ಯಾತ್ರೆಗೆ ಅಭ್ಯಂತರವಿಲ್ಲ: ಶಾಂತಿ ಕಾಪಾಡಲಿ

Monday, March 5th, 2018
kader-rally

ಮಂಗಳೂರು: ಬಿಜೆಪಿ ಹಮ್ಮಿಕೊಂಡಿರುವ ಜನ ಸುರಕ್ಷಾ ಯಾತ್ರೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಯಾತ್ರೆಯ ಹೆಸರಿನಲ್ಲಿ ಸಾಮರಸ್ಯ ಕೆಡಿಸುವುದು ಸರಿಯಲ್ಲ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದರು. ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯಾತ್ರೆಗಳು, ಸಮಾರಂಭಗಳು ಹೆಚ್ಚಾಗುತ್ತವೆ. ಇದೊಂದು ರೀತಿಯಲ್ಲಿ ದಸರಾ ಇದ್ದಂತೆ ಎಂದರು. ಬಿಜೆಪಿಯವರಿಗೆ ಹರೀಶ್‌ ಪೂಜಾರಿ, ವಿನಾಯಕ ಬಾಳಿಗ, ಬಶೀರ್‌ ನೆನಪಾಗುವುದಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಇವರು ಜೀವ ಕಳೆದುಕೊಂಡಿಲ್ಲವೇ? ಅದನ್ನು ಬಿಟ್ಟು ಕೇವಲ ಹಿಂದೂಗಳ ಹತ್ಯೆಯಾಗಿದೆ ಎಂದು […]

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಸಾವು

Monday, January 9th, 2017
jayanti-baliga

ಮಂಗಳೂರು: ಕಳೆದ ವರ್ಷ ಹತ್ಯೆಗೀಡಾಗಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಲಕ್ಷ್ಮೀ ಬಾಳಿಗ (82) ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2016 ರ ಮಾರ್ಚ್‌ನಲ್ಲಿ ವಿನಾಯಕ ಬಾಳಿಗ ಅವರ ಹತ್ಯೆಯಾಗಿತ್ತು. ಪುತ್ರನ ಹತ್ಯೆಯಾದ ನಂತರ ಖಿನ್ನತೆಗೆ ಒಳಗಾಗಿದ್ದ ಅವರು ಇಂದು ಮುಂಜಾನೆ ತೀವ್ರ ಅಸೌಖ್ಯದಿಂದ ಕುಸಿದು ಬಿದ್ದಿದ್ದರು. ಅವರನ್ನು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ನಿಧನರಾಗಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀ ಬಾಳಿಗ ಅವರ ಪಾರ್ಥಿವ […]

ಸರ್ಕಾರದ ಇಚ್ಛಾಶಕ್ತಿ ಕೊರತೆ, ಉಪ್ಪು ನೀರು ಸೇವನೆಯಿಂದ ಮುಕ್ತರಾಗದ ಕಾಸರಗೋಡಿನ ಜನತೆ

Monday, February 29th, 2016
Salt water

ಕಾಸರಗೋಡು: ನಗರ ಹಾಗೂ ಆಸುಪಸಿನ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಾವಿಕೆರೆ ಶಾಶ್ವತ ಅಣೆಕಟ್ಟು ಯೋಜನೆ ಮತ್ತೆ ಅತಂತ್ರ ಸ್ಥಿತಿಯತ್ತ ಸಾಗಿದೆ. ಗುತ್ತಿಗೆದಾರರು ಅಣೆಕಟ್ಟು ಕಾಮಗಾರಿಯನ್ನು ಅರ್ಧದಲ್ಲಿ ಕೈಬಿಟ್ಟು ತೆರಳಿರುವುದರಿಂದ ಈ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಮಗಾರಿಯ ರೀ ಟೆಂಡರ್ ನಡೆಸಿ ಯೋಜನೆ ಪೂರ್ತಿಗೊಳಿಸುವಂತೆ ನೀರಾವರಿ ಖಾತೆ ಸಚಿವ ಪಿ.ಜೆ ಜೋಸೆಫ್ ನೀಡಿರುವ ಭರವಸೆ ಒಂದಷ್ಟು ಭರವಸೆಯನ್ನು ಹುಟ್ಟಿಸಿದ್ದರೂ, ಈ ವರ್ಷವೂ ಕಾಮಗಾರಿ ಪೂರ್ತಿಗೊಳ್ಳುವುದು ಅನಿಶ್ಚಿತಾವಸ್ಥೆಯಲ್ಲಿದೆ. ಯೋಜನೆ ಜಾರಿಗೊಳ್ಳಲಿರುವ […]

ಪಯಸ್ವಿನಿ ಹೊಳೆ ತಡೆಗೋಡೆ ಕಾಮಗಾರಿ ಸ್ಥಗಿತ, ಕಾಸರಗೋಡಿನ ಜನತೆಗೆ ಉಪ್ಪು ನೀರು ಕುಡಿಸುವ ಜಿಲ್ಲಾಡಳಿತ

Wednesday, January 13th, 2016
Payashvini

ಕಾಸರಗೋಡು: ಜಿಲ್ಲಾಡಳಿತ ಈ ಬಾರಿಯೂ ನಗರದ ಜನತೆಗೆ ಉಪ್ಪು ನೀರು ಕುಡಿಸಲು ತಯಾರಿ ನಡೆಸುತ್ತಿದೆ. ಶಾಶ್ವತ ತಡೆಗೋಡೆ ಕಾಮಗಾರಿ ಸ್ಥಗಿತಗೊಂಡಿದ್ದು, ಪರಿಷ್ಕೃತ ಎಸ್ಟಿಮೇಟ್ ಕಳುಹಿಸಿ ಸರ್ಕಾರದ ಅನುಮೋದನೆ ಲಭಿಸಿದ್ದರೂ ಹಲವು ಕಾರಣಗಳಿಂದ ಯೋಜನೆ ಜಾರಿಯಾಗದೆ ಕಡತದಲ್ಲೇ ಉಳಿದಿದೆ. ನಗರದ ಜನತೆಗೆ ಕುಡಿಯುವ ಶುಧ್ಧ ನೀರು ಪೂರೈಕೆಯ ಗುರಿಯಿರಿಸಿರುವ ಜಿಲ್ಲಾಡಳಿತ ಬಾವಿಕ್ಕೆರೆಯ ಪಯಸ್ವಿನಿ ಹೊಳೆಗೆ ಅಡ್ಡ ಮರಳಚೀಲದ ತಾತ್ಕಾಲಿಕ ತಡೆಗೋಡೆಯ ನಿರ್ಮಾಣಕ್ಕೆ ಮುಂದಾಗಿದೆ. ಸಮುದ್ರದ ಉಪ್ಪುನೀರು ಸಿಹಿ ನೀರಿನೊಂದಿಗೆ ಸೇರ್ಪಡೆಗೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವರ್ಷ ಇಲ್ಲಿ ಹೊಳೆಗೆ […]