ವಿದ್ಯುತ್ ಖಾಸಗೀಕರಣದ ಮೂಲಕ ದೇಶವನ್ನೇ ಕತ್ತಲು ಮಾಡುವ ಹುನ್ನಾರ – ಸುನಿಲ್ ಕುಮಾರ್ ಬಜಾಲ್

Thursday, November 2nd, 2023
citu

ಮಂಗಳೂರು : ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ,ವಿತರಣೆ ಹಾಗೂ ಕಂದಾಯ ಆಕರಣೆ ಇದ್ಯಾವುದನ್ನೂ ಸರಕಾರ ಮಾಡಬಾರದು. ಅವೆಲ್ಲವನ್ನೂ ಖಾಸಗೀಯವರಿಗೆ ವಹಿಸಿ ಸರಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂದು ಕೇಂದ್ರ ಸರಕಾರದ ಅಡಿಯಲ್ಲಿರುವ ನೀತಿ ಆಯೋಗ ಅತ್ಯಂತ ಸ್ಪಷ್ಟವಾಗಿ ಹೇಳಿರುವುದು, ದೇಶದ ಸಂಪತ್ತನ್ನು ಮಾರಲು ಹೊರಟ ಕೇಂದ್ರ ಸರಕಾರದ ಧೋರಣೆ ಏನೆಂಬುದು ಜಗಜ್ಜಾಹೀರಾಗಿದೆ. ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಮೂಲಕ ಇಡೀ ದೇಶವನ್ನೇ ಕತ್ತಲು ಮಾಡಲು ಹೊರಟಿದೆ. ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು […]

ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶ ಉಳಿಸಲು ಸಾಧ್ಯ – ಸುನಿಲ್ ಕುಮಾರ್ ಬಜಾಲ್

Sunday, October 31st, 2021
cpim

ಮಂಗಳೂರು  : ಒಂದು ಕಡೆ ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯ ನಡೆದರೆ ಮತ್ತೊಂದು ಕಡೆ ಜಾಗತೀಕರಣ ಉದಾರೀಕರಣ ಖಾಸಗೀಕರಣ ನೀತಿಗಳ ಫಲವಾಗಿ ದೇಶದ ಆರ್ಥಿಕತೆಯನ್ನೇ ನಾಶ ಮಾಡಲಾಗುತ್ತಿದೆ.ಇದರಿಂದಾಗಿ ಹಿಂದುತ್ವ ಸರ್ವಾದಿಕಾರಶಾಹಿ ಹಾಗೂ ಕಾರ್ಪೊರೇಟ್ ನವ ಉದಾರವಾದದ ಒಂದು ವಿಷಕಾರಿ ಮಿಶ್ರಣದಿಂದ ದೇಶ ಗಂಬೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶವನ್ನು ಹಾಗೂ ಜನತೆಯ ಬದುಕನ್ನು ಉಳಿಸಲು ಸಾಧ್ಯ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ […]

ಕೋರೋನಾ ಹತ್ತಿಕ್ಕುವ ನೆಪದಲ್ಲಿ ಜನರನ್ನು ಸುಲಿಗೆ ಮಾಡಲು ಖಾಸಗೀ ಆಸ್ಪತ್ರೆಗಳಿಗೆ ಅನುಮತಿ-ಸುನಿಲ್ ಕುಮಾರ್ ಬಜಾಲ್

Tuesday, June 30th, 2020
cpim

ಮಂಗಳೂರು  : ದಿನದಿಂದ ದಿನಕ್ಕೆ ಕೋರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಳವಾಗುತ್ತಿದ್ದು,5 ಲಕ್ಷಕ್ಕೂ ಮೀರಿದೆ.ಅತ್ಯಂತ ಕಡಿಮೆ ಅಪಾಯವಿದ್ದಾಗ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿ ಇಂದು ಯದ್ವಾತದ್ವಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಸಂಧರ್ಭದಲ್ಲಿ ಕೇಂದ್ರ ಸರಕಾರ ಕೈಚೆಲ್ಲಿ ಕೂತಿದೆ.ಇದರಿಂದಾಗಿ ಜನತೆ ಒಂದು ಕಡೆ ಭಯಭೀತಿಗೊಂಡರೆ, ಮತ್ತೊಂದು ಕಡೆ ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ,ತಿನ್ನಲು ಆಹಾರವಿಲ್ಲದೆ ಯಾತನಾಮಯ ಬದುಕು ಸಾಗಿಸುತ್ತಿದ್ದಾರೆ.ಈತನ್ಮಧ್ಯೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ಜೀವ ರಕ್ಷಿಸುವ ಬದಲು ಕೋರೋನಾ ಹತ್ತಿಕ್ಕುವ ನೆಪದಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡಲು ಖಾಸಗೀ ಆಸ್ಪತ್ರೆಗಳಿಗೆ […]

