ಕರಾವಳಿ ಸಮಸ್ಯೆ: ಶೀಘ್ರ ಶಾಸಕರ ಸಭೆ

Friday, February 16th, 2018
udupi-kapu

ಕಾಪು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕಂದಾಯ ಇಲಾಖೆಗೆ ಸಂಬಂಧಪಟ್ಟು ಮಾಡಿರುವ ಘೋಷಣೆಗಳನ್ನು ಚುನಾವಣೆಗೆ ಮೊದಲೇ ಈಡೇರಿಸುವ ಜವಾಬ್ದಾರಿ ಸರಕಾರದ್ದಾಗಿದ್ದು ಅದಕ್ಕಾಗಿ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚೆಯನ್ನೂ ನಡೆಸ‌ಲಾಗಿದೆ. ಕರಾವಳಿ ಭಾಗದಲ್ಲಿಯೂ ಕಂದಾಯ ಇಲಾಖೆಗೆ ಸಂಬಂಧ ಪಟ್ಟು ಅತ್ಯವಶ್ಯಕವಾಗಿ ಬಗೆಹರಿಸಲೇಬೇಕಾದ ಹಲವು ಸಮಸ್ಯೆಗಳಿದ್ದು, ಆ ಕುರಿತಾಗಿ ಚರ್ಚಿಸಲು ಕರಾವಳಿ ಶಾಸಕರೊಂದಿಗೆ ಒಂದು ವಾರದೊಳಗೆ ವಿಶೇಷ ಸಭೆ ನಡೆಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಬುಧವಾರ ಕಾಪು ಬಂಗ್ಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ನೂತನ ಕಾಪು ತಾಲೂಕು ಉದ್ಘಾಟನೆ, ಅಧಿಕೃತ […]

ಚಂದ್ರಶೇಖರ ಸ್ವಾಮಿಯನ್ನು ನಂಬಿ ಶಾಸಕನಾಗುವ ಕನಸು ಕಾಣುತ್ತಿರುವ ದೇವಿಪ್ರಸಾದ!

Monday, September 14th, 2015
DeviPrasad

ಉಡುಪಿ : ಬೆಂಗಳೂರಿನ ವಾಸ್ತು ತಜ್ಙ, ಅಂತರಾಷ್ಟ್ರೀಯ ಜ್ಯೋತಿಷಿ ಮೂಲ್ಕಿಯ ಚಂದ್ರಶೇಖರ್ ಸ್ವಾಮೀಜಿಯ ಕೈ ಹಿಡಿದು ಶಾಸಕನಾಗುವ ಕನಸು ಕಾಣುತ್ತಿರುವ ಬೆಳಪು ದೇವಿಪ್ರಸಾದ್ ಶೆಟ್ಟಿಯ ನಡೆ ನಿಜಕ್ಕೂ ಫಲಪ್ರದವಾಗಿಯೇ ಬಿಡುತ್ತದೆ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಸಚಿವ ಅಭಯಚಂದ್ರ ಜೈನ್ ಚುನಾವಣೆಗೆ ಸ್ಪರ್ಧಿಸುವುದು ಸಂಶಯವಾಗಿರುವ ನಿಟ್ಟಿನಲ್ಲಿ ದೇವಿಪ್ರಸಾದ್ ಶೆಟ್ಟಿಯ ನಡೆ ಕುತೂಹಲಕಾರಿಯಾಗಿದೆ. ಚಂದ್ರಶೇಖರ್ ಸ್ವಾಮಿಜಿ, ಗುರೂಜಿ ಎಂದು ಹೀಗೆ ಕರೆಸಿಕೊಳ್ಳುತ್ತಾ ಬೆಂಗಳೂರಿನ ಅಷ್ಟೂ ರಾಜಕಾರಣಿಗಳ ಡಾರ್ಲಿಂಗ್ ಆಗಿರುವ ಚಂದ್ರಶೇಖರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ […]

ವಿಧಾನಸಭೆ ಚುನಾವಣೆಯಿಂದ ಸೊರಕೆ ಔಟ್

Tuesday, February 12th, 2013
Vinaykumar Sorake

ಮಂಗಳೂರು : ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಮತ್ತೊಮ್ಮೆ ಸಂಸದರಾಗುವ ಆಸೆ ಹೊತ್ತಿದ್ದಾರೆ. ವಿನಯ ಕುಮಾರ್ ಸೊರಕೆಯವರನ್ನು ವಿಧಾನ ಸಭೆಯ ಚುನಾವಣೆಯ ಅಭ್ಯರ್ಥಿಯಾಗಿಸುವ ಪ್ರಯತ್ನಗಳು ವಿಫಲವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಉದ್ದೇಶದಿಂದ ಕಾಂಗ್ರೆಸ್ ನ ಹಿರಿಯ ನಾಯಕರು ವಿಧಾನಸಭೆಗೆ ವಿನಯ ಕುಮಾರ್ ಸೊರಕೆ ಹೆಸರನ್ನು ತೇಲಿ ಬಿಟ್ಟಿದ್ದರು. ಪುತ್ತೂರು ಮೂಲದವರಾದ ಸೊರಕೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ ಎಂಬುದು ಒಂದು ಕಡೆ ಚರ್ಚೆಯಲ್ಲಿರುವಾಗಲೇ, ಸೊರಕೆಯ ಹೆಸರು ಬೆಳ್ತಂಗಡಿ […]

ಲೋಕಸಭೆ ಚುನಾವಣೆಯಲ್ಲಿ ಪೂಜಾರಿ ಎಂಟ್ರಿ !

Tuesday, December 11th, 2012
Janardhan Poojari & Vinaykumar Sorake

ಮಂಗಳೂರು :ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಸೋಲು ನಾಲ್ಕು ಬಾರಿ ಗೆಲುವು ದಾಖಲಿಸಿರುವ ಜನಾರ್ದನ ಪೂಜಾರಿ ಐದನೆಯ ದಾಖಲೆಗಾಗಿ ಕೊನೆಯ ಹೋರಾಟಕ್ಕೆ ಇಳಿದಿದ್ದಾರೆ. ತನ್ನನ್ನು ಬೆಂಬಲಿಸಿ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಕರೆ ಮಾಡುತ್ತಿದ್ದಾರೆ ಆಯ್ದ ಕೆಲವರೊಂದಿಗೆ ಆತ್ಮೀಯ ಸಭೆಯನ್ನು ನಡೆಸಿದ್ದಾರೆ. ಕಾರ್ಪೊರೇಟರ್ ಗಳಿಗೆ ತನ್ನನ್ನೇ ಬೆಂಬಲಿಸುವಂತೆ ಕೋರುವ ಆದೇಶವನ್ನೂ ನೀಡಿರುವುದು ಹೊಸ ಬೆಳವಣಿಗೆ. ತೀರಾ ಇತ್ತೀಚೆಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕಾರ್ಪೊರೇಟರ್ ಗಳ ಗುಪ್ತ ಸಭೆ ಕರೆದು ತನಗೆ ಬೆಂಬಲಿಸುವವರ ಪಡೆಯನ್ನು ಪೂಜಾರಿ ಖಾತ್ರಿ […]