ಎರಡು ದಿನದ ನವಜಾತ ಶಿಶುವಿನ ಶಸ್ತ್ರಚಿಕಿತ್ಸೆ ಯಶಸ್ವಿ

Friday, May 29th, 2020
infant operation

ಬೆಂಗಳೂರು: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ದಿನಗಳ ನವಜಾತ ಶಿಶುವಿಗೆ ನಗರದ ಪ್ರಕ್ರಿಯಾ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ನಾಸೊಫೆರಿಂಗೋಲರಿಂಗೊಸ್ಕೋಪಿ (ಎನ್‍ಪಿಎಲ್) ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಧ್ವನಿಪೆಟ್ಟಿಗೆ ಮೇಲಿನ ರಚನೆಯಲ್ಲಿ ಉಂಟಾದ ತೊಂದರೆಯಿಂದ ಶಿಶು ಉಸಿರಾಟ ಸಮಸ್ಯೆ ಎದುರಿಸುತ್ತಿತ್ತು. ಆಸ್ಪತ್ರೆಯ ಇಎನ್‍ಟಿ, ನವಜಾತ ಶಿಶು ತಜ್ಞರು ಮತ್ತು ಅರಿವಳಿಕೆ ವಿಭಾಗಗಳ ನೆರವಿನಿಂದ ಶಸ್ತ್ರಚಿಕಿತ್ಸೆ ಯಶಸ್ಸು ಸಾಧಿಸಿದೆ. ಲ್ಯಾರಿಂಗೋಮಲೇಸಿಯಾ ಎಂಬುದು ತುಂಬಾ ಸಾಮಾನ್ಯವಾಗಿ ಧ್ವನಿಪೆಟ್ಟಿಗೆಯಲ್ಲಿ ಕಂಡುಬರುವ ಒಂದು ಅಸ್ವಾಭಾವಿಕ ಸಮಸ್ಯೆ. ಈ ಸಮಸ್ಯೆಗೆ ಕಾರಣ ಧ್ವನಿ ತಂತುಗಳ ಮೇಲಿನ ಟಿಶ್ಯೂಸ್ […]

ವೈದ್ಯರ ಸಾಧನೆ… 12 ವರ್ಷಗಳಿಂದ ಹಾಸಿಗೆ ಹಿಡಿದ ಯುವಕ ಎದ್ದು ನಡೆದಾಡಿದ

Wednesday, February 7th, 2018
yenopoya-dctr

ಮಂಗಳೂರು: ಕಾಯಿಲೆಯನ್ನು ಮೈಗಂಟಿಸಿಕೊಂಡು ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಇದ್ದ ಯುವಕನೊಬ್ಬ ಯೆನಪೋಯ ಆಸ್ಪತ್ರೆಯ ವೈದ್ಯರಿಂದ ಎದ್ದು ನಿಲ್ಲುವಂತಾಗಿದೆ. ಪುತ್ತೂರಿನ ಕಡಬದ ಕೃಷಿ ಕುಟುಂಬದವರಾದ ಜಯಂತ್ (28), ಪಿಯು ಓದುತ್ತಿದ್ದ ವೇಳೆ ವಿರಳಾತಿ ವಿರಳ ಮಂದಿಯನ್ನು ಕಾಡುವ ಆಂಕಿಲೂಸಿಂಗ್ ಸ್ಪಾಂಡಿಲಿಟಿಸ್ ಕಾಯಿಲೆಗೆ ಒಳಗಾದರು. ಅವರ ಬೆನ್ನುಹುರಿ ಮತ್ತು ಅದರ ಕೆಳಗಿನ ಮೂಳೆ ಸಂದಿಯ ಮೇಲೆ ಸರಿಪಡಿಸಲಾಗದ ಹಾನಿ ಉಂಟಾಗಿತ್ತು. ಹನ್ನೆರಡು ವರ್ಷಗಳಿಂದ ಈ ಕಾಯಿಲೆಯಿಂದ ತತ್ತರಿಸಿದ ಅವರು, ಕ್ರಮೇಣ ಸೊಂಟದ ಕೆಳಗೆ ಸಂಪೂರ್ಣ ಬಲಕಳೆದುಕೊಂಡರು. ಕಳೆದ ಎಂಟು ವರ್ಷಗಳಿಂದ […]

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವೈದ್ಯರ ತಂಡದಿಂದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Tuesday, August 2nd, 2016
A-J-Hospital

ಮಂಗಳೂರು: ಮೂರು ಗುಂಡಿಗೆಯ ಮೇಲ್ಕೋಣೆ ಹೊಂದಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವಿಗೆ ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ಪಾವನ (ಹೆಸರು ಬದಲಿಸಲಾಗಿದೆ) ಎಂಬ ಹೆಸರಿನ 2 ವರ್ಷದ ಪ್ರಾಯದ ಅಂಕೋಲದ ಮಗು ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಹೀಗಾಗಿ ಪೋಷಕರು ಆಗಾಗ ಮಗುವನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದರು. ಬಳಿಕ ಎ.ಜೆ. ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞ ಡಾ| ಪ್ರೇಮ್‌ ಆಳ್ವ ಅವರು ಮಗುವನ್ನು ಪರೀಕ್ಷಿಸಿ ಹೃದಯದ ಸ್ಕ್ಯಾನ್‌(ಎಕೋ) ಮೂಲಕ ಮಗುವಿಗೆ […]

ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವೈದ್ಯರ ಸಾಧನೆ : ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ. ಗುಲ್ಮಕ್ಕೆ ಶಸ್ತ್ರಚಿಕಿತ್ಸೆ

Friday, September 24th, 2010
ಮಹಿಳೆಯ ಹೊಟ್ಟೆಯಲ್ಲಿದ 4 ಕೆ.ಜಿ. ಗುಲ್ಮ

ಬೆಂಗಳೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿ 4 ಕೆ.ಜಿ. ಗಾತ್ರಕ್ಕೆ ಬೆಳೆದಿದ್ದ ಗುಲ್ಮವನ್ನು (ಸ್ಪ್ಲೀನ್) ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಸಫಲರಾಗಿದ್ದಾರೆ. 40 ವರ್ಷ ಪ್ರಾಯದ ಈ ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಹಸಿವೆಯೇ ಇಲ್ಲದಿರುವಿಕೆಯ ಸ್ಥಿತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮೊದಲಿಗೆ ವೈದ್ಯರು ಇದು ತೀವ್ರ ಮಲೇರಿಯಾ ಪ್ರಕರಣ ಎಂದು ಭಾವಿಸಿದ್ದರು. ಆದರೆ ಬಳಿಕ ಇದು ಗುಲ್ಮದ ಹಾನಿಕರ ಗೆಡ್ಡೆ ಎಂಬುದು ಗೊತ್ತಾಯಿತು. ಇದೊಂದು ಅಪರೂಪದ ಪ್ರಕರಣವಾಗಿದ್ದು, ನಾನ್-ಹೊಡ್ಜ್ಕಿಮ್ಸ್ ಲಿಂಫೋಮಾ […]