ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ : ಸಂತೋಷ್ ಬಜಾಲ್

Monday, February 3rd, 2020
protest

ಬಜಾಲ್ : ಬಜಾಲ್ ಪಕ್ಕಲಡ್ಕದಿಂದ ಚರ್ಚ್ ವರೆಗಿನ ಮುಖ್ಯ ರಸ್ತೆ ಕಾಮಗಾರಿ ಕೆಲಸ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಲು ಸಾದ್ಯವಾಗದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿರಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಬಜಾಲ್ ಪಕ್ಕಲಡ್ಕ ಮುಖ್ಯ ರಸ್ತೆಯ ಕಾಂಕ್ರೀಟೀಕರಣ ಕೆಲಸವನ್ನು ಕೂಡಲೇ ಪೂರ್ಣಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ವದ ಯೋಜನೆ ಪಡೆದ ಗುತ್ತಿಗೆದಾರ ಕಂಪೆನಿ ಸರಿಯಾಗಿ ಕೆಲಸ […]

ಸಂಘ ಪರಿವಾರದ ಕಾರ್ಯಕರ್ತರು ಏನು ಮಾಡಿದರೂ ನಡೆಯುತ್ತದೆ – ಸಂತೋಷ್ ಬಜಾಲ್

Thursday, July 4th, 2019
Sunil-Kumar

ಉಳ್ಳಾಲ : ಸಂಘಪರಿವಾರದ ಕಾರ್ಯಕರ್ತರು ಜಿಲ್ಲೆಯಲ್ಲಿ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ದುರಹಂಕಾರದಿಂದ ವರ್ತಿಸುತ್ತಿದ್ದು ಇದರ ಪರಿಣಾಮವೇ ಪುತ್ತೂರಿನಲ್ಲಿ ದಲಿತ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವ ಪ್ರಕ್ರಿಯೆ ನಡೆದಿದ್ದು ಇವರ ದುರಹಂಕಾರ ಮತ್ತು ಸೊಕ್ಕನ್ನು ಮುರಿಯಲು ಜಿಲ್ಕೆಯ ಜನತೆ ಮುಂದಾಗಬೇಕಿದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು. ಪುತ್ತೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಖಂಡಿಸಿ , ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮಾದಕ ದ್ರವ್ಯ ಮಾರಾಟ ಜಾಲವನ್ನು […]

ಪ್ರಾಣವನ್ನು ಮುಡಿಪಾಗಿಡುವೆವೆ ಹೊರತು ರಾಜಿ ಮಾಡುವ ಪ್ರಶ್ನೆಯೇ ಇಲ್ಲ- ಸಂತೋಷ್ ಬಜಾಲ್

Monday, June 24th, 2019
dyfi

ಮಂಗಳೂರು  : ಇಂದು ದೇಶವನ್ನು ಆಳುವಂತಹ ವ್ಯವಸ್ಥೆ ಬಹಳ ವ್ಯವಸ್ಥಿತವಾಗಿ ನಮ್ಮ ಸಂವಿಧಾನದ ಆಶಯವನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬುಡಮೇಲು ಮಾಡಲು ಹೊರಟಿದೆ. ಇಂತಹ ದೇಶವಿರೋಧಿ, ಜನವಿರೋಧಿ ನೀತಿಗಳ ವಿರುದ್ದ ಸಂವಿಧಾನದ ರಕ್ಷಣೆಗಾಗಿ, ಕೋಮು ಸೌಹಾರ್ದತೆಗಾಗಿ ಮತ್ತು ನವ ಸಮಾಜದ ನಿರ್ಮಾಣಕ್ಕಾಗಿ ನಡೆಯುವ ಹೋರಾಟದಲ್ಲಿ ನಮ್ಮ ಪ್ರಾಣವನ್ನೇ ಮುಡಿಪಾಗಿಡುವೆವೆ ಹೊರತು ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಡಿವೈಎಫ್ಐ ದ.ಕ ಜಿಲ್ಲಾಕಾರ್ಯದರ್ಶಿ ಸಂತೋಷ್ ಬಜಾಲ್ ಅವರು ಇಂದು ಪಕ್ಕಲಡ್ಕದಲ್ಲಿ 17 ವರುಷದ ಹಿಂದೆ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಕಾಂ […]

ನಳಿನ್ ರಾಜಕೀಯ ಆಟಕ್ಕೆ ಜನರಿಂದ ಅಂತಿಮ ಮೊಳೆ: ಸಿಪಿಐ ಮುಖಂಡ ವಿ.ಕುಕ್ಯಾನ್

Monday, October 29th, 2018
toll-gate

ಮಂಗಳೂರು: ಮಂಗಳೂರಿನ ಸುರತ್ಕಲ್ ಎಂಐಟಿಕೆ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಧರಣಿಯಲ್ಲಿ ಭಾಗಿಯಾಗಿದ್ದ ಸಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅವರು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದ್ದಾರೆ. ಮೊದಲು ಅವರ ಅನೈತಿಕ‌ ರಾಜಕಾರಣದ ಕೂಸಾಗಿರುವ ಸುರತ್ಕಲ್ ಟೋಲ್ ಗೇಟ್ ಗೆ ಬೆಂಕಿಹಚ್ಚಲಿ. ಜನತೆಯ ಬದುಕಿನ ನೆಮ್ಮದಿಗೆ ಬೆಂಕಿ ಹಚ್ಚುವ ರಾಜಕಾರಣವನ್ನು ಇನ್ನಾದರು ಕೈಬಿಡಲಿ. ಇಲ್ಲದಿದ್ದಲ್ಲಿ ಈ ಬಾರಿ ನಳಿನ್ ರ ರಾಜಕೀಯ […]

ಕನಿಷ್ಟ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿ ಯು.ಟಿ ಖಾದರ್ ಸಂಪೂರ್ಣ ವಿಫಲ: ಸಂತೋಷ್ ಬಜಾಲ್

Monday, October 1st, 2018
santhosh

ಮಂಗಳೂರು: ಜನರಿಗೆ ಒಂದು ಪ್ರದೇಶದಿಂದ ಇನ್ನೊಂದೆಡೆಗೆ ಓಡಾಟ ನಡೆಸಲು ಸಾರಿಗೆ ವ್ಯವಸ್ಥೆ ಕಲ್ಪಿಸೋದು ಸರಕಾರದ ಆದ್ಯ ಕರ್ತವ್ಯ.ಆದರೆ ಹರೇಕಳ ಗ್ರಾಮಕ್ಕೆ ಕಳೆದ ಕಲವು ವರುಷಗಳಿಂದ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಬೀದಿಗಿಳಿದು ಹೋರಾಟ ನಡೆಸಿದರೂ ಮನವಿಗೆ ಸ್ಪಂಧಿಸದ ಸ್ಥಳೀಯ ಶಾಸಕ ಯು.ಟಿ ಖಾದರ್ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸೋದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಹರೇಕಳದಲ್ಲಿ ಸಮರ್ಮಕ ಬಸ್ ವ್ಯವಸ್ಥೆ ಹಾಗೂ ಸರಕಾರಿ ಬಸ್ಸಿಗೆ ಒತ್ತಾಯಿಸಿ ನಡೆದ […]

ಸಿಐಟಿಯು ನೇತೃತ್ವದಲ್ಲಿ ಭವಿಷ್ಯನಿಧಿ ಕಚೇರಿಗೆ ಕಾರ್ಮಿಕರಿಂದ ಬೃಹತ್ ಮುತ್ತಿಗೆ

Tuesday, March 13th, 2018
CPF-office

ಮಂಗಳೂರು: ದಿನಾಂಕ 13-03-2018 ರಂದು ಮಂಗಳೂರು ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆಗೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಮುತ್ತಿಗೆ ಕಾರ್ಯಕ್ರಮವು ನಡೆಯಿತು. ಸಂಸ್ಥೆಯಲ್ಲಿರುವ ಸದಸ್ಯರಿಗೆ ಆಧಾರ ಕಾರ್ಡ್‌ನ್ನು ಯಾವುದೇ ಕಾರಣಕ್ಕೂ ಕಡ್ಡಾಯಗೊಳಿಸಬಾರದು, ಈಗಾಗಲೇ ಪ್ರೊವಿಡೆಂಟ್ ಪಂಡ್ ಕಚೇರಿಯಲ್ಲಿ ದಾಖಲಾಗಿರುವ ಹುಟ್ಟಿದ ದಿನಾಂಕವನ್ನು ಅಧಿಕೃತಗೊಳಿಸಬೇಕು, ಪಿಂಚಣಿದಾರರಿಗೆ ಅವರ ಸೌಲಭ್ಯವನ್ನು ಪಡೆಯುವರೇ ಕ್ರಮ ನಿಯಮವನ್ನು ಸರಳೀಕರಣಗೊಳಿಸಬೇಕು, ಪಿಂಚಣಿದಾರರ ಜೀವಿತ ಪ್ರಮಾಣ ಪತ್ರಕ್ಕಾಗಿ ಪ್ರತಿ ಬ್ಯಾಂಕಿನಲ್ಲಿಯೇ ಹೆಬ್ಬೆಟ್ಟು ಗುರುತು ಪಡೆಯುವ ವ್ಯವಸ್ಥೆ ಮಾಡಬೇಕು, ಎಲ್ಲಾ ಪ್ರೊವಿಟೆಂಟ್ ಪಂಡ್ ಖಾತೆದಾರರ ಹಣ ಅವರಿಗೆ ಲಭ್ಯವಿರುವಂತೆ ವ್ಯವಸ್ಥೆ […]