ಚುಟುಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಆಯ್ಕೆ

Tuesday, September 24th, 2019
VB-Kulamarva

ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಜಂಟಿ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರ ದಲ್ಲಿ ಕಾಸರಗೋಡು ಜೆ.ಪಿ. ನಗರ ಕನ್ನಡ ಗ್ರಾಮದಲ್ಲಿ ಸೆ.29ರಂದು ಬೆಳಗ್ಗೆ 9ರಿಂದ ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಣ ತಜ್ಞ, ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಆಯ್ಕೆಯಾಗಿದ್ದಾರೆ. ವಿ.ಬಿ. ಕುಳಮರ್ವ ಅವರು ನಿವೃತ್ತ ಮುಖ್ಯ ಶಿಕ್ಷಕರು. ಕೇರಳ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಬೀದರ್‌ […]

“ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ’ಸಿರಿಗನ್ನಡ ವೇದಿಕೆ’ಯನ್ನು ಬಲಪಡಿಸಿ”: ವಿ.ಬಿ.ಕುಳಮರ್ವ

Tuesday, July 26th, 2016
Kasaragodu

ಕುಂಬಳೆ: ಅಚ್ಚಗನ್ನಡದ ನೆಲವಾದ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಕನ್ನಡದ ಶಕ್ತಿ ಕ್ಷೀಣಿಸುತ್ತಾ ಬರುತ್ತಿದೆ. ಸರಕಾರವೂ ಕನ್ನಡಿಗರ ಹಿತರಕ್ಷಣೆಗೆ ಸ್ಪಂದಿಸುವುದಿಲ್ಲ.ಕನ್ನಡದ ಸಂಘಟನೆಗಳು ಹೆಚ್ಚಾದಷ್ಟೂ ಕನ್ನಡಭಾಷೆ ಸಾಹಿತ್ಯ,ಸಂಸ್ಕೃತಿಗಳ ಉನ್ನತಿಗೆ ಶ್ರಮಿಸುವ ಕೈಗಳಿಗೆ ಅಧಿಕ ಬಲ ಬರುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಕಳೆದ ಹದಿಮೂರು ವರ್ಷಗಳಿಂದ ಕಾರ್ಯಾಚರಿಸಿಕೊಂಡು ಬರುತ್ತಿರುವ ’ಸಿರಿಗನ್ನಡ ವೇದಿಕೆ’ಯ ಕಾಸರಗೋಡು ಜಿಲ್ಲಾಘಟಕವೂ ಬಹಳಷ್ಟು ವೈವಿದ್ಯಮಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಸಿರಿಗನ್ನಡ ವೇದಿಕೆಯ ರಾಜ್ಯ ಉಪಾಧ್ಯಕ್ಷರೂ ಜಿಲ್ಲಾಘಟಕ ಅಧ್ಯಕ್ಷರೂ […]

ಕತ್ತಿಯಿಂದ ಕಡಿದು ಅಣ್ಣನ ಕೊಲೆ: ತಮ್ಮ ನ್ಯಾಯಲಯಕ್ಕೆ ಹಾಜರು

Wednesday, February 3rd, 2016
Chandrahasa

ಬದಿಯಡ್ಕ: ಕತ್ತಿಯಿಂದ ಕಡಿದು ಅಣ್ಣನನ್ನು ತಮ್ಮ ಕೊಲೆಗೈದ ಪ್ರಕರಣ ನಡೆದಿದ್ದು ಆರೋಪಿಯನ್ನು ಬದಿಯಡ್ಕ ಪೋಲಿಸರು ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ. ಮುಂಡಿತ್ತಡ್ಕ ಸಮೀಪದ ಸರಳಿ ಕೊರಗಪ್ಪ ಪೂಜಾರಿಯವರ ಪುತ್ರ ವಾಸುದೇವ(35) ಕೊಲೆಗೀಡಾದ ದುರ್ದೈವಿ. ಆರೋಪಿಯಾದ ಇವರ ಸಹೋದರ ಚಂದ್ರಹಾಸ(28)ನನ್ನು ಮನೆ ಬಳಿಯ ಕಾಡಿನಿಂದ ಊರವರ ಸಹಾಯದೊಂದಿಗೆ ಬದಿಯಡ್ಕ ಪೋಲಿಸರು ಬಂಧಿಸಿ ಕೊಲೆಗೆ ಬಳಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿದ್ಯಾನಗರ ಸಿ.ಐ ತನಿಖೆ ನಡೆಸುತ್ತಿದ್ದಾರೆ. ತರವಾಡು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವಾಸುದೇವ 7.15 ರ ವೇಳೆಗೆ ಮನೆಗೆ ತೆರಳಿದಾಗ […]