ದೇಶದಾದ್ಯಂತ ತಾಯಂದಿರ ಹೆಸರಿನಲ್ಲಿ ಗಿಡನೆಡುವ ಅಭಿಯಾನ ಯಶಸ್ವಿಯಾಗಬೇಕು: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Wednesday, June 5th, 2024
Brijesh-Chowta

ಮಂಗಳೂರು : ಪ್ರಧಾನಿ ನರೇಂದ್ರ ಮೋದಿರವರು ವಿಶ್ವ ಪರಿಸರ ದಿನದ ಅಂಗವಾಗಿ ದೇಶದಾದ್ಯಂತ ʻಏಕ್‌ ಪೇಡ್‌ ಮಾಂ ಕೆ ನಾಮ್‌ʼ, ತಾಯಂದಿರ ಹೆಸರಿನಲ್ಲಿ ಗಿಡನೆಡುವ ಅಭಿಯಾನಕ್ಕೆ ನೀಡಿದ ಕರೆಯ ಮೇರೆಗೆ ದಕ್ಷಿಣ ಕನ್ನಡ ನೂತನ ಲೋಕಸಭಾ ಸದಸ್ಯರಾದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟರವರು ವೃದ್ದಾಶ್ರಮದ ಆವರಣದಲ್ಲಿ ಹಣ್ಣಿನ ಗಿಡನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಡಾ.ಗಿರಿಧರ್‌ ರಾವ್ ಸಂಜೀವಿ ಭಾಯಿ ವೃದ್ದಾಶ್ರಮದಲ್ಲಿರುವ ತಾಯಂದಿರ ಹೆಸರಿನಲ್ಲಿ ಗಿಡನೆಟ್ಟ ಗಳಿಗೆ ಅವಿಸ್ಮರಣೀಯ, ಪ್ರಧಾನಿ ನರೇಂದ್ರ ಮೋದಿಯವರು ಅಪಾರವಾಗಿ ಗೌರವಿಸುವ ನಾರೀಶಕ್ತಿ ನನ್ನ […]

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ ಆಚರಣೆ

Sunday, June 6th, 2021
Panchayath Raj

ಗದಗ : ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವತಿಯಿಂದ ನಾಗಾವಿ ಹತ್ತಿರದ ಗುಡ್ಡಗಾಡು ಪ್ರದೇಶದ ನಯನ ಮನೋಹರ ಪ್ರದೇಶದಲ್ಲಿ ನಿರ್ಮಿತವಾಗಿರುವ ನೂತನ ಕ್ಯಾಂಪಸ್ನಲ್ಲಿ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಡೀ ಕ್ಯಾಂಪಸ್ನಲ್ಲಿ ಗುರುತು ಪಡಿಸಲಾದ ಮಾದರಿ ಸಸ್ಯ ಶಿಶುಪಾಲನಾ ಕೇಂದ್ರ, ಸಮಗ್ರ ಪಶು ಕೃಷಿ ಯೋಜನೆ, ಸ್ಮೃತಿ ವನ, ಸಬರಮತಿ ಆಶ್ರಮ, ರೂರಲ್ ಟೆಕ್ನಾಲಜಿ ಪಾರ್ಕ್, ಜೀವ‌ ವೈವಿಧ್ಯ ಕೇಂದ್ರ, ತರಬೇತಿ ಕೇಂದ್ರ, ನೆರಳು, ಭೋಜನ ಶಾಲೆಯ ಆವರಣ ಹಾಗೂ ದೇಸಿ ಯೋಜನೆಯ ಭೂಮಿ […]

ಮಂಗಳೂರು ಉತ್ತರ ಕ್ಷೇತ್ರವನ್ನು ಹಸಿರಾಗಿಸಲು ಹದಿನೇಳು ಲಕ್ಷ ರೂಪಾಯಿ ಬಹುಮಾನ ಮೀಸಲಿಟ್ಟ ಶಾಸಕ ಡಾ.ಭರತ್ ಶೆಟ್ಟಿ

Monday, August 3rd, 2020
bharathShetty

ಮಂಗಳೂರು : “ನಾವು ಪ್ರತಿವರ್ಷ ವನಮಹೋತ್ಸವ ಮತ್ತು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. ಆದರೆ ನಿಜವಾದ ಫಲಿತಾಂಶವು ಕಂಡುಬರುವುದಿಲ್ಲ. ಅದಕ್ಕಾಗಿಯೇ ಈ ವರ್ಷ ನನ್ನ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರಿಂದ ನನ್ನ ಕ್ಷೇತ್ರವನ್ನು ಹಸಿರಾಗಿಸಲು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದೇನೆ ಅದಕ್ಕಾಗಿ ನಾನು ಹದಿನೇಳು ಲಕ್ಷ ಎಂಎಲ್ಎ ನಿಧಿಯಿಂದ ಬಹುಮಾನ ರೂಪದಲ್ಲಿ ನೀಡುವುದಾಗಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ. ಕ್ಷೇತ್ರವನ್ನು ಹಸಿರಾಗಿಸಲು ಗರಿಷ್ಠ ಮಿತಿಯಿಲ್ಲ ಆದರೆ ಕನಿಷ್ಠ ಐದು ಸಸಿಗಳನ್ನು ನೆಡಬೇಕು ಮತ್ತು […]

ತಡೆಗೋಡೆ ಒಡೆದು ನೀರು ನುಗ್ಗಿ ನೂರು ಎಕರೆ ಕೃಷಿ ಭೂಮಿ ನಾಶ

Monday, February 29th, 2016
wall collapse

ಉಪ್ಪಳ : ತಡೆಗೋಡೆ ಒಡೆದು ಕೃಷಿ ಸ್ಥಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಪೈವಳಿಕೆ ಪಂಚಾಯತಿನ ಕುಡಾಲ್‌ಮೇರ್ಕಳದಲ್ಲಿ ನೂರು ಎಕರೆ ಕೃಷಿ ಸ್ಥಳ ನಾಶವಾಗಿದೆ. ದಶಕದ ಹಿಂದೆ ಕಿರು ನೀರಾವರಿ ಯೋಜನೆಯಂಗವಾಗಿ ನಿರ್ಮಿಸಿದ ತಡೆಗೋಡೆ ಒಡೆದು ನಾಲ್ಕು ವರ್ಷಗಳಾದರೂ ಅದನ್ನು ಪುನರ್ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಕರ, ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಗದ್ದೆಗಳಲ್ಲಿ ನಡೆಯುತ್ತಿದ್ದ ಪರಂಪರಾಗತ ಕೃಷಿಗೆ ತಡೆಯುಂಟಾಗಿದೆ. ತಡೆಗೋಡೆ ಒಡೆದ ಪರಿಣಾಮವಾಗಿ ತೋಡಿನ ಗತಿ […]

ಪರಿಹಾರಧನ ಬಿಡುಗಡೆ, ಜಪ್ತಿ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಸೊತ್ತುಗಳನ್ನು ಇಲಾಖೆಗೆ ಮರಳಿಸಿದ ಕೊರ್ಟ್

Wednesday, January 13th, 2016
court

ಮಂಗಳೂರು : ಭೂಸ್ವಾಧೀನದ ಬಗ್ಗೆ ಮಂಜೂರಾದ ಪರಿಹಾರಧನವನ್ನು ಪಾವತಿಸಿದ ಹಿನ್ನಲೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿಯವರ ಕಚೇರಿಯ ಸೊತ್ತುಗಳನ್ನು ನ್ಯಾಯಾಲಯದ ಆದೇಶದಂತೆ ಜಫ್ತಿಮಾಡಿದ ಪ್ರಕರಣ ಮಂಗಳೂರಿನಲ್ಲಿ ಸೋಮವಾರ ನಡೆದಿದೆ. ಮಂಗಳೂರು ಉಪವಿಭಾಗಾಧಿಕಾರಿಯವರ ವಾಹನ, ಕಚೇರಿಯ ಪೀಠೊಪಕರಣ, ಕಪಾಟು ಸಹಿತ ಎಲ್ಲ ಚರ ವಸ್ತುಗಳು ಜಪ್ತಿ ಮಾಡಲಾಯಿತು. ಬಜ್ಪೆ ವಿಮಾನ ನಿಲ್ದಾಣ ಬಳಿಯ ಅದ್ಯಪಾಡಿಯಲ್ಲಿ ಕ್ರಿಸ್ತಿನಾ ಡಿಸೋಜಾ ಎಂಬವರ 4.5 ಎಕರೆ ಕೃಷಿ ಭೂಮಿಯನ್ನು 2005ರಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಸ್ವಾಧೀನ ಪಡಿಸಲಾಗಿತ್ತು. ಇದಕ್ಕಾಗಿ ಅವರಿಗೆ 59 ಲಕ್ಷ ರೂ. ಪರಿಹಾರ […]