Blog Archive

218 ಕೋ.ರೂ. ಕಾಮಗಾರಿ ಸಂಪೂರ್ಣ ವಿಫ‌ಲ

Monday, December 18th, 2017
kamagari

ಮಂಗಳೂರು: ಸುರತ್ಕಲ್‌ ಪರಿಸರದಲ್ಲಿ 2006ರಲ್ಲಿ ಎಡಿಬಿಯಿಂದ 218 ಕೋಟಿ ರೂ. ಸಾಲ ಪಡೆದು ಮಾಡಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ವಿಫಲವಾಗಿದೆ. ಇದರ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸ ಲಾಗುವುದು; ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿ ಯೊಂದಿಗೆ ಚರ್ಚಿಸಿ ಸಿಒಡಿ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ರೋಶನ್‌ ಬೇಗ್‌ ಹೇಳಿದರು. ಸುರತ್ಕಲ್‌ ನಲ್ಲಿ ಮಾತನಾಡಿದ ಅವರು, ಸುರತ್ಕಲ್‌ ಒಳಚರಂಡಿ ಯೋಜನೆ ಒಂದು ಗೋಲ್‌ಮಾಲ್‌ ಎಂದು ಬಣ್ಣಿಸಿದರು. ಬಡ್ಡಿಗೆ ಹಣ ಪಡೆದು ಜನರ ಒಳಿತಿಗಾಗಿ ಕಾಮಗಾರಿ ಮಾಡಲಾಗಿತ್ತು. […]

ಸುರತ್ಕಲ್ -ಮಂಗಳೂರಿಗೆ ಬೈಪಾಸ್ ರಸ್ತೆ ಶಾಸಕ ಮೊದಿನ್ ಬಾವಾ ಗ್ರೀನ್ ಸಿಗ್ನಲ್

Tuesday, October 17th, 2017
surathkal

ಮಂಗಳೂರು: ಟ್ರಾಫಿಕ್ ಸಮಸ್ಯೆಯಿಂದ ನಲುಗಿ ಹೋಗಿರುವ ಸುರತ್ಕಲ್- ಮಂಗಳೂರಿಗೆ ಬೈಪಾಸ್ ರಸ್ತೆ ಬೇಕು ಎನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಾಗರಿಕ ಸಮಿತಿ ಮಂಗಳೂರು ತಾಲೂಕು ಇದರ ಪದಾದಿಕಾರಿಗಳು, ನಿರ್ದೇಶಕರು ಮತ್ತು ನಾಗರಿಕರು ಶಾಸಕ ಮೊದಿನ್ ಬಾವಾರನ್ನು ಅವರ ಸುರತ್ಕಲ್ ನಿವಾಸದಲ್ಲಿ ಭೇಟಿಯಾಗಿ ಸುರತ್ಕಲ್‌ನಿಂದ ಪಂಪ್‌ವೆಲ್ ಸರ್ಕಲ್‌ವರೆಗಿನ ಟ್ರಾಫಿಕ್ ಸಮಸ್ಯೆಯನ್ನು ಮನದಟ್ಟು ಮಾಡಿಕೊಟ್ಟರು. ಅಲ್ಲದೇ ಈಗಾಗಲೇ ಕರ್ನಾಟಕ ಸರಕಾರ 25 ಜಿಲ್ಲೆಗಳಿಗೆ ಅಗತ್ಯವಿರುವ ಬೈಪಾಸ್ ರಸ್ತೆಯ ಸಮೀಕ್ಷೆ, ಯೋಜನಾ ಕಾರ್ಯಕ್ರಮ ತಯಾರಿಕೆಗಾಗಿ ಸಂಪುಟ ಸಭೆಯಲ್ಲಿ ಅನುಮೋದಿಸಿದ 275 […]