ವಿದ್ಯುತ್ ದರ ವಿಪರೀತ ಏರಿಕೆ, ಹೆಚ್ಚುವರಿ ಡಿಪಾಸಿಟ್ ; ಮೆಸ್ಕಾಂನ ಹಗಲು ದರೋಡೆ – ಸುನಿಲ್ ಕುಮಾರ್ ಬಜಾಲ್

Wednesday, July 10th, 2019
Sunil-Bajal

ಮಂಗಳೂರು :  ರಾಜ್ಯ ಸರಕಾರವು ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿರುವುದರಿಂದ ಜನಸಾಮಾನ್ಯರು ಭಾರೀ ಸಂಕಷ್ಟವನ್ನು ಎದುರಿಸುವಂತಾಗಿದೆ.ಕಳೆದ ಹಲವು ವರ್ಷಗಳ ಹಿಂದೆ ರಾಜ್ಯ ಸರಕಾರವು ವಿದ್ಯುತ್ ದರವನ್ನು ಏರಿಸುವಾಗ ಜನತೆಗೆ ಬಹಿರಂಗವಾಗಿ ತಿಳಿಸುತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷಕ್ಕೆ 2 ಬಾರಿ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿದ್ದಾರೆ.ಮಾತ್ರವಲ್ಲದೆ ಹೆಚ್ಚುವರಿ ಡಿಪಾಸಿಟ್ ಸಂಗ್ರಹ ಹಾಗೂ ತಪ್ಪು ಲೆಕ್ಕಾಚಾರಗಳ ಮೂಲಕ ಜನರನ್ನು ಹಗಲು ದರೋಡೆ ನಡೆಸುತ್ತಿರುವ ಮೆಸ್ಕಾಂ ಹಾಗೂ ರಾಜ್ಯ ಸರಕಾರದ ವಿರುದ್ದ ಪ್ರಬಲ ಹೋರಾಟ ನಡೆಸಬೇಕೆಂದು* […]

ಜೆ.ಆರ್.ಲೋಬೋ ರವರ ಆಸ್ತಿ ಹೆಚ್ಚಾಗಿರುವುದೇ ಅವರ ಐದು ವರ್ಷದ ಅಭಿವೃದ್ಧಿಯ ಸಾಧನೆ – ಸುನಿಲ್ ಕುಮಾರ್ ಬಜಾಲ್

Friday, April 27th, 2018
sunilbajal

ಮಂಗಳೂರು  : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಜೆ.ಆರ್.ಲೋಬೋರವರಲ್ಲಿದ್ದ ಆಸ್ತಿ ಈ ಚುನಾವಣೆಯ ಸಂದರ್ಭದಲ್ಲಿ ಎರಡುಪಟ್ಟು  ಜಾಸ್ತಿಯಾಗಿರುವುದು ನೋಡಿದರೆ ಈ ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರು ಮಂಗಳೂರನ್ನು ಅಭಿವೃದ್ಧಿ ಮಾಡುವ ಬದಲು ತಾವೇ ಅಭಿವೃದ್ಧಿಯಾಗಿರುವುದು ಇವರ ಮಹಾನ್ ಸಾಧನೆ ಎಂದು ನಿನ್ನೆ ಬಿಕರ್ಣಕಟ್ಟೆ ಯಲ್ಲಿ ನಡೆದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಂಗಳೂರಿನ ಅಭಿವೃದ್ದಿಗೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಎಡಿಬಿ ಯೋಜನೆಯ ಮೂಲಕ […]