ಮೈಸೂರು : ಕೊರೋನ ಸೋಂಕು ಇಲ್ಲ, ಹಕ್ಕಿ ಜ್ವರವೂ ಇಲ್ಲ, ಯಾವುದೇ ಆತಂಕ ಬೇಡ; ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್

Saturday, March 14th, 2020
mysuru

ಮೈಸೂರು : ಮೈಸೂರಿನಲ್ಲಿ ಕೊರೋನ ಸೋಂಕು ಇಲ್ಲ. ಹಕ್ಕಿ ಜ್ವರವೂ ಇಲ್ಲ, ಸದ್ಯ ಜಿಲ್ಲೆಯಲ್ಲಿ ಕೊರೋನ ವೈರಸ್ ಬಗ್ಗೆ ಯಾವುದೇ ಆತಂಕ ಬೇಡ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದುವರೆಗೂ 100ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ. ಯಾರಿಗೂ ಕೊರೋನ ವೈರಸ್ ಕಂಡುಬಂದಿಲ್ಲ. ಸೋಂಕಿತ ಅಥವಾ ಶಂಕಿತ ಪ್ರಕರಣ ಅಂತ ಯಾವುದೂ ಇಲ್ಲ. ಸಾರ್ವಜನಿಕರು ನಮ್ಮೊಟ್ಟಿಗೆ ಸಹಕಾರ ನೀಡಬೇಕು. ಕೊರೋನಾ ಭೀತಿ […]

ಮೈಸೂರು : ಹಕ್ಕಿ ಜ್ವರ ಭೀತಿ; 12 ಕೊಕ್ಕರೆಗಳು ಸಾವು

Monday, March 9th, 2020
hakki-jwara

ಮೈಸೂರು : ಕೊರೋನಾ ವೈರಸ್ ಆತಂಕದ ನಡುವೆಯೇ ಈಗ ಮೈಸೂರಿನಲ್ಲಿ ಹಕ್ಕಿ ಜ್ವರ ಭೀತಿ ಎದುರಾಗಿದೆ. ನಗರದಲ್ಲಿ ಕಳೆದೊಂದು ವಾರದಿಂದ ಒಟ್ಟು 12 ಕೊಕ್ಕರೆಗಳು ಸಾವನ್ನಪ್ಪಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ ನೆರೆಯ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಈ ಕೊಕ್ಕರೆಗಳ ಸಾವು ಮೈಸೂರಿಗರಲ್ಲಿ ತಲ್ಲಣ ಉಂಟು ಮಾಡಿದೆ. ವಾರ್ಡ್ ಸಂಖ್ಯೆ 55ರ ವ್ಯಾಪ್ತಿಯಲ್ಲೇ 12 ಕೊಕ್ಕರೆಗಳು ಅಸುನೀಗಿವೆ. ಹಕ್ಕಿ ಜ್ವರದಿಂದಲೇ ಕೊಕ್ಕರೆಗಳು ಮೃತಪಟ್ಟಿರಬಹುದು ಎಂಬ ಶಂಕೆ ಮೂಡಿದೆ. ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ […]

ಮತ್ತೆ ರಾಜ್ಯಕ್ಕೆ ಕಾಲಿಟ್ಟ ಮಹಾಮಾರಿ… ಬೆಂಗಳೂರಲ್ಲಿ ಹಕ್ಕಿ ಜ್ವರ ಭೀತಿ

Tuesday, January 2nd, 2018
bird-flue

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಹಕ್ಕಿ ಜ್ವರ ಇದೀಗ ಸಿಲಿಕಾನ್ ಸಿಟಿಯಲ್ಲಿಯೂ ಪತ್ತೆಯಾಗಿದೆ. ದಾಸರಹಳ್ಳಿಯ ಕೆಜಿಎನ್ ಕೋಳಿ ಮಾರಾಟ ಅಂಗಡಿಯಲ್ಲಿನ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ಪ್ರಯೋಗಾಲಯದಲ್ಲಿ ಸಾಬೀತಾಗಿದ್ದು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೌದು, ಉದ್ಯಾನನಗರಿಗೆ ಹಕ್ಕಿ ಜ್ವರ ಕಾಲಿಟ್ಟಿದೆ. ತಮಿಳುನಾಡಿನಿಂದ ಬಂದಂತಹ ನಾಟಿ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಕಳೆದ ವಾರ ತಮಿಳುನಾಡಿನ ಕೋಳಿ ಮಾರಾಟಗಾರರಿಂದ 15 ಕೋಳಿ ಖರೀದಿಸಿದ್ದ ಕೆಜಿಎನ್ ಅಂಗಡಿ ಮಾಲೀಕರು ನಾಲ್ಕೈದು ಕೋಳಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಕೋಳಿಗಳನ್ನು ಪರೀಕ್ಷೆ ಒಳಪಡಿಸಿದ್ದರು. […]