ಮಂಗಳೂರು : ಮಾರ್ಚ್ 30ರಿಂದ ಮನೆಗೆ ಬರುತ್ತೆ ದಿನಸಿ, ನಿಮ್ಮಅಪಾರ್ಟ್‌ಮೆಂಟ್‌ನಲ್ಲಿ ಅಗತ್ಯ ದಿನಸಿ ಚೀಟಿ ಅಂಟಿಸಿ

Sunday, March 29th, 2020
Ajith Kumar Shanady

ಮಂಗಳೂರು : ಮಾರ್ಚ್ 30  ರಿಂದ ನಗರದ 60 ವಾರ್ಡ್‌ನ ಮನೆಗಳಿಗೆ ದಿನಸಿ ಹಾಗೂ ತರಕಾರಿಯನ್ನು ಸರಬರಾಜು ಮಾಡಲು ಇಂದು ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ನಡೆದ ಸೂಪರ್‌ ಮಾರ್ಕೆಟ್‌, ದಿನಸಿ ಅಂಗಡಿ ಮಾಲಕರ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸುಮಾರು 200 ಅಂಗಡಿಗಳ ಪಟ್ಟಿಯನ್ನು ಮಂಗಳೂರು ನಗರ ಪಾಲಿಕೆಯು ಬಿಡುಗಡೆ ಮಾಡಿದೆ. ಮನಾಪದ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಮಾತನಾಡಿ ಅಪಾರ್ಟ್‌ಮೆಂಟ್‌ಗಳು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಎಲ್ಲಾ ಮನೆಗಳಿಗೆ ಬೇಕಾಗುವ ದಿನಸಿಯನ್ನು ಸಂಗ್ರಹ ಮಾಡಿ ಎಲ್ಲಾ ಮನೆಗಳಿಗೆ ಹಚ್ಚಬೇಕು. ಸೋಮವಾರದಿಂದ ಈ […]

ಕೊರೊನಾ : ರಸ್ತೆ ಬದಿ ಫಾಸ್ಟ್ ಫುಡ್ ಅಂಗಡಿಗಳನ್ನು ತೆರವುಗೊಳಿಸಲು ಮನಪಾ ಆಯುಕ್ತರ ಆದೇಶ

Saturday, March 14th, 2020
ajith

ಮಂಗಳೂರು : ಮಾರ್ಚ್ 14 ಶನಿವಾರದಿಂದ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ಬದಿ ತಿಂಡಿ ತಿನಿಸು ವ್ಯಾಪಾರವನ್ನು ಸ್ಥಗಿತಗೊಳಿಸುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಆದೇಶಿಸಿದ್ದಾರೆ. ಕೊರೊನಾ ವೈರಸ್‌ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಆರೋಗ್ಯದ ಹಾಗೂ ಸ್ವಚ್ಛತೆಯ ಹಿತ ದೃಷ್ಟಿಯಿಂದ ಎಲ್ಲಾ ರೀತಿಯ ಬೀದಿ ಬದಿ ತಿಂಡಿ ತಿನಿಸು ವ್ಯಾಪಾರವನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು. ತಪ್ಪಿದ್ದಲ್ಲಿ ಸೋಮವಾರದಿಂದ ಪಾಲಿಕೆ ವತಿಯಿಂದ […]

ಮಂಗಳೂರು : ಮಹಾನಗರ ಪಾಲಿಕೆಯ ಹೊಸ ಆಯುಕ್ತರಾಗಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ನೇಮಕ

Tuesday, September 17th, 2019
Ajith

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಹಿರಿಯ ಕೆಎಎಸ್ ಅಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ನೇಮಕಗೊಂಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಮುಹಮ್ಮದ್ ನಝೀರ್ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಅಜಿತ್ ಕುಮಾರ್ ಹೆಗ್ಡೆ ಅವರನ್ನು ನೇಮಕಗೊಳಿಸಿ ಎಂದು ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಅಜಿತ್‌ ಕುಮಾರ್ ಈ ಮೊದಲು ಬೆಂಗಳೂರಿನ ಜಲಾನಯನ ಅಭಿವೃದ್ಧಿ ಇಲಾಖೆಯ ಅಪರ ನಿರ್ದೇಶಕ ಹಾಗೂ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.  

ತೆರಿಗೆ ವಂಚನೆ, ಪಾಲಿಕೆಗೆ 3 ಪಟ್ಟು ಹೆಚ್ಚು ಬಾಡಿಗೆ!

Tuesday, February 18th, 2014
City-Corporation

ಮಂಗಳೂರು: ದೈತ್ಯ ಕೈಗಾರಿಕೆ ಸಂಸ್ಥೆಗಳಿಂದಲೇ ನೀರಿನ ಕಳವು, ಸುರತ್ಕಲ್‌ನಲ್ಲಿ ಪಾಲಿಕೆ ಕಚೇರಿಯ ಲೆಕ್ಕಕ್ಕಿಂತ ಹೆಚ್ಚಿಗೆ ಬಾಡಿಗೆ ಜಾಲ, ಖಾಸಗಿ ಮಾಲ್‌ಗಳ ತೆರಿಗೆ ವಂಚನೆ ಪುರಾಣ, ಅನಧಿಕೃತ ಪಾರ್ಕಿಂಗ್ ಶುಲ್ಕ… ಒಂದೇ ರಡೇ ಮಹಾನಗರ ಪಾಲಿಕೆಯ ಬಜೆಟ್ ಪೂರ್ವ ಸಿದ್ಧತೆ ಸಭೆಯಲ್ಲಿ ಸಾರ್ವಜನಿಕರು, ಕಾರ್ಪೊರೇಟರ್‌ಗಳು ಒಂದೊಂದೇ ವಂಚನೆಯನ್ನು ಬಟಾ ಬಯಲು ಮಾಡಿದರು. ಪ್ರತಿ ವಿಚಾರಗಳು ಬಂದಾಗ ಸರಿಯಾಗಿ ಮಾಹಿತಿ ಇಲ್ಲದೆ ಪಾಲಿಕೆ ಎಂಜಿನಿಯರ್‌ಗಳು, ಅಧಿಕಾರಿಗಳು ತಡಬಡಾಯಿಸಿದರು. ನೀರಿನ ಬಿಲ್ಲಿನ ಅಕ್ರಮ ತಡೆಗಟ್ಟುವ ಸಲುವಾಗಿ ಕೈಗಾರಿಕೆಗಳಿಗೆ ಡಿಜಿಟಲ್ ಮಾದರಿಯ ಮೀಟರ್ […]

ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಜಲಕ್ರೀಡೆ ವಾಟರ್ ಝೋರ್ಬ್ ಬಾಲ್ ಗೆ ಚಾಲನೆ

Saturday, December 22nd, 2012
Pilikula Nisargadhama

ಮಂಗಳೂರು :ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಶುಕ್ರವಾರ ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಜಲಕ್ರೀಡೆ ವಾಟರ್ ಝೋರ್ಬ್ ಬಾಲ್ ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದರು. ವಾಟರ್ ಝೋರ್ಬ್ ಬಾಲ್ ಪಿಲಿಕುಳ ನಿಸರ್ಗಧಾಮ ಮತ್ತು ಫನ್ 360 ಸಂಸ್ಥೆಯ ಜಂಟಿ ಯೋಜನೆಯಾಗಿದ್ದು, ಇದು ಈಗಾಗಲೇ ಪಾಶ್ಚಾತ್ಯ ಹಾಗು ಮುಂದುವರಿದ ರಾಷ್ಟ್ರಗಳಲ್ಲಿ ಜನಪ್ರಿಯತೆ ಪಡೆದ ಕ್ರೀಡೆಯಾಗಿದೆ. ಇದು ಹೆಚ್ಚು ಮೋಜು ಮತ್ತು ಸಂತೋಷವನ್ನು ನೀಡುವ ಕ್ರೀಡೆಯಾಗಿದ್ದು ದಕ್ಷಿಣ ಕನ್ನಡ ಜನರ ಅದರಲ್ಲೂ ಪ್ರಮುಖವಾಗಿ ಮಕ್ಕಳ ಆನಂದ ನಿರೀಕ್ಷಿಸಲಾಗಿದೆ. […]