ಸುತ್ತಿಗೆಯಿಂದ ಹೊಡೆದು ತಂದೆಯನ್ನು ಸಾಯಿಸಿದ ಮಗ

Monday, January 18th, 2021
sridhar

ಬೆಳ್ತಂಗಡಿ : ಮಗನೊಬ್ಬ ತನ್ನ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ ಘಟನೆ ಬೆಳ್ತಂಗಡಿತಾಲ್ಲೂಕಿನ ಗರ್ದಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಜನವರಿ 18 ರ ಸೋಮವಾರ ನಡೆದಿದೆ. ಮೃತರನ್ನು ಶ್ರೀಧರ್ ಎಂದು ಗುರುತಿಸಲಾಗಿದೆ, ಅವರ ಮಗ ಹರೀಶ್ ಈ ಕೊಲೆ ಮಾಡಿದ ಆರೋಪಿ.ಮೃತ ರಿಗೆ ಇಬ್ಬರು ಗಂಡು ಮತ್ತು ಒಬ್ಬರು ಮಗಳು ಇದ್ದಾರೆ. ಕೌಟುಂಬಿಕ ವಿವಾದವೇ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಬಂಟ್ವಾಳ ಉಪ ತಹಶೀಲ್ದಾರ್ ಕೋಡಜಾಲು ಶ್ರೀಧರ್ ಹೃದಯಾಘಾತದಿಂದ ನಿಧನ

Sunday, September 6th, 2020
sridhar

ಬಂಟ್ವಾಳ: ಬಂಟ್ವಾಳ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್ ಕೋಡಿಜಾಲ್ ಅವರು ರವಿವಾರ  ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೂಲತಃ ಪುತ್ತೂರಿನ ಕಸ್ಬಾ ಕೋಡಜಾಲು ನಿವಾಸಿಯಾಗಿದ್ದ ಶ್ರೀಧರ್ (46), ಪ್ರಸ್ತುತ ಪುತ್ತೂರಿನ ಜಿಡೆಕಲ್ಲುನಲ್ಲಿ ವಾಸವಾಗಿದ್ದರು. ನಿನ್ನೆ ಸಂಜೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಶ್ರೀನಿವಾಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಕೋವಿಡ್ ವಾರಿಯರ್ […]

ವಿದೇಶಿ ಕರೆನ್ಸಿ ಸೇರಿದಂತೆ 8.50 ಲಕ್ಷ ರೂ. ನಗದು ವಶ: ನಾಲ್ವರ ಬಂಧನ

Wednesday, October 31st, 2018
currency

ಮೈಸೂರು: ನಾಲ್ವರು ದರೋಡೆಕೋರರನ್ನು ಬಂಧಿಸಿ, ಅವರಿಂದ ವಿದೇಶಿ ಕರೆನ್ಸಿ ಸೇರಿದಂತೆ 8.50 ಲಕ್ಷ ರೂ. ನಗದನ್ನು ವಿಜಯನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ನಗರ ತಾಲೂಕು ಮಿರ್ಲೆ ಗ್ರಾಮದ ಶ್ರೀಧರ್ (28), ಕೂರ್ಗಳ್ಳಿ ಗ್ರಾಮದ ನಟೇಶ್ (24), ಬೆಂಗಳೂರಿನ ವಿನಾಯಕ ಲೇಔಟ್‍ನ ಪ್ರಸಾದ್ (24), ಬೆಂಗಳೂರಿನ ಅಮೃತಹಳ್ಳಿಯ ಭರತ್‍ಕುಮಾರ್ (20) ಬಂಧಿತ ಆರೋಪಿಗಳು. ಶಿವರಾಂಪೇಟೆ ರಸ್ತೆಯಲ್ಲಿರುವ ಫಾರಿನ್ ಕರೆನ್ಸಿ ಎಕ್ಸ್ಚೇಂಜ್ ಆಫೀಸ್ ಮಾಲೀಕ ಅರುಣ್ ಕುಮಾರ್ ಎಂಬುವರು ಸೆ.22ರಂದು ರಾತ್ರಿ ತಮ್ಮ ಕಚೇರಿಗೆ ಬೀಗ ಹಾಕಿಕೊಂಡು ವಿಜಯನಗರದಲ್ಲಿರುವ ತಮ್ಮ […]

ಎಂಡೋಸಲ್ಫಾನ್ ಬಾಧಿತರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

Thursday, December 20th, 2012
ABVP Protest

ಮಂಗಳೂರು :ಎಂಡೋಸಲ್ಫಾನ್ ಬಾಧಿತರಿಗೆ ಸೂಕ್ತ ರೀತಿಯ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೊಕ್ಕಡ ಗ್ರಾಮದ ಎಂಡೋಸಲ್ಫಾನ್ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ್ ಮಾತನಾಡಿ, 1980ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 92 ಗ್ರಾಮಗಳಲ್ಲಿ ಎಂಡೋಸಲ್ಫಾನನ್ನು ಹೆಲಿಕಾಫ್ಟರ್ ಮುಖಾಂತರ ಸಿಂಪಡನೆ ಮಾಡಲಾಯಿತು.1980ರ ಸಂದರ್ಭದಲ್ಲಿ ಗೇರು ಬೆಳೆಗೆ ನುಸಿ ಬಾಧೆ ಪ್ರಾರಂಭವಾದ ಸಂದರ್ಭದಲ್ಲಿ ಕೇರಳ ಗೇರು ಬೀಜ ನಿಗಮ […]

ಕಾಲ್ಗೆಜ್ಜೆ ಚಿತ್ರ ವಿಮರ್ಶೆ

Saturday, August 21st, 2010
ಕಾಲ್ಗೆಜ್ಜೆ ಚಿತ್ರ ವಿಮರ್ಶೆ

ಬೆಂಗಳೂರು : ಕಾಲ್ಗೆಜ್ಜೆ  ದ್ವನಿ ಸುರುಳಿ  ಜನರನ್ನು  ಮೋಡಿ ಮಾಡಿದೆ. ನಟಿ ರೂಪಿಕಾ, ನಟ ಶ್ರೀಧರ್, ಯುವ ನಟ ವಿಶ್ವಾಸ್ ಅಭಿನಯದ ಈ ಚಿತ್ರ ಸಂಗೀತ ಹಾಗೂ ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡ ಕಥೆಯನ್ನು ಹೊಂದಿರುವುದು ಇದರ ಗುಟ್ಟು. ಬ್ರೈಟ್ ಎಂಟರ್‌ಟೈನ್‌ಮೆಂಟ್ ಹೊರತಂದಿರುವ ಸಂಗೀತ ಪ್ರಧಾನ ಚಿತ್ರ ಇದಾಗಿದೆ. ಇದಕ್ಕೆ ಹೆಸರಾಂತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕೆ. ಕಲ್ಯಾಣ್, ಹಂಸಲೇಖ ಹಾಗೂ ನಿರ್ದೇಶಕ ಎಸ್. ಮಹೇಂದರ್ ಹಾಡುಗಳನ್ನು ಬರೆದಿದ್ದಾರೆ.  ಇದೊಂದು ಸಂಗೀತದ ಸುಗ್ಗಿಯನ್ನೇ ನೀಡುವ ಚಿತ್ರವಾಗಿದೆ . ಚಿತ್ರದ […]