ಮಂಗಳೂರು ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವ

Sunday, August 15th, 2021
BJP-office

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಲುವಾಗಿ ಧ್ವಜಾರೋಹಣ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಈ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಹುತಾತ್ಮರಾಗಿದ್ದಾರೆ. ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮೂಲಕ ಅವರ ವಿಚಾರಗಳನ್ನು ಜೀವಂತವಾಗಿಡಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಭಾರತದ ಅಗಾಧ ಸಂಪತ್ತಿನ ಮೇಲಿನ ವ್ಯಾಮೋಹದಿಂದ ವಿದೇಶಿ ಆಕ್ರಮಣಕಾರರು ಭಾರತದ […]

ಮಂಗಳೂರು ನೆಹರೂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ

Sunday, August 15th, 2021
S angara

ಮಂಗಳೂರು : ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನ ದಲ್ಲಿ  ಆ.15ರ ಭಾನುವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ನಮ್ಮ ದೇಶವಿಂದು ಇಡೀ ವಿಶ್ವದಲ್ಲೇ ಒಂದು ಚಾರಿತ್ರಿಕ ಕಾಲಘಟ್ಟದಲ್ಲಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ  ದೊರೆತು ೭೫ವರ್ಷ ತುಂಬಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ಅಮೃತ ಮಹೋತ್ಸವ ಎನ್ನಲಾಗುತ್ತಿದೆ. ಸನ್ಮಾನ್ಯ ಪ್ರಧಾನ […]

ಪ್ಲಾಸ್ಟಿಕ್ ಧ್ವಜ ಬಳಕೆ ಬೇಡ, ಖಾದಿ ಧ್ವಜ ಬಳಕೆ ಮಾಡಿ

Friday, August 7th, 2020
khadi

ಮಂಗಳೂರು : ಆಗಸ್ಟ್ 15 ರಂದು  ಆಚರಿಸಲಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಧ್ವಜ ಮಾರಾಟ ಮತ್ತು ಉಪಯೋಗಿಸದಿರಲು ವಿನಂತಿಸಲಾಗಿದೆ. ಸಾರ್ವಜನಿಕರು  ಹಾಗೂ ಖಾದಿ ಭಂಡಾರದಿಂದ ತಯಾರಿಸಿದ ಧ್ವಜಗಳನ್ನು ಉಪಯೋಗಿಸಬೇಕು. ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವಂತಹ ಅಂಗಡಿ ಮಾಲೀಕರು ಮತ್ತು ಉಪಯೋಗಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ದೇಶಾಭಿಮಾನವನ್ನು ಉಳಿಸಿ ಬೆಳೆಸುವ ವಿಧ್ಯಾವ್ಯವಸ್ಥೆ ನಮ್ಮಲ್ಲಿ ಇಲ್ಲ: ನಾರಾಯಣ ಭಂಡಾರಿ

Tuesday, August 16th, 2016
Indipendent-day

ಬಂಟ್ವಾಳ: ದೇಶಾಭಿಮಾನವನ್ನು ಉಳಿಸಿ ಬೆಳೆಸುವ ವಿಧ್ಯಾವ್ಯವಸ್ಥೆ ನಮ್ಮಲ್ಲಿ ಇಲ್ಲ ಅದರ ಕೊರತೆ ಎದ್ದು ಕಾಣುತ್ತಿದೆ, ಯಾವುದೇ ಪಠ್ಯಪುಸ್ತಕಗಳಲ್ಲಿ ಕೂಡಾ ಈ ವ್ಯವಸ್ಥೆ ಇಲ್ಲದೆ ಇರುವುದು ನಮ್ಮ ದುರಂತ ಎಂದು ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ನಾರಾಯಣ ಭಂಡಾರಿ ಹೇಳಿದರು. ಅವರು ವಿವಿಧ ಸಮಿತಿಗಳ ಆಶ್ರಯದಲ್ಲಿ ಬಿಸಿರೋಡಿನ ಕಂದಾಯ ಇಲಾಖೆಯ ಅವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು. ದೇಶಾಭಿಮಾನವನ್ನು ಮೂಡಿಸುವ ಕೆಲಸ ಮಾಡದ ಹಿನ್ನಲೆಯಲ್ಲಿ ದೇಶಭಕ್ತಿಯ ಕೊರತೆಯಿಂದ ದೇಶ ದ್ರೋಹದ ಕೆಲಸ ಆಗುತ್ತಿದೆ ಎನ್ನುವುದಕ್ಕೆ ಖೇಧವಾಗುತ್ತಿದೆ ಎಂದರು. […]

ಸಾಂಸ್ಕೃತಿಕ ವೈವಿಧ್ಯತೆ ದೇಶದ ಪ್ರಜಾತಂತ್ರದ ಶಕ್ತಿ : ಸಚಿವ ಇ.ಚಂದ್ರಶೇಖರನ್

Tuesday, August 16th, 2016
E Chandrashekharan

ಕಾಸರಗೋಡು: ಸ್ವಾತಂತ್ರ್ಯ ಲಭಿಸಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ವಿಶ್ವಕ್ಕೆ ಮಾದರಿಯಾಗಬಲ್ಲ ಸಾಧನೆಯನ್ನು ಸಾಧಿಸಿರುವ ಭಾರತ ಸಮಗ್ರ ಪ್ರಗತಿ ಸಾಧಿಸಲು ಒಗ್ಗಟ್ಟಿನ ಪ್ರಯತ್ನ ಅಗತ್ಯ. ಹಲವು ರಾಷ್ಟ್ರಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ ನೆಲಕಚ್ಚುತ್ತಿರುವಾಗ ನಮ್ಮ ದೇಶದಲ್ಲಿ ಪ್ರಜಾತಂತ್ರ ಬಲಿಷ್ಠಗೊಳ್ಳುತ್ತಿದೆ. ದೇಶದಲ್ಲಿ ಹಾಸುಹೊಕ್ಕಾಗಿರುವ ಸಾಂಸ್ಕೃತಿಕ ವೈವಿದ್ಯತೆ ಪ್ರಜಾತಂತ್ರಕ್ಕೆ ಬಲ ನೀಡುತ್ತದೆ ಅಲ್ಲದೆ ದೇಶಕ್ಕೆ ಶಕ್ತಿ ತುಂಬುತ್ತಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು. ರಾಷ್ಟ್ರದ 70 ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ವಿದ್ಯಾನಗರದ ಮುನ್ಸಿಪಲ್ ಸ್ಟೇಡಿಯಂನಲ್ಲಿ ಸೋಮವಾರ ಬೆಳಿಗ್ಗೆ ಆಯೋಜಿಸಿದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ […]