ಅಜ್ಜನ ಮರಣ ಪತ್ರಕ್ಕೆ ಲಂಚ ಪಡೆದ ಗ್ರಾಮ ಲೆಕ್ಕಿಗನನ್ನು ಬಂಧಿಸಿದ ಪೊಲೀಸರು

Friday, November 24th, 2023
Vijith

ಮಂಗಳೂರು : ಅಜ್ಜನ ಮರಣ ಪತ್ರವನ್ನು ಕೇಳಲು ಬಂದ ವ್ಯಕ್ತಿಗೆ ಸುಮಾರು 13 ಸಾವಿರ ರೂಪಾಯಿಗಳನ್ನು ಲಂಚ ಕೇಳಿದ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಚೇಳ್ಯಾರು ಗ್ರಾಮದ ವ್ಯಕ್ತಿಯೊಬ್ಬರು ತನ್ನ ತಾಯಿಯ ಹೆಸರಿನಲ್ಲಿದ್ದ ಜಾಗದಲ್ಲಿ 5 ಸೆಟ್ಸ್ ಜಾಗವನ್ನು ಮಾರಾಟ ಮಾಡುವ ಉದ್ದೇಶದಿಂದ ಅಜ್ಜನ ಮರಣ ಪತ್ರ ಹಾಗೂ ಸಂತತಿ ನಕ್ಷೆ ಮಾಡಲು ಮುಂದಾಗಿದ್ದು ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗ ವಿಜಿತ್ ಬಳಿ ಅರ್ಜಿ ಹಾಕಿದ್ದರು. ವಿಜಿತ್ ನ. 20 […]

ಬಾರೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೇಯರ್ ಲೋಕಾಯುಕ್ತ ವಶಕ್ಕೆ

Wednesday, January 9th, 2013
Sullia surveyor

ಸುಳ್ಯ : ಸುಳ್ಯದ ಜಟ್ಟಿಪಳ್ಳದ ಬಾರೊಂದರಲ್ಲಿ ಮಂಗಳವಾರ ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೆ ಇಲಾಖೆಯ ಸರ್ವೇಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಭೂಮಾಪನಾ ಇಲಾಖೆಯ ಪರವಾನಗಿ ಭೂಮಾಪಕ ಚೆನ್ನಪಟ್ಟಣ ಮೂಲದ ಶರತ್‌ಕುಮಾರ್(೩೪) ಬಂಧಿತ ಆರೋಪಿಯಾಗಿದ್ದಾನೆ. ಆಲೆಟ್ಟಿ ಗ್ರಾಮದ ಕೋಲ್ಚಾರಿನ ಪದ್ಮಾನಾಭ ಎಂಬುವವರು ಕೊಯಿಂಗಾಜೆಯಲ್ಲಿರುವ ತಮ್ಮ ಒಂದೂವರೆ ಎಕ್ರೆ ಜಾಗ ಸರ್ವೆ ಮಾಡಲು ಕಳೆದ ಡಿಸೆಂಬರ್ ೧೨ ರಂದು ಅರ್ಜಿ ಸಲ್ಲಿಸಿದ್ದರು. ಬಳಿಕ ೨೯ ರಂದು ಶರತ್‌ಕುಮಾರ್ ಕೊಯಿಂಗಾಜೆಗೆ ತೆರಳಿ ಸ್ಥಳದ ಸರ್ವೆ ನಡೆಸಿದ್ದರು. ಆದರೆ ದಾಖಲೆಗಳನ್ನು […]

ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಲೋಕಾಯುಕ್ತ ಬಲೆಗೆ

Wednesday, December 5th, 2012
Mangalore University Professor

ಮಂಗಳೂರು :ಮಂಗಳೂರು ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಅನಿತಾ ರವಿಶಂಕರ್ ರವರನ್ನು ಲಂಚ ಸ್ವೀಕಾರದ ಹಿನ್ನಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ. ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಪಿಎಚ್‌ಡಿ ಆಕಾಂಕ್ಷಿ ವಿದ್ಯಾರ್ಥಿಗಳಿಂದ ತಲಾ 5 ಸಾವಿರ ರೂಪಾಯಿಗಳನ್ನು ಸ್ವೀಕರಿಸುತ್ತಿದ್ದರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಪಿಎಚ್‌ಡಿ ಆಕಾಂಕ್ಷಿ ಪ್ರೇಮ ಡಿಸೋಜ ಎಂಬವರು ಪಿಎಚ್‌ಡಿಗಾಗಿ ವಿದ್ಯಾರ್ಥಿಗಳಿಂದ ಲಂಚ ಸ್ವೀಕರಿಸುವ ಉಪನ್ಯಾಸಕರಿಗೆ ಸರಿಯಾಗಿ ಪಾಠ ಕಲಿಸಬೇಕೆಂದು ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರೇಮ ಅವರಿಗೆ ಧ್ವನಿ […]

ಲಂಚ ಸ್ವೀಕರಿಸಿದ ಇಬ್ಬರು ಅಧಿಕಾರಿಗಳಿಗೆ ನ್ಯಾಯಾಂಗ ಬಂಧನ

Saturday, August 13th, 2011
bribe officers/ ಲಂಚಾಧಿಕಾರಿ

ಮಂಗಳೂರು: ಅದಿರು ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಅಧಿಕಾರಿ ವೀರಣ್ಣ ನಾಯಕ್‌ ಮತ್ತು ಲೆಕ್ಕ ಪರಿಶೋಧಕ ನರಸಿಂಹ ಅವರನ್ನು ಶುಕ್ರವಾರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆ. 26 ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಗುರುವಾರ ಸಂಜೆ ಅದಿರು ವ್ಯಾಪಾರಿ ಅತ್ತಾವರದ ಮಹಮದ್‌ ಅವರ ದಾಖಲೆ ಪತ್ರಗಳ ಕ್ಲಿಯರೆನ್ಸ್‌ಗೆ 1.5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ವೀರಣ್ಣ ನಾಯಕ್‌ ಮತ್ತು ನರಸಿಂಹ ಅವರನ್ನು ಲೋಕಾಯುಕ್ತ […]