ಶಿವನ ವಾಸಸ್ಥಾನ ರುದ್ರಭೂಮಿಯಲ್ಲಿ ಶಿವರಾತ್ರಿ ಆಚರಿಸಿದ ಭಕ್ತರು

Thursday, March 11th, 2021
Rudra Bhoomi

ಮಂಗಳೂರು  : ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ಧಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ಭಜನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು. ಸಾಮಾನ್ಯವಾಗಿ ರುದ್ರಭೂಮಿಯೆಂದರೆ ಭಯಪಟ್ಟುಕೊಳ್ಳುತ್ತಾರೆ. ಮಹಿಳೆಯರಂತೂ ಇತ್ತ ಕಾಲಿಡುವುದೇ ಅಪರೂಪ. ಆದರೆ, ಇಲ್ಲಿ ಯಾವುದೇ ಭಯವಿಲ್ಲದೇ ಮಧ್ಯರಾತ್ರಿಯವರೆಗೂ ಗುಂಪುಗುಂಪಾಗಿ ಜನಜಮಾಯಿಸಿ, ದೇವ ಸಂಕೀರ್ತನೆಯಲ್ಲಿ ಪಾಲ್ಗೊಂಡುಬೃಹತ್ ಶಿವನ ಪ್ರತಿಮೆಯ ಬಳಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ […]

ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ರಥೋತ್ಸವ

Monday, February 24th, 2020
rathothsava

ಉಜಿರೆ : ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಶನಿವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ರಥೋತ್ಸವ ನೋಡಿ ಧನ್ಯತೆಯನ್ನು ಹೊಂದಿದ್ದರು.  

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ : ಶಿವನಾಮ ಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆ

Saturday, February 22nd, 2020
shivaratri

ಉಜಿರೆ : ಮೊದಲು ನಮ್ಮನ್ನು ನಾವು ಅರಿತುಕೊಂಡು, ಮನ-ವಚನ-ಕಾಯದಿಂದ ಪರಿಶುದ್ಧರಾಗಿ, ದೃಢಭಕ್ತಿ ಮತ್ತು ಅಚಲ ವಿಶ್ವಾಸದಿಂದ ದೇವರ ನಾಮಸ್ಮರಣೆ ಮಾಡಿ ಸಾರ್ಥಕ ಜೀವನ ನಡೆಸಬೇಕು. ಆಚಾರವೇ ಶ್ರೇಷ್ಠವಾದ ಧರ್ಮ, ಅಭಯದಾನವೇ ಶ್ರೇಷ್ಠವಾದ ದಾನವಾಗಿದೆ. ಧರ್ಮಸ್ಥಳವು ಜಾತಿ – ಮತ ಬೇಧವಿಲ್ಲದೆ ಸಕಲ ಭಕ್ತರಿಗೂ ಎಂದೂ ಭಯಪಡಬೇಡಿ ಎಂದು ಸದಾ ಅಭಯದಾನ ನೀಡುವ ಪವಿತ್ರ ಕ್ಷೇತ್ರವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ನಡೆಯುವ […]

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ : ಪಾದಯಾತ್ರಿಗಳಿಗೆ ಸನ್ಮಾನ

Friday, February 21st, 2020
dharmastala

ಉಜಿರೆ : ಭಕ್ತರ ದೋಷಗಳನ್ನು ಗ್ರಹಣ ಮಾಡಿ, ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಹೊಂದಿರುವ ಸಾನ್ನಿಧ್ಯಗಳು ತೀರ್ಥಕ್ಷೇತ್ರಗಳಾಗಿ ಬೆಳಗುತ್ತವೆ, ಬೆಳೆಯುತ್ತವೆ. ಸಾರ್ಥಕ ಬದುಕಿಗೆದಾರಿದೀಪವಾಗುತ್ತವೆ. ತಮ್ಮಲ್ಲಿರುವ ಕೋಪ, ದ್ವೇಷ, ಅಸೂಯೆ ಮೊದಲಾದ ಅರಿಷಡ್ವರ್ಗಗಳನ್ನು ಕಳಚಿ, ದುಃಖ, ದುಮ್ಮಾನಗಳನ್ನು ಮರೆಯಲು ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತರು ಬರುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಗುರುವಾರ ರಾತ್ರಿ ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆಗೆ ಬಂದ ಪಾದಯಾತ್ರಿಗಳಿಗೆ ಶುಭ ಹಾರೈಸಿ ಮಾತನಾಡಿದರು. ಶಿವ ಭಕ್ತರ ಸರ್ವ ದೋಷಗಳನ್ನು ಸ್ವೀಕರಿಸಿ ವಿಷಕಂಠನಾಗಿ ಭಕ್ತರ […]

ಧರ್ಮಸ್ಥಳದಲ್ಲಿ ರಥೋತ್ಸವ

Thursday, February 15th, 2018
dharmastala

ಉಜಿರೆ: ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಬುಧವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು.ನಾಡಿನೆಲ್ಲಡೆಯಿಂದ ಬಂದ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಮಾಡ ಧನ್ಯತೆಯನ್ನು ಹೊಂದಿದರು.

ಶಿವರಾತ್ರಿಯ ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದ

Saturday, March 5th, 2016
shiva

ಮಂಗಳೂರು : ಹಿಮಾಲಯ ಪರ್ವತಗಳಲ್ಲೇ ಪವಿತ್ರವಾದ ಶಿವನ ಸ್ಥಾನ ಇರುವ ಪರ್ವತ ಕೈಲಾಸ. ಶಿವ ಲಯಕರ್ತ, ಭಕ್ತಿ ದೇವರು. ಶಿವನ ಮಗ ಕುಮಾರ ವೀರಭದ್ರ-ಕೆಟ್ಟ ಪಾಪಗಳನ್ನು ನಾಶಮಾಡುವವನು. ಕೆಟ್ಟ ಮನಸ್ಥಿತಿಯುಳ್ಳವನನ್ನು ಛೇದನಮಾಡುವುದು ಶಿವನ ಸೇನಾಧಿಪತಿ ವೀರಭದ್ರೇಶ್ವರ. ಗಣಪತಿ ವಿಘ್ನ ನಿವಾರಕ. ದಕ್ಷಿಣಾಕಾರ ಮತ್ತು ಆರ್ಧಸುತ್ತು ಪ್ರದಕ್ಷಿಣೆ ಶಿವ ದೇವಾಲಯದಲ್ಲಿ ಮಾತ್ರ. ಶಿವನು ಸ್ಮಶಾನಾವಾಸಿಯಾದ ಕಾರಣ ನಮಗೆ ಬಂದ ದೃಷ್ಟಿಯನ್ನು ಶಿವನು ತೆಗೆಯುವನು ಎಂಬ ನಂಬಿಕೆ. ಮಹಾ ಶಿವರಾತ್ರಿಯಂದು ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ […]

ಕರಾವಳಿ ಹುಡುಗಿ ನೇಹಾ ಕನ್ನಡ ಚಿತ್ರ ‘ಮುಂಗಾರು ಮಳೆ 2′ ರಲ್ಲಿ ನಾಯಕಿ

Thursday, July 9th, 2015
Neha Shetty

ಮಂಗಳೂರು : ಶಶಾಂಕ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಮುಂಗಾರು ಮಳೆ 2’ ಚಿತ್ರಕ್ಕೆ ಕರಾವಳಿ ಬೆಡಗಿ 2014ರ ‘ಮಿಸ್ ಮಂಗಳೂರು ಚೆಲುವೆ’ ನೇಹಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕ ನಟನಾಗಿ ಆಭಿನಯಿಸಲಿದ್ದಾರೆ. ನಿರ್ದೇಶಕ ಶಶಾಂಕ್ ತಮ್ಮ ಚಿತ್ರಕ್ಕೆ ಗ್ಲಾಮರಸ್ ಲುಕ್, ಜೊತೆಗೆ ಸ್ಟೈಲೀಷ್ ಆಗಿರುವ ಹೊಸ ಹುಡುಗಿಯ ಹುಡುಕಾಟದಲ್ಲಿದ್ದರು. ಅಡೀಷನ್ ಸಂದರ್ಭದಲ್ಲಿ ಕೊನೆಯದಾಗಿ ನೇಹಾ ಶೆಟ್ಟಿ ಆಯ್ಕೆಯಾದರು. ಇದೀಗ ‘ಮುಂಗಾರು ಮಳೆ 2’ ಚಿತ್ರಕ್ಕೆ ನಾಯಕಿ ಪಕ್ಕಾ ಆಗಿರುವುದರಿಂದ ಇದೇ ಜುಲೈ 28 […]