ಅಂಗನವಾಡಿ ಟೀಚರ್ ಸಹಿತ ಒಂದೇ ಮನೆಯ ಮೂವರು ಆತ್ಮ ಹತ್ಯೆ

Tuesday, September 7th, 2021
Chikkamagaluru Suicide

ಚಿಕ್ಕಮಗಳೂರು: ಮನೆಯ ಗಂಡಸರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಯುವತಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಾರದಮ್ಮ(70), ವೀಣಾ(49) ಹಾಗೂ ಶ್ರಾವ್ಯ(16) ಎಂದು ಗುರುತಿಸಲಾಗಿದೆ. ಮೃತ ವೀಣಾ ಶೃಂಗೇರಿಯ ಹೊನ್ನವಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಅಂಗನವಾಡಿಗೆ ತೆರಳದ ಹಿನ್ನೆಲೆಯಲ್ಲಿ ಅಂಗನವಾಡಿ ಸಹಾಯಕಿ ಪೂರ್ಣಿಮಾ, ವೀಣಾಗೆ ಕರೆ ಮಾಡಿದ್ದಾರೆ. ಅವರು ಫೋನ್ ಸ್ವೀಕರಿಸಿಲ್ಲ. ಆಗ ಪೂರ್ಣಿಮಾ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯರು ಅವರ ಮನೆ ಬಳಿ […]

ಪೌರತ್ವ ಮತ್ತು ಸಮುದಾಯ ಜೀವನ ತರಬೇತಿ ಶಿಬಿರದ ಸಮಾರೋಪ

Friday, October 18th, 2019
sringeri

ಶೃಂಗೇರಿ : ಅಧುನಿಕ ಜಗತ್ತಿಗೆ ಶಿಕ್ಷಣದ ಜತೆಗೆ ಸಂಸ್ಕೃತಿಯನ್ನೂ ಕಲಿಸುವ ಮನೋಭಾವ ಪ್ರತಿ ಶಿಕ್ಷಕರಲ್ಲೂ ಇರಬೇಕು.ಆಗ ದೇಶ ವಿಶ್ವ ಗುರುವಾಗಲು ಸಾಧ್ಯ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾಮಠದ ಶ್ರಿಗುಣನಾಥ ಸ್ವಾಮೀಜಿ ಹೇಳಿದರು. ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗುರುವಾರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಪೌರತ್ವ ಮತ್ತು ಸಮುದಾಯ ಜೀವನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಾನವನು ಅರಿಯ ಬೇಕಾದ ವಿದ್ಯೆಗಳಲ್ಲಿ ಉನ್ನತ ಹಾಗೂ ಸಾಮಾನ್ಯ ಎಂಬ ಎರಡು ರೀತಿಯ ವಿದ್ಯೆ ಇದೆ. ಈ ಎರಡನ್ನೂ ಪರೀಕ್ಷಿಸುವ, […]

ಶಿವಕುಮಾರ ಶ್ರೀಗಳ‌ ಆರೋಗ್ಯ ಸ್ಥಿರವಾಗಿದೆ, ಆತಂಕ ಬೇಡ: ಹೆಚ್​.ಡಿ. ಕುಮಾರಸ್ವಾಮಿ

Friday, December 7th, 2018
kumarswamy

ಚಿಕ್ಕಮಗಳೂರು: ಶೃಂಗೇರಿ ಶಾರದಾಂಬೆ ದರ್ಶನ ಪಡೆದ ಸಿಎಂ ಹೆಚ್ಡಿಕೆ, ಶ್ರೀಗಳ‌ ಆರೋಗ್ಯದ ಬಗ್ಗೆ ಜನರಿಗೆ‌ ಆತಂಕ ಬೇಡ. ಅವರ ಆರೋಗ್ಯದಲ್ಲಿ ಸಣ್ಣ ಮಟ್ಟದ ಏರುಪೇರುಗಳಿವೆ. ಅವರ‌ ಆರೋಗ್ಯ ಸಂಬಂಧ ಪಿನ್ ಟು ಪಿನ್ ಮಾಹಿತಿ ತರಿಸಿಕೊಳ್ತಿದ್ದೇನೆ ಎಂದಿದ್ದಾರೆ. ಸಚಿವ ಹೆಚ್.ಡಿ.ರೇವಣ್ಣ ಜೊತೆ ಶಾರದಾಂಬೆ ದರ್ಶನ ಪಡೆದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಠದ ಕಿರಿಯ ಸ್ವಾಮೀಜಿ‌ ಜೊತೆ‌ ನಿರಂತರ‌‌ ಸಂಪರ್ಕದಲ್ಲಿದ್ದೇನೆ. ಹೆಚ್ಚಿನ ಚಿಕಿತ್ಸೆಗೆ ಚೆನ್ನೈ ಆಸ್ಪತ್ರೆ‌ಗೆ ಕರೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ. ನಾನು ನಿನ್ನೆಯೇ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ […]

ಶೃಂಗೇರಿ ಜಗದ್ಗುರುಗಳನ್ನು ಭೇಟಿ ಮಾಡಿದ ಕಾಶ್ಮೀರಿ ಪಂಡಿತರು..!

Saturday, October 27th, 2018
chikmagaluru

ಚಿಕ್ಕಮಗಳೂರು: ಪಾಕ್ ಆಕ್ರಮಿತ ಕಾಶ್ಮೀರದ ಶಾರದ ನಗರದಲ್ಲಿರುವ ಶಾರದಾ ಸರ್ವಜ್ಞ ಪೀಠದ ಪುನರುತ್ಥಾನ ಕಾರ್ಯ ಹಾಗೂ ವರ್ಷದಲ್ಲಿ ಒಮ್ಮೆ ಭಾರತೀಯರಿಗೆ ಶಾರದಾ ಸರ್ವಜ್ಞ ಪೀಠಕ್ಕೆ ಪ್ರವೇಶದ ಕುರಿತು ಶೃಂಗೇರಿ ಪೀಠದ ಅಡಳಿತ ಮಂಡಳಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಪ್ರಧಾನಿ ಅವರಿಗೆ ಪತ್ರ ಬರೆದ ಬೆನ್ನಲ್ಲೇ ‌ಶಾರದಾ ಸರ್ವಜ್ಞ ಪೀಠದ ಕುರಿತು ದೇಶವ್ಯಾಪಿ ಜನ ಜಾಗೃತಿ ಕಾರ್ಯಕ್ರಮ ನಡೆಸುವ ಸಲುವಾಗಿ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮಿಜೀಗಳನ್ನು […]

ಭಾರಿ ಮಳೆ.. ಚಿಕ್ಕಮಗಳೂರಿನಲ್ಲಿ ಗುಡ್ಡ ಕುಸಿತ!

Tuesday, August 14th, 2018
heavy-rain-chikmagaluru

ಚಿಕ್ಕಮಗಳೂರು: ತಾಲೂಕಿನ ಕೊಳಗಾಮೆ ಸಮೀಪ ಗುಡ್ಡ ಕುಸಿದಿದ್ದ ಕಾರಣ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ರಸ್ತೆಯಲ್ಲಿಯೇ ಕೆಲಕಾಲ ಕಾಯುವಂತಾಯಿತು. ಕೆ.ಜೆ.ಜಾರ್ಜ್ ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಗರಿಗೆಖಾನ್ ಎಸ್ಟೇಟ್ನಲ್ಲಿ ವಾಸ್ತವ್ಯವಾಗಿದ್ದರು. ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ಸಭೆಗೆ ಆಗಮಿಸುತ್ತಿದ್ದ ವೇಳೆ ಗುಡ್ಡ ಕುಸಿದಿದೆ. ಇದರಿಂದ ಸಚಿವರು ಅಲ್ಲೇ ಕೆಲಕಾಲ ಕಾಯುಂತಾಯಿತು. ನಂತರ ಸಚಿವರನ್ನು ಬೇರೆ ವಾಹನದಲ್ಲಿ ಕಚೇರಿಗೆ ಕಳುಹಿಸಲಾಯಿತು. ಇನ್ನು ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ತುಂಗಾ ನದಿ ಅಪಾಯದಮಟ್ಟ ಮೀರಿ […]

ಮುಂದುವರೆದ ಧಾರಾಕಾರ ಮಳೆ..ಇಂದು ಕೂಡಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

Friday, July 13th, 2018
chikk-magaluru

ಚಿಕ್ಕಮಗಳೂರು: ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಇಂದೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮೂರು ತಾಲೂಕು ಸೇರಿದಂತೆ ಹಲವೆಡೆ ಶಾಲಾ-ಕಾಲೇಜುಗಳಿಗೆ ಇಂದು ಕೂಡಾ ರಜೆ ಘೋಷಿಸಲಾಗಿದೆ. ಶೃಂಗೇರಿ, ಕೊಪ್ಪ, ಕಳಸ, ಕುದುರೆಮುಖ, ಮೂಡಿಗೆರೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ನಿವಾಸಿಗಳು ಆತಂಕದಲ್ಲಿ ಬದುಕುವಂತಾಗಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ ಹಾಗೂ ಮೂಡಿಗೆರೆ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ […]

ಕಳೆದ ಮೂರು ದಿನಗಳಿಂದ ಭಾರಿ ಮಳೆ..ಶಾಲೆಗಳಿಗೆ ರಜೆ ಘೋಷಣೆ!

Wednesday, July 11th, 2018
heavy-rain

ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆ ಕಳೆದ ರಾತ್ರಿಯಿಂದ ಮತ್ತೆ ಮುಂದುವರೆದಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಶೃಂಗೇರಿ, ಕಳಸ, ಬಾಳೆಹೊನ್ನೂರಿನಲ್ಲಿ ಇಡೀ ರಾತ್ರಿ ಮಳೆಯಾಗಿದೆ. ಶೃಂಗೇರಿಯಲ್ಲಿ ಕಳೆದ ಮೂರು ದಿನಗಳಿಂದಲೂ ಅಧಿಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಶೃಂಗೇರಿ ತಾಲೂಕಿನ ನದಿಪಾತ್ರ, ತಗ್ಗುಪ್ರದೇಶ ಹಾಗೂ ಪ್ರವಾಹ ಪೀಡಿತ ಪ್ರದೇಶದ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನ ಬಿಇಒ ಉಮೇಶ್ ಶಾಲೆಯ ಆಡಳಿತ ಮಂಡಳಿಗೆ ವಹಿಸಿದ್ದಾರೆ. ಉಳಿದಂತೆ ಕೊಪ್ಪ, ಎನ್.ಆರ್.ಪುರದಲ್ಲೂ ಮಳೆಯಾಗುತ್ತಿದ್ದು, ಬಿಟ್ಟು-ಬಿಟ್ಟು ಸುರಿಯುತ್ತಿರುವ […]

ಮಲೆನಾಡಿನಲ್ಲಿ ಭಾರಿ ಮಳೆ…ಶಾಲಾ-ಕಾಲೇಜುಗಳಿಗೆ ರಜೆ!

Thursday, June 28th, 2018
raining

ತೀರ್ಥಹಳ್ಳಿ: ಮಲೆನಾಡಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿ ಸೇರಿದಂತೆ ಎಲ್ಲಾ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನೀರಿ‌ನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ. ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ, ಆಗುಂಬೆ ಸೇರಿದಂತೆ ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಭಾರಿ ಮಳೆಗೆ ಹಲವೆಡೆ ಹಾನಿಯಾಗಿದೆ. ಕೆಲವೆಡೆ ಗುಡ್ಡಗಳು ಕುಸಿದಿರುವ ಬಗ್ಗೆ ವರದಿಯಾಗಿದೆ. ಮುಂಜಾಗ್ರತಾ […]

ಕಾಫಿನಾಡಿನಲ್ಲಿ ಮತ್ತೆ ವರುಣನ ಆಗಮನ..ಜಿಲ್ಲೆಯಾದ್ಯಂತ ಭಾರಿ ಮಳೆ..!

Tuesday, June 19th, 2018
heavy-rain

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮತ್ತೆ ವರುಣನ ಆಗಮನವಾಗಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಮಲೆನಾಡಿನ ಹಲವೆಡೆ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟಿಯಲ್ಲಿಯೂ ಹೆಚ್ಚು ಮಳೆಯಾಗುತ್ತಿದೆ. ಅಷ್ಟೇ ಅಲ್ಲದೇ ರಸ್ತೆ ಕಾಣದಂತೆ ಮಂಜು ಆವರಿಸಿದೆ. ಮಂಜಿನ ಜೊತೆಯೇ ಮಳೆ ಸುರಿಯುತ್ತಿರುವುದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರಿಗೆ ಕೊಂಚ ತೊಂದರೆಯುಂಟಾಗಿದೆ. ಇನ್ನು ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಮೂಡಿಗೆರೆ, ಚಾರ್ಮಾಡಿ ಘಾಟ್ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದೆ.

ಜಿಲ್ಲೆಯಲ್ಲಿ ವರುಣನ ಆರ್ಭಟ…ಮುಳುಗಡೆ ಭೀತಿಯಲ್ಲಿ ಶೃಂಗೇರಿ ದೇಗುಲ!

Thursday, June 14th, 2018
shringeri-rain

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಶೃಂಗೇರಿ ದೇವಸ್ಥಾನದ ಮೆಟ್ಟಿಲುಗಳ ತನಕ ನೀರು ಬಂದಿದ್ದು ಮುಳುಗಡೆ ಭೀತಿಯಲ್ಲಿದೆ. ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಇನ್ನು ಕಳಸ ಸಮೀಪದ ಹಳುವಳ್ಳಿ ಎಂಬಲ್ಲಿ ರಸ್ತೆಗೆ ನೀರು ನುಗ್ಗಿದ್ದು, ಕಳಸ- ಬಾಳೆಹೊನ್ನೂರು ಸಂಪರ್ಕ ಕಡಿತವಾಗಿದೆ. ನೆಲ್ಲಿಬೀಡು, ಕುದುರೆಮುಖದಲ್ಲಿ ಸೇತುವೆಯ ಮೇಲೆ ನೀರು ಹರಿದ ಪರಿಣಾಮ ಕಳಸ-ಕುದುರೆಮುಖ-ಮಂಗಳೂರು ರಸ್ತೆ ಸಂಪರ್ಕ ಕೂಡಾ ಕಡಿತಗೊಂಡಿದೆ. ಅಲ್ಲದೆ ಕಳಸ-ಹೊರನಾಡು,ಕಳಸ-ಕಳಕೋಡು ಸಂಪರ್ಕ ಕೂಡಾ ಕಡಿತಗೊಂಡಿದೆ. ಕುದುರೆಮುಖ ಅಯ್ಯಪ್ಪ […]