ಹುಟ್ಟುಹಬ್ಬದ ಪ್ರಯುಕ್ತ; ನೆರೆ ಸಂತ್ರಸ್ತರಿಗೆ ಧನ ಸಹಾಯ ಮಾಡಿದ ಪರಿಷತ್ ಸದಸ್ಯ

Monday, August 26th, 2019
T-A-sharavana

ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ತಮ್ಮ 49 ನೇ ಹುಟ್ಟುಹಬ್ಬದ ಪ್ರಯುಕ್ತ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಸಮ್ಮುಖದಲ್ಲಿ ನೆರೆ ಸಂತ್ರಸ್ತರಿಗೆ ಧನ ಸಹಾಯ ನೀಡುವ ಮೂಲಕ ಸಂತ್ರಸ್ತರಿಗೆ ನೆರವಾದರು. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಮನೆಯನ್ನು ಕಳೆದುಕೊಂಡ ಮೂರು ಕುಟುಂಬದವರಿಗೆ ಒಂದೂವರೆ ಲಕ್ಷ ರೂ. ಚೆಕ್ ಅನ್ನು ದೇವೇಗೌಡರು ವಿತರಿಸಿದರು. ಇದೇ ವೇಳೆ ಶರವಣ ಅವರು ಯಾವುದೇ ಆಡಂಬರವಿಲ್ಲದೇ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದರು. […]

ಮಂಗಳೂರಲ್ಲಿ ಎಂಎಲ್​ಸಿ ಮಗಳ ಮದುವೆಯಲ್ಲಿ ಪಾಲ್ಗೊಂಡ ಹೆಚ್​ಡಿಕೆ ಕುಟುಂಬ..!

Saturday, November 17th, 2018
marriege

ಮಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಉಳ್ಳಾಲದ ಸೋಮೇಶ್ವರದಲ್ಲಿ ನಡೆದ ಎಂಎಲ್ಸಿ ಬಿ.ಎಂ.ಫಾರೂಕ್ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಿಗಿ ಬಂದೋಬಸ್ತ್ನಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಕಾರಿನಲ್ಲಿ‌ ಬಂದಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಹೆಚ್.ಡಿ.ದೇವೇಗೌಡ, ಅನಿತಾ ಕುಮಾರಸ್ವಾಮಿ, ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಕುಟುಂದವರನ್ನು ಬಿ.ಎಂ.ಫಾರೂಕ್ ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವ ಸ್ವಾಗತಿಸಿದರು. ಈ ಸಂದರ್ಭ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿ.ಎಂ.ಫಾರೂಕ್ ಅವರ ಆತಿಥ್ಯ ಸ್ವೀಕರಿಸಿದರು

ಸಿದ್ದರಾಮಯ್ಯ ಮುಖಂಡತ್ವದಲ್ಲಿ ಮೈಸೂರು ಮೇಯರ್​ ವಿವಾದ ಬಗೆ ಹರಿಸುತ್ತೇವೆ: ಹೆಚ್ ಡಿ ದೇವೇಗೌಡ

Friday, November 16th, 2018
devegouda

ದೇವನಹಳ್ಳಿ: ತಾಲೂಕಿನ ಗ್ರಾಮ ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣಾ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿದರು. ಈ ಕುರಿತು ಮಾತನಾಡಿದ ಅವರು ಕಾಂಗ್ರೆಸ್ -ಜೆಡಿಎಸ್ ಎರಡು ಪಕ್ಷಗಳು ಮೈತ್ರಿಯಾಗಿವೆ. ಸಿದ್ದರಾಮಯ್ಯ ನವರ ಮುಖಂಡತ್ವದಲ್ಲಿ ಸಮಸ್ಯೆ ಬಗೆ ಹರಿಸುತ್ತೇವೆ ಎಂದರು. ಮೇಯರ್ ಆಯ್ಕೆಗೆ ನಾಳೆಯವರೆಗೂ ಸಮಯಕಾಶವಿದೆ. ಎಲ್ಲರೂ ಓಗ್ಗಟ್ಟಾಗಿ ಸೇರಿ ಮೇಯರ್ ಆಯ್ಕೆ ಮಾಡ್ತಾರೆ ಎಂದು ದೇವೇಗೌಡ ತಿಳಿಸಿದ್ರು.

ಶ್ರೀಗಳ ಅಗಲಿಕೆಯಿಂದ ಇಡೀ ಭಕ್ತ ಸಮೂಹಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ: ಹೆಚ್.ಡಿ.ದೇವೇಗೌಡ

Thursday, July 19th, 2018
devegowda

ಬೆಂಗಳೂರು: ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನದ ಸುದ್ದಿ ಕೇಳಿ ತೀವ್ರ ನೋವುಂಟಾಗಿದೆ. ಶ್ರೀಗಳ ಅಗಲಿಕೆಯಿಂದ ಇಡೀ ಭಕ್ತ ಸಮೂಹಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಗಳು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಶಿರೂರು ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸನ್ಯಾಸತ್ವವನ್ನು ತೆಗೆದುಕೊಂಡವರು. ಶ್ರೀಗಳಿಗೆ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಬಹಳ ಆಸಕ್ತಿ ಇತ್ತು ಎಂದು ಅವರನ್ನು ಗುಣಗಾನ ಮಾಡಿದರು. ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವಲ್ಲಿ ಶ್ರೀಗಳು ಮಾರ್ಗದರ್ಶಕರಾಗಿದ್ದರು ಎಂದು […]

37 ಜನರನ್ನ ಇಟ್ಟುಕೊಂಡು ರೈತರ ಸಂಪೂರ್ಣ ಸಾಲ ಮನ್ನಾ ಸಾಧ್ಯವೇ: ಹೆಚ್‌.ಡಿ.ದೇವೇಗೌಡ

Wednesday, May 23rd, 2018
devegowda

ಬೆಂಗಳೂರು: ರೈತರ ಸಂಪೂರ್ಣ ಸಾಲ ಮನ್ನಾದ ಬಗ್ಗೆ ನಿಯೋಜಿತ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಗೊಂದಲದ ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಪಿಎಂ ಹೆಚ್‌.ಡಿ.ದೇವೇಗೌಡ ನೀಡಿರುವ ಹೇಳಿಕೆ ರೈತರ ಸಾಲ ಮನ್ನಾ ಕನಸನ್ನು ಭಗ್ನಗೊಳಿಸುವಂತಿದೆ. ಕೇವಲ 37 ಶಾಸಕರನ್ನು ಇಟ್ಟುಕೊಂಡು ಸಾಲ ಮನ್ನಾ ಸಾಧ್ಯವೇ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ. ಪದ್ಮಾನಾಭನಗರ ನಿವಾಸದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡಲು ನಮಗೆ ಪೂರ್ಣ ಬಹುಮತ ಸಿಕ್ಕಿದೆಯಾ? 37 ಜನರನ್ನ ಇಟ್ಟುಕೊಂಡು ಸಾಲ ಮನ್ನಾ ಮಾಡಲು ಆಗುತ್ತಾ? ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಮಾಡಬೇಕಷ್ಟೆ […]

ಬಿಜೆಪಿ ಸರ್ಕಾರ ಉಳಿಯುತ್ತಾ? ಉರುಳುತ್ತಾ?.. ಗುಟ್ಟು ಬಿಟ್ಟುಕೊಡದ ನಾಯಕರು!

Friday, May 18th, 2018
kumarswamy

ಬೆಂಗಳೂರು: ರಾಜ್ಯದಲ್ಲಿ ನಾಳೆ ಸಂಜೆ ಏನಾಗಲಿದೆ ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮನೆ ಮಾಡಿದೆ. ಹೀಗೆಯೇ ಆಗಬಹುದು ಎಂದು ಊಹಿಸುವ ಅವಕಾಶ ಕೂಡ ಸಿಗದ ರೀತಿ ರಾಜ್ಯದ ಮೂರೂ ಪಕ್ಷದ ನಾಯಕರು ಗುಟ್ಟು ಬಿಟ್ಟುಕೊಡುತ್ತಿಲ್ಲ. ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಹೈದರಾಬಾದ್‍ನಲ್ಲಿರುವ ತಮ್ಮ ಶಾಸಕರ ಭೇಟಿಗೆ ಆಪ್ತ ಶಾಸಕರ ಜತೆ ತೆರಳಿದ್ದಾರೆ. ಇನ್ನೊಂದೆಡೆ ದೇವೇಗೌಡರು ಕುಟುಂಬ ಸಮೇತ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಹಿರಿಯ ನಾಯಕರೆಲ್ಲಾ ಸೇರಿ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸುತ್ತಿದ್ದಾರೆ. ಎಲ್ಲಿಯೂ […]

ಮೋದಿಯವರು ನಿನ್ನೆ ನೀಡಿರುವ ಹೇಳಿಕೆ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಹೆಚ್.ಡಿ.ದೇವೇಗೌಡ

Wednesday, May 2nd, 2018
devegowda

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ನೀಡಿರುವ ಹೇಳಿಕೆ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಪ್ರೆಸ್‍ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಇಂದು ಆಯೋಜಿಸಿದ್ದ 2018ರ ವಿಧಾನಸಭೆ ಚುನಾವಣೆ ಮಾತು ಮಂಥನ ಸಂವಾದಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ವಾಸ್ತವ ಸ್ಥಿತಿಯನ್ನು ಅರಿತು ಮಾಜಿ ಪ್ರಧಾನಿಗೆ ಗೌರವ ಕೊಡುವುದಾಗಿ ಹೇಳಿದ್ದಾರೆ. ಅದರಲ್ಲಿ ಯಾವುದೇ ಔಚಿತ್ಯವಿಲ್ಲ […]

ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾದ ಹೆಚ್‌ಡಿಡಿ… ಸರ್ಕಾರದ ವಿರುದ್ಧ ದೂರು

Thursday, April 5th, 2018
devegowda

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವ ಬಗ್ಗೆ ನನಗೆ ಅನುಮಾನವಿದೆ. ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯಕ್ತ ಓ.ಪಿ ರಾವತ್‌‌ಗೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಮನವಿ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ ಮಾಡಿದರು. ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು, ಸರ್ಕಾರ ನಡೆಸುತ್ತಿರುವ ಚುನಾವಣಾ […]

ಯುವಕರು ಪಕೋಡ ಮಾರಿ ಬದುಕ್ತಿರೋದೆ ಮೋದಿ ಮೇಕ್‌ ಇನ್‌ ಇಂಡಿಯಾ: ಹೆಚ್‌ಡಿಕೆ ವ್ಯಂಗ್ಯ

Tuesday, January 30th, 2018
kumarswamy

ವಿಜಯಪುರ: ನಮ್ಮ ಯುವಕರು ಪಕೋಡ ಮಾರಾಟ ಮಾಡಿ ಬದುಬೇಕಿದೆ. ಇದೇ ಪ್ರಧಾನಿ ಮೋದಿ‌ ಅವರ ಮೇಕ್ ಇನ್ ಇಂಡಿಯಾ ಎಂದು ಉದ್ಯೋಗ ಸೃಷ್ಟಿ ಕುರಿತ ಪ್ರಧಾನಿ ಮೋದಿ ಹೇಳಿಕೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ. ಸೋಮವಾರದಿಂದ ಐದು ‌ದಿನಗಳ ವಿಜಯಪುರ‌ ಜಿಲ್ಲಾ ಪ್ರವಾಸದಲ್ಲಿರುವ ಅವರು ಮಾಧ್ಯಮದವರ ಜತೆ ಮಾತಾನಡಿದರು. ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ್ದರು. ಪಕೋಡ ಮಾರಾಟ ಮಾಡುವುದೂ ಸಹ‌ ಮೇಕ್ […]

ದೀಪಕ್‌ ರಾವ್‌ ಮನೆಗೆ ದೇವೇಗೌಡ ಭೇಟಿ… ಆರ್ಥಿಕ ನೆರವಿನ ಭರವಸೆ

Monday, January 22nd, 2018
devegowda

ಮಂಗಳೂರು: ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಕರಾವಳಿಯಲ್ಲಿ ದುಷ್ಕರ್ಮಿಗಳಿಂದ ಬಲಿಯಾದ ದೀಪಕ್‌ ರಾವ್‌ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕಾಟಿಪಳ್ಳದ ನಿವಾಸದಲ್ಲಿ ದೀಪಕ್ ಕುಟುಂಬವನ್ನು ಭೇಟಿ ಮಾಡಿದ ಅವರು, ಸಂತ್ರಸ್ತ ಕುಟುಂಬದೊಂದಿಗೆ ದುಃಖ ಹಂಚಿಕೊಂಡು, ಆರ್ಥಿಕ ನೆರವಿನ ಭರವಸೆಯನ್ನೂ ನೀಡಿದರು. ಕುಟುಂಬದ ಸದ್ಯದ ಪರಿಸ್ಥಿತಿಯ ಬಗ್ಗೆ ಹಿರಿಯ ನಾಯಕ ಹಾಗೂ ರಾಜ್ಯ ಉಪಾಧ್ಯಕ್ಷ ಬಿ.ಎಂ.ಫಾರೂಕ್ ಅವರು ದೇವೇಗೌಡರಿಗೆ ವಿವರಿಸಿದರು. ದೀಪಕ್ ತಾಯಿ ಪ್ರೇಮಾ ಅವರ ಪರಿಸ್ಥಿತಿಯನ್ನು ಕಂಡು ಮರುಗಿದ ಮಾಜಿ ಪ್ರಧಾನಿ, ತಮ್ಮ ವೈಯಕ್ತಿಕ […]