ಆಳ್ವಾಸ್‌ನ ವಿಭಾ, ವಿವೇಕಾನಂದದ ಶ್ರೀ ಕಾಂತ್‌ಗೆ `ಮಾಮ್ ಇನ್‌ಸ್ಪೈರ್ ಪ್ರಶಸ್ತಿ’ 

Friday, March 6th, 2020
alvas

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆ `ಮೀಡಿಯ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ'(ಮಾಮ್) ವತಿಯಿಂದ ನೀಡಲಾಗುವ 2018-19ನೇ ಸಾಲಿನ ಮಾಮ್ ಇನ್‌ಸ್ಪೈರ್ ಪ್ರಶಸ್ತಿಗೆ ಇಬ್ಬರು ಪ್ರತಿಭಾವಂತರು ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಿಭಾ ಡೋಂಗ್ರೆ (ಪ್ರಥಮ), ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್‌ನ ವಿದ್ಯಾರ್ಥಿನಿ ಚೇತನಾ ನಾಯಕ್ ಕೆ. (ದ್ವಿತೀಯ) ಆಯ್ಕೆಯಾಗಿದ್ದಾರೆ. ಪದವಿ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ್ ಪಿ. (ಪ್ರಥಮ), ಆಳ್ವಾಸ್ ಕಾಲೇಜಿನ ಸೋನಿಯ […]

ಮಾತೃಭಾಷೆಗಿಂತ ಶ್ರೇಷ್ಠ ಯಾವುದೂ ಇಲ್ಲ: ಪುತ್ತೂರಿನಲ್ಲಿ ಅಮಿತ್ ಷಾ

Tuesday, February 20th, 2018
puttur

ಮಂಗಳೂರು: ಮಾತೃಭಾಷೆಗಿಂತ ಶ್ರೇಷ್ಠ ಯಾವುದೂ ಇಲ್ಲ. ಯಾವುದೇ ಹುದ್ದೆಗೆ ಹೋದರೂ ಮಾತೃಭಾಷೆ ಮರೆಯಬೇಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಷಾ, ಪಕ್ಷವನ್ನು ಪಕ್ಕಕ್ಕಿಟ್ಟು ಮಾತನಾಡುತ್ತೇನೆ. ಸ್ವಾತಂತ್ರ್ಯ ಹೋರಾಟ ಸಂದರ್ಭ ಪಕ್ಷ, ಜಾತಿ ಇರಲಿಲ್ಲ. ಸ್ವರಾಜ್ಯದ ಚಿಂತನೆ ಎಲ್ಲರ ಮನದಲ್ಲಿತ್ತು ಎಂದರು. ಈಗ ವೇದಿಕೆಯಲ್ಲಿ ಐವತ್ತು ದಾಟಿದವರು ಇದ್ದೇವೆ. ಕೆಲವೇ ವರ್ಷದಲ್ಲಿ ಯುವಕರು ಈ ವೇದಿಕೆಯಲ್ಲಿ ಇರಬೇಕು. ಭಾರತದ ಭವಿಷ್ಯದ ಬಾಗಿಲು ಮುಚ್ಚಿತ್ತು. ಭ್ರಷ್ಟಾಚಾರ ಭಾರತ […]

ಮೊದಲು ಕನ್ನಡದಲ್ಲಿ ಸರಿಯಾಗಿ ಬರೆಯುವ ಯೋಗ್ಯತೆಯನ್ನು ಪಡೆಯಬೇಕು: ಅನಂತ್‌‌ಕುಮಾರ್ ಹೆಗಡೆ

Monday, February 19th, 2018
ananth-kumar-hegde

ಮಂಗಳೂರು: ಕನ್ನಡದ ಪರವಾಗಿ ಹೋರಾಟ ಮಾಡುವ ಮೊದಲು ಕನ್ನಡದಲ್ಲಿ ಸರಿಯಾಗಿ ಬರೆಯುವ ಯೋಗ್ಯತೆಯನ್ನು ಪಡೆಯಬೇಕು ಎಂದು ಕೇಂದ್ರ ಸಚಿವ ಅನಂತ್‌‌ಕುಮಾರ್ ಹೆಗಡೆ ಹೇಳಿದ್ದಾರೆ. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌‌ನಲ್ಲಿ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂಗ್ಲೀಷ್ ಹಾವಳಿ ಹೆಚ್ಚುತ್ತಿದೆ ಎನ್ನುವ ಹೋರಾಟಗಳು ನಿರಂತರವಾಗಿ ನಡೆಯುತ್ತಿದೆ. ಆದರೆ, ಹೀಗೆ ಹೋರಾಟ ಮಾಡುವ, ಒದರುವ ನಾವೇ ಸರಿಯಾಗಿ ಕನ್ನಡ ಬರೆಯುವ ಯೋಗ್ಯತೆಯನ್ನು ಕಳೆದುಕೊಂಡಿದ್ದೇವೆ. ಇಂದು ಕನ್ನಡವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುವ ಬದಲು ಇಂಗ್ಲಿಷ್‌‌ನ್ನು ಕನ್ನಡಕ್ಕೆ ತರ್ಜುಮೆ ಮಾಡುವಂತಹ […]

ವಿವೇಕಾನಂದರ ಮೂಲಕ ಜಗತ್ತಿಗೆ ಭಾರತದ ನೈಜ ಶ್ರೀಮಂತಿಕೆಯ ಧರ್ಶನವಾಗಿತ್ತು : ಯುಡಿಯೂರಪ್ಪ

Tuesday, January 12th, 2016
Vivekananda education trust

ಕಾಸರಗೋಡು: ರಾಷ್ಟ್ರದೊಳಗೆ ಗೊಂದಲ,ಅಂತರಾಷ್ಟ್ರೀಯವಾಗಿ ಭಾರತದ ಬಗ್ಗೆ ಅನಾದಾರಗಳು ನೆಲೆಯಾಗಿದ್ದ ಕಾಲದಲ್ಲೆಲ್ಲ ಇಲ್ಲಿಯ ಮಹತ್ವವನ್ನು ಜಗತ್ತಿಗೆ ಸಾರಲು ಮಹಾನ್ ಸಂತರುಗಳು ಅವತರಿಸಿ ಬಂದ ಪುಣ್ಯ ಭೂಮಿ ನಮ್ಮದು. ಹಿಂದೆ ಇಂತಹ ಸಂದರ್ಭದಲ್ಲೊಂದು ಸ್ವಾಮಿ ವಿವೇಕಾನಂದರ ಆದರ್ಶ, ಜಾಗೃತಿ ಕಾರ್ಯಗಳ ಮೂಲಕ ಜಗತ್ತಿಗೆ ಭಾರತದ ನೈಜ ಶ್ರೀಮಂತಿಕೆಯ ಧರ್ಶನವಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಮತ್ತೆ ಆ ಪ್ರಯತ್ನಗಳಾಗುತ್ತಿದೆಯೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್.ಯುಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿವೇಕಾನಂದ ಎಜ್ಯುಕೇಶನಲ್ ಹಾಗೂ […]

ಗಡ್ಗರಿ ಹೇಳಿಕೆ ವಿರೋಧಿಸಿ ಎಸ್.ಎಫ್.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ

Wednesday, November 7th, 2012
SFI Protest

ಮಂಗಳೂರು :ಎಸ್.ಎಫ್.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಿನ್ನೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸ್ವಾಮಿ ವಿವೇಕಾನಂದ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ ಬುದ್ದಿಮತ್ತೆ ಒಂದೇ ಎಂಬ ಹೇಳಿಕೆಯ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ. ರಾಜ್ಯ ಸಹ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಭ್ರಷ್ಟಾಚಾರದಲ್ಲಿ ಸಿಲುಕಿರುವ ನಿತಿನ್ ಗಡ್ಕರಿ ಹತಾಶರಾಗಿದ್ದು, ಅವರ ತಲೆ ಖಾಲಿಯಾಗಿದೆ. ಆದುದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯುವಕರ ಆದರ್ಶ […]