ರಶೀದ್ ಮಲಬಾರಿ ಸಹಚರನ ಬಂಧನ

Saturday, October 14th, 2017
Mahamad shameer

ಮಂಗಳೂರು: ಭೂಗತ ಪಾತಕಿ ರಶೀದ್ ಮಲಬಾರಿ ಸಹಚರನನ್ನು ಪಣಂಬೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ಸುರತ್ಕಲ್ ಸಮೀಪದ ಜೋಕಟ್ಟೆ ನಿವಾಸಿ ಮಹಮ್ಮದ್ ಶಮೀರ್ ಅಲಿಯಾಸ್ ಡೆಡ್ಲಿ ಎಂಬಾತನನ್ನು ಪುತ್ತೂರಿನಲ್ಲಿ ಬಂಧಿಸಲಾಗಿದೆ. 2013 ರಲ್ಲಿ ಪಣಂಬೂರು ಠಾಣೆಯಲ್ಲಿ ಮಹಮ್ಮದ್ ಸಮೀರ್ ವಿರುದ್ಧ ಹಫ್ತಾ ವಸೂಲಿ, ಹಲ್ಲೆ, ದರೋಡೆ ಸೇರಿದಂತೆ ಬೆದರಿಕೆ ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿ ಮಹಮ್ಮದ್ ಶಮೀರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ನ್ಯಾಯಾಲಯ ದಿಂದ ಜಾಮೀನು ಪಡೆದಿದ್ದ ಶಮೀರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ […]

ಸುರತ್ಕಲ್‌: ಯುವಕ ನಿಗೂಢವಾಗಿ ನೀರುಪಾಲು, ಕೊಲೆ ಶಂಕೆ

Thursday, October 5th, 2017
surathkal

ಮಂಗಳೂರು: ಇಲ್ಲಿನ ಸೂರಿಂಜೆಯ ಶಿಬರೂರು ದೇವಸ್ಥಾನ ಸಮೀಪ ನಂದಿನಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮಂಗಳವಾರ ಸಂಜೆ ಕೃಷ್ಣಾಪುರದ ಮಕ್ಸೂದ್‌ ಎಂಬಾತ ನಾಲ್ವರು ಸ್ನೇಹಿತರೊಂದಿಗೆ ಈಜಲೆಂದು ತೆರಳಿದ್ದು ರಾತ್ರಿಯಾದರೂ ಮನೆಗೆ ವಾಪಸಾಗಿರಲ್ಲಿಲ್ಲ, ಹೆದರಿದ ಪೋಷಕರು ಸ್ನೇಹಿತರ ಬಳಿ ವಿಚಾರಿಸಿದ್ದಾರೆ. ಅವರು ಸರಿಯಾಗಿ ಉತ್ತರ ನೀಡಿರಲಿಲ್ಲ. ಸುರತ್ಕಲ್‌ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಬುಧವಾರ ಬೆಳಗ್ಗೆ ಮಕ್ಸೂದ್‌ ಜೊತೆ ಈಜಲು ತೆರಳಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನದಿಯ […]

ಸಿಐಎಸ್‍ಎಫ್ ಸಿಬ್ಬಂದಿ ಗುಂಡು ಹಾರಿಸಿ ಆತ್ಮಹತ್ಯೆ

Monday, February 24th, 2014
Sandeep-Sarkate

ಸುರತ್ಕಲ್ : ಸಿಐಎಸ್‍ಎಫ್ ಸಿಬ್ಬಂದಿಯೊಬ್ಬ ತನ್ನ ಸರ್ವಿಸ್ ರೈಫಲ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಪಣಂಬೂರು ಸಿಐಎಸ್‍ಎಫ್ ಕ್ಯಾಂಪ್‍ನಲ್ಲಿ ಸಂಭವಿಸಿದೆ. ಮಹಾರಾಷ್ಟ್ರ ನಿವಾಸಿ ಸಂದೀಪ್ ಸರ್ಕಟೆ (26) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕೇವಲ ಎರಡು ವರುಷದ ಹಿಂದೆಯಷ್ಟೇ ಸಿಐಎಸ್‍ಎಫ್‍ಗೆ ಸೇರ್ಪಡೆಗೊಂಡಿದ್ದ ಸಂದೀಪ್ ಆರಂಭದಿಂದಲೂ ಪಣಂಬೂರು ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಶುಕ್ರವಾರ ಇವರು ರಾತ್ರಿ ಪಾಳಿಯ ಕೆಲಸವನ್ನು ನಿರ್ವಹಿಸುತ್ತಿದ್ದು ತಡರಾತ್ರಿ 1.20ರ ಸುಮಾರಿಗೆ ತಮ್ಮ ಕಚೇರಿಯ ಹಿಂಭಾಗಕ್ಕೆ ತೆರಳಿ ಸರ್ವಿಸ್ ರೈಫಲ್‍ನಿಂದ ತಲೆಗೆ ಗುಂಡು […]

ಸುರತ್ಕಲ್ ನಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ರೌಡಿಯ ಕೊಲೆ

Tuesday, February 4th, 2014
Prakash Murder

ಮಂಗಳೂರು : ರೌಡಿ ಶೀಟರ್ ಹಾಗೂ ಕೊಲೆ ಪ್ರಕರಣದ ಆರೋಪಿ ಪ್ರಕಾಶ್ (26) ಎಂಬಾತನನ್ನು ನಗರದ ಹೊರವಲಯದ ಸುರತ್ಕಲ್ ಪರಿಸರದಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ಮಂಗಳವಾರ ಸಂಜೆ ನಡೆದಿದೆ. ಪ್ರಕಾಶ್ ಜೋಕಟ್ಟೆಯ ಶಿವರಾಜ್ ಕೊಲೆ ಪ್ರಕರಣದ ಆರೋಪಿ ಯಾಗಿದ್ದು, ಶಿವರಾಜ್ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಹಿಂದೆ ಜಾಮೀನು ಪಡೆದಿದ್ದ. ಈತ ಪಣಂಬೂರು ಠಾಣೆಯಲ್ಲಿ ನೋಂದಣಿಗೆ ಸಹಿ ಮಾಡಲು ತನ್ನ ತಂದೆಯ ಜತೆ ಉಡುಪಿಯಿಂದ ಪಣಂಬೂರು ಠಾಣೆಗೆ ಆಗಮಿಸಿ ವಾಪಾಸಾಗುವ ಸಂದರ್ಭದಲ್ಲಿ ಸುರತ್ಕಲ್ ನ […]

ಸುರತ್ಕಲ್ ವ್ಯಾಪ್ತಿಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಬೇಕು

Tuesday, January 28th, 2014
Munir

ಮಂಗಳೂರು :  ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಪರಿಸರದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಬಂಧಿ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸುರತ್ಕಲ್ ಠಾಣಾಧಿಕಾರಿ ನಟರಾಜ್ ಸಂಪೂರ್ಣ ವಿಫಲರಾಗಿದ್ದಾರೆ. ಕೋಮುಸೂಕ್ಷ್ಮ ಸುರತ್ಕಲ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷ ಪೊಲೀಸ್ ಅಧಿಕಾರಿಯನ್ನು ತಕ್ಷಣ ನೇಮಿಸಬೇಕು ಎಂದು ಡಿವೈಎಫ್ಐ ದ ಕ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ವಿವಾದದಲ್ಲಿ ಕ್ರಿಕೆಟ್ ತಂಡಗಳ ಮಧ್ಯೆ ಆರಂಭವಾದ ಜಗಳ ಇಂದು ಅಮಾಯಕರ ಮೇಲೆ ನಿರಂತರ ಹಲ್ಲೆ, ಉದ್ವಿಗ್ನ ಪರಿಸ್ಥಿತಿಗೆ […]

ಗಾಂಜಾ ಮಾಫಿಯಾದ ಪ್ರಮುಖ ರೂವಾರಿ ಕೇಶವ್ ಸನೀಲ್ ಬಂಧನ

Tuesday, February 19th, 2013
Gaanja Mafia

ಮಂಗಳೂರು : ಸುರತ್ಕಲ್ ಗಾಂಜಾ ಮಾಫಿಯಾದ ಪ್ರಮುಖ ರೂವಾರಿಯಾದ  ಕೇಶವ್ ಸನೀಲ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಸುರತ್ಕಲ್ ಪೊಲೀಸರು ಕಾರಿನಲ್ಲಿ ಅಪಾರ ಪ್ರಮಾಣದ ಗಾಂಜಾವನ್ನು ಪತ್ತೆಹಚ್ಚಿ, ಕೆಲವರನ್ನು ಬಂಧಿಸಿದ್ದರು. ಆದರೆ ಈ ಜಾಲದ ಮುಖ್ಯ ರೂವಾರಿ ಕೇಶವ ಸನಿಲ್ ಪೊಲೀಸರ ಕಣ್ಣು ತಪ್ಪಿಸಿ, ತಲೆಮರೆಸಿಕೊಂಡಿದ್ದ. ಗಾಂಜಾವನ್ನು ಪ್ರಮುಖವಾಗಿ ಕಾರಿನ ಮೂಲಕ ವಿದ್ಯಾರ್ಥಿ ಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಇದಕ್ಕೆ ಸಂಬಂದಿಸಿದಂತೆ ಕೆಲವು ಆರೋಪಿಗಳನ್ನು ಬಂಧಿಸಲಾಗಿತ್ತು ಆದರೆ ಇದೀಗ ಪೋಲೀಸರ ನಿರಂತರ ತನಿಖೆಯ ಮೂಲಕ ಗಂಜಾದ ಪ್ರಮುಖ […]

ಶ್ರೀ ಸದಾಶಿವ ಗಣಪತಿ ದೇವಾಲಯ

Saturday, October 23rd, 2010
ಶ್ರೀ ಸದಾಶಿವ ಗಣಪತಿ

ಕ್ಷೇತ್ರ-ಪುರಾಣ:  ಶ್ರೀ ಸದಾಶಿವ ಗಣಪತಿ ದೇವಾಲಯ, ಸುರತ್ಕಲ್. ಮಂಗಳೂರು : ಸೃಷ್ಟಿಕರ್ತನಾದ ಪ್ರಜಾಪತಿಯು ಜಗತ್ತನ್ನು ನಿರ್ಮಿಸಿ ಅದರಲ್ಲಿ ಪ್ರಜಾಕೋಟಿಯನ್ನು ಸೃಷ್ಟಿಸುವುದರೊಂದಿಗೆ ಹಲವು ಯಜ್ಞವಿಧಾನಗಳನ್ನೂ ರೂಪೀಕರಿಸಿ, “ಈ ಯಜ್ಞಕಾರ್ಯಗಳನ್ನು ನೀವು ಶ್ರದ್ಧಾಪೂರ್ವಕ ನಡೆಸಿಕೊಂಡು ಬನ್ನಿ, ಇದರಿಂದ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ” ಎಂದು ಹೇಳಿದನಂತೆ ಅದರಂತೆ ಈ ಕರ್ಮಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬನೂ ಇದು ತನ್ನ ಕರ್ತವ್ಯ ವೆಂದು ಭಾವಿಸಿ, ತ್ಯಾಗಭೂಯಿಷ್ಟವಾದ ಯಜ್ಞ ಯಾಗಾದಿಗಳನ್ನು ನಡೆಸುತ್ತಾ ಕುಲ ಕ್ರಮಾಗತವಾದ ಧರ್ಮಕರ್ಮಗಳಲ್ಲಿಆಸಕ್ತನಾಗಿ ಜೀವನದ ಪರಮಲಕ್ಷ್ಯ ವನ್ನು ಸಾಧಿಸುತ್ತಿದ್ದನು. ಭೌತಿಕ ಸುಖಕ್ಕಿಂತಲೂ ಶ್ರೇಷ್ಟವಾದ ಆಧ್ಯಾತ್ಮಿಕ […]