218 ಕೋ.ರೂ. ಕಾಮಗಾರಿ ಸಂಪೂರ್ಣ ವಿಫ‌ಲ

Monday, December 18th, 2017
kamagari

ಮಂಗಳೂರು: ಸುರತ್ಕಲ್‌ ಪರಿಸರದಲ್ಲಿ 2006ರಲ್ಲಿ ಎಡಿಬಿಯಿಂದ 218 ಕೋಟಿ ರೂ. ಸಾಲ ಪಡೆದು ಮಾಡಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ವಿಫಲವಾಗಿದೆ. ಇದರ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸ ಲಾಗುವುದು; ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿ ಯೊಂದಿಗೆ ಚರ್ಚಿಸಿ ಸಿಒಡಿ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ರೋಶನ್‌ ಬೇಗ್‌ ಹೇಳಿದರು. ಸುರತ್ಕಲ್‌ ನಲ್ಲಿ ಮಾತನಾಡಿದ ಅವರು, ಸುರತ್ಕಲ್‌ ಒಳಚರಂಡಿ ಯೋಜನೆ ಒಂದು ಗೋಲ್‌ಮಾಲ್‌ ಎಂದು ಬಣ್ಣಿಸಿದರು. ಬಡ್ಡಿಗೆ ಹಣ ಪಡೆದು ಜನರ ಒಳಿತಿಗಾಗಿ ಕಾಮಗಾರಿ ಮಾಡಲಾಗಿತ್ತು. […]

ರೋಶನ್ ಬೇಗ್ ವಿರುದ್ಧ ದ.ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರ ಪ್ರತಿಭಟನೆ

Tuesday, October 17th, 2017
BJP

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ರಾಜ್ಯ ನಗರಾಭಿವೃದ್ಧಿ ಮತ್ತು ಹಜ್ ಸಚಿವ ರೋಶನ್ ಬೇಗ್ ವಿರುದ್ಧ ದ.ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಪಿವಿಎಸ್ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟಿಸಿದರು. ರಸ್ತೆಯಲ್ಲಿ ಕುಳಿತು ಪ್ರತಿಭಟಿಸುವ ಮೂಲಕ ಸಂಚಾರವನ್ನು ತಡೆದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಮಹಿಳಾ ಕಾರ್ಯಕರ್ತರು ಕೂಡಾ ಪ್ರತಿಭಟನೆಯಲ್ಲಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಎನ್. […]

ಬುಲೆಟ್ ರೈಲು ಮಂಗಳೂರಿಗೆ ವಿಸ್ತರಿಸುವಂತೆ ಮನವಿ

Saturday, August 6th, 2016
Rail-Widen

ಮಂಜೇಶ್ವರ: ಬಹು ನಿರೀಕ್ಷಿತ ತಿರುವನಂತಪುರ- ಕಣ್ಣೂರು ರೈಲನ್ನು ಮಂಗಳೂರಿಗೆ ವಿಸ್ತರಿಸಲು ಕರ್ನಾಟಕ ಸರಕಾರ ಮುತುವರ್ಜಿ ವಹಿಸಬೇಕೆಂದು ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್‌ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಇತ್ತಿಚೇಗೆ ಕಾಸರಗೋಡಿಗೆ ಆಗಮಿಸಿದ ಸಚಿವ ರೋಶನ್ ಬೇಗ್‌ರವರನ್ನು ನಿಯೋಗವೊಂದು ಭೇಟಿ ಮಾಡಿ ಈ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು. ಈಗಾಗಲೇ ತಿರುವನಂತಪುರ – ಕಣ್ಣೂರು ವೇಗ ರೈಲ್ವೇ ಹಳಿ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದ್ದು, ಇದರಿಂದ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸಲಾಗಿದೆ. ಪ್ರಸ್ತುತ ಯೋಜನೆಯನ್ನು ಮಂಗಳೂರಿನ ತನಕ ವಿಸ್ತರಿಸಿದರೆ ಕಾಸರಗೋಡಿಗೂ ಈ ಸೌಲಭ್ಯ […]

ಪಾಲಿಕೆಯಲ್ಲಿ ಖಾಲಿಯಿರುವ ಹುದ್ದೆಗಳು ತುಂಬಲು ಕ್ರಮ: ರೋಶನ್ ಬೇಗ್

Friday, August 5th, 2016
MCC

ಮಂಗಳೂರು: ಪಾಲಿಕೆಯ 1,725 ಮಂಜೂರು ಹುದ್ದೆಗಳಲ್ಲಿ ಪ್ರಸ್ತುತ ಕೇವಲ 548 ಹುದ್ದೆಗಳು ಮಾತ್ರ ಇವೆ. ಉಪ ಆಯುಕ್ತರು ಸೇರಿದಂತೆ ಹಲವು ಪ್ರಮುಖ ಹುದ್ದೆಗಳು ಖಾಲಿಯಿದ್ದು, ಕೆಪಿಎಸ್‌ಸಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಇದು ಪೂರ್ಣಗೊಂಡ ಕೂಡಲೇ ತೆರವಾಗಿರುವ ಹುದ್ದೆಗಳು ಭರ್ತಿಯಾಗಲಿವೆ ಎಂದು ಸಚಿವ ಆರ್.ರೋಶನ್ ಬೇಗ್ ಹೇಳಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ, ಸುರತ್ಕಲ್ ಹಾಗೂ ಲಾಲ್‌ಬಾಗ್‌ನಲ್ಲಿ ಮಂಜೂರಾಗಿರುವ ವಲಯ ಕಚೇರಿಗಳನ್ನು ಶೀಘ್ರವೇ […]

ಕಾಸರಗೋಡಿನಲ್ಲಿ ಬೃಹತ್ ಉದ್ಯೋಗ ಮೇಳ

Monday, February 29th, 2016
Udyogamela

ಕಾಸರಗೋಡು: ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಯುವ ಸಮೂಹದ ಕೊಡುಗೆಯನ್ನು ಲಕ್ಷ್ಯದಲ್ಲಿರಿಸಿ ಕೇಂದ್ರ ಸರಕಾರ ವಿವಿಧ ಆಯಾಮಗಳಲ್ಲಿ ಯೋಜನೆಗಳಿಗೆ ರೂಪು ನೀಡುತ್ತಿರುವುದು ಸ್ತುತ್ಯರ್ಹವೆಂದು ಕಾಸರಗೋಡು ಚಿನ್ಮಯಾ ಮಿಷನ್ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರ ಕಾರ್ಮಿಕ ಉದ್ಯೋಗ ಸಚಿವಾಲಯದ ನೇತೃತ್ವದಲ್ಲಿ ಕಾಸರಗೋಡಿನ ವಿವೇಕಾನಂದ ಎಜ್ಯುಕೇಶನಲ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಯುವ ಕಿರಣ್ ಸಂಘಟನೆಗಳ ಸಹಕಾರದೊಂದಿಗೆ ಭಾನುವಾರ ವಿದ್ಯಾನಗರದ ಚಿನ್ಮಯಾ ಮಿಷನ್ ಪರಿಸರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ದೀಪ ಬೆಳಗಿಸಿ ಅವರು ಮಾತನಾಡುತ್ತಿದ್ದರು. ಉದ್ಯೋಗ ಇಂದು […]