ಬಳ್ಳಾರಿ : ವಿಧಾನ ಪರಿಷತ್‌ ಸದಸ್ಯ ಸಿಎಂ ಇಬ್ರಾಹಿಂ ವಿರುದ್ಧ ಸಚಿವ ವಿ.ಸೋಮಣ್ಣ ವಾಗ್ದಾಳಿ

Tuesday, February 25th, 2020
sommanna

ಬಳ್ಳಾರಿ : ವಿಧಾನ ಪರಿಷತ್‌ ಸದಸ್ಯ ಸಿಎಂ ಇಬ್ರಾಹಿಂ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯ ಮುಂಡರಗಿ ಪ್ರದೇಶ ವ್ಯಾಪ್ತಿಯಲ್ಲಿಂದು ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಇಬ್ರಾಹಿಂ ಯಾವತ್ತಾದರೂ ನಿಜ ಹೇಳಿದ್ದಾರೆಯೇ? ಅವರು ಯಾವತ್ತಾದರೂ ಒಳ್ಳೆಯದನ್ನು ಮಾಡಿದ್ದಾರೆಯೇ? ನಮ್ಮೊಂದಿಗೆ ಅವರೂ ಕೂಡ ಇದ್ದರು. ಮೊದಲು ನಶೆ ಪುಡಿ ತಿಕ್ಕುತ್ತಿದ್ದರು. ಈಗ ವಯಸ್ಸಾಗಿದೆ ಅಲ್ವಾ, ನಶೆ ಬಿಟ್ಟಿರಬಹುದು. ಅದಕ್ಕೆ ಪಿತ್ತ ನೆತ್ತಿಗೇರಿರಬಹುದು ಎಂದು ಛೇಡಿಸಿದ್ದರು. ಇಬ್ರಾಹಿಂ ಅವರು ಹಾಕುವ […]

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಳಿಗಾಲದ ಮಾಗಿ ಉತ್ಸವಕ್ಕೆ ಚಾಲನೆ

Wednesday, December 25th, 2019
Chaligala

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಳಿಗಾಲದ ಮಾಗಿ ಉತ್ಸವಕ್ಕೆ ನಿನ್ನೆ ಚಾಲನೆ ದೊರೆಯಿತು. ಡಿ.24ರಿಂದ ಜನವರಿ 2ರವರೆಗೆ ಮೈಸೂರಿನ ಅರಮನೆ ಆವರಣದಲ್ಲಿ ಮಾಗಿ ಉತ್ಸವ ಪ್ರಯುಕ್ತ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಮೈಸೂರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಮಾಗಿ ಉತ್ಸವದಲ್ಲಿ ಒಳಹೊಕ್ಕುತ್ತಿದ್ದಂತೆ ಸ್ವಾಗತ ಕಮಾನು ಎಲ್ಲರನ್ನು ಸ್ವಾಗತಿಸುತ್ತದೆ. ಭಾರತೀಯ ನೌಕಾಪಡೆ,ವಾಯುಪಡೆ, ಬೆಂಗಳೂರು ಅರಮನೆ,ಚಂದ್ರಯಾನ 2, ಹಳೆ ಅರಮನೆ,ಆನೆಗಾಡಿ,ಕಾವೇರಿ ಮಾತೆ,ನವಿಲು,ಅರಮನೆಯ ತ್ರೀನೇತ್ರ ಶಿವಲಿಂಗ ನಿಂಬೆಹಣ್ಣಿನ ಅಲಂಕಾರ,ಲಿಂಗದ ಮುಂಭಾಗ […]

ಇಂದು ಜಿಲ್ಲಾ ಮಟ್ಟದ ಆಯುಷ್ ವಿಚಾರ ಸಂಕಿರಣ

Tuesday, December 24th, 2019
arogya

ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, 2019-20ನೇ ಸಾಲಿನ ಐಇಸಿ ಯೋಜನೆಯಡಿ ಜಿಲ್ಲಾ ಮಟ್ಟದ ಆಯುಷ್ ವಿಚಾರ ಸಂಕಿರಣ (ಸಾಮಾನ್ಯ ವರ್ಗ) ಕಾರ್ಯಕ್ರಮವು ಡಿಸೆಂಬರ್24 ಇಂದು ನಗರದ ಜಿಲ್ಲಾ ಆಯುಷ್ ಸೆಮಿನರ್ ಹಾಲ್, ಜಿಲ್ಲಾ ಆಯುಷ್ ಕಚೇರಿ ಮಹದೇವಪೇಟೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ.ಸುನೀಲ್ ಸುಬ್ರಮಣಿ, ಸಂಸದರಾದ ಪ್ರತಾಪ್ ಸಿಂಹ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಶಾಂತೆಯಂಡ ವೀಣಾ […]

ಕೋಟೆಕಾರು, ಬಗಂಬಿಲದಲ್ಲಿನ ಬಹುಮಹಡಿ ವಸತಿ ಸಂಕೀರ್ಣಕ್ಕೆ ವಸತಿ ಸಚಿವ ವಿ. ಸೋಮಣ್ಣ ನವರಿಂದ ಶಿಲಾನ್ಯಾಸ

Monday, March 18th, 2013
V Somanna

ಮಂಗಳೂರು : ಕೋಟೆಕಾರು ಗ್ರಾಮದ ಬಗಂಬಿಲ ಸಮೀಪ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಿಸಲಾಗುವ ಬಹು ಮಹಡಿ ವಸತಿ ಸಂಕೀರ್ಣಕ್ಕೆ ಭಾನುವಾರ ವಸತಿ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರಿನಲ್ಲಿ ಈಗಾಗಲೇ ಗುರುತಿಸಲಾದ 38 ಎಕರೆ ಸರಕಾರಿ ಜಾಗದಲ್ಲಿ ವಸತಿ ಬಡಾವಣೆ ಹಾಗೂ ಸಂಕೀರ್ಣ ನಿರ್ಮಿಸುವಂತೆ ಪ್ರಸ್ತಾವನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 1500 ಕೋಟಿ ರೂಪಾಯಿ ಗಳ ಕ್ರಿಯಾ ಯೋಜನೆ ರೂಪಿಸಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು. ಮುಂದುವರಿದು, ಕೋಟೆಕಾರಿನ […]

ಎಬಿವಿಪಿ ಕಾರ್ಯ ಕರ್ತನಿಂದ ಸಚಿವ ವಿ. ಸೋಮಣ್ಣ ನವರಿಗೆ ಚಪ್ಪಲಿ ಸೇವೆ

Saturday, October 1st, 2011
V Somanna

ಬೆಂಗಳೂರು  : ನೂತನ ಮುಖ್ಯಮಂತ್ರಿ ಡಿ.ವಿ ಸದಾನಂದ  ಗೌಡರ ಸಂಪುಟದಲ್ಲಿ ಸ್ಥಾನ ಪಡೆದ ವಸತಿ ಸಚಿವ ವಿ. ಸೋಮಣ್ಣ ಅವರ ಮೇಲೆ  ಎಬಿವಿಪಿ ಕಾರ್ಯಕರ್ತನೊರ್ವ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ವಿಧಾನಸೌಧದ ಅಂಗಳದಲ್ಲಿಯೇ (ಅ.1) ಇಂದು ನಡೆಯಿತು. ಬಿಜೆಪಿ ಆಳ್ವಿಕೆಯಿಂದ ಬೇಸತ್ತು ಸೋಮಣ್ಣನವರ ಮೇಲೆ ಹಲ್ಲೆ ಮಾಡಿದ್ದೇನೆಂದು ಆತ ಹೇಳಿಕೆ ನೀಡಿದ್ದಾನೆ. ಸೋಮಣ್ಣ ಮಾತ್ರವಲ್ಲ, ಬಿಜೆಪಿಯ ಯಾರ ಮೇಲೆಯಾದರೂ ಇದೇ ರೀತಿ ಹಲ್ಲೆ ಮಾಡುವುದಾಗಿ ಆತ ಹೇಳಿದ್ದಾನೆ. ಸೋಮಣ್ಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ತಮ್ಮ ಕಚೇರಿಯಿಂದ ಹೊರಬರುತ್ತಿದ್ದರು. ಆಗ […]

ರಾಜ್ಯ ಸಚಿವ ಸಂಪುಟದ ವಿಸ್ತರಣೆ : ಆರು ಮಂದಿ ಸಚಿವರಿಗೆ ಪ್ರಮಾನವಚನ

Wednesday, September 22nd, 2010
ಆರು ಮಂದಿ ನೂತನ ಸಚಿವರು

ಬೆಂಗಳೂರು : ರಾಜ್ಯ ಸರಕಾರವು ಸಚಿವ ಇಂದು ಬೆಳಗ್ಗೆ 9.30ಕ್ಕೆ ಸಂಪುಟದ ಪುನಾರಚನೆ ಮಾಡಿದೆ.  ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ಮಂದಿ  ಸಚಿವರಿಗೆ ರಾಜ್ಯಪಾಲರು ಪ್ರಮಾನವಚನ ಭೋದಿಸಿದರು. ನೂತನ ಸಂಪುಟದದಲ್ಲಿ ಶೋಭಾ ಕರಂದ್ಲಾಜೆ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಎ ನಾರಾಣಸ್ವಾಮಿ, ಎ. ರಾಮದಾಸ್ ಮತ್ತು ಸಿ. ಎಚ್. ವಿಜಯಶಂಕರ್ ಅವರು ರಾಜ್ಯಪಾಲರಿಂದ ಪ್ರಮಾನವಚನ ಸ್ವೀಕರಿಸಿದರು. ಬಿ.ಜೆ.ಪಿ ಶಾಸಕರ ಮತ್ತು ಸಚಿವರುಗಳ ಬೆದರಿಕೆ ನಡುವೆಯೂ ಸಂಪುಟ ಪುನರ್ ರಚನೆ ಇಂದು ನಡೆಯಿತು. ಶೋಭಾ ಕರಂದ್ಲಾಜೆ ಮತ್ತು ವಿ. […]