ಎಂಆರ್​ಪಿಎಲ್ ವಿಸ್ತರಣೆ ತುಂಬಾ ಗಾಬರಿಗೊಳಗಾಗಬಹುದಾದ ಸಂಗತಿ: ಡಾ.ಸತಿನಾಥ್ ಸಾರಂಗಿ

Saturday, December 22nd, 2018
MRPL-2

ಮಂಗಳೂರು: ಎಂಆರ್ಪಿಎಲ್ ವಿಸ್ತರಣೆ ಸಣ್ಣ ಸಂಗತಿಯಲ್ಲ. ತುಂಬಾ ಗಾಬರಿಗೊಳಗಾಗಬಹುದಾದ ಸಂಗತಿ ಎಂದು ಭೋಪಾಲ ಅನಿಲ ದುರಂತ ಸಂತ್ರಸ್ತರ ಪರ ಹೋರಾಟಗಾರ ಡಾ.ಸತಿನಾಥ್ ಸಾರಂಗಿ ಹೇಳಿದರು. ಕರಾವಳಿ ಕರ್ನಾಟಕ ಅಭಿವೃದ್ಧಿ ವೇದಿಕೆಯ ವತಿಯಿಂದ ದಕ್ಷಿಣ ಕನ್ನಡ‌ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ, ಎಂಆರ್ಪಿಎಲ್ ವಿಸ್ತರಣೆ ವಿರೋಧಿಸಿ, ‘ತುಳುನಾಡು ಉಳಿಸಿ’ ಜನಾಗ್ರಹ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಂಆರ್ಪಿಎಲ್ ಸುತ್ತಮುತ್ತಲಿನ ಪರಿಸರದಲ್ಲಿ ನಾನು ಈಗಾಗಲೇ ಸುತ್ತಾಡಿದ್ದು, ಅಲ್ಲಿಯ ಪರಿಸರ ನೋಡಿ ನನಗೆ ಆನಂದವಾಯಿತು. ಆದರೆ ಇಷ್ಟು ಒಳ್ಳೆಯ ಭೂಪ್ರದೇಶಗಳು ಎಂಆರ್ಪಿಎಲ್ನಿಂದಾಗಿ […]

ಎಂಆರ್​ಪಿಎಲ್​ನ ವಿಸ್ತರಣಾ ಯೋಜನೆ ತಡೆಗೆ ಆಗ್ರಹಿಸಿ ಪ್ರತಿಭಟನೆ..!

Tuesday, November 6th, 2018
protest

ಮಂಗಳೂರು: ನಗರದ ಹೊರವಲಯದಲ್ಲಿರುವ ಎಂಆರ್ಪಿಎಲ್ನ ವಿಸ್ತರಣಾ ಯೋಜನೆಯನ್ನು ತಡೆಹಿಡಿಯಲು ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ವಿವಿಧ ಸಂಘಟನೆಗಳಿಂದ ಹಾಗೂ ಭೂಮಾಲೀಕರಿಂದ ಪ್ರತಿಭಟನೆ‌ ನಡೆಯಿತು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಹೋರಾಟ ಸಮಿತಿಯ ಸದಸ್ಯ ವಿಲಿಯಮ್ ಮಾತನಾಡಿ, ಎಂಆರ್ ಪಿಲ್ ಕಂಪನಿಯ ವಿಸ್ತರಣಾ ಯೋಜನೆಯ ವಿರುದ್ಧ ಹೋರಾಟವನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ಹಾಗೂ ಅಧಿಕಾರಿಗಳಿಗೆ ಮುಟ್ಟುವ ಹಾಗೆ ಕೈಗೊಂಡಿದ್ದೇವೆ. ಈ ಹೋರಾಟ ಇವತ್ತು ಮಾತ್ರವಲ್ಲ, ಮುಂದೆ ಕೂಡಾ ಮುಂದುವರಿಯುತ್ತದೆ. ಹಿಂದೆ ನಮ್ಮ ಹೋರಾಟ ಏನಿದ್ದರೂ ನಮ್ಮ ಗದ್ದೆಗಳಲ್ಲಿ […]

ವಿಮಾನ ಸಿಬಂದಿ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣ

Thursday, February 15th, 2018
airoplane

ಮಂಗಳೂರು: ಅದ್ಯಪಾಡಿಯಲ್ಲಿ ಫೆ. 9ರಂದು ರಾತ್ರಿ ಇಂಡಿಗೊ ಏರ್‌ಲೈನ್ಸ್‌ ನ ಓರ್ವ ಮಹಿಳಾ ಮತ್ತು ಪುರುಷ ಸಿಬಂದಿ ಮೇಲೆ ನಡೆದ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬುಧವಾರ ನಗರದ ಬಾವುಟಗುಡ್ಡೆಯ ಬಸ್‌ ತಂಗುದಾಣದಲ್ಲಿ ಪ್ರತಿಭಟನೆ ನಡೆಸಿದರು. ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್‌, ಸುಹಾನ್‌ ಆಳ್ವ, ವಿದ್ಯಾರ್ಥಿನಿ ನಾಯಕರಾದ ಸಮಂತ, ಚೆರಿ, ಸೌಜನ್ಯಾ ಹೆಗ್ಡೆ, ಆಶಿಕ್‌ ಅವರು ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಂಡಿಗೊ ಸಂಸ್ಥೆ ಕೆಲವು ಸಿಬಂದಿ ಕೂಡ ಭಾಗವಹಿಸಿದ್ದರು. ಮಂಗಳೂರು […]

ರೈತರ 850 ಎಕರೆ ಭೂಮಿ ಸ್ವಾಧೀನ ಮಾಡಲು ಹೊರಟ ಎಂಆರ್‌ಪಿಎಲ್ ವಿರುದ್ಧ ವಿದ್ಯಾ ದಿನಕರ್ ಮುಖ್ಯಮಂತ್ರಿಗೆ ದೂರು

Wednesday, June 7th, 2017
Divya

ಮಂಗಳೂರು : ಎಂಆರ್‌ಪಿಎಲ್ ವಿಸ್ತರಣೆಗಾಗಿ ರೈತರ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡುತ್ತಿದೆ, ಕೆಐಎಡಿಬಿಯು ಹಳೇ ಕಾನೂನನ್ನು ಬಳಕೆ ಮಾಡಿಕೊಂಡು ಭೂಸ್ವಾಧೀನ ಮಾಡಬಾರದು ಎಂದು ಮಂಗಳೂರು ವಿಶೇಷ ಆರ್ಥಿಕ ವಲಯ ವಿರೋಧಿ ಹೋರಾಟಗಾರ್ತಿ ವಿದ್ಯಾ ದಿನಕರ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ವಿದ್ಯಾ ದಿನಕರ್ ನೇತೃತ್ವದ ನಿಯೋಗ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ನೀಡಿದ ದೂರಿನಲ್ಲಿ  ಯುಪಿಎ ಸರಕಾರ 2013 ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ರಾಜ್ಯ ಸರಕಾರದ ಕೆಐಎಡಿಬಿ ಹಳೇ ಕಾನೂನಿನಂತೆಯೇ ಭೂಸ್ವಾಧೀನಕ್ಕೆ ನೋಟಿಸ್ ನೀಡಿದೆ,  ಹಳೇ […]