ನಾನು ಗೆಲ್ಲುವಲ್ಲಿ ವಸಂತ ಬಂಗೇರರ ಋಣ ಇದೆ : ಹರೀಶ್‌ ಪೂಂಜ

Monday, May 16th, 2022
Harish Poonja

ಬೆಳ್ತಂಗಡಿ: ಇಂದು ಕಾಂಗ್ರೆಸ್‌ನಲ್ಲಿ ಪ್ರತಿಭಟನೆಗೆ ಜನ ಸೇರುತ್ತಿಲ್ಲ. ಅದಕ್ಕಾಗಿ ಕಮ್ಯುನಿಷ್ಟ್ ಪಕ್ಷದಡಿ ಪ್ರತಿಭಟನೆಗೆ ಇಳಿಯುವ ಸ್ಥಿತಿ ಬಂದಿದೆ. ಮಾಜಿ ಶಾಸಕ ಕೆ.ವಸಂತ ಬಂಗೇರರು ಸಿಕ್ಕಸಿಕ್ಕಲ್ಲಿ ನಿಮ್ಮ ಬಗ್ಗೆ ಮಾತಾಡುತ್ತಾರೆ. ನೀವು ಯಾಕೆ ಉತ್ತರ ಕೊಡುತ್ತಿಲ್ಲ ಎಂಬ ಪ್ರಶ್ನೆ ನನಗೆ ಬರುತ್ತದೆ. ಅದಕ್ಕೆ ಕಾರಣ ನಾನು ಈ ಕ್ಷೇತ್ರದ ಶಾಸಕನಾಗುವಲ್ಲಿ ಒಂದು ಪಾಲು ಬಂಗೇರರ ಋಣವಿದೆ. ಒಂದು ಕಾಲದಲ್ಲಿ ಬೆಳ್ತಂಗಡಿಯಲ್ಲಿ ಕಮಲ ಚಿಹ್ನೆಯನ್ನು ಅರಳಿಸಿ ಬಿಜೆಪಿಗಾಗಿ ಶ್ರಮಿಸಿದವರು. ಹಾಗಾಗಿ ನಮ್ಮ ಇಬ್ಬರ ಸೇವೆಯೂ ಈ ಬೆಳ್ತಂಗಡಿ ಜನತೆಗಾಗಿ ಅಗಿದ್ದರಿಂದ […]

ಬಿಜೆಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ -ವಸಂತ ಬಂಗೇರ ಆರೋಪ

Saturday, December 7th, 2019
vasanth-bangera

ಬೆಳ್ತಂಗಡಿ :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದ್ದ ಕಾಮಗಾರಿಯನ್ನು ಮತ್ತೆ ಉದ್ಘಾಟಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದು, ಕಾಮಗಾರಿಯ ಲಾಭಪಡೆಯಲು ಮುಂದಾಗಿದ್ದಾರೆ . ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಭಾಗವಹಿಸುತ್ತಿರುವುದು ವಿಷಾದನೀಯ  ಎಂದು ಮಾಜಿ ಶಾಸಕ ವಸಂತ ಬಂಗೇರ ಆರೋಪಿಸಿದ್ದಾರೆ. ಪಟ್ಟಣ ಪಂಚಾಯತಿಗೆ ಬಂದಿರುವ ಹತ್ತು ಕೋಟಿ ಅನುದಾನದ ಕಾಮಗಾರಿಗಳಲ್ಲಿ ಕೆಲ ಕಾಮಗಾರಿಗಳ ಶಿಲಾನ್ಯಾಸವನ್ನು ಈ ಹಿಂದೆ ಯೇ ನಡೆದಿತ್ತು ಎಂದು ಅವರು ಹೇಳಿದ್ದಾರೆ. ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ಹಿಂದೆ ಕಾಂಗ್ರೆಸ್ ಸರಕಾರದ […]

ಜನಮನ್ನಣೆ ಪಡೆದ ಜನನಾಯಕ ವಸಂತ ಬಂಗೇರ

Friday, May 11th, 2018
vasanth-bangera

ಮಂಗಳೂರು: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬೆಳ್ತಂಗಡಿಯ ವಸಂತ ಬಂಗೇರ ಇನ್ನು ಚುನಾವಣೆಯಲ್ಲಿ ಸ್ಪರ್ಧೆಮಾಡದಿರಲು ನಿರ್ಧರಿಸಿದ್ದರು. ಆದರೆ ಕಾರ್ಯಕರ್ತರ ಒತ್ತಡ ಮತ್ತು ಸ್ವತಃ ಮುಖ್ಯಮಂತ್ರಿಸಿದ್ದರಾಮಯ್ಯ ಅವರೇ ಸ್ಪರ್ಧಿಸುವಂತೆ ಒತ್ತಾಯಿಸಿದ ಮೇರೆಗೆ ನಿರ್ಧಾರ ಬದಲಾಯಿಸಿದ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಸಂತ ಬಂಗೇರ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ. ರಾಜಕಾರಣದಲ್ಲಿ ಇಂಥ ವ್ಯಕ್ತಿಗಳೂ ಅಪರೂಪ, ಈ ರೀತಿ ವರ್ಚಸ್ಸು ಉಳಿಸಿಕೊಂಡವರೂವಿರಳ. ಅಧಿಕಾರವೋ ವೈಯಕ್ತಿಕ ಪ್ರತಿಷ್ಠೆಯೋ ಮತ್ಯಾವ ಕಾರಣಕ್ಕೋ ಪಕ್ಷಾಂತರ ಮಾಡುತ್ತಾರೆ.ಅಂಥವರ ರಾಜಕೀಯ ಭವಿಷ್ಯ ಆರಕ್ಕೆ ಏರಿದ್ದೂ ಇದೆ. ಮೂರಕ್ಕೆ […]

ಮತಯಾಚಿಸಲು ಮನೆ ಬಾಗಿಲಿಗೆ ಬಂದ ಶಾಸಕರಿಗೆಗೆ ತರಾಟೆ ತೆಗೆದುಕೊಂಡ ಬೆಳ್ತಂಗಡಿ ಕ್ಷೇತ್ರದ ಜನ..!

Friday, May 4th, 2018
belthangady

ಬೆಳ್ತಂಗಡಿ: ಮತಯಾಚಿಸಲು ಮನೆ ಬಾಗಿಲಿಗೆ ಬಂದ ಶಾಸಕರಿಗೆಗೆ ಬೆಳ್ತಂಗಡಿ ಕ್ಷೇತ್ರದ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ನಡ ಗ್ರಾಮದ ಸೂರ್ಯ ದೇವಸ್ಥಾನದ ಬಳಿ ಶಾಸಕ ವಸಂತ ಬಂಗೇರ ಚುನಾವಣಾ ಪ್ರಚಾರಕ್ಕಾಗಿ ಬಂದಾಗ ಗ್ರಾಮಸ್ಥರು ಅಡ್ಡಹಾಕಿದ್ದರು. 4 ವರ್ಷಗಳಿಂದ ಇಲ್ಲಿನ ರಸ್ತೆ ದುರಸ್ತಿಗಾಗಿ ಮನವಿ ಮಾಡುತ್ತಿದ್ದೇವೆ. ನೀವು ಉದ್ದೇಶಪೂರ್ವಕವಾಗಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದೀರಿ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ಮತ್ತು ಸ್ಥಳೀಯ […]

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರ ಮೇಲೆ ವಾಮಾಚಾರ, ವೋಟಿಗಾಗಿ ದುಡ್ಡಿನ ಕಂತೆ ಎಸೆಯುತ್ತಾರೆ

Tuesday, May 1st, 2018
Vasanth Bangera

ಬೆಳ್ತಂಗಡಿ : ಈ ಬಾರಿ ಕಾಂಗ್ರೆಸ್ಸ್‌ನ್ನು ಹೇಗಾದರು ಮಾಡಿ ಸೋಲಿಸ ಬೇಕು, ಅದಕ್ಕಾಗಿ ನಮ್ಮ ಕಾರ್ಯಕರ್ತರ ಮೇಲೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗೆಳೆಯರು ವಾಮಾಚಾರ ಮಾಡುತ್ತಾರೆ ಎಂದು ವಸಂತ ಬಂಗೇರ ಆರೋಪಿಸಿದ್ದಾರೆ. ಹರೀಶ್ ಪೂಂಜಾ ಗೆಳೆಯ ಪಿಡಬ್ಲೂಡಿ ಕಾಂಟ್ಟ್ರಾಕ್ಟರ್ ರಾಜೇಶ್ ಶೆಟ್ಟಿ ಮದ್ದಡ್ಕ ಎಂಬವರು ಕಾಂಗ್ರೆಸ್ಸ್ ಕಾರ್ಯಕರ್ತರಾದ ನಗರ ಪಂಚಾಯತ್ ಅಧ್ಯಕ್ಷ ನಾರಾಯಣ ರಾವ್ ಮತ್ತು ಗೇರು ಕಟ್ಟೆ ಕರೀಂ ಅವರ ಮನೆಯ ಮುಂದೆ ವಾಮಾಚಾರ ಮಾಡಿದ್ದಾರೆ. ಗೇರು ಕಟ್ಟೆ ಕರೀಂ ಅವರ ಮನೆಯ ಮುಂದೆ […]

ಬೆಳ್ತಂಗಡಿ ಎಂಎಲ್ಎ ಅಭ್ಯರ್ಥಿಯಾಗಿ ವಸಂತ ಬಂಗೇರ ಮೆಗಾ ಮೀಡಿಯಾ ನ್ಯೂಸ್ ನೊಂದಿಗೆ ಮಾತುಕತೆ

Monday, April 23rd, 2018

ಕನ್ನಡವನ್ನೇ ಬಳಸಬೇಕು, ಕನ್ನಡವನ್ನು ಬೆಳಸಬೇಕು ಎಂಬುದು  ಸರಕಾರದ ಆಶಯ : ವಸಂತ ಬಂಗೇರ

Saturday, March 17th, 2018
kannada-kalarava

ಬೆಳ್ತಂಗಡಿ   :  ಕನ್ನಡವನ್ನೇ ಬಳಸಬೇಕು, ಕನ್ನಡದಲ್ಲೇ ಮಾತನಾಡಬೇಕು, ಕನ್ನಡವನ್ನು ಬೆಳಸಬೇಕು ಎಂಬುದು ಕರ್ನಾಟಕ ಸರಕಾರದ ಆಶಯ. ಇಡೀ ಸರಕಾರವೇ ಕನ್ನಡದಲ್ಲಿ ನಡೆಯಬೇಕು ಎಂಬುದು ಸರಕಾರದ ಉದ್ದೇಶ ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು. ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಬೆಳ್ತಂಗಡಿಯ ತಣ್ಣೀರುಪಂತ ಗ್ರಾಮದ ಮನೆಯಂಗಳದಲ್ಲಿ  ಗುರುವಾರ ಮಧ್ಯಾಹ್ನ ಆಯೋಜಿಸಿದ್ದ ಮನೆಯಂಗಳದಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಮಾಜಿ ಪ್ರದಾನಿ ಎಚ್ ಡಿ ದೇವೇಗೌಡ ಕನ್ನಡಿಗರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ […]

5 ಬಾರಿಯ ಶಾಸಕ ವಸಂತ ಬಂಗೇರ ಸ್ಪರ್ಧೆಯ ನಿರ್ಧಾರವೇ ಹೈಲೈಟ್

Monday, February 5th, 2018
belthangadi

ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲು, ಹಸಿರು ಸಿರಿಯಿಂದ ಕಂಗೊಳಿಸುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುತ್ತದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ನ ವಸಂತ ಬಂಗೇರ ಶಾಸಕರಾಗಿದ್ದಾರೆ. 5 ಬಾರಿ ಬೆಳ್ತಂಗಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಸಂತ ಬಂಗೇರರು ಕಳೆದ 2 ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ. 2013 ನೇ ಸಾಲಿನ ಚುನಾವಣೆಯಲ್ಲಿ ವಸಂತ ಬಂಗೇರರು ಎದುರಾಳಿ ಬಿಜೆಪಿಯ ರಂಜನ್ ಜಿ. ಗೌಡ ರನ್ನು 15741 ಮತಗಳ ಅಂತರದಿಂದ ಸೋಲಿಸಿದ್ದರು. ವಸಂತ ಬಂಗೇರ ಕಳೆದ ಬಾರಿ […]

ನಕಲಿ ಎಂಡೋ ಸಂತ್ರಸ್ತ ಎಂದು ಹೇಳಿದ ವಸಂತ ಬಂಗೇರ ವಿರುದ್ಧ ದೂರು ನೀಡಲು ನಿರ್ಧಾರ

Wednesday, June 14th, 2017
Sridhar Gowda

ಮಂಗಳೂರು: ನನ್ನನ್ನು ನಕಲಿ ಎಂಡೋ ಸಂತ್ರಸ್ತ ಎಂದು ಹೇಳುವ ಮೂಲಕ ಶಾಸಕ ಅಪಮಾನ ಮಾಡಿದ್ದಾರೆ. ಸರ್ಕಾರದ ತಜ್ಞ ವೈದ್ಯರೇ ಅಧಿಕೃತವಾಗಿ ನನ್ನನ್ನು ಎಂಡೋ ಸಂತ್ರಸ್ತನೆಂದು ಘೋಷಿಸಿದ ಮೇಲೂ ಶಾಸಕರು ಆಧಾರ ರಹಿತವಾಗಿ ಆರೋಪ ಮಾಡಿದ್ದಾರೆ. ಇದರಿಂದಾಗಿ  ನೊಂದಿದ್ದು, ಕಾನೂನು ರೀತಿಯ ಹೋರಾಟಕ್ಕೂ ನಿರ್ಧರಿಸಿದ್ದೇನೆ. ಅಲ್ಲದೆ ಕಾನತ್ತೂರ್ ಕ್ಷೇತ್ರಕ್ಕೂ ಸತ್ಯಪ್ರಮಾಣಕ್ಕಾಗಿ ಆಹ್ವಾನಿಸುತ್ತಿದ್ದೇನೆ ಎಂದು ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹೇಳಿದರು. ವಿಧಾನಸಭೆಯಲ್ಲಿ ಎಂಡೋ ಸಂತ್ರಸ್ತರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ವಸಂತ […]

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ನೇಮಕ

Thursday, November 3rd, 2016
Vasanth Bangera

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ನೇಮಕವಾಗಿದ್ದಾರೆ. ಐದು ಬಾರಿ ಗೆದ್ದ ವಸಂತ ಬಂಗೇರ ಅವರು ಈ ಬಾರಿ ಗೆದ್ದರೆ ಮಂತ್ರಿಯಾಗುವರು ಎಂಬ ನಂಬಿಕೆ ಜನರದ್ದಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಸಂದರ್ಭ ಬಂಗೇರರಿಗೆ ಕೈ ಕೊಟ್ಟಿದ್ದರು. ಮೊದಲ ಅವಧಿಯ ನಿಗಮಗಳ ಪಟ್ಟಿಯಲ್ಲೂ ಬಂಗೇರ ಅವರ ಹೆಸರು ಇರಲಿಲ್ಲ. ಈ ಬಾರಿ ಎರಡನೇ ಅವಧಿಯ ನಿಗಮಗಳ ಪಟ್ಟಿಯಲ್ಲಿ ಬಂಗೇರರಿಗೆ ಸಣ್ಣ ಕೈಗಾರಿಕಾ ನಿಗಮ ದೊರೆತಿದೆ. […]