Blog Archive

ಗುಜರಾತ್ ಚುನಾವಣಾ ಫಲಿತಾಂಶ ನನಗೆ ನಿರಾಸೆ ತಂದಿಲ್ಲ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

Monday, December 18th, 2017
rahul-gandhi

ಹೊಸದಿಲ್ಲಿ: ” ಗುಜರಾತ್ ಚುನಾವಣಾ ಫಲಿತಾಂಶ ನನಗೆ ನಿರಾಸೆ ತಂದಿಲ್ಲ. ಫಲಿತಾಂಶ ತೃಪ್ತಿ ತಂದಿದೆ” ಎಂದು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. ಎಐಸಿಸಿ ಕಚೇರಿಯಲ್ಲಿ ಗುಜರಾತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಗುಜರಾತ್ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದ ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಮೊದಲ ಚುನಾವಣಾ ಫಲಿತಾಂಶ ಹೊರಬಂದಿದೆ. ಚುನಾವಣೆ ನಡೆಯುವ ಹೊತ್ತಿಗೆ ಅವರು ಎಐಸಿಸಿ ಉಪಾಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಕಾಂಗ್ರೆಸ್ […]

ಕಾಂಗ್ರೆಸ್ ವಿರುದ್ಧ ಘೋಷಣೆ: ರಾಹುಲ್ ಗಾಂಧಿ ಪ್ರತಿಕೃತಿ ದಹನ

Saturday, October 8th, 2016
yuva-morcha

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ತದ ದಲ್ಲಾಳಿ ಎಂದು ಹೇಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ರಾಹುಲ್ ಗಾಂಧಿ ಪ್ರತಿಕೃತಿಯನ್ನು ದಹನ ಮಾಡಿದರು. ಜಗತ್ತಿನ ಎಲ್ಲಾ ದೇಶಗಳು ಇತ್ತೀಚೆಗೆ ನಡೆದಂತಹ ಸರ್ಜಿಕಲ್ ಸ್ಟ್ರೈಕ್ ಘಟನೆಯ ಬಗ್ಗೆ ಸಹಮತ ವ್ಯಕ್ತಪಡಿಸಿ ಅಮೆರಿಕಾ, ರಷ್ಯಾ, ಚೀನಾದಂತಹ ದೇಶಗಳೇ ಪ್ರಧಾನಿಯವರ ಬಗ್ಗೆ ಶ್ಲಾಘನೆ ಮಾಡಿದರೆ ರಾಹುಲ್ […]

ಆರ್‌ಎಸ್‌ಎಸ್‌ ಮತ್ತು ಆ ಬಗೆಯ ಇತರ ಸಂಘಟನೆಗಳ ಸಿದ್ಧಾಂತಕ್ಕೆ ನನ್ನ ವಿರೋಧವಿದೆ: ರಾಹುಲ್‌ ಗಾಂಧಿ

Thursday, September 29th, 2016
rahul-gandhi

ಹೊಸದಿಲ್ಲಿ : ದೇಶವನ್ನು ವಿಭಜಿಸುವ ಆರ್‌ಎಸ್‌ಎಸ್‌ ಮತ್ತು ಆ ಬಗೆಯ ಇತರ ಸಂಘಟನೆಗಳ ಸಿದ್ಧಾಂತಕ್ಕೆ ನನ್ನ ವಿರೋಧವಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧದ ತನ್ನ ಹೇಳಿಕೆಗಾಗಿ ದಾಖಲಿಸಲ್ಪಟ್ಟಿರುವ ಮಾನನಷ್ಟ ದಾವೆಯ ಸಂಬಂಧ ಇಂದು ಅಸ್ಸಾಂ ಕೋರ್ಟಿನಲ್ಲಿ ಹಾಜರಾದ ಬಳಿಕ ರಾಹುಲ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. “ನಾನು ಬಡವರು, ರೈತರು ಮತ್ತು ನಿರುದ್ಯೋಗಿಗಳ ಪರವಾಗಿ ಹೋರಾಡುತ್ತಿರುವುದರಿಂದ ನನ್ನ ವಿರುದ್ಧ ಈ ಬಗೆಯ ಕೇಸುಗಳನ್ನು ಹೂಡಲಾಗುತ್ತಿದೆ; ಆದರೆ ನಾನು ಈ ರೀತಿಯ ಕೇಸುಗಳಿಂದ ಹೆದರುವವನಲ್ಲ; ನನ್ನ […]

ಲೋಕಸಮರ: ಚಿಕ್ಕಬಳ್ಳಾಪುರದ ಮೇಲೆ ರಾಹುಲ್ ಕಣ್ಣು

Thursday, March 13th, 2014
Rahul-Gandhi

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ. ರಾಹುಲ್ ಗಾಂಧಿ ಅವರು ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶ ಅಮೇಥಿಯ ಜತೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೂ ಸ್ಪರ್ಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ಜತೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಚಿಕ್ಕಬಳ್ಳಾಪುರದಿಂದ ರಾಹುಲ್ ಗಾಂಧಿ ಸ್ಪರ್ಧೆಗೆ ರಾಜ್ಯ ಕಾಂಗ್ರೆಸ್ ಮುಖಂಡರೂ ಸಹ […]

ರಾಹುಲ್, ಕೇಜ್ರಿ ವಿರುದ್ಧ ದೂರು

Monday, March 10th, 2014
Rahul-Gandhi

ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ವಿರುದ್ಧ ಭಾನುವಾರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರಿಂದಲೇ ಮಹಾತ್ಮಾ ಗಾಂಧಿ ಹತ್ಯೆಯಾಯಿತು ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪದಿಂದ ಕ್ರುದ್ಧಗೊಂಡಿರುವ ಬಿಜೆಪಿ ಅವರ ವಿರುದ್ಧ ಆಯೋಗಕ್ಕೆ ದೂರು ನೀಡಿದೆ. ಮಾತ್ರವಲ್ಲ ಕಾಂಗ್ರೆಸ್‌ನ ಮಾನ್ಯತೆ ರದ್ದುಮಾಡುವಂತೆ ಒತ್ತಾಯಿಸಿದೆ. ಕಾಂಗ್ರೆಸ್ ನಾಯಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ […]

ರಾಹುಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಆರೆಸ್ಸೆಸ್ಸ್

Friday, March 7th, 2014
Rahul-Gandhi

ನವದೆಹಲಿ: ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್ಸ್ ಕೈವಾಡವಿದೆ ಎಂದು ಹೇಳಿರುವ ರಾಹುಲ್ ಗಾಂಧಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೆಸ್ಸೆಸ್ಸ್ ಹೇಳಿದೆ. ರಾಹುಲ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ಸ್ ಹಿರಿಯ ನೇತಾರ ರಾಮ್ ಮಾಧವ್, ರಾಹುಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಆರೆಸ್ಸೆಸ್ಸ್ ಗಾಂಧೀಜಿಯವರನ್ನು ಹತ್ಯೆಗೈದಿತ್ತು. ಆಗ ಅವರೇ (ಬಿಜೆಪಿ) ಗಾಂಧಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಅವರು ಸರ್ದಾರ್ ಪಟೇಲ್ ಮತ್ತು ಗಾಂಧೀಜಿಯವರನ್ನು ವಿರೋಧಿಸುತ್ತಿದ್ದರು ಎಂದು ಮಹಾರಾಷ್ಟ್ರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಹೇಳಿದ್ದರು.

ರಾಹುಲ್ ಗಾಂಧಿ ಬಣದ ಹರ್ಷ ಮೊಯ್ಲಿಗೆ ಸೋನಿಯಾ ಬಣದ ಗುಲಾಂ ನಬಿ ವಿಲನ್

Thursday, March 6th, 2014
Rahul-Gandhi

ಮಂಗಳೂರು: ರಾಹುಲ್ ಗಾಂಧಿಯ ಆಪ್ತ ವಲಯದಲ್ಲಿದ್ದ ಹರ್ಷ ಮೊಯ್ಲಿ ಚುನಾವಣೆ ಕಣದಿಂದ ಹೊರಬೀಳಲು ಕಾರಣ ಸೋನಿಯಾ ಗಾಂಧಿ ಆಪ್ತ ವಲಯದ ಗುಲಾಂ ನಬಿ ಆಜಾದ್! ಪ್ರೈಮರೀಸ್ ಚುನಾವಣೆಯಲ್ಲಿ ಪಕ್ಷದ ಯಾವುದೇ ಪದಾಧಿಕಾರಿ, ಮಾಜಿ, ಹಾಲಿ ಜನಪ್ರತಿನಿಧಿ ಮತ್ತು ಸಮಾಜ ಸೇವೆ ಅಡಿ ನಾಮಪತ್ರ ಸಲ್ಲಿಸಬಹುದು. ಮೂರನೇ ವಿಭಾಗದಲ್ಲಿ ಹರ್ಷ ಮೊಯ್ಲಿ ನಾಮಪತ್ರ ಸಲ್ಲಿಸಿದ್ದರು. ಸಮಾಜ ಸೇವೆ ವಿಭಾಗದಲ್ಲಿ ನಾಮಪತ್ರ ಸಲ್ಲಿಸಿದರೆ ಪುರಸ್ಕರಿಸುವ ಪರಮಾಧಿಕಾರ ಚುನಾವಣೆ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಗುಲಾಂ ನಬಿ ಅಜಾದ್)ಗೆ. ಕೇಂದ್ರ ಸಚಿವ […]

ಮೋದಿ ಬಗ್ಗೆ ಖುರ್ಷಿದ್ ಹೇಳಿಕೆಗೆ ರಾಹುಲ್ ಅಸಮಾಧಾನ

Thursday, February 27th, 2014
Rahul-Gandhi

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ನೀಡಿದ್ದ ‘ನಪುಂಸಕ’ ಹೇಳಿಕೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಬಳಿಕ ಖುರ್ಷಿದ್ ಹೇಳಿಕೆ ಬಗ್ಗೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿರುವ ರಾಹುಲ್, ‘ಇಂತಹ ಭಾಷೆ ಬಳಸುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ. 2002ರ ಗುಜರಾತ್ ಗಲಭೆ ನಿಯಂತ್ರಿಸಲು ಸಾಧ್ಯವಾಗದ ಮೋದಿ ಒಬ್ಬ ‘ನಪುಂಸಕ’ ಎಂದು ಸಲ್ಮಾನ್ ಖರ್ಷಿದ್ ಹೇಳಿದ್ದರು. ಈ […]

ಕಾಂಗ್ರೆಸ್ ವತಿಯಿಂದ ಫೆ.3ರಂದು ಬೃಹತ್ ಯುವ ಜಾಗೃತಿ ಸಮಾವೇಶ

Friday, January 28th, 2011
ಬೃಹತ್ ಯುವ ಜಾಗೃತಿ ಸಮಾವೇಶ

ಮಂಗಳೂರು; ದೇಶಾದ್ಯಂತ ಯುವ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳನ್ನು ಪ್ರಜಾತಂತ್ರ ವ್ಯವಸ್ಥೆಯ ಮೂಲಕ ಆರಿಸಿ ಪಕ್ಷವನ್ನು ಬಲಿಷ್ಠಗೊಳಿಸುವ ಹಾಗೂ ಪಾರದರ್ಶಕ ವ್ಯವಸ್ಥೆ ಸ್ಥಾಪಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಸಮಿತಿಗೆ ಚುನಾವಣೆಯನ್ನು ಶ್ರೀಯುತ ರಾಹುಲ್ ಗಾಂಧಿಯವರು ಚಾಲನೆ ನೀಡಿದ್ದು ಈ ಪ್ರಕ್ರಿಯೆಯನ್ನು ಈಗಾಗಲೇ ಸುಮಾರು 16 ರಾಜ್ಯಗಳಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಯುವ ಕಾಂಗ್ರೆಸ್ ಸಮಿತಿಗೆ   ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾದ ಪ್ರಯುಕ್ತ ಮೊದಲನೆಯದಾಗಿ ಯುವ ಜನರನ್ನು ಯುವ ಕಾಂಗ್ರೆಸ್ಗೆ ಸದಸ್ಯರನ್ನಾಗಿ ನೋಂದಾಯಿಸುವ ಪ್ರಕ್ರಿಯೆ ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ […]