ಗುರುಪುರ ಮಠದಗುಡ್ಡೆಯ 48 ಕುಟುಂಬಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಹಕ್ಕುಪತ್ರ ವಿತರಣೆ

Tuesday, June 29th, 2021
hakkupatra

ಮಂಗಳೂರು : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆಯಲ್ಲಿ ಕಳೆದ ವರ್ಷ(ಜು. 5) ಸಂಭವಿಸಿದ ಭೂಕುಸಿತ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರದೇಶದ 48 ಕುಟುಂಬಗಳಿಗೆ ಹಾಗೂ ಅಡ್ಡೂರು ಗ್ರಾಮದ ಒಂದು ಕುಟುಂಬಕ್ಕೆ ಮಂಗಳವಾರ ಗುರುಪುರ ಕೈಕಂಬದ ಖಾಸಗಿ ಸಭಾಗೃಹವೊಂದರಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹಕ್ಕುಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಶಾಸಕನಾದ ಬಳಿಕ ಕ್ಷೇತ್ರ ವ್ಯಾಪ್ತಿಯ ಸುಮಾರು 4,000 ಕುಟುಂಬಗಳಿಗೆ ಹಕ್ಕುಪತ್ರ […]

ಬಾಳುಗೋಡುವಿನಲ್ಲಿ ನಿವೇಶನ ನೀಡಲು ಒತ್ತಾಯ : ಜಿಲ್ಲಾಧಿಕಾರಿಗಳಿಗೆ ಮನವಿ

Saturday, February 1st, 2020
manavi

ಮಡಿಕೇರಿ : ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದ ಸರಕಾರಿ ಜಾಗದಲ್ಲಿ ದಲಿತರು, ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಆದಿವಾಸಿಗಳು, ಹಿಂದುಳಿದ ವರ್ಗದವರು ನಿವೇಶನದ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ಕಳೆದ 28 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇವರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅರುಂಧತಿಯರ್ ಮಹಾಸಭಾದ ಕೊಡಗು ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು. ಈ ಸಂದರ್ಭ ಮಾತನಾಡಿದ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ.ಪಳನಿ ಪ್ರಕಾಶ್, ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದ […]

ಸರೋಜಮ್ಮ ಅವರಿಗೆ ಹಕ್ಕುಪತ್ರ ಸಿಕ್ಕಿದರೂ ಸೂರಿಲ್ಲ

Saturday, December 9th, 2017
sarojamma

ಮಂಗಳೂರು  : ಹಕ್ಕು ಪತ್ರ ಸಿಕ್ಕಿದರೂ ಮನೆ ದೊರಕದೇ ಸಂಕಷ್ಟದಲ್ಲಿದ್ದ 72 ವರ್ಷದ ಸರೋಜಮ್ಮ ಅವರಿಗೆ ಕೊನೆಗೂ ಜಿಲ್ಲಾಧಿಕಾರಿ ಕಚೇರಿಯಲ್ಲೇ ನ್ಯಾಯ ಒದಗಿಸುವ ಭರವಸೆ ಸಿಕ್ಕಿದೆ. ಮೂಲತಃ ಉಡುಪಿಯವರಾದ ಸರೋಜಮ್ಮ ಊರು-ಕೇರಿ ಅಲೆದು ಜೀವನ ಸಾಗಿಸುತ್ತಿದ್ದಾರೆ. ಇವರ ಪತಿ ದೂರವಾಗಿದ್ದು, ಪುತ್ರಿಯರು ಯೋಗಕ್ಷೇಮ ನೋಡುತ್ತಿಲ್ಲ. ಪುತ್ರ ಮಾತ್ರ ಆಸರೆಯಾಗಿದ್ದಾರೆ. ತಮ್ಮ ಕಷ್ಟದ ಹಿನ್ನೆಲೆಯಲ್ಲಿ ನ್ಯಾಯ ನೀಡುವಂತೆ ಕೋರಿ ಸರೋಜಮ್ಮ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಶುಕ್ರವಾರ ಬೆಳಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಪುತ್ರ ಸುಬ್ರಹ್ಮಣ್ಯನ ಜೊತೆಗೆ ಸರೋಜಮ್ಮ ಆಗಮಿಸಿದ್ದರು. […]

ಶಕ್ತಿನಗರದ ರಾಜೀವನಗರ ವಾಸಿಗಳಿಗೆ ಹಕ್ಕುಪತ್ರ: ಶಾಸಕ ಜೆ.ಆರ್.ಲೋಬೊ ಭರವಸೆ

Wednesday, October 25th, 2017
JR lobo

ಮಂಗಳೂರು: ರಾಜೀವನಗರದ ನಿವಾಸಿಗಳಿಗೆ ಹಕ್ಕುಪತ್ರ ಕೊಡಲು ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಲಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಶಕ್ತಿನಗರ ರಾಜೀವ ನಗರ ನಿವಾಸಿಗಳ ಸಭೆ ನಡೆಸಿ ಅಹವಾಲು ಸ್ವೀಕರಿಸಿ ಮಾತನಾಡುತ್ತಿದ್ದರು. ರಾಜೀವ ನಗರದ ನಿವಾಸಿಗಳು 25 ವರ್ಷಗಳಿಂದ ವಾಸಿಸುತ್ತಿದ್ದು ಹಕ್ಕುಪತ್ರ ನೀಡಿಲ್ಲ. ಕೆಲವರು ಮಾರಿಕೊಂಡಿದ್ದಾರೆ. ಇನ್ನೂ ಕೆಲವರು ಖಾಲಿ ಸ್ಥಳದಲ್ಲಿ ವಾಸವಾಗಿದ್ದಾರೆ ಎಂದು ಸ್ಥಳೀಯ ಸಮಸ್ಯೆಗಳನ್ನು ಮಾಜಿ ಮೇಯರ್ ಅಬ್ದುಲ್ ಅಜೀಜ್ ಹೇಳಿದಾಗ ಶಾಸಕರಾದ ಜೆ.ಆರ್.ಲೋಬೊ ಅವರು ಯಾರು ವಾಸವಾಗಿದ್ದಾರೆ ಎಂಬುದನ್ನು […]

ಶಕ್ತಿನಗರ ಕಾರ್ಮಿಕ ಕಾಲೋನಿಯಲ್ಲಿ ಜನಸಂಪರ್ಕ ಸಭೆ

Monday, October 23rd, 2017
JR lobo

ಮಂಗಳೂರು: ಹಕ್ಕು ಪತ್ರ ಸಿಗದಿರುವ ಶಕ್ತಿನಗರ ಕಾರ್ಮಿಕ ಕಾಲೋನಿಯ ಜನರಿಗೆ ಹಕ್ಕುಪತ್ರ ಕೊಡಿಸಲು ಶೀಘ್ರದಲ್ಲೇ ಪ್ರಯತ್ನಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಶಕ್ತಿನಗರ ಕಾರ್ಮಿಕ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕಾಲೋನಿಯಲ್ಲಿ ಹಲವು ವರ್ಷಗಳಿಂದ ಕಾರ್ಮಿಕರಾಗಿರುವ ಜನರಿಗೆ ಹಕ್ಕುಪತ್ರ, 94 ಸಿಸಿ, ಪಹಣಿಪತ್ರ ಮುಂತಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇಲ್ಲಿ ಇಷ್ಟು ವರ್ಷಗಳಿಂದ ಜನ ವಾಸವಿದ್ದರೂ ಹಕ್ಕುಪತ್ರ ಕೊಡಲಾಗದಿರುವ ಬಗ್ಗೆ, ಅಲ್ಲಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು. ಶಾಸಕ ಜೆ.ಆರ್.ಲೋಬೊ […]

ಈ ವರ್ಷದ ಅಂತ್ಯದೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ‘94 ಸಿ ಮತ್ತು 94 ಸಿಸಿ’ಯಡಿ ಹಕ್ಕುಪತ್ರ : ಕಾಗೋಡು

Thursday, September 14th, 2017
Kagodu

ಮಂಗಳೂರು :  ವಾಸಿಸುವವನೇ ಆ ನೆಲದೊಡೆಯನಾಗಬೇಕು ಎಂಬ ಕನಸು ಕಂಡ ಫಲಾನುಭವಿಗಳಿಗೆ ನೆಲದ ಒಡೆತನ ನೀಡಿದ ಹೆಮ್ಮೆ ಕಾಂಗ್ರೆಸ್ ಸರಕಾರಕ್ಕೆ ಇದೆ, ಭೂಮಿ ನಿಮ್ಮ ಬೆನ್ನು ಹತ್ತಿ ಬರಲಾರದು. ನೀವೇ ಭೂಮಿಯನ್ನು ಬೆನ್ನು ಹತ್ತಿ ಹೋಗಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಮುಡಿಪು ಸಮೀಪದ ಕುರ್ನಾಡು ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ‘ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94 ಸಿಸಿ ಹಕ್ಕುಪತ್ರ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಕೊಟ್ಟ ಮಾತು-ದಿಟ್ಟ ಹೆಜ್ಜೆ- […]