ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿ.ಎಸ್ ಯಡಿಯೂರಪ್ಪ ಭೇಟಿ ಆದ ಶೋಭಾ

Thursday, March 14th, 2024
shobha-karandlaje

ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರದಿಂದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕೇಂದ್ರಸ ಚಿವೆ ಶೋಭಾ ಕರಂದ್ಲಾಜೆಯವರು ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ರಾಷ್ಟ್ರೀಯ ನಾಯಕರ ಮೇಲೆ ವಿಶ್ವಾಸ ನನಗೆ ಇತ್ತು. ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಉಡುಪಿ- ಚಿಕ್ಕಮಗಳೂರು ಜಿಲ್ಲೆಯಲ್ಲೂ ಅಭಿವೃದ್ಧಿ ಆಗಿತ್ತು. ಆದರೆ ಕೆಲವರು ಸಹಿಸಲಿಲ್ಲ. ಪ್ರಾಯೋಜಿತ ಪ್ರತಿಭಟನೆಗಳು ನಡೆದವು. ತಮಗೆ ಟಿಕೆಟ್ ಬೇಕು ಎಂದು ಕೆಲವರು ಮಾಡಿಸಿದರು, ಅವರು ಯಶಸ್ವಿ ಆಗಲಿಲ್ಲ. ಅವರು […]

ಸಿದ್ದರಾಮಯ್ಯ ಬಜೆಟ್ ಟೀಕೆಗೆ ಸದಾನಂದಗೌಡ ತಿರುಗೇಟು

Tuesday, February 2nd, 2021
sadananda Gowda

ನವದೆಹಲಿ : ಕೊರೊನಾದಂತಹ ಸಾಂಕ್ರಾಮಿಕ ರೋಗವು ತಂದೊಡ್ಡಿರುವ ಆರ್ಥಕ ಸಂಕಷ್ಟದ ಮಧ್ಯೆಯೂ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಅತ್ಯುತ್ತಮವಾದ ಬಜೆಟ್‌ ಮಂಡಿಸಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದಗೌಡ ಅವರು ತಿಳಿಸಿದ್ದಾರೆ. ಬಜೆಟ್‌ ನಂತರ ಇಲ್ಲಿ ಸುದ್ದಿಗಾರರೊಂದಿವೆ ಮಾತನಾಡಿದ ಸಚಿವರು – ಆಯವ್ಯಯವು ತಾತ್ಕಾಲಿಕ ಅವಶ್ಯಕತೆಗಳ ಜೊತೆಗೇ ದೇಶವನ್ನು ಅಭಿವೃದ್ಧಿ ಪಥದ ಮೇಲೆ ಕೊಂಡೊಯ್ಯುವ ದೂರದೃಷ್ಟಿ ಪ್ರಸ್ತಾವನೆಗಳನ್ನು ಒಳಗೊಂಡಿದೆ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳನ್ನೂ ಸ್ವಾವಲಂಬಿಯಾಗಿ ರೂಪಿಸುವ […]

ಅಭಿವೃದ್ಧಿ ವೇಗ ಹೆಚ್ಚಿಸಲು ಎರಡೂ ಸದನಗಳಲ್ಲಿ ಬಹುಮತ ಬೇಕು: ಸದಾನಂದಗೌಡ

Tuesday, October 27th, 2020
Sadananda Gowda

ಬೆಂಗಳೂರು: ಅಭಿವೃದ್ದೀಯ ವೇಗ ಹೆಚ್ಚಿಸಲು ಸರ್ಕಾರಕ್ಕೆ ಮೇಲ್ಮನೆಯಲ್ಲಿಯೂ ಬಹುಮತ ಬೇಕು. ಇಲ್ಲವಾದರೆ ಅನಗತ್ಯ ಅಡಚಣೆ ಉಂಟಾಗುತ್ತದೆ. ಈ ಮುಂಚೆ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದೆ ಅನೇಕ ಕ್ರಾಂತಿಕಾರಕ ಮಸೂದೆಗಳು ವಿಳಂಬಗೊಂಡವು. ಆ ಪರಿಸ್ಥಿತಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬರಬಾರದು. ಹಾಗಾಗಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಎಲ್ಲ ನಾಲ್ವರು ಅಭ್ಯರ್ಥಿಗಳನ್ನೂ ಗೆಲ್ಲಿಸಿ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಕರೆ ನೀಡಿದ್ದಾರೆ. […]

ಗಾಯಾಳುವಿಗೆ ತನ್ನ ಕಾರು ನೀಡಿ ಮಾನವೀಯತೆ ಮೆರೆದ ಕೇಂದ್ರ ಸಚಿವ ಸದಾನಂದಗೌಡ

Friday, October 11th, 2019
sadananda-gowda

ಬೆಂಗಳೂರು : ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿದ್ದ ದಂಪತಿಗಳ ಪೈಕಿ ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಕೇಂದ್ರ ಸಚಿವ ಸದಾನಂದಗೌಡ ಅವರು ತಮ್ಮ ಕಾರು ನೀಡಿ ಅರ್ಧ ಕಿ.ಮೀ. ದೂರದ ಮನೆಗೆ ನಡೆದು ಸಾಗಿ ಮಾನವೀಯತೆ ಮೆರೆದಿದ್ದಾರೆ. ಗುರುವಾರ ರಾತ್ರಿ ತಮ್ಮ ಕಾರ್ಯ ಮುಗಿಸಿ ಡಿ.ವಿ.ಎಸ್. ಅವರು ಮನೆಯತ್ತ ಸಾಗುತ್ತಿದ್ದ ವೇಳೆ ಇಸ್ರೊ ಕಚೇರಿ ಮುಖ್ಯರಸ್ತೆಯಲ್ಲಿ ದಂಪತಿ ಆಯಾತಪ್ಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಕಾರು ನಿಲ್ಲಿಸಿದ ಅವರು ಕೆಳಗಿಳಿದು ದಂಪತಿಯನ್ನು ಉಪಚರಿಸಿದ್ದಲ್ಲದೇ ತಮ್ಮ ಚಾಲಕ […]

ಪುತ್ತೂರು ನಗರಸಭೆ ಚುನಾವಣೆಯಲ್ಲಿ  ಮತ ಹಕ್ಕು ಚಲಾಯಿಸಿದ ಕೇಂದ್ರ ಸಚಿವ ಸದಾನಂದಗೌಡ

Friday, August 31st, 2018
sadanand-gowda

ಮಂಗಳೂರು: ಪುತ್ತೂರು ನಗರಸಭೆ ಚುನಾವಣೆ ಹಿನ್ನೆಲೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಮತದಾನ ಮಾಡಿದರು. ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಮತ ಚಲಾಯಿಸಿದ ಸದಾನಂದಗೌಡ, ಚುನಾವಣೆಯಲ್ಲಿ ಹೆಚ್ಚಿನ ಕಡೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಸರಕಾರದ ನೂರು ದಿನಕ್ಕೆ ಜನರು ಬೇಸರದಲ್ಲಿದ್ದಾರೆ. ಸರಕಾರ ಬರೀ ಘೋಷಣೆ, ಆಶ್ವಾಸನೆಗಳಿಗೆ ಸೀಮಿತವಾಗಿದೆ. ಸಮ್ಮಿಶ್ರ ಸರಕಾರದಲ್ಲಿ ಅಸಮಾಧಾನವೇ ತುಂಬಿದೆ. ಇಂತಹ ಅಸ್ಥಿರ ಸರಕಾರ ಕರ್ನಾಟಕದಲ್ಲಿ ಹಿಂದೆಂದೂ ಇರಲಿಲ್ಲ ಎಂದರು. ಪದೇ ಪದೆ ನಡೆಯುವ ಚುನಾವಣೆಯಿಂದ ಅಭಿವೃದ್ಧಿ ಕಾರ್ಯಗಳಿಗೆ […]

‘ಐದು ವರ್ಷ ನಾವೇ ಸಿಎಂ…4 ಗಂಟೆವರೆಗೆ ಕಾಯಿರಿ’

Saturday, May 19th, 2018
sadanand-gowda

ಬೆಂಗಳೂರು: ನಾವು ಇಂದು 100ಕ್ಕೆ 100 ರಷ್ಟು ಬಹುಮತ ಸಾಬೀತುಪಡಿಸುತ್ತೇನೆ ಎಂದು ಕೇಂದ್ರ ಸಚಿವರಾದ ಸದಾನಂದಗೌಡ ಹಾಗೂ ಅನಂತ್‌ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಾಂಗ್ರಿಲಾ ಹೋಟೆಲ್‌ ಬಳಿ ಮಾತನಾಡಿದ ಅನಂತ್‌ ಕುಮಾರ್, ನಾವು ಬಹುಮತ ಸಾಬೀತು ಪಡಿಸುತ್ತೇವೆ. ಅನುಮಾನ ಬೇಡ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಸದಾನಂದಗೌಡರು, 100 ಕ್ಕೆ 100 ವಿಶ್ವಾಸ ಮತ ಗಳಿಸುತ್ತೇವೆ. ಐದು ವರ್ಷ ನಾವೇ ಮುಖ್ಯಮಂತ್ರಿ ಆಗಿ‌ ಮುಂದುವರೆಯುತ್ತೇವೆ. 4 ಗಂಟೆಯವರೆಗೆ ಕಾಯಿರಿ ಎಂದು ಹೇಳಿದ್ದಾರೆ.

ಮೋದಿಯ ನವ ಭಾರತ ನಿರ್ಮಾಣದ ಕನಸಿಗೆ ರಾಜ್ಯದ ಜನ ಸ್ಪಂದಿಸಲಿದ್ದಾರೆ: ಸದಾನಂದಗೌಡ

Friday, April 27th, 2018
sadananda-gowda

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತ ನಿರ್ಮಾಣದ ಕನಸಿಗೆ ರಾಜ್ಯದ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ಹೆಬ್ಬಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಅವರೊಂದಿಗೆ ಭೂಪಸಂದ್ರ ವಾರ್ಡ್‍ನ ಸೆಂಟ್ರಲ್ ಎಕ್ಸೈಸ್ ಬಡಾವಣೆಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ನಂತರ ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಮಾತನಾಡಿದ ಅವರು, ರಾಜ್ಯದ ಮತದಾರರು ಮೋದಿ ನೇತೃತ್ವದ ಆಭಿವೃದ್ದಿ ಪರ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ನವ ಬೆಂಗಳೂರು-ನವ ಭಾರತ ಘೋಷಣೆ ಅಡಿಯಲ್ಲಿ ಪ್ರಧಾನಿ ಮೋದಿಯವರ […]