ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಎಂ.ಕೆ ನಿಧನ

Wednesday, August 26th, 2020
mmk

ಮಂಗಳೂರು : ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ನಗರದ ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೊಹಮದ್‌ ಮುಸ್ತಫಾ (59) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಣ್ಣು ಹಂಪಲು ವ್ಯಾಪಾರಿಯಾಗಿದ್ದ ಅವರು ವ್ಯಾಪಾರಸ್ಥರ ವಲಯದಲ್ಲಿ ” ಎಂ.ಎಂ.ಕೆ” ಎಂದು ಜನಪ್ರಿಯರಾಗಿದ್ದರು. ಜಿಲ್ಲಾಡಳಿತ ಸೆಂಟ್ರಲ್‌ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣುಹಂಪಲು  ಸಗಟು ವ್ಯಾಪಾರವನ್ನು ನಗರದ ಹೊರ ವಲಯದ ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದಾಗ ವ್ಯಾಪಾರಸ್ಥರ ಸಂಘದ […]

ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಮತ್ತು ಹಣ್ಣು ಹಂಪಲುಗಳ ವ್ಯಾಪಾರ ಬೈಕಂಪಾಡಿ ಯಲ್ಲಿಯೇ ಫಿಕ್ಸ್

Friday, April 17th, 2020
apmc

ಮಂಗಳೂರು: ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಮತ್ತು ಹಣ್ಣು ಹಂಪಲುಗಳ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, 3 ತಿಂಗಳ ಕಾಲ ಯಾವುದೇ ಬಾಡಿಗೆ ಅಥವಾ ತೆರಿಗೆಯನ್ನು ವಸೂಲು ಮಾಡುವುದಿಲ್ಲ. ಆದರೆ ಇಲ್ಲಿ ವಹಿವಾಟು ನಡೆಸಲು ಆಸಕ್ತಿ ಇರುವ ಎಲ್ಲರೂ ಲೈಸನ್ಸ್‌ ಪಡೆಯುವ ಬಗ್ಗೆ ಈಗಿಂದೀಗಲೇ ಅರ್ಜಿ ಸಲ್ಲಿಕೆ ಮತ್ತಿತರ ಪ್ರಕ್ರಿಯೆಗಳನ್ನು ಆರಂಭಿಸಬೇಕು. 3 ತಿಂಗಳ ಬಳಿಕ ಅಧಿಕೃತವಾಗಿ ಲೈಸನ್ಸ್‌ ಪಡೆದು ವ್ಯವಹಾರ ನಡೆಸಬಹುದು ಎಂದು ಸ್ಥಳೀಯ ಶಾಸಕ ಡಾ| ವೈ. ಭರತ್‌ ಶೆಟ್ಟಿ ತಿಳಿಸಿದ್ದಾರೆ. ಆದರೆ  ಇಲ್ಲಿ  ರಿಟೇಲ್‌ […]

ಏಪ್ರಿಲ್ 1, ಸೆಂಟ್ರಲ್ ಮಾರ್ಕೆಟ್ ಹೋಲ್ಸೇಲ್ ವ್ಯಾಪಾರಿಗಳಿಗೆ ರಾತ್ರಿ 11ರಿಂದ ಮುಂಜಾನೆ 4 ರ ವರೆಗೆ ತೆರೆದಿರುತ್ತದೆ

Wednesday, April 1st, 2020
Mangalore Central Market

ಮಂಗಳೂರು : ಹಗಲು ಹೊತ್ತಿನಲ್ಲಿ ಕೊರೋನಾ ವೈರಸ್ ಹರಡುವಿಕೆಯ ನಿಯಮ ಪಾಲಿಸದೇ, ಅಂತರ ಕಾಯ್ದುಕೊಳ್ಳದೆ  ಜನರು ವ್ಯವಹರಿಸುವುದರಿಂದ.  ಎ.1ರಿಂದ ಸೆಂಟ್ರಲ್ ಮಾರ್ಕೆಟ್ ಬಳಕೆಗೆ ಹೋಲ್ಸೇಲ್ ವ್ಯಾಪಾರಿಗಳಿಗೆ ಮಾತ್ರ ಅವಕಾಶವಿರಲಿದೆ ಎಂಬುವುದಾಗಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಆದೇಶ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸೆಂಟ್ರಲ್ ಮಾರ್ಕೆಟನ್ನು ಹೋಲ್ಸೇಲ್ ವ್ಯಾಪಾರಸ್ಥರು ಮಾತ್ರ ಬಳಸಬೇಕು. ರಾತ್ರಿ 11ರಿಂದ ಮುಂಜಾನೆ 4 ಗಂಟೆಯ ಒಳಗೆ ತಮ್ಮ ವ್ಯವಹಾರವನ್ನು ಮುಗಿಸಬೇಕು. ರಾತ್ರಿ ವೇಳೆ ಚಿಲ್ಲರೆ ವ್ಯಾಪಾರಿಗಳು ಹೋಲ್ಸೇಲ್ ವ್ಯಾಪಾರಿಗಳ […]

ಮಂಗಳೂರು : ರಸ್ತೆ ಗುಂಡಿ ಸರಿಪಡಿಸುವಂತೆ ಆಗ್ರಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿ

Tuesday, September 24th, 2019
bahyakaasha

ಮಂಗಳೂರು : ಹೊಂಡ-ಗುಂಡಿಗಳಿಂದ ಕೂಡಿರುವ ನಗರದ ಸೆಂಟ್ರಲ್‌ ಮಾರ್ಕೆಟ್‌ ಮುಂಭಾಗದ ರಸ್ತೆಯಲ್ಲಿ, ರಸ್ತೆ ಗುಂಡಿ ಸರಿಪಡಿಸುವಂತೆ ಆಗ್ರಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆದಿದೆ. ಮಂಗಳೂರಿನ ರಸ್ತೆಗಳ ಗುಂಡಿಗಳಿಗೆ ಮುಕ್ತಿ ನೀಡಿ ಎಂಬ ಕಳಕಳಿಯಿಂದ ಮಂಗಳೂರಿನ 6ನೇ ತರಗತಿ ವಿದ್ಯಾರ್ಥಿನಿ ಗಗನಯಾತ್ರಿಯ ದಿರಿಸಿನಲ್ಲಿ ನಗರದಲ್ಲಿ ಚಂದ್ರನ ಮೇಲೆ ನಡೆದಂತೆ ನಡೆದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾಳೆ. ವಿದ್ಯಾರ್ಥಿನಿ ಆ್ಯಡ್ಲಿನ್‌ ಡಿಸಿಲ್ವ ಈ ವಿನೂತನ ಪ್ರತಿಭಟನೆ ಮಾಡಿದ ಬಾಲೆ. ಚಂದ್ರನ ಮೇಲೆ ಇಳಿದು ಅಲ್ಲಿ ಹೊಂಡ-ಗುಂಡಿಗಳ ನಡುವೆ ಸಾಗುವ ಬಾಹ್ಯಾಕಾಶದ ವಿನೂತನ […]

ಜ್ಯುವೆಲ್ಲರಿ ಅಂಗಡಿಯ ಗೋಡೆಯನ್ನು ಕೊರೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Tuesday, September 3rd, 2019
car-sheet

ಮಂಗಳೂರು : ನಗರದ ಹೃದಯ ಭಾಗದಲ್ಲಿರುವ ಚಿನ್ನಾಭರಣ ಅಂಗಡಿಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿದ ಘಟನೆ ಸೆ. 03 ರ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ರೂಪವಾಣಿ ಚಿತ್ರಮಂದಿರದ ಬಳಿ ಇರುವ ಅರುಣ್ ಜ್ಯುವೆಲ್ಲರಿಯಲ್ಲಿ ಕಳ್ಳತನ ನಡೆದಿದ್ದು ಮುಂಜಾನೆ ಮಳಿಗೆ ತೆರೆಯುವ ವೇಳೆ ಪ್ರಕರಣ ಬಯಲಿಗೆ ಬಂದಿದೆ. ಅಂಗಡಿಯಿಂದ ಸುಮಾರು ಒಂದು ಕೆ.ಜಿ ಗೂ ಅಧಿಕ ಚಿನ್ನಾಭರಣ ಕಳವು ಮಾಡಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಮಂಗಳೂರು ಬಂದರ್ ಪೋಲಿಸ್ ಭೇಟಿ ನೀಡಿದ್ದಾರೆ. […]

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಸಲಿಂಗಕಾಮಿಗಳು !

Saturday, December 29th, 2012
Salinga kama

ಮಂಗಳೂರು : ನನಗೆ ರೂಮಿನಿಂದ ಹೊರಬರಲಾಗುತ್ತಿಲ್ಲ, ಎಲ್ಲಿ ನೋಡಿದರೂ ಚುಡಾಯಿಸುವ ಇಂಥವರೇ ಕಾಣಸಿಗುತ್ತಾರೆ. ಹಗಲುಹೊತ್ತು ಚೆನ್ನಾಗಿಯೇ ಮಾತಾಡುವ ಇವರು ರಾತ್ರಿಯಾದೊಡನೆ ನನ್ನ ಹಿಂದೆ ಬಿದ್ದು ಚಿತ್ರಹಿಂಸೆ ಕೊಡುತ್ತಾರೆ. ಇದರಿಂದ ನನಗೆ ಸಾಯುವ ಯೋಚನೆ ಬರುತ್ತಿದೆ ಆದರೆ ನನ್ನನ್ನು ನಂಬಿದವರ ಸ್ಥಿತಿ ನೆನೆದು ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ಬದುಕುತ್ತಿದ್ದೇನೆ. ನಾನು ಅನುಭವಿಸುವ ಯಾತನೆ, ನೋವು ಇನ್ನಾರೂ ಅನುಭವಿಸದಿರಲಿ ಎಂದು ನನ್ನ ಕಥೆ ನಿಮಗೆ ಹೇಳುತ್ತಿದ್ದೇನೆ ಎಂದು ಬಂಟ್ವಾಳ ಮುಸ್ಲಿಂ ಯುವಕನೊಬ್ಬ ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾನೆ. ನಾನು ಅವರಿಗೇನೂ ಮಾಡಿಲ್ಲ. […]