ಹಿರಿಯ ಸಾಹಿತಿ ಸಾರಾ ಅಬೂಬಕರ್ ನಿಧನ

Tuesday, January 10th, 2023
ಹಿರಿಯ ಸಾಹಿತಿ ಸಾರಾ ಅಬೂಬಕರ್ ನಿಧನ

ಮಂಗಳೂರು : ಹಿರಿಯ ಸಾಹಿತಿ, ಲೇಖಕಿ ಡಾ.ಸಾರಾ ಅಬೂಬಕರ್(87) ಮಂಗಳವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ಸಮಯಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂಲತಃ ಕಾಸರಗೋಡಿನ ಚಂದ್ರಗಿರಿ ತೀರದವರಾದ ಸಾರಾ ವಿವಾಹವಾದ ಬಳಿಕ ಮಂಗಳೂರಿನ ಹ್ಯಾಟ್ ಹಿಲ್ ಬಳಿ ವಾಸವಾಗಿದ್ದರು. ‘ಚಂದ್ರಗಿರಿ ತೀರದಲ್ಲಿ‌’ ಕಾದಂಬರಿಯ ಮೂಲಕ ಪ್ರಸಿದ್ಧಿಗೆ ಬಂದಿದ್ದ ಸಾರಾ ಅಬೂಬಕರ್ ಅನೇಕ ಕೃತಿಗಳನ್ನು ರಚಿಸಿದ್ದರು. ಮಂಗಳವಾರ ರಾತ್ರಿ ‌8 ಗಂಟೆ ಸುಮಾರಿಗೆ ಮಂಗಳೂರಿನ ಬಂದರ್ ಝೀನತ್ […]

ದೇರಳಕಟ್ಠೆ : ನಾಡುನುಡಿ ವೈಭವದ ” ರತ್ನೋತ್ಸವ 2022″ಇದರ ದಶಮ ಸಂಭ್ರಮ

Monday, December 19th, 2022
Rathnotsava

ಮಂಗಳೂರು : ಕರಾವಳಿ ಕರ್ನಾಟಕ ಸಾಹಿತ್ಯ -ಸಾಂಸ್ಕೃತಿಕ ಸಮ್ಮೇಳನ ರತ್ನನೋತ್ಸವದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮಾಜಿ ರಾಜ್ಯಧ್ಯಕ್ಷರಾದ ಶ್ರೀ,ಹರಿಕೃಷ್ಣ ಪುನರೂರು ನೆರವೇರಿಸಿದರು. ಸಮ್ಮೇಳನಾಧ್ಯಕ್ಷ ರಾದ ಹಿರಿಯ ಸಾಹಿತಿ, ಮತ್ತು ಯಕ್ಷಗಾನ ವಿದ್ವಾಂಸರಾದ ಡಾl ಎಂ ಪ್ರಭಾಕರ ಜೋಶಿ, ಮುಖ್ಯ ಅತಿಥಿಗಳಾಗಿ ಕೆ ಟಿ ಸುವರ್ಣ (ನಿರ್ದೇಶಕರು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಬೆಂಗಳೂರು) ಶ್ರೀ, ಶ್ರೀನಿವಾಸ ಇಂದಾಜೆ (ಅಧ್ಯಕ್ಷರು ದ ಕ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘ ಮಂಗಳೂರು) ಪ್ರಕಾಶ್ ಬೆಂಗಳೂರು (ಪತ್ರಿಕಾ […]

ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಗಣ್ಯರ ಸಂತಾಪ

Monday, January 10th, 2022
champa

ಮಂಗಳೂರು  :  ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಸೋಮವಾರ  ಬೆಳಿಗ್ಗೆ 6.30 ಕ್ಕೆ ನಿಧನರಾಗಿದ್ದಾರೆ. ಕನ್ನಡದ ಹಿರಿಯ ಸಾಹಿತಿ, ಭಾಷಾತಜ್ಞ, ಭಾಷಾ ಹೋರಾಟಕಾರ ಚಂದ್ರಶೇಖರ ಪಾಟೀಲ (ಚಂಪಾ)ಅವರ ನಿಧನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಸಂಚಾಲಕ ಎಂ.ಜಿ.ಆರ್ ಅರಸ್, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ್, ಉಡುಪಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕಾ.ವೀ.ಕೃಷ್ಣದಾಸ್, ಗೌರವಾಧ್ಯಕ್ಷೆ ತಾರಾ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲಾ […]

ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ನಿಧನ

Sunday, July 28th, 2019
Yerya-Laxminaraya Alva

ಬಂಟ್ವಾಳ : ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಸಂಘಟಕ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ(94 ವರ್ಷ) ಅವರು ಶನಿವಾರ ರಾತ್ರಿ 9.20ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೊಡಂ ಕಾಪು ಬಳಿಯ ಏರ್ಯ ಬೀಡು ಮನೆಯಲ್ಲಿ ಜನಿಸಿದ ಅವರ ತಂದೆ ಮಾವಂತೂರ ಸುಬ್ಬಯ್ಯ ಆಳ್ವ, ತಾಯಿ ಸೋಮಕ್ಕೆ ಆಳ್ವ. ಬಂಟ್ವಾಳ ತಾಲೂಕಿನ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕಾಸರಗೋಡು ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿರುವ ಅವರಿಗೆ ಮಂಗಳೂರು ವಿವಿ […]

ಬಂಟ್ವಾಳ: ಹಿರಿಯ ಸಾಹಿತಿ ಸಿದ್ಧಮೂಲೆಗೆ ’ಕನ್ನಡದ ಕಲ್ಹಣ ಪ್ರಶಸ್ತಿ’

Friday, March 27th, 2015
Sidhamoole

ಬಂಟ್ವಾಳ: ಸಾಹಿತ್ಯ ಭೀಷ್ಮ ನೀರ್ಪಾಜೆ ಭೀಮಭಟ್ಟ-80 ವರ್ಷಾಚರಣೆ ಪ್ರಯುಕ್ತ ನೀಡಲಾಗುವ ’ಕನ್ನಡದ ಕಲ್ಹಣ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಸಿದ್ಧಮೂಲೆ ಶಂಕರನಾರಾಯಣ ಭಟ್ಟ ಇವರು ಆಯ್ಕೆಯಾಗಿದ್ದಾರೆ. ಹೂದೋಟ, ಗಂಗಾ ಸಲಿಲ, ನಾಲ್ಕು ಕವನಗಳು, ಪರಾಗ- ಕವನ ಸಂಕಲನ, ಕುಮಾರನ ಜನನ ಮತ್ತು ವಿಜಯ -ಗೀತಾನೃತ್ಯ ರೂಪಕ, ಕೈಲಾಸ ಮಾನಸ ಸರೋವರ ಪ್ರವಾಸ ಕಥನ, ಸೀತಾಗಾಥೆ-ಜೀವನ ಕಾವ್ಯ, ಶ್ರೀರಾಮಾಶ್ವಮೇಧ -ವಿಮರ್ಶೆ, ಕನ್ನಡ ಸಾಹಿತ್ಯದಲ್ಲಿ ಶಿವದರ್ಶನ-ಸಂಶೋಧನೆ, ಗೋವಿಂದ ಪೈಯವರ ಛಂದೋಗತಿ-ಸಂಶೋಧನೆ, ವೃಕ್ಷಾಯುರ್ವೇದ, ನಳಚರಿತ್ರೆ, ಕನ್ನಡ ಅದ್ಭುತ ರಾಮಾಯಣ-ಅನುವಾದ, ಮನುಷ್ಯಾಲಯ ಚಂದ್ರಿಕಾ-ಗೃಹವಾಸ್ತು, ಕನ್ನಡ […]