ಆಧುನಿಕ ಕೃಷಿ ತಂತ್ರಜ್ಞಾನಗಳು ಯುವ ಪೀಳಿಗೆಯನ್ನು ಆಕರ್ಷಿಸಬಲ್ಲುದು- ಹರ್ಷಾದ್ ವರ್ಕಾಡಿ

Thursday, August 18th, 2016
Agriculture-education

ಮಂಜೇಶ್ವರ : ಪರಂಪರಾಗತ ಕೃಷಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಕೃಷಿಗೆ ಹೊಸ ಸ್ವರೂಪವನ್ನು ನೀಡಿ ಯುವಕರನ್ನು ಕೃಷಿಯತ್ತ ಆಕರ್ಷಿಸುವ ಯೋಜನೆಗಳನ್ನು ಸರಕಾರ ರೂಪಿಸಬೇಕೆಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ಪಟ್ಟರು. ಮೀಂಜ ಗ್ರಾಮ ಪಂಚಾಯತು ಹಾಗೂ ಮೀಂಜ ಕೃಷಿ ಭವನದ ಜಂಟಿ ಆಶ್ರಯದಲ್ಲಿ ಸಿಂಹ ಮಾಸದ ಪ್ರಥಮ ದಿ ಬುಧವಾರ ಮೀಂಜ ಗ್ರಾಮ ಪಂಚಾಯತು ಮಾರ್ಕೆಟ್ ಹಾಲ್‌ನಲ್ಲಿ ನಡೆದ ಕೃಷಿಕರ ದಿನವನ್ನು ಉದ್ಘಾಟಿಸಿ,ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ […]

ಹಾಸ್ಟೆಲ್ ಸೌಲಭ್ಯ: ರಮಾನಾಥ ರೈಗೆ ಮನವಿ

Saturday, August 6th, 2016
Hostel-facility

ಮಂಜೇಶ್ವರ: ಕರ್ನಾಟಕದಲ್ಲಿ ವ್ಯಾಸಂಗ ಮಾಡುವ ಕಾಸರಗೋಡಿನ ಗಡಿನಾಡ ಕನ್ನಡಿಗರಿಗೆ ಹಾಸ್ಟೆಲ್ ಸೌಲಭ್ಯ ಇದೀಗ ಮೊಟಕುಗೊಂಡಿದ್ದು, ಅದನ್ನು ಮರುಸ್ಥಾಪಿಸುವಂತೆ ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವರೂ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಿ.ರಮಾನಾಥ ರೈಯವರಿಗೆ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮನವಿ ಸಲ್ಲಿಸಿದರು. 2016-17ರ ಶೈಕ್ಷಣಿಕ ವರ್ಷದಲ್ಲಿ ಹಾಸ್ಟೆಲ್ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಇದರಿಂದಾಗಿ ಕಾಸರಗೋಡಿನ ಗಡಿನಾಡ ಕನ್ನಡಿಗರು ಈ ಅವಕಾಶದಿಂದ ವಂಚಿತರಾಗಿದ್ದಾರೆ. ಇತ್ತಿಚಿನವರೆಗೂ […]

ದುಬೈ : ಹರ್ಷಾದ್ ವರ್ಕಾಡಿಗೆ ಸಮ್ಮಾನ

Wednesday, April 6th, 2016
Harshad Vorkady

ಮಂಜೇಶ್ವರ: ದುಬೈ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರನ್ನು ಸಮ್ಮಾನಿಸಲಾಯಿತು. ಮಲಬಾರ್ ಕಲಾ ಸಾಂಸ್ಕ್ರತಿಕ ಕಲಾ ವೇದಿಕೆ ಹಾಗೂ ದುಬೈ ಕನ್ನಡಿಗರ ಜಂಟಿ ಆಶ್ರಯದಲ್ಲಿ ದುಬ ಇಂಡಿಯನ್ ಸ್ಕೂಲ್ ಆಡಿಟೋರಿಯಂನಲ್ಲಿ ಜರುಗಿದ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ಅನಿವಾಸಿ ಉದ್ಯಮಿ ಪದ್ಮಶ್ರಿ ಡಾ.ಬಿ.ಆರ್.ಶೆಟ್ಟಿ ಹರ್ಷಾದ್ ವರ್ಕಾಡಿಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಚಿವರುಗಳಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಯುಎಇ ಎಕ್ಸ್‌ಚೇಂಜ್ ಅಧ್ಯಕ್ಷ […]

ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಕ್ಕಳಿಗೆ ಜೈನ ಧರ್ಮದ ವಿವಿಧ ಸ್ಫರ್ಧೆಗಳು

Wednesday, August 12th, 2015
Jain Children

ಧರ್ಮಸ್ಥಳ: ಬಾಹುಬಲಿ ಮಹಿಳಾ ಸಮಿತಿ ವತಿಯಿಂದ ಜೈನ ಧರ್ಮದ ಕುರಿತಾಗಿ ವಿಶೇಷವಾಗಿ ವಿವಿಧ ಸ್ಫರ್ಧೆಗಳನ್ನು ಭಾನುವಾರದಂದು ಧರ್ಮಸ್ಥಳದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಯಿತು. ಈ ಸ್ಫರ್ಧೆಗಳಲ್ಲಿ ಸುಮಾರು 25 ಕ್ಕೂ ಮಿಕ್ಕಿದ ಮಕ್ಕಳು ಪಾಲ್ಗೊಂಡಿದ್ದು ವಿಜೇತರ ವಿವರ ಹೀಗಿದೆ. ಭಕ್ತಾಮರ ಸ್ತೋತ್ರ ಪಠಣದಲ್ಲಿ ಕ್ರಮವಾಗಿ (ಸ್ತುತಿ, ದರ್ಶನ್, ನಿಧಿಶಾ), ಉತ್ತಮ ಸತ್ಯಧರ್ಮದ ಕುರಿತು ನಡೆಸಿದ ಪ್ರಬಂಧ ಸ್ಫರ್ಧೆಯಲ್ಲಿ (ಪೂರ್ಣಿಮಾ, ದರ್ಶನ್, ಸಾನಿಧ್ಯ), ಜಿನಭಕ್ತಿಗೀತೆಯಲ್ಲಿ (ಸ್ವಪ್ನ, ಸಿಂಚನ, ಶಮಿತಾ), ದರ್ಶನ ಸ್ತುತಿ ಸ್ಫರ್ಧೆಯಲ್ಲಿ ಸಾನ್ವಿ ವಿಜೇತರಾಗಿರುತ್ತಾರೆ. ಚಿತ್ರಕಲೆಯ […]