ವಿದ್ಯುತ್ ಬಿಲ್ ನಲ್ಲಿ ಅಕ್ರಮ ,ಮೂವರ ಅಮಾನತು ಸಚಿವ- ಸುನಿಲ್ ಕುಮಾರ್

Saturday, September 4th, 2021
Sunil Kumar V

ಬೆಂಗಳೂರು :  ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಮುಳಬಾಗಿಲು ಉಪವಿಭಾಗದ ಮೆಹಬೂಬ್ ಪಾಷ, ಕಿರಿಯ ಸಹಾಯಕ, ಗಾಯತ್ರಮ್ಮ ,ಕಿರಿಯ ಸಹಾಯಕಿ ಹಾಗೂ ಸುಜಾತಮ್ಮ, ಕಿರಿಯ ಸಹಾಯಕಿ , ಈ ಮೂವರು ಅಮಾನತಿ ಗೊಳಗಾದ ಸಿಬ್ಬಂದಿ ಯಾಗಿದ್ದಾರೆ. ಇವರು ಪ್ರತಿ ಮಾಹೆ ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆಯಲ್ಲಿ ಕೆಲವು ಬಿಲ್ಲುಗಳನ್ನು ಮಾರ್ಪಾಟು […]

ವಿದ್ಯುತ್ ಬಿಲ್ ಅಧಿಕ ಸಮಸ್ಯೆ: ಮೆಸ್ಕಾಂ ಜತೆ ಚರ್ಚೆ- ಉಸ್ತುವಾರಿ ಸಚಿವರು

Friday, May 29th, 2020
srinivas-poojary

ಮಂಗಳೂರು : ವಿದ್ಯುತ್ ಗ್ರಾಹಕರಿಗೆ ಅಧಿಕ ಬಿಲ್ ಬಂದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಂದಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿ, ಎರಡು ತಿಂಗಳ ಬಿಲ್‍ಗಳನ್ನು ಒಟ್ಟಿಗೆ ನೀಡಿದ್ದರೂ, ನಿಗದಿತ ಸರಾಸರಿ ದರಕ್ಕಿಂದ ಹೆಚ್ಚು ಮೊತ್ತದ ಬಿಲ್ ಮೆಸ್ಕಾಂ ನೀಡಿರುವುದರ ಬಗ್ಗೆ ಸಾರ್ವಜನಿಕರ ಅಸಮಾಧಾನ ತನ್ನ ಗಮನಕ್ಕೆ […]

ವಿದ್ಯುತ್ ಬಿಲ್ ಪಾವತಿಗೆ ಒತ್ತಡ ಬೇಡ: ಮೆಸ್ಕಾಂಗೆ ಸಚಿವರ ಸೂಚನೆ

Tuesday, May 12th, 2020
corona-meeting

ಮಂಗಳೂರು :  ಜಿಲ್ಲೆಯಲ್ಲಿ ವಿದ್ಯುತ್ ಬಿಲ್‍ಗಳ ಬಗ್ಗೆ ಜನರು ಹಲವು ದೂರುಗಳನ್ನು ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಮನೆ ಮತ್ತು ಸಣ್ಣ ಉದ್ಯಮಕ್ಕೆ ಕಡಿಮೆ ಸರಾಸರಿ ಇರುವ ತಿಂಗಳ ಬಿಲ್ ಆಧಾರದಲ್ಲಿ ಬಿಲ್ ನೀಡಬೇಕು . ಜೂನ್ ತಿಂಗಳಿನವರೆಗೂ ಕಡ್ಡಾಯವಾಗಿ ಬಿಲ್ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ಲಾಕ್ […]

ವಿದ್ಯುತ್ ಬಿಲ್ ವಿನಾಯಿತಿ ಅರ್ಜಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿ ಆಘಾತಕಾರಿ ತೀರ್ಪು

Sunday, April 12th, 2020
vasanth-achari

ಮಂಗಳೂರು :  ಲಾಕ್‌ ಡೌನ್ ಇರುವುದರಿಂದ ರಾಜ್ಯದಲ್ಲಿ ವಿದ್ಯುತ್ ಬಿಲ್ ಪಾವತಿಸುವುದನ್ನು ತಾತ್ಕಾಲಿಕವಾಗಿ ಮೂರು ತಿಂಗಳು ಮುಂದೂಡಲು ಸರಕಾರ ಮತ್ತು ವಿದ್ಯುತ್ ನಿಯಂತ್ರಣ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಅರ್ಜಿಯೊಂದನ್ನು ವಜಾಗೊಳಿಸಿರುವ ಹೈಕೋರ್ಟ್ ಅರ್ಜಿದಾರರಿಗೆ 50 ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಇದು ಅಘಾತಕಾರಿಯಾದ ತೀರ್ಪು ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ. ಅರ್ಜಿದಾರರು ವಿನಾಯಿತಿ ಏನೂ ಕೇಳಿಲ್ಲ. ಆದರೆ ತಾತ್ಕಾಲಿಕವಾಗಿ ಮೂರು ತಿಂಗಳು ಮುಂದೂಡಲು ನಿರ್ದೇಶನ ನೀಡಬೇಕೆಂದು […]

ಆನ್‍ಲೈನ್ / ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿ

Tuesday, April 7th, 2020
Mescom

ಮಂಗಳೂರು :  ವಿದ್ಯುತ್ ಗ್ರಾಹಕರೇ, ತಾವು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ತೊಂದರೆ ಇಲ್ಲದೆ ನಿರ್ವಹಿಸಲು, ಅಡಚಣೆ ರಹಿತ ವಿದ್ಯುತ್ ನೀಡಲು 24×7 ಮೆಸ್ಕಾಂ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು COVID-19 ಸೋಂಕು ಹರಡುವುದನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಕೈಗೊಂಡಿರುತ್ತವೆ. ಈ ಸಮಯದಲ್ಲಿ ತಾವು ಮನೆಯಲ್ಲಿ ಸುರಕ್ಷಿತವಾಗಿರಲು ಹಾಗು ಆರೋಗ್ಯವಂತರಾಗಿರಲು ಮೆಸ್ಕಾಂ ಬಯಸುತ್ತದೆ. ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿಗೆ (ಜೂನ್ 2020 ರವರೆಗೆ) ಬಿಲ್ ಪಾವತಿಸುವುದನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿರುತ್ತಾರೆ. ಆದರೆ ಈ […]