ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು: ಜಗದೀಶ್ ಕಾರಂತ್

Monday, November 28th, 2016
Hindu samavesha

ಮಂಗಳೂರು: ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ಎದುರಿಸುವುದೂ ಅಲ್ಲ ಬದಲಾಗಿ ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು. ಹಿಂದೂ ಜಾಗರಣ ವೇದಿಕೆಯ ಶಕ್ತಿನಗರ ವಲಯ ಮತ್ತು ಕಣ್ಣೂರು ನಗರ ಘಟಕಗಳ ಉದ್ಘಾಟನಾ ಪ್ರಯುಕ್ತ ಶಕ್ತಿನಗರದ ಕೇಂದ್ರ ಮೈದಾನದಲ್ಲಿ ಭಾನುವಾರ ಜರುಗಿದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟ, ಸಂಘಟನೆ ಸಮಾವೇಶ ಎಂದರೆ ಸಮಸ್ಯೆಗಳ ವೈಭವೀಕರಣ ಬಿಟ್ಟು ಉತ್ತರ ಕಂಡುಕೊಳ್ಳುವಂತಾಗಬೇಕು. ಸಾಮಾಜಿಕ ಪಿಡುಗುಗಳಿಗೆ ಪರಿಹಾರ […]

ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಲು ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕು: ಜಯಶರ್ಮಿಳಾ

Tuesday, July 19th, 2016
Anniversary

ಉಪ್ಪಳ: ಸರಕಾರ ಇಂದು ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇದರ ಬಗ್ಗೆ ಸ್ಪಷ್ಟ ಅರಿವಿನ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.ವಿದ್ಯಾಭ್ಯಾಸದ ಮಟ್ಟ ಮಹಿಳೆಯರಲ್ಲಿ ಸಮಾಧಾನಕರ ಮಟ್ಟದಲ್ಲಿದ್ದರೂ ದೌರ್ಜನ್ಯಗಳಂತಹ ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗದಿರುವುದು ಖೇದಕರವಾಗಿದ್ದು,ಈ ನಿಟ್ಟಿನಲ್ಲಿ ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕಿದೆಯೆಂದು ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಜಯಶರ್ಮಿಳಾ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ ಕುಬಣೂರಲ್ಲಿ ಕಾರ್ಯಾಚರಿಸುತ್ತಿರುವ ಚಿನ್ಮಯೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವವನ್ನು ಕುಬಣೂರು ಶ್ರೀರಾಮ ಎಯುಪಿ ಶಾಲೆಯಲ್ಲಿ ಉದ್ಘಾಟಿಸಿ ಅವರು […]

ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು

Friday, July 25th, 2014
child labor

ಮಂಗಳೂರು : (ಲೇಖನ) ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು. ಸಮಾಜದ ಸೌಸ್ಥ್ಯವನ್ನು ಕದಡುವ ಅನಿಷ್ಠ ಪದ್ಧತಿ. ಮಕ್ಕಳ ಭವಿಷ್ಯವನ್ನು ಎಳೆ ವಯಸ್ಸನಲ್ಲಿಯೇ ಚಿವುಟುವ ಕ್ರೂರ ಪದ್ಧತಿ. ಒಂದು ದೇಶದ ಸಾಮಾಜಿಕ ಹಾಗೂ ಆರ್ಥಿಕತೆ ಮೇಲೆ ಪ್ರತೀಕೂಲ ಪರಣಾಮ ಬೀರಬಲ್ಲ ಶಕ್ತಿಯನ್ನು ತನ್ನ ಆಂತರ್ಯದಲ್ಲಿ ಹುದುಗಿಸಿಕೊಂಡಿರುವ ಪದ್ಧತಿ. ಈ ಸಮಸ್ಯೆ ಕುರಿತು ಅಧ್ಯಯನ ಮಾಡಿದರೆ ಅದರ ಆಳ ಹಾಗೂ ವಿಸ್ತಾರ ಭಯಾನಕವೆನಿಸುತ್ತದೆ. ಈ ಸಮಸ್ಯೆ ಕೇವಲ ಒಂದು ಪ್ರಾಂತ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ಇದು ವಿಶ್ವ […]