ಜಾಗ ಮಾರಿ ಸಾಲ ಮಾಡಿ 15 ಲಕ್ಷ ವರದಕ್ಷಿಣೆ ಕೊಟ್ಟರೂ, 10 ಲಕ್ಷದ ಕಾರು ಬೇಕು ಎಂದ ಪತಿಯ ವಿರುದ್ಧ ದೂರು

Wednesday, August 4th, 2021
dowriCase

ಮಂಗಳೂರು : ವರದಕ್ಷಿಣೆ ಕೊಟ್ಟದ್ದೇ ಅಲ್ಲದೆ ಕಾರು ಬೇಕು ಎಂದು ಪತಿ ಹಾಗೂ ಆತನ ಮನೆಯವರು ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯೋರ್ವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾನು ದುಬೈನಲ್ಲಿ ಹೋಟೆಲ್ ನಡೆಸುತ್ತಿದ್ದೇನೆ ಎಂದು ನಂಬಿಸಿ  ಮದುವೆ ಮಾಡಿದ್ದರು. ಪತಿಯಾದ ತುಷಾರ್ ಬಿ. ಮಾಣೈ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಹಿಂಸೆ ನೀಡಿದ್ದು, ತುಷಾರ್ ಮದುವೆಯಾಗಿದ್ದು ಮದುವೆಯ ಎಲ್ಲಾ ಖರ್ಚುಗಳನ್ನು ವಧುವಿನ ಮನೆಯವರು ಬರೆಸಿದ್ದರು. ವರನ ಮನೆಯವರ ಬೇಡಿಕೆಯಂತೆ ಜಾಗ ಮಾರಿ ಸಾಲ […]

ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಸಿವಿಲ್ ಎಂಜಿನಿಯರ್, ಮನನೊಂದ ಪತ್ನಿ ಆತ್ಮಹತ್ಯೆ

Thursday, June 10th, 2021
rachitha

ಕಲಬುರಗಿ : ಎರಡೂವರೆ ವರ್ಷದ ಹಿಂದೆ  ಮದುವೆಯಾಗಿದ್ದ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು 21 ವರ್ಷದ ರಚಿತಾ ಎಂದು ಗುರುತಿಸಲಾಗಿದೆ. ರಚಿತಾ ಅವರಿಗೆ  ಕಳೆದ ಎರಡೂವರೆ ವರ್ಷದ ಹಿಂದೆ ವೀರಣ್ಣ ಎಂಬವರ ಜೊತೆ ಮದುವೆಯಾಗಿತ್ತು. ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ವೀರಣ್ಣ, ಮದುವೆಯಾದ ಬಳಿಕ ಹಣಕ್ಕಾಗಿ ಪತ್ನಿಯನ್ನು ಪೀಡಿಸಿ ತೊಂದರೆ ಕೊಡ್ತಿದ್ದ ಎಂದು ಹೇಳಲಾಗಿದೆ. ಮಂಗಳವಾರ  ತವರು ಮನೆಯಿಂದ ಹಣ ತೆಗೆದುಕೊಂಡು ಬರುವಂತೆ ಗಲಾಟೆ […]

ವರದಕ್ಷಿಣೆಗಾಗಿ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ

Sunday, October 11th, 2020
suraj Singh

ಬೆಂಗಳೂರು : 15 ಲಕ್ಷ ರು. ವೆಚ್ಚ ಮಾಡಿ ಮದುವೆ ಮಾಡಿದರೂ ಪದೇ ಪದೇ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊನೆಗೆ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಪತಿ ಸೇರಿದಂತೆ ನಾಲ್ವರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ಪತಿ ಸೂರಜ್‌ ಸಿಂಗ್‌ ಮತ್ತು ಆರೋಪಿಗೆ ಪ್ರಚೋದಿಸಿದ ಆತನ ತಂದೆ ಲೌನೇಶ್‌, ತಾಯಿ ಮತ್ತು ಮತ್ತೊಬ್ಬ ಮಹಿಳೆಯನ್ನು ಟಿ.ಸಿ.ಪಾಳ್ಯದ ನಿವಾಸಿದಿಂದ ಬಂಧಿಸಲಾಗಿದೆ. ಸಂತ್ರಸ್ತೆಯು ತೀವ್ರ ಆಘಾತಗೊಂಡು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀಡಾ ಅಂಗಡಿಯನ್ನಿಟ್ಟುಕೊಂಡಿದ್ದ  ಸೂರಜ್‌ ಸಿಂಗ್  ಕಳೆದ ಒಂದು ವರ್ಷದ […]

ಜಿರಳೆ ಸಾಯಿಸಲು ಬಳಸುವ ವಿಷಕಾರಿ ಪದಾರ್ಥ ತಿನ್ನಿಸಿ ಕೊಲೆ ಪ್ರಯತ್ನ

Sunday, May 31st, 2020
money

ಹುಬ್ಬಳ್ಳಿ: ವರದಕ್ಷಿಣೆ ಪಿಡುಗಿಗೆ ನೂರಾರು ದಾರಿ ಕಂಡುಕೊಳ್ಳುವ ದುರುಳರು ಈಗ ಜಿರಳೆ ಸಾಯಿಸುವ ಲಕ್ಷಣ ರೇಖೆ ಎಂಬ ವಿಷಕಾರಿ ಪದಾರ್ಥವನ್ನು ಮಹಿಳೆಯೋರ್ವರಿಗೆ ತಿನ್ನಿಸಿ ಸಾಯಿಸಲು ಪ್ರಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ. ಹುಬ್ಬಳ್ಳಿ ಅಕ್ಷಯ ಪಾರ್ಕ್‌ ಬಳಿಯ ಪ್ರಿಯದರ್ಶಿನಿ ಕಾಲನಿಯ ಚವ್ಹಾಣ ಪ್ಲಾಟ್‌ನ ನೇಹಾ ನಾರಾಯಣ ಶಿರಾಳಕರ (35) ಈ ಕುರಿತು ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನನ್ನ ಪತಿ ಹಾಗೂ ಆತನ ಕುಟುಂಬದವರು ವರದಕ್ಷಿಣೆ ತರುವಂತೆ ಪದೇ ಪದೇ ಪೀಡಿಸುತ್ತ ಕಿರುಕುಳ ನೀಡುತ್ತಿದ್ದಾರೆ. 10 ವರ್ಷಗಳ […]

ವರದಕ್ಷಿಣೆ ಕಿರುಕುಳ, ಪತ್ನಿ ಕೊಲೆ… ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ!

Wednesday, December 20th, 2017
dowry-case

ಮಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಕೊಲೆ ಮಾಡಿದ ಆರೋಪದಲ್ಲಿ ಬಂಧನವಾಗಿದ್ದ ಕನ್ಯಾನ ಕಾಂಚಾರು ನಿವಾಸಿ ದೇವಿಪ್ರಸಾದ್ (43) ಎಂಬಾತನಿಗೆ ಮಂಗಳೂರು ಆರನೇ ಹೆಚ್ಚುವರಿ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸದ ನಿವಾಸಿ ಸವಿತಾ ಎಂಬುವರನ್ನು ದೇವಿಪ್ರಸಾದ್ 2013ರಲ್ಲಿ ಮದುವೆಯಾಗಿದ್ದ. ಬಳಿಕ ವರದಕ್ಷಿಣೆಗಾಗಿ ವಿಪರೀತ ಪೀಡಿಸುತ್ತಿದ್ದ. ಅಲ್ಲದೆ, ಸವಿತಾಳ ಮೇಲೆ ಹಲ್ಲೆ ಮಾಡುತ್ತಿದ್ದ. 2014ರಲ್ಲಿ ದೇವಿಪ್ರಸಾದ್‌ ಪತ್ನಿಗೆ ನೇಣು ಹಾಕಿ ಕೊಲೆ […]

ಮದುವೆಯಾದ ಮಾತ್ರಕ್ಕೆ ಹೆಣ್ಣಿಗೆ ಭದ್ರತೆಯಿಲ್ಲ : ಮಧು ಭೂಷಣ್

Thursday, March 3rd, 2011
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು: ಮಹಿಳಾ ಸಂಘಗಳ ಜಾಲ, ಮಂಗಳೂರು ಇದರ ಆಶ್ರಯದಲ್ಲಿ ಇಂದು 101ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.. ಇದರ ಅಂಗವಾಗಿ ಇಂದು ಬೆಳಿಗ್ಗೆ 9.30 ಕ್ಕೆ ಜ್ಯೋತಿ ಸರ್ಕಲ್ ನಲ್ಲಿ ಜಾಥಾವನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ಮೀನಾ ಕೊರಗ, ವಾಮಂಜೂರು, ಮಂಗಳೂರು, ಸ್ವಚ್ಛತಾ ಕಾರ್ಮಿಕರು, ಶ್ರೀಮತಿ ವಿಜಯಲಕ್ಷ್ಮೀ ಪೂಜಾರ್ತಿ, ಶ್ರಮಿಕ ರೈತ ಮಹಿಳೆ, ನೀರುಮಾರ್ಗ, ಡಾ| ರತಿ ರಾವ್, ಸಮತಾ ವೇದಿಕೆ, ಮೈಸೂರು, ಶ್ರೀಮತಿ ಮರಿಯಮ್ಮ ಥಾಮಸ್, ಕಾರ್ಪೋರೇಟರ್ ಮಂಗಳೂರು, ಶ್ರೀಮತಿ ಶಹನಾಜ್ ಎಂ, ಸಂಪಾದಕರು, […]