ಬಜ್ಪೆ ವಿಮಾನ ನಿಲ್ದಾಣದಲ್ಲಿ 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

Thursday, December 17th, 2020
Tajudin

ಮಂಗಳೂರು :  ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾದ 4,35,200 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಲಾಗಿದೆ. ಕೇರಳದ ಚಿತ್ತಾರಿ ಬಾರಿಕ್ಕಾಡ್ ನಿವಾಸಿ ತಾಜುದ್ದೀನ್ ಬಂಧಿತ ಆರೋಪಿ. ಈತ ಗುರುವಾರ ಏರ್ ಇಂಡಿಯಾ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಸಂಜೆ 4:30ರ ವೇಳೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದು, ತಪಾಸಣೆ ವೇಳೆ ಯೂರೊ ಹಾಗು ಯುಎಇ ದಿರ್ಹಾಮ್ ಪತ್ತೆಯಾಗಿದೆ. ಧರಿಸಿದ್ದ ಒಳ ಬಟ್ಟೆಯ ಒಳಗಡೆ ಇಟ್ಟು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. […]

ದಾಖಲೆಗಳಿಲ್ಲದ ಸುಮಾರು 5,48,000 ರೂಪಾಯಿಯ ವಿದೇಶಿ ಕರೆನ್ಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ

Saturday, January 11th, 2020
foreign-currency

ಮಂಗಳೂರು : ದಾಖಲೆ ಇಲ್ಲದ ಸುಮಾರು 5,48,000 ರೂಪಾಯಿಯ ವಿದೇಶಿ ಕರೆನ್ಸಿಗಳನ್ನು ಹೊಂದಿದ್ದ ದುಬೈಗೆ ಸಂಚರಿಸುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಫ್‌ಎಸ್‌ಎಫ್ ಅಧಿಕಾರಿಗಳು ಶನಿವಾರ ಮುಂಜಾನೆ 6.30 ಗಂಟೆಗೆ ಪ್ರಯಾಣಿಕರ ಬ್ಯಾಗೇಜುಗಳ ತಪಾಸಣೆ ಮಾಡುತ್ತಿದ್ದ ವೇಳೆ ದುಬೈಗೆ ಸ್ಪಯ್ಸ್ ಜೆಟ್ ವಿಮಾನದ ಮೂಲಕ ತೆರಳಲಿದ್ದ ಪ್ರಯಾಣಿಕ ಶಾಹುಲ್ ಹಮೀದ್‌ನ ಕೈ ಚೀಲದಲ್ಲಿ ಅನುಮಾನಾಸ್ಪದ ಚಿತ್ರವನ್ನು ಗಮನಿಸಿದ್ದು ಪರಿಶೀಲನೆ ನಡೆಸಿ ವಿದೇಶಿ ಕರೆನ್ಸಿಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಯಾಣಿಕನಿಂದ ಯುಎಸ್ ಡಾಲರ್ […]

ಕಡಿಮೆ ದರಕ್ಕೆ ವಿದೇಶಿ ಕರೆನ್ಸಿ ವಿನಿಮಯ ಮಾಡುವುದಾಗಿ ನಂಬಿಸಿ ನಗದು ದೋಚುತ್ತಿದ್ದ ಆರೋಪಿಗಳ ಬಂಧನ

Monday, October 14th, 2019
bengaluru

ಬೆಂಗಳೂರು : ಕಡಿಮೆ ದರಕ್ಕೆ ವಿದೇಶಿ ಹಣವನ್ನು ವಿನಿಮಯ ಮಾಡಿಕೊಡುವುದಾಗಿ ನಂಬಿಸಿ ನಗದು ದೋಚುತ್ತಿದ್ದ ಮೂವರು ಅಂತಾರಾಜ್ಯ ವಂಚಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮೊಹಮದ್ ಶಕೀಲ್ ಶೇಕ್ (19) ದೆಹಲಿಯ ಶಾಫಿಯಾ ಬೇಗಂ (35) ಹಾಗೂ ಉತ್ತರ ಪ್ರದೇಶ ರಹೀಂ ಖುರೇಶ್ (24) ಮಹಮದ್ ದಿಲ್ವರ್ ಹುಸೇನ್(39) ಮೊಹಮದ್ ಶನಾವಾಜ್, ಮೊಹಮದ್ ಇಬ್ರಾಹಿಂ, ರಹೀಂ ಶೇಕ್ ಹಾಗೂ ಅನ್ವರ್ ಹುಸೇನ್ ಬಂಧಿತರು. ಅವರಿಂದ ಪೊಲೀಸರು 3.50 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿ […]

ವಿದೇಶಿ ಕರೆನ್ಸಿ ಸೇರಿದಂತೆ 8.50 ಲಕ್ಷ ರೂ. ನಗದು ವಶ: ನಾಲ್ವರ ಬಂಧನ

Wednesday, October 31st, 2018
currency

ಮೈಸೂರು: ನಾಲ್ವರು ದರೋಡೆಕೋರರನ್ನು ಬಂಧಿಸಿ, ಅವರಿಂದ ವಿದೇಶಿ ಕರೆನ್ಸಿ ಸೇರಿದಂತೆ 8.50 ಲಕ್ಷ ರೂ. ನಗದನ್ನು ವಿಜಯನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ನಗರ ತಾಲೂಕು ಮಿರ್ಲೆ ಗ್ರಾಮದ ಶ್ರೀಧರ್ (28), ಕೂರ್ಗಳ್ಳಿ ಗ್ರಾಮದ ನಟೇಶ್ (24), ಬೆಂಗಳೂರಿನ ವಿನಾಯಕ ಲೇಔಟ್‍ನ ಪ್ರಸಾದ್ (24), ಬೆಂಗಳೂರಿನ ಅಮೃತಹಳ್ಳಿಯ ಭರತ್‍ಕುಮಾರ್ (20) ಬಂಧಿತ ಆರೋಪಿಗಳು. ಶಿವರಾಂಪೇಟೆ ರಸ್ತೆಯಲ್ಲಿರುವ ಫಾರಿನ್ ಕರೆನ್ಸಿ ಎಕ್ಸ್ಚೇಂಜ್ ಆಫೀಸ್ ಮಾಲೀಕ ಅರುಣ್ ಕುಮಾರ್ ಎಂಬುವರು ಸೆ.22ರಂದು ರಾತ್ರಿ ತಮ್ಮ ಕಚೇರಿಗೆ ಬೀಗ ಹಾಕಿಕೊಂಡು ವಿಜಯನಗರದಲ್ಲಿರುವ ತಮ್ಮ […]

20 ಲಕ್ಷ ಮೌಲ್ಯದ ವಿವಿಧ ದೇಶದ ಕರೆನ್ಸಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಡಿ‌ಆರ್‌ಐ ಪೊಲೀಸರು

Thursday, August 31st, 2017
currency

ಮಂಗಳೂರು : ಸುಮಾರು 20 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯೊಂದಿಗೆ ದುಬೈಗೆ ಹೊರಟಿದ್ದ ವ್ಯಕ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಡಿ‌ಆರ್‌ಐ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಬ್ದುಲ್ ಬಶೀರ್ (40) ಎಂಬಾತ ರಾತ್ರಿ 8 ಗಂಟೆಗೆ ಹೊರಡುವ ಏರ್ ಇಂಡಿಯಾ ವಿಮಾನದಲ್ಲಿ ದುಬೈಗೆ ಹೊರಟಿದ್ದ ವ್ಯಕ್ತಿ ಈ ಹಣವನ್ನು ಲಗೇಜಿನಲ್ಲಿ ಅನಧಿಕೃತವಾಗಿ ಅಡಗಿಸಿಟ್ಟಿದ್ದ. ಲಗೇಜ್ ಚೆಕ್ ಮಾಡುವ ಸಂದರ್ಭದಲ್ಲಿ ಈತ ವಿವಿಧ ದೇಶದ ಕರೆನ್ಸಿಯೊಂದಿಗೆ ಪ್ರಯಾಣ ಬೆಳೆಸುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಡೈರೆಕ್ಟರೇಟ್ ರೆವೆನ್ಯೂ ಇಂಟಲಿಜೆನ್ಸ್ […]

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿಗಳನ್ನು ಸಾಗಿಸುತ್ತಿದ್ದ ಓರ್ವನ ಬಂಧನ

Friday, January 6th, 2017
foreign currency

ಮಂಗಳೂರು: ವಿದೇಶಿ ಕರೆನ್ಸಿಗಳನ್ನು ಸಾಗಿಸುತ್ತಿದ್ದ ಓರ್ವನನ್ನ ಡಿಆರ್‌ಐ (ಡೈರಕ್ಟರೇಟ್ ರೆವೆನ್ಯೂ ಇಂಟೆಲಿಜೆನ್ಸ್) ಅಧಿಕಾರಿಗಳು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತನನ್ನ ಭಟ್ಕಳದ ಮೊಹಮ್ಮದ್ ಫಾರೂಕ್ ಅರ್ಮರ್ (51) ಎಂದು ಗುರುತಿಸಲಾಗಿದೆ. ಈ ವೇಳೆ ಆತನಲ್ಲಿದ್ದ 25,07,162ರೂ. ಮೌಲ್ಯದ ವಿದೇಶಿ ಕರೆನ್ಸಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಯುಎಸ್ ಡಾಲರ್, ಬ್ರಿಟಿಷ್ ಪೌಂಡ್, ಯೂರೋ, ಯುಎಇ ದಿರಾಮ್, ಸೌದಿ ರಿಯಾಲ್ ಹಾಗೂ ಖತಾರ್ ರಿಯಾಲ್‌ಗಳನ್ನು ಸಿಹಿ ತಿಂಡಿಗಳ ಪೊಟ್ಟಣದಲ್ಲಿ ಜೋಡಿಸಿಟ್ಟಿದ್ದ ಕಟ್ಟನ್ನು ತಪಾಸಣೆಗೊಳಪಡಿಸಿದಾಗ ಫಾರೂಕ್ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಫಾರೂಕ್ […]