ದೇವರ ಹಣ ಕಳ್ಳತನ, ಕಳ್ಳನ ಪತ್ತೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ, ಎರಡೇ ದಿನದಲ್ಲಿ ಕಳ್ಳನನ್ನು ಕರೆಸಿಕೊಂಡ ದೇವರು

Saturday, August 1st, 2020
Mallipady

ಬೆಳ್ತಂಗಡಿ: ಕಳ್ಳನೊಬ್ಬ ದೇವರ ಹುಂಡಿಯಲ್ಲಿರುವ ಹಣವನ್ನು ಕಳುವು ಮಾಡಿರುವ ಘಟನೆ ಬೆಳ್ತಂಗಡಿ ಸಮೀಪ ನಡೆದಿದ್ದು ಕೇವಲ ಎರಡೇ ದಿನದಲ್ಲಿ ಕಳ್ಳನು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾನೆ. ಪಡಂಗಡಿಯ ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿಈ ಘಟನೆ ಸಂಭವಿಸಿದ್ದು, ಬರಾಯ ನಿವಾಸಿ ಶ್ರೀಧರ (36) ದೇವರ ಹಣ ಕದ್ದು ಸಿಕ್ಕಿಬಿದ್ದಿರುವ ವ್ಯಕ್ತಿ. ದೇವರ ಹಣ ಕಳ್ಳತನ ಆಗಿರುವ ವಿಷಯ ತಿಳಿದ ಕೂಡಲೇ ದೇವಾಲಯದ ಆಡಳಿತ ಮಂಡಳಿ ಹಾಗು ಊರವರು ಕಳ್ಳನ ಪತ್ತೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ದಿನಬೆಳಗಾಗೋ ಮುಂಚೆಯೇ […]

ಕೊರೊನಾ ನಿರ್ಮೂಲನೆಗಾಗಿ ಧರ್ಮಸ್ಥಳದಲ್ಲಿ ಜ್ಯೋತಿ ಬೆಳಗಿಸಿ ವಿಶೇಷ ಪ್ರಾರ್ಥನೆ

Monday, April 6th, 2020
Dharmasthala Light

ಧರ್ಮಸ್ಥಳ : ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಿ ವಿಶ್ವದೆಲ್ಲೆಡೆ ಸುಖ-ಶಾಂತಿ, ನೆಮ್ಮದಿ ನೆಲೆಸಲಿ. ಎಲ್ಲರ ಭಯ-ಆತಂಕ ನಿವಾರಣೆಯಾಗಿ ಆರೋಗ್ಯ ಭಾಗ್ಯ ಸಿಗಲಿ ಎಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭಾನುವಾರ ರಾತ್ರಿ 9 ಗಂಟೆಗೆ ದೇವಸ್ಥಾನದಲ್ಲಿ ಜ್ಯೋತಿ ಬೆಳಗಿಸಿ ವಿಶೇಷ ಪ್ರಾರ್ಥನೆ ಮಾಡಿದರು. ಕೊರೊನಾ ನಿರ್ಮೂಲನೆಗಾಗಿ ನಾವೆಲ್ಲ ವಿಶ್ವದ ಎಲ್ಲಾ ಜನರೊಂದಿಗೆ ಏಕತೆ, ಸಂಘಟನೆ ಮತ್ತು ಪ್ರಜ್ಞೆಯೊಂದಿಗೆ ಹೋರಾಟ ನಡೆಸುತ್ತಿದ್ದೇವೆ. ಜ್ಯೋತಿ ಪ್ರತಿಯೊಬ್ಬರ ಮನದ ಹಾಗೂ ಮನೆಯ ಕತ್ತಲನ್ನು ಹೋಗಲಾಡಿಸಿ ವಿಶ್ವಶಾಂತಿಗೆ ಪ್ರೇರಕವಾಗಲಿ. ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಲಿ […]

ಮಳೆಗಾಗಿ ಶಾಸಕ ವೇದವ್ಯಾಸ್‌ ಕಾಮತ್‌ರಿಂದ ಹಲವೆಡೆ ವಿಶೇಷ ಪ್ರಾರ್ಥನೆ

Thursday, May 16th, 2019
vedavyas kamath

ಮಂಗಳೂರು :  ಶಾಸಕ ವೇದವ್ಯಾಸ್‌ ಕಾಮತ್‌ ಅವರ ನೇತೃತ್ವದಲ್ಲಿ ಬುಧವಾರ ಹಲವೆಡೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಶೀಘ್ರದಲ್ಲಿ ಮಳೆ ಬಂದು ನಗರದ ಜನತೆಯ ಸಂಕಷ್ಟ ಬಗೆ ಹರಿಯಲು ದೇವರು ಅನುಗ್ರಹಿಸಬೇಕು ಎಂದು ಶಾಸಕ ಡಿ ವೇದವ್ಯಾಸ ಕಾಮತ್‌ ಮಂಗಳಾದೇವಿ ದೇವಸ್ಥಾನದಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನದ ಮಹಾಪೂಜೆಯಲ್ಲಿ ಭಾಗ ವಹಿಸಿದ ಶಾಸಕ ಕಾಮತ್‌ ಮತ್ತು ಭಕ್ತಜನರು ದೇವರಲ್ಲಿ ಶೀಘ್ರ ಮಳೆಗಾಗಿ ಪ್ರಾರ್ಥಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಸಂಕ್ರಮಣದ ಈ ಪರ್ವದಿನದಂದು ನಗ ರದ ಎಲ್ಲ ದೇವಸ್ಥಾನಗಳಲ್ಲಿ ಭಜ ಕರು, ಆಡಳಿತ […]

ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ಶೀಘ್ರ ಗುಣಮುಖರಾಗಲಿ ಎಂದು ವಿಶೇಷ ಪ್ರಾರ್ಥನೆ

Thursday, July 28th, 2016
Rakesh-Siddaramaiah

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ಅನಾರೋಗ್ಯದಿಂದಾಗಿ ಬೆಲ್ಜಿಯಂನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಉಳ್ಳಾಲದ ಸಯ್ಯದ್ ಮದನಿ ದರ್ಗಾ ಸಮಿತಿ ವತಿಯಿಂದ ವಿಶೇಷ ಪ್ರಾರ್ಥನೆ ಮಾಡಲಾಯಿತು. ಸಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರೊ. ಹಾಜಿ ಅಹ್ಮದ್ ಬಾವ ಮುಸ್ಲಿಯಾರ್ ಅವರು ಸಯ್ಯದ್ ಮದನಿ ದರ್ಗಾದಲ್ಲಿ ಪ್ರರ್ಥನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಉಪಾಧ್ಯಕ್ಷ ಯು.ಕೆ. ಮೋನು ಕೋಟೆಪುರ, ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹ ಮೊಹಮ್ಮದ್, ಸಹ […]

ನೈಜ ಶಿಕ್ಷಣ ನೀಡುವಲ್ಲಿ ವಿದ್ಯಾಲಯಗಳು ಸೋತಿರುವುದು ಗಂಭೀರ ವಿಷಯ : ಸಜೀವ್ ಮರೋಳಿ

Saturday, February 6th, 2016
STA

ಮಂಜೇಶ್ವರ: ವಿದ್ಯಾಭ್ಯಾಸದ ಮಹತ್ವವನ್ನು ಅರಿತು ಹಿರಿಯ ತಲೆಮಾರಿನವರು ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಿದ ವಿದ್ಯಾಲಯಗಳು ದಾಖಲೆ ವರ್ಷಗಳಷ್ಟು ಕಾಲ ಸೇವಾ ತತ್ಪರವಾಗಿರುವುದು ವಿಧ್ಯೆಯ ಮಹತ್ವದ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣ ಇಂದು ವ್ಯಾಪಾರೀಕರಣಗೊಂಡು ನೈಜ ಶಿಕ್ಷಣ ನೀಡುವಲ್ಲಿ ಸೋತಿರುವುದು ಗಂಭೀರ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಶಿಕ್ಷಣ ಎಲ್ಲೆಡೆ ವ್ಯಾಪಿಸುವಲ್ಲಿ ಅಹರ್ನಿಶಿ ಕಾರ್ಯವೆಸಗುತ್ತಿರುವ ವಿದ್ಯಾಲಯಗಳು ನೈಜ ಅರ್ಥದ ದೇಗುಲಗಳೆಂದು ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಸಜೀವ್ ಮರೋಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಜೇಶ್ವರದ ಪ್ರಸಿದ್ದ ಎಸ್ ಎ ಟಿ ಶಾಲಾ […]