ಎಸ್ ಅಂಗಾರ ರವರಿಗೆ ಈ ಬಾರಿಯೂ ತಪ್ಪಿದ ಸಚಿವ ಸ್ಥಾನ

Tuesday, August 20th, 2019
S-angaara

ಮಂಗಳೂರು : ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂತ್ರಿಗಿರಿ ಪಟ್ಟ ದಕ್ಕದಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 7 ಶಾಸಕರನ್ನು ಕೊಟ್ಟರೂ ಜಿಲ್ಲೆಗೆ ಮಂತ್ರಿ ಭಾಗ್ಯ ಸಿಕ್ಕಿಲ್ಲ. ನೂತನ ಸಚಿವ ಸಂಪುಟ ಪಟ್ಟಿಯಲ್ಲಿ ಕೊನೆ ಕ್ಷಣದವರೆಗೆ ಸುಳ್ಯ ಶಾಸಕ ಎಸ್.ಅಂಗಾರ ಅವರು ಹೆಸರು ಕಾಣಿಸಿಕೊಂಡಿತ್ತು. ಸಚಿವ ಸ್ಥಾನ ದೊರಕುವ ನಿರೀಕ್ಷೆಯಲ್ಲಿ ಅಂಗಾರ ನಿನ್ನೆ ರಾತ್ರಿಯೇ ಕುಟುಂಬದೊಂದಿಗೆ ಬೆಂಗಳೂರಿಗೆ ತೆರಳಿದ್ದರು. […]

‘ಯಾವನ್ರೀ ಅವನು ಶ್ರೀನಿವಾಸ ಶೆಟ್ಟಿ..ಅವನ ಮುಖಾನೇ ನಾನು ನೋಡಿಲ್ಲ’: ಏಕವಚನದಲ್ಲಿ ಠೀಕಿಸಿದ ಮಾಜಿ ಸಿಎಂ

Friday, October 26th, 2018
siddaramaih

ಕುಂದಾಪುರ: ಕುಂದಾಪುರದ ಶಾಸಕ, ಕುಂದಾಪುರದ ವಾಜಪೇಯಿ ಎಂದೆ ಖ್ಯಾತರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಏಕವಚನದಲ್ಲಿ ಟೀಕಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೈಂದೂರು ಮಾಜಿ ಶಾಸಕರನ್ನು ಹೊಗಳುತ್ತಾ, ‘ಪೂಜಾರಿಯವರು ಬಹಳಷ್ಟು ಅನುದಾನ ತಂದಿದ್ದಾರೆ. ಆದರೆ ಮತದಾರ ಅವರನ್ನು ಮತ್ತೆ ಗೆಲ್ಲಿಸಲಿಲ್ಲ. ಕೋಟಿಗಟ್ಟಲೇ ಕ್ಷೇತ್ರಕ್ಕೆ ಅನುದಾನ ತಂದಿದ್ದು ಪಕ್ಕದ ಕಷೇತ್ರದ ಯಾವ ಶಾಸಕರು ಇಷ್ಟು ಅನುದಾನ ತಂದಿದ್ದಾರೆಯೇ? ಯಾವನ್ರೀ ಅವನು ಶ್ರೀನಿವಾಸ ಶೆಟ್ಟಿ….ಅವನ ಮುಖಾನೇ ನಾನು ನೋಡಿಲ್ಲ ಎಂದು ಶಾಸಕ ಹಾಲಾಡಿ ಶ್ರೀನಿವಾಸ […]

ಲಂಚ ಪಡೆಯುತ್ತಿದ್ದ ಕರ್ನಾಟಕ ಗೃಹ ಮಂಡಳಿ ಇಬ್ಬರು ಅಧಿಕಾರಿಗಳು ಎಸಿಬಿ ಪೊಲೀಸರ ಬಲೆ..!

Saturday, September 29th, 2018
offecer

ಮಂಗಳೂರು: ಸಾಲ ಮರುಪಾವತಿಸಿದ ಬಳಿಕ ಮೂಲ ದಾಖಲೆಗಳನ್ನು ಹಿಂತಿರುಗಿಸಲು ಲಂಚ ಪಡೆಯುತ್ತಿದ್ದ ಕರ್ನಾಟಕ ಗೃಹ ಮಂಡಳಿ ನಿಗಮದ ಇಬ್ಬರು ಅಧಿಕಾರಿಗಳು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಗೃಹ ಮಂಡಳಿ ನಿಗಮದ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ ಎಂಬವವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೋರ್ವ ತಪ್ಪಿತಸ್ಥ ಅಧಿಕಾರಿ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್ ಎಂಬವವರು ಪರಾರಿಯಾಗಿದ್ದಾರೆ. ಮಂಗಳೂರಿನ ಬಜ್ಪೆ ಅದ್ಯಪಾಡಿ ನಿವಾಸಿ ಗಂಗಾಧರ […]

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ

Wednesday, January 31st, 2018
srinivas-shetty

ಕುಂದಾಪುರ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಶಾಸಕ ಸ್ಥಾನಕ್ಕೆ ನಿನ್ನೆ(ಜ.30) ರಾಜೀನಾಮೆ ನೀಡಿದ್ದಾರೆ. ತಮ್ಮ ಮಾತೃಪಕ್ಷವಾದ ಬಿಜೆಪಿಗೆ ಅವರು ಮತ್ತೆ ಸೇರಪಡೆಯಾಗಲಿರುವ ಹಿನ್ನೆಲೆಯಲ್ಲಿ ಅವಧಿ ಮುಗಿಯುವ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕುಂದಾಪುರ ಚುನಾವಣಾ ಅಖಾಡದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಯುದ್ಧ 2013 ರ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕುಂದಾಪುರ ಕ್ಷೇತ್ರದಿಂದ ಚುನಾವಣೆಗೆ ನಿಂತು ಅವರು ಗೆಲುವು ಸಾಧಿಸಿದ್ದರು. ಫೆ.4 ರಂದು ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಪ್ರಧಾನಿ […]

ಕುಂದಾಪುರ ಚುನಾವಣಾ ಅಖಾಡದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಯುದ್ಧ

Tuesday, January 30th, 2018
kundapur

ಉಡುಪಿ: ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕುಂದಾಪುರ ವಿಧಾನಸಭಾ ಕ್ಷೇತ್ರ ಹೆಚ್ಚು ಕುತೂಹಲ ಮೂಡಿಸಿದೆ. ಜಿಲ್ಲೆಯಲ್ಲಿ ಸ್ವಲ್ಪವಾದರೂ ಕೃಷಿ ಜೀವಂತವಾಗಿರುವ ತಾಲೂಕು ಕುಂದಾಪುರ. ಇಲ್ಲಿನ ಸುಂದರ ಪ್ರಕೃತಿ ಮಡಿಲು, ಮರವಂತೆಯ ಕಡಲಿನ ಸೌಂದರ್ಯ ಎಲ್ಲವೂ ಚಿತ್ತಾಕರ್ಷಕ. ಪ್ರಕೃತಿಯ ಸೌಂದರ್ಯದ ನಡುವೆಯೂ ಇಲ್ಲಿ ಆಗಾಗ ನಕ್ಸಲರ ಗುಂಡಿನ ಸದ್ದು ಜಿಲ್ಲಾಡಳಿತವನ್ನು ಕಂಗೆಡಿಸುತ್ತಿದೆ. ಕುಂದಗನ್ನಡದ ಕಡಲತಡಿಯ ನಗರ ಕುಂದಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ಇಲ್ಲಿಯವರೆಗೆ ಪೈಪೋಟಿ ನಡೆಯುತ್ತಾ ಬಂದಿದೆ. ಇಲ್ಲಿ ಜೆಡಿಎಸ್ ಆಟಕ್ಕೂಂಟು ಲೆಕ್ಕಕ್ಕಿಲ್ಲದ […]