸ ಸತ್ಯಾಗ್ರಹ…ನಾಯಕರ ಉಪಹಾರ ಸೇವನೆ ಫೋಟೋ ಹರಿಬಿಟ್ಟ ಬಿಜೆಪಿ!

Monday, April 9th, 2018
delhi-congress-2

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಉಪವಾಸ ನಿರಶನ ಕೈಗೊಂಡಿದೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ರಾಜ್‌ಘಾಟ್‌ನಲ್ಲಿ ಕೈ ನಾಯಕರು ಸತ್ಯಾಗ್ರಹ ನಡೆಸಿದರು. ದಲಿತರ ಮೇಲಿನ ದೌರ್ಜನ್ಯ ತಡೆ ಹಾಗೂ ಸಂಸತ್ತಿನ ಕಲಾಪ ಸರಿಯಾಗಿ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ದೆಹಲಿಯಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗಿತು. ಈ ವೇಳೆ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ […]

ರಂಗೇರಿದ ಚುನಾವಣೆ… ರಾಮನಗರದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Saturday, March 31st, 2018
D-K-shivkumar

ರಾಮನಗರ: ರಾಜ್ಯ ವಿಧಾನಸಭಾ ಸಾರ್ವತಿಕ ಚುನಾವಣೆಯ ದಿನಾಂಕ ಘೊಷಣೆಯಾಗುತ್ತಿದಂತೆ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿವೆ. ಮಾಗಡಿಯಲ್ಲಿ ಕಳೆದ ಭಾನುವಾರ ಜೆಡಿಎಸ್ ಪಕ್ಷ ಪಟ್ಟಣದ ನಾಡಪ್ರಭು ಕೆಂಪೇಗೌಡರ ಕೋಟೆ ಮೈದಾನದಲ್ಲಿ ವಿಕಾಸ ಪರ್ವ ಸಮಾವೇಶ ಏರ್ಪಡಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿತ್ತು. ಈಗ ಕಾಂಗ್ರೆಸ್ ಕೂಡ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಏಪ್ರಿಲ್ 4 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಗಡಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ರಾಮನಗರ ಜಿಲ್ಲೆಯ […]

‘ನನ್ನ ಬಾಯಿಂದ ತಪ್ಪು ಮಾತು ಬಂದಿರಬಹುದು, ಆದ್ರೆ ಕರ್ನಾಟಕದ ಜನ ತಪ್ಪು ನಿರ್ಣಯ ಮಾಡಲ್ಲ’

Friday, March 30th, 2018
bjp-amit-shah

ಮೈಸೂರು: ನಾನು ಮಾತನಾಡುವಾಗ ಬಾಯ್ತಪ್ಪಿ ಮಾತನಾಡಿದ್ದೇನೆ. ಅದನ್ನೇ ಇಟ್ಟುಕೊಂಡು ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಂಭ್ರಮಿಸಿದರು. ನನ್ನ ಬಾಯಿಯಿಂದ ತಪ್ಪು ಮಾತು ಬಂದಿರಬಹುದು. ಆದರೆ, ಕರ್ನಾಟಕದ ಜನತೆ ತಪ್ಪು ನಿರ್ಣಯ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜನಶಕ್ತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್‌‌ಗೆ ಜೆಡಿಎಸ್ ಪ್ರತಿಸ್ಪರ್ಧಿಯಲ್ಲ. ಜೆಡಿಎಸ್ ಒಂದಷ್ಟು ಶಾಸಕರನ್ನು ಗೆಲ್ಲಬಹುದು. ಆದರೆ, ಕಾಂಗ್ರೆಸ್ ಸರ್ಕಾರ […]

ಪೂಜಾರಿ ‘ಕೈ’ ಹಿಡಿದ ರಾಹುಲ್‌: ಕರಾವಳಿಯಲ್ಲಿ ಒಗ್ಗಟ್ಟಿನ ಮಂತ್ರ !

Thursday, March 29th, 2018
rahul-gandhi

ಮಂಗಳೂರು: ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜನಾಶೀರ್ವಾದ ಯಾತ್ರೆ ಮೂಲಕ ಕರಾವಳಿಗೆ ನೀಡಿರುವ ಮೊದಲ ಭೇಟಿಯು ರಾಜಕೀಯವಾಗಿ ಹಲವು ರೀತಿಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಆ ಪೈಕಿ ಪ್ರಸಿದ್ಧ ಕುದ್ರೋಳಿ ದೇವಸ್ಥಾನ ಭೇಟಿ ಹಾಗೂ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಪ್ತರಾಗಿದ್ದ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರೊಂದಿಗೆ ನಡೆಸಿದ ಕುಶಲೋಪರಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಪಕ್ಷದ ಅಧ್ಯಕ್ಷರಾದ ಬಳಿಕ ರಾಹುಲ್‌ ಗಾಂಧಿ ಮೊದಲ ಬಾರಿಗೆ ಕರಾವಳಿಯ ಉಭಯ […]

ರಾಜ್ಯದಿಂದ ಲೆಕ್ಕ ಕೇಳಲು ನರೇಂದ್ರ ಮೋದಿ ಚಕ್ರವರ್ತಿಯಲ್ಲ: ರಮಾನಾಥ ರೈ

Monday, March 26th, 2018
ramanath-rai

ಮಂಗಳೂರು: ರಾಜ್ಯ ಸರಕಾರದಿಂದ ಲೆಕ್ಕ ಕೇಳಲು ನರೇಂದ್ರ ಮೋದಿ ಚಕ್ರವರ್ತಿಯಲ್ಲ. ಲೆಕ್ಕ ಕೊಡೋಕೆ ನಾವೇನು ಸಾಮಂತ ರಾಜರುಗಳಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೆಕ್ಕ ಕೊಡುವ ಪದ್ಧತಿ ಇಲ್ಲ ಎಂದು ತಿಳಿಸಿದರು. ರೈ ಚಕ್ರವರ್ತಿಗೆ ಸಾಮಂತರಸರು ಮಾತ್ರ ಲೆಕ್ಕ ಕೊಡಬೇಕಷ್ಟೆ. ಪ್ರಧಾನಿ ನರೇಂದ್ರ ಮೋದಿ ದೇಶದ ಚಕ್ರವರ್ತಿಯಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಮಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಜನಾಶೀರ್ವಾದ […]

ಉಳ್ಳಾಲದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿರಾಸೆ

Thursday, March 22nd, 2018
congress

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜನಾಶೀರ್ವಾದ ಯಾತ್ರೆಗೆ ಉಳ್ಳಾಲದಲ್ಲಿ ಮಂಗಳವಾರ ರಾತ್ರಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದರೂ, ಕಲ್ಲಾಪು, ತೊಕ್ಕೊಟ್ಟು ಓವರ್‌ ಬ್ರಿಡ್ಜ್ ಬಳಿ ರಾಹುಲ್‌ ಗಾಂಧಿ ವಾಹನ ನಿಲ್ಲಿಸದ ಕಾರಣ ಕಾರ್ಯಕರ್ತರಿಗೆ ನಿರಾಸೆಯನ್ನುಂಟು ಮಾಡಿದರು. ರಾತ್ರಿ 9.30ಕ್ಕೆ ಸಮಯ ನಿಗದಿಯಾಗಿದ್ದರಿಂದ ರಾ.ಹೆ. 66ರ ಕಲ್ಲಾಪುವಿನಿಂದ ಉಳ್ಳಾಲ ಜಂಕ್ಷನ್‌, ದರ್ಗಾವರೆಗೆ ಸಂಪೂರ್ಣ ವಿದ್ಯುದ್ದೀಪಗಳಿಂದ ಅಲಂಕೃತ ಮಾಡಿದ್ದು, ಇದರೊಂದಿಗೆ ಹೆಜ್ಜೆಗೊಂದರಂತೆ ಜನಪ್ರತಿನಿಧಿಗಳ, ಕಾರ್ಯಕರ್ತರ ಸ್ವಾಗತ ಕೋರುವ ಬ್ಯಾನರ್‌ ರಾರಾಜಿಸುತ್ತಿತ್ತು. ದರ್ಗಾದಲ್ಲೂ ವಿಶೇಷ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಬಳಿಕ ಸಚಿವ […]

ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ ರಾಷ್ಟ್ರೀಯ ತರಬೇತಿ ಅಕಾಡೆಮಿ

Thursday, March 22nd, 2018
mangaluru

ಮಂಗಳೂರು: ಕೋಸ್ಟ್‌ ಗಾರ್ಡ್‌ (ಕರಾವಳಿ ತಟ ರಕ್ಷಣಾ ಪಡೆ) ರಾಷ್ಟ್ರೀಯ ತರಬೇತಿ ಅಕಾಡೆಮಿ ಕೇರಳದಿಂದ ಮಂಗಳೂರಿಗೆ ಸ್ಥಳಾಂತರಗೊಂಡಿದ್ದು, ಇದಕ್ಕೆ ರಾಜ್ಯ ಸರಕಾರ 200 ಎಕರೆಗೂ ಅಧಿಕ ಜಾಗ ಮೀಸಲಿರಿಸಿದೆ ಹಾಗೂ ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಖಾದರ್‌ ತಿಳಿಸಿದ್ದಾರೆ. ಈ ಅಕಾಡೆಮಿ ಮಂಗಳೂರಿಗೆ ಬರುವುದರಿಂದ ಕೋಸ್ಟ್‌ ಗಾರ್ಡ್‌ಗೆ ಎಲ್ಲ ರೀತಿಯ ಸವಲತ್ತುಗಳೂ ಲಭ್ಯವಾಗ‌ಲಿವೆ. ಸುಸಜ್ಜಿತ ಸೌಲಭ್ಯಗಳಿಂದ ಅತ್ಯುತ್ತಮವಾಗಿ ರಕ್ಷಣಾ ಕಾರ್ಯ ನಡೆಸಲು ಅನುಕೂಲವಾಗಲಿದೆ. ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ತರಬೇತಿ ನೀಡಲು ಮತ್ತು […]

ಬಿಜೆಪಿಗೆ ಭ್ರಷ್ಟಾಚಾರವೇ ಶಕ್ತಿ: ರಾಹುಲ್‌ ಗಾಂಧಿ

Wednesday, March 21st, 2018
rahul-mangaluru

ಮಂಗಳೂರು: ಬಿಜೆಪಿಗೆ ಅಧಿಕಾರ ಗಳಿಸುವುದೊಂದೇ ಗುರಿಯಾಗಿದ್ದು, ಅದಕ್ಕಾಗಿ ಎಲ್ಲ ಕುತಂತ್ರಗಳನ್ನೂ ಅವರು ಅನುಸರಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ಗೆ ಮಾತ್ರ ಸತ್ಯ, ನ್ಯಾಯಗಳೇ ಮುಖ್ಯ, ದೇಶದ ರಕ್ಷಣೆ ಕಾಂಗ್ರೆಸ್‌ನ ಪ್ರಥಮ ಆದ್ಯತೆ ಎಂದು ನೆಹರೂ ಮೈದಾನದಲ್ಲಿ ಇಂದು ಜರಗಿದ ಸಾರ್ವಜನಿಕ ಸಭೆಯಲ್ಲಿ ಅವರು ಹೇಳಿದರು. ಮೋದಿ ಸರಕಾರ ಕಳೆದ 4 ವರ್ಷಗಳ ಅವಧಿಯಲ್ಲಿ ದೇಶವನ್ನು ಸಂಪೂರ್ಣ ಅಧಃಪತನಗೊಳಿಸಿದೆ. ಹಣ ಬಲ, ತೋಳ್ಬಲ, ಒಳಸಂಚುಗಳನ್ನೇ ಅಸ್ತ್ರಗಳಾಗಿ ಬಳಸಿ ಅನ್ಯಾಯದಿಂದ ಅಧಿಕಾರಕ್ಕೆ ಏರುತ್ತಿದೆ. ಆದರೆ […]

ರಾಹುಲ್ ಗಾಂಧಿ ಮುಂದೆ ಕಣ್ಣೀರು ಹಾಕಿದ ಜನಾರ್ದನ ಪೂಜಾರಿ

Wednesday, March 21st, 2018
janardhana-poojary

ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಸಂಜೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದಿಂದ ವಾಪಾಸಾಗುವಾಗ ರಾಹುಲ್ ಗಾಂಧಿಯ ಮುಂದೆಯೇ ಜನಾರ್ದನ ಪೂಜಾರಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ನೀವೇ ಊಹಿಸಿ ಪ್ರವಾಸದ ಭಾಗವಾಗಿ ರಾಹುಲ್ ಗಾಂಧಿ ಸಂಜೆ ನೆಹರೂ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ನಂತರ ರೊಸಾರಿಯೋ ಚರ್ಚ್ ಗೆ ಭೇಟಿ ನೀಡಿದ ಅವರು ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ತೆರಳಿದರು. ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ […]