ವೃದ್ಧೆ ತಾಯಿಯನ್ನೇ ರಸ್ತೆಯಲ್ಲಿ ಬಿಟ್ಟ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆ ಹಾಗೂ ಮನೆಯವರು

Tuesday, February 2nd, 2021
elderly Woman

ಬೆಳ್ತಂಗಡಿ  : ಐದು ಜನ ಮಕ್ಕಳು  ವೃದ್ಧೆ ತಾಯಿಯನ್ನು ರಸ್ತೆಯಲ್ಲೇ ಬಿಟ್ಟು ಹೋಗಿರುವ ಘಟನೆ ಬೆಳ್ತಂಗಡಿಯ ಕಳಿಯದ ನಾಳ ಎಂಬಲ್ಲಿ ನಡೆದಿದೆ. ಈ ವೃದ್ಧೆ ತಾಯಿಯ ಮಕ್ಕಳ ಪೈಕಿ ಒಬ್ಬರು ಆಶಾ ಕಾರ್ಯಕರ್ತೆಯಾಗಿದ್ದು, ಪುತ್ರನೊಬ್ಬ ಪೊಲೀಸ್ ಸಿಬ್ಬಂದಿಯಾಗಿ ಸೇವೆಯಲ್ಲಿದ್ದಾನೆ ಎಂದು ಹೇಳಲಾಗಿದೆ. ಒಬ್ಬ ಪುತ್ರ ಮಂಗಳೂರಿನಲ್ಲಿ  ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನಿಬ್ಬರು ಪುತ್ರರು ಖಾಸಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಪುತ್ರಿಯರಲ್ಲಿ ಒಬ್ಬರು ಗೃಹಿಣಿಯಾಗಿದ್ದು, ಮತ್ತೊಬ್ಬರು ಆಶಾ ಕಾರ್ಯಕರ್ತೆಯಾಗಿದ್ದಾರೆ. ಬೀದಿಯಲ್ಲಿದ್ದ ವೃದ್ದೆಯನ್ನು ಗಮನಿಸಿದ ಸಾರ್ವಜನಿಕರು ದ.ಕ. ಜಿಲ್ಲಾ ಸಹಾಯವಾಣಿಗೆ ಕರೆ […]

ಬೆಳ್ತಂಗಡಿ : 70 ರ ವೃದ್ಧೆಯನ್ನು ಹೆತ್ತ ಮಗ ಮತ್ತು ಮೊಮ್ಮಗ ಸೇರಿ ಹಲ್ಲೆ ಮಾಡುವ ವಿಡಿಯೋ ವೈರಲ್

Friday, July 17th, 2020
Belthangady assult

ಬೆಳ್ತಂಗಡಿ : ಈ ದೃಶ್ಯ ನೋಡಿದ್ರೆ ಎಂಥವರ ಮನಸ್ಸು ಕರಗದೇ ಇರದು. ತಾಯಿ ಮಕ್ಕಳನ್ನು ಹೆತ್ತು ಅದೆಷ್ಟೋ ಕಷ್ಟಗಳನ್ನು ಸಹಿಸಿ ಬೆಳೆಸುತ್ತಾಳೆ. ಆದರೆ ಕೆಲವೊಂದು ಮಕ್ಕಳು ಹೆತ್ತವರು ಅಸಹಾಯಕರಾದಾಗ ಯಾವರೀತಿ  ನೆಡಿಕೊಳ್ಳುತ್ತಾರೆ ಎಂಬುದನ್ನು ಈ ಘಟನೆಯಿಂದ ಅರಿತುಕೊಳ್ಳಿ. ಹೆತ್ತ ಮಗ ಮತ್ತು ಮೊಮ್ಮಗ ಸೇರಿ ವೃದ್ಧೆ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿ ಎತ್ತಿ ಬಿಸಾಡಿದ ರಾಕ್ಷಸಿ ಕೃತ್ಯ ಬೆಳ್ತಂಗಡಿ ತಾಲೂಕಿನ ಸವಣಾಲು ಎಂಬಲ್ಲಿ ನಡೆದಿದೆ. ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿ ಎಂಬರಿಗೆ ಅವರ ಮಗ […]

ಸೋಮೇಶ್ವರ ಬೀಚ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯೊಬ್ಬರ ರಕ್ಷಣೆ..!

Tuesday, July 31st, 2018
someshwra-beach

ಮಂಗಳೂರು: ಇಲ್ಲಿನ ಸೋಮೇಶ್ವರ ಬೀಚ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯೊಬ್ಬರನ್ನು ಜೀವರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಳಿಗ್ಗೆ 9.30ಕ್ಕೆ ಸೋಮೇಶ್ವರ ಬೀಚಿಗೆ ಬಂದ 70 ವರ್ಷದ ವೃದ್ಧೆ ನೇರ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆ ಯತ್ನವನ್ನು ಗಮನಿಸಿದ ಸಮುದ್ರ ತೀರದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ. ವೃದ್ಧೆಯನ್ನು ಕೌನ್ಸೆಲಿಂಗ್ ಮಾಡಿದ ಬಳಿಕ ಆಕೆಯನ್ನು ಕುಟುಂಬಿಕರಿಗೆ ಜೀವರಕ್ಷಕ ದಳದ ಸಿಬ್ಬಂದಿ ಹಸ್ತಾಂತರಿಸಿದ್ದಾರೆ.

ವೃದ್ಧೆಯ ಅಂತಿಮ ಸಂಸ್ಕಾರ ನಡೆಸಿದ ಕೃಷ್ಣಮೂರ್ತಿ ಆಚಾರ್ಯರು

Friday, November 4th, 2016
Udupi

ಉಡುಪಿ: ಅವರು ವೃದ್ಧೆ. ಕಾಪು ಪ್ರದೇಶದಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಗಂಡನೂ ತೀರಿಹೋಗಿದ್ದರು, ಮಕ್ಕಳೂ ಇಲ್ಲ. ಶಕ್ತಿ ಇರುವಾಗಲೇ ಬಂಧುಗಳು ಮನೆಯಿಂದ ಹೊರಗೆ ಹಾಕಿದ್ದರೆಂದು ಅವರೇ ಹೇಳುತ್ತಿದ್ದರು. ಮೂರು ವರ್ಷಗಳ ಹಿಂದೆ ಮೂಡಬೆಟ್ಟಿನ ಶ್ರೀಕೃಷ್ಣ ವೃದ್ಧರ ಆಶ್ರಯಧಾಮದಲ್ಲಿ ಸೇರ್ಪಡೆಗೊಂಡರು. ಸೇರಿಸುವಾಗಲೇ “ತೀರಿಹೋದ ಬಳಿಕ ಹೇಳುತ್ತೇನೆ’ ಎಂದು ಅಣ್ಣನ ಬಳಿ ಹೇಳಿದಾಗ “ಬರುತ್ತೇನೆ’ ಎಂದಿದ್ದರು. ವೃದ್ಧೆ ಬುಧವಾರ ನಿಧನ ಹೊಂದಿದರು. ಅಣ್ಣನಿಗೆ ದೂರವಾಣಿ ಕರೆ ನೀಡಿದಾಗ ಮತ್ತೆ ರಿಂಗಣಿಸಲೇ ಇಲ್ಲ, ದೂರವಾಣಿ ಸ್ತಬ್ಧವಾಗಿತ್ತು. ಅಕ್ಕ ಬಂದವರು ನೀವೇ ಅಂತಿಮ ಸಂಸ್ಕಾರ […